Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆರೋಗ್ಯದ ವಿಷಯದಲ್ಲಿ ಅಪ್ಪಿತಪ್ಪಿಯೂ ಸುಳ್ಳು ಹೇಳಬೇಡಿ...
ಆರೋಗ್ಯವೇ ಮಹಾಭಾಗ್ಯ. ಆರೋಗ್ಯಕ್ಕಿಂತ ಐಶ್ವರ್ಯ ಮತ್ತೊಂದಿಲ್ಲ. ಕೋಟಿ ಇರುವವರಿಗಿಂತ ಒಳ್ಳೆಯ ಆರೋಗ್ಯ ಇರುವವರು ಉತ್ತಮ ಎಂಬ ಮಾತನ್ನು ನೀವು ಸಹ ನಂಬುತ್ತೀರಿ. ಕೆಲವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಿ ಅದನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ತಮ್ಮ ಆರೋಗ್ಯವನ್ನು ಉದಾಸೀನ ಮಾಡುತ್ತಾರೆ. ಮತ್ತೊಂದು ಬಗೆಯ ಜನರು ಇರುತ್ತಾರೆ, ಅವರು ಆರೋಗ್ಯವನ್ನು ಉದಾಸೀನ ಮಾಡುವುದಲ್ಲದೆ, ತಾವೇ ಆರೋಗ್ಯವಂತರು, ಈ ಪ್ರಪಂಚದಲ್ಲಿ ನಮಗಿಂತ ಆರೋಗ್ಯವಂತರು ಯಾರೂ ಇಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾ ಇರುತ್ತಾರೆ.
ಆರೋಗ್ಯವಂತ ಜನರು ಧೂಮಪಾನ, ಕುಡಿತ, ಅಧಿಕ ನಿದ್ದೆ, ಸೋಮಾರಿತನ ಇತ್ಯಾದಿಗಳಿಂದ ದೂರವಿರುತ್ತಾರೆ. ಆದರೆ ತಾವು ಆರೋಗ್ಯವಂತರು ಎಂದು ಬಡಾಯಿಕೊಚ್ಚಿಕೊಳ್ಳುವವರು ಇದರಲ್ಲಿ ಯಾವುದಾದರು ಒಂದು ಅಥವಾ ಎಲ್ಲಾ ದುರಭ್ಯಾಸಗಳನ್ನು ಹೊಂದಿರುತ್ತಾರೆ. ಒಂದು ವೇಳೆ ನೀವು ಈ ಮೇಲಿನ ಯಾವುದಾದರು ದುರಭ್ಯಾಸವನ್ನು ಹೊಂದಿದ್ದಲ್ಲಿ, ನಿಮ್ಮನ್ನು ನೀವು ಅನಾರೋಗ್ಯ ಪೀಡಿತರು ಎಂದು ಪರಿಗಣಿಸಿಕೊಳ್ಳಿ. ತಜ್ಞರ ಪ್ರಕಾರ ಈಗಿನ ಆಧುನಿಕ ಮಾನವರು ತಮ್ಮ ಜೀವನದಲ್ಲಿ ವಿಪರೀತ ಒತ್ತಡವನ್ನು ಅನುಭವಿಸುತ್ತಾ ಇರುತ್ತಾರೆ. ನಿಮ್ಮ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಇಂದು ಬೋಲ್ಡ್‌ಸ್ಕೈ ನಿಮಗಾಗಿ ನೀವು ಆರೋಗ್ಯದ ಕುರಿತಾಗಿ ನೀವು ಮಾಡುತ್ತಿರುವ ತಪ್ಪುಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ.
ಅಧ್ಯಯನಗಳ ಪ್ರಕಾರ 90% ಜನರು ಮುಂಜಾನೆ ಅಲಾರಂ ಬಾರಿಸಿದ ನಂತರ ಮತ್ತೆ ನಿದ್ದೆಗೆ ಶರಣಾಗುತ್ತಾರೆ. ಬೆಳಗ್ಗೆ ನಿದ್ದೆಯು ವಿಚಲಿತಗೊಳ್ಳುವುದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆಯಂತೆ. ಒಂದು ವೇಳೆ ನೀವು ಬೆಳಗ್ಗೆ ಅಲಾರಂ ಅನ್ನು ಇರಿಸಿದಲ್ಲಿ, ಆ ಹೊತ್ತಿಗೆ ಸರಿಯಾಗಿ ನಿದ್ದೆ ಮಾಡಿ ಏಳಿ. ಎದ್ದು ನಿತ್ಯ ಕೆಲಸಗಳನ್ನು ಮಾಡಿ. ಮತ್ತೆ ಮಲಗಬೇಡಿ.
ಅದನ್ನು ಬಿಟ್ಟು ಅಲಾರಂ ಅನ್ನು ಸ್ನೂಜ್ ಮಾಡಿ, ಮತ್ತೆ ಮಲಗುವುದರಿಂದ ದೇಹ ಹಾಳಾಗುತ್ತದೆ. ಇದು ಸಹ ಒಂದು ಕೆಟ್ಟ ಅಭ್ಯಾಸ ಎಂಬುದನ್ನು ಮರೆಯಬೇಡಿ. ಇದಲ್ಲದೆ ನಾವು ಕುಡಿತದ ಬಗ್ಗೆ ಸಹ ಸುಳ್ಳುಗಳನ್ನು ಹೇಳಿಕೊಳ್ಳುತ್ತಾ ಇರುತ್ತೇವೆ. ವಾರಾಂತ್ಯದಲ್ಲಿ ಸ್ವಲ್ಪ ಕುಡಿಯುತ್ತೇನೆ ಎಂದು ಹೇಳುವವರು ಸುಮಾರು ಜನರಿದ್ದಾರೆ. ವಾರಾಂತ್ಯದಲ್ಲಿ ಅಧಿಕ ಮಧ್ಯ ಸೇವನೆ, ಯಥೇಚ್ಛವಾಗಿ ಆಹಾರವನ್ನು ಸೇವಿಸುವುದು ಸಹ ಕೆಟ್ಟ ಚಟಗಳಲ್ಲಿ ಒಂದಾಗಿದೆ. ಇದರಿಂದ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ ಮತ್ತು ಅನಾರೋಗ್ಯವು ಸಹ ಬರುತ್ತದೆ ಎಂಬುದನ್ನು ಮರೆಯಬೇಡಿ.
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದಲ್ಲಿ, ಒಳ್ಳೆಯ ಆಹಾರ ಪದ್ಧತಿಯನ್ನು ಪಾಲಿಸಬೇಕು. ಇದು ಆರೋಗ್ಯದ ಗುಟ್ಟು ಎಂಬುದನ್ನು ಮರೆಯಬೇಡಿ. ಇನ್ನೂ ಉತ್ತಮ ಸಲಹೆಗಳು ನಿಮಗಾಗಿ ಮುಂದೆ ಕಾದಿವೆ. ಈ ಸಲಹೆಗಳನ್ನು ಪಾಲಿಸಿ ನಿಮ್ಮ ಆರೋಗ್ಯವನ್ನು ಸ್ಥಿರವಾಗಿ ಇರಿಸಿಕೊಳ್ಳಿ. ನಿಮಗೆ ನೀವೇ ಸುಳ್ಳುಗಳನ್ನು ಹೇಳಿಕೊಳ್ಳುವುದನ್ನು ಬಿಡಿ. ಮುಂದೆ ಓದಿ...

ನಿದ್ದೆಯ ಅವಧಿ
ಪ್ರತಿ ರಾತ್ರಿ ಕೇವಲ 6 ಗಂಟೆ ನಿದ್ದೆ ಮಾಡುವುದರ ಬದಲಿಗೆ 7-8 ಗಂಟೆಗಳ ಕಾಲ ನಿದ್ದೆಯನ್ನು ಮಾಡಿ. ದೇಹಕ್ಕೆ ಅಗತ್ಯ ವಿಶ್ರಾಂತಿ ಬೇಕು ಎಂಬುದನ್ನು ಮರೆಯಬೇಡಿ. ಬೆಳಗ್ಗೆ ಉತ್ಸಾಹದಿಂದ ಏಳುಲು ಆರಂಭಿಸಿ ಮತ್ತು ದಿನವನ್ನು ಉಲ್ಲಾಸದಿಂದ ಕಳೆಯಿರಿ.

ವಾರಾಂತ್ಯದಲ್ಲಿ ಕುಡಿತ
ವಾರಾಂತ್ಯದಲ್ಲಿ ಕುಡಿಯುವುದು ಒಳ್ಳೆಯದಲ್ಲ. ವಾರಕ್ಕೊಮ್ಮೆ ಎಂದು ಅಧಿಕ ಪ್ರಮಾಣದಲ್ಲಿ ಕುಡಿಯುವವರು ತಮ್ಮ ದೇಹವನ್ನು ಅಪಾಯಕ್ಕೆ ದೂಡುತ್ತಾರೆ. ಇದು ನಿಮ್ಮ ನರವ್ಯೂಹವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂಬುದನ್ನು ಮರೆಯಬೇಡಿ. ನಿಮಗೆ ಒಂದು ಅಥವಾ ಎರಡು ಪೆಗ್ ಕುಡಿಯಬೇಕು ಎನಿಸಿದಲ್ಲಿ, ಕುಡಿಯಿರಿ ಮತ್ತು ಅಷ್ಟಕ್ಕೆ ನಿಮ್ಮನ್ನು ನೀವು ಸೀಮಿತಗೊಳಿಸಿಕೊಳ್ಳಿ. ಅದನ್ನು ಬಿಟ್ಟು, ಅದಕ್ಕಿಂತ ಹೆಚ್ಚಿಗೆ ಮುಂದುವರಿಯಲು ಹೋಗಬೇಡಿ. ಕುಡಿಯುವಾಗ ನಿಮ್ಮ ಬ್ರ್ಯಾಂಡ್‌ಗೆ ಏರೇಟೆಡ್ ನೀರನ್ನು ಅಥವಾ ಲಘು ಪಾನೀಯಗಳನ್ನು ಬೆರೆಸಬೇಡಿ. ಇವು ನಿಮ್ಮ ದೇಹಕ್ಕೆ ಮತ್ತಷ್ಟು ಅಪಾಯವನ್ನು ಉಂಟು ಮಾಡುತ್ತದೆ.

ಊಟಗಳನ್ನು ತ್ಯಜಿಸುವುದು
ಊಟ ಮಾಡದೆ ಇದ್ದಲ್ಲಿ ನಿಮ್ಮ ತೂಕ ಕಡಿಮೆಯಾಗುವುದಿಲ್ಲ. ಅದು ಮತ್ತಷ್ಟು ತೂಕವನ್ನು ನೀಡುತ್ತದೆ ಎಂಬುದನ್ನು ಮರೆಯಬೇಡಿ. ಜೊತೆಗೆ ಇದು ನಿಮಗೆ ಸುಸ್ತು ಮತ್ತು ಸೋಮಾರಿತನವನ್ನು ತಂದುಕೊಡುತ್ತದೆ. ಆಗ ನೀವು ಮತ್ತಷ್ಟು ಅನಾರೋಗ್ಯಕಾರಿ ತಿಂಡಿಗಳನ್ನು ಸೇವಿಸಲು ಆರಂಭಿಸುತ್ತೀರಿ.

ಧೂಮಪಾನ
ಧೂಮಪಾನ ಮಾಡುವುದು ಹಾನಿಕಾರಕ. ಅದರ ಜೊತೆಗೆ ಧೂಮಪಾನಿಗಳ ಜೊತೆಗೆ ಇರುವುದು, ಅವರು ಬಿಟ್ಟ ಹೊಗೆಯನ್ನು ಸೇವಿಸುವ ಪರೋಕ್ಷ ಧೂಮಪಾನಿಗಳು ಸಹ ಅಷ್ಟೇ ಅಪಾಯವನ್ನು ಎದುರಿಸುತ್ತಾರೆ ಎಂಬುದನ್ನು ಮರೆಯಬೇಡಿ. ಎರಡೂ ರೀತಿಯಲ್ಲಿ ನಿಮ್ಮ ಶ್ವಾಸಕೋಶ್ಗಳು ಹಾನಿಗೊಳಗಾಗುತ್ತವೆ. ಆದ್ದರಿಂದ ಧೂಮಪಾನ ಮಾಡಬೇಡಿ. ಧೂಮಪಾನ ಮಾಡುವವರ ಬಳಿ ಇದ್ದಲ್ಲಿ, ನಿಮ್ಮ ಮೂಗು ಮತ್ತು ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ. ನಿಮ್ಮ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದು.

ಕಾಫಿ vs ಕೋಕ್
ಕಾಫಿ ಬದಲಿಗೆ ಯಾವುದೇ ಕಾರಣಕ್ಕು ಕೋಕ್ ಬಳಸಬೇಡಿ. ಎರಡೂ ನಿಮ್ಮ ದೇಹಕ್ಕೆ ಒಳ್ಳೆಯದಲ್ಲ. ಎರಡರಲ್ಲೂ ನಿಮ್ಮ ದೇಹಕ್ಕೆ ಅಪಾಯವನ್ನುಂಟು ಮಾಡುವ ಕೆಫಿನ್ ಇರುತ್ತದೆ. ಮೂರು ದಿನಕ್ಕೆ ಒಮ್ಮೆ ಸ್ವಲ್ಪ ಪ್ರಮಾಣದ ಕಾಫಿಯನ್ನು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ. ಅದೇ ರೀತಿ ಕೋಕ್ ಅನ್ನು ಸೇವಿಸಲೇ ಬೇಡಿ ಎಂದು ಸಹ ಹೇಳುತ್ತಾರೆ. ಕಾಫಿಯನ್ನು ಕುಡಿಯುವ ಚಟ ಇರುವವರು ದಯವಿಟ್ಟು ಈ ಅಭ್ಯಾಸವನ್ನು ತ್ಯಜಿಸಿ.



Click it and Unblock the Notifications
