Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮಗೆ ಯಾರೂ ಹೇಳದಿರುವ 10 ವಯಸ್ಸಾಗುವ ಮಿಥ್ಯಗಳು
ವಯಸ್ಸಾಗುವ ವಿಷಯಕ್ಕೆ ಬಂದಾಗ ಪ್ರತಿಯೊಬ್ಬರಲ್ಲಿಯೂ ಒಂದೊಂದು ಕಲ್ಪನೆಗಳಿರುತ್ತವೆ. ಆದರೆ, ದುರಾದೃಷ್ಟದ ಸಂಗತಿಯೆಂದರೆ, ವಯಸ್ಸಾಗುತ್ತಿರುವ ಬಗ್ಗೆ ಹೆಚ್ಚಿನ ಜನರಲ್ಲಿ ಋಣಾತ್ಮಕ ವಿಚಾರಗಳೇ ತಲೆಯಲ್ಲಿ ತುಂಬಿರುತ್ತವೆ. ಉದಾಹರಣೆಗೆ, ವಯಸ್ಸಾದ ಮೇಲೆ ನಾವು ಏಕಾಂಗಿಯಾಗುತ್ತೇವೆ, ಮತ್ತೊಬ್ಬರ ಮೇಲೆ ಅವಲಂಬಿತವಾಗುತ್ತೇವೆ, ಸಣ್ಣ ಕೆಲಸಗಳನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂಬಿತ್ಯಾದಿ ವಿಚಾರಗಳು ಸುಳಿದಾಡುತ್ತಿರುತ್ತವೆ.
ಅದೃಷ್ಟದ ಸಂಗತಿಯೆಂದರೆ, ಹಲವಾರು ಮಿಥ್ಯಗಳನ್ನು ಸಂಶೋಧಕರು ಸುಳ್ಳು ಎಂದು ಸಾಬೀತುಪಡಿಸಿದ್ದಾರೆ. ವಯಸ್ಸಾದ ಮೇಲೆ ಹೀಗೇ ಆಗುತ್ತದೆಂದು ನಾವು ಈಗಲೇ ಊಹಿಸುವುದಾದರೂ ಹೇಗೆ ಸಾಧ್ಯ, ಆ ಹಂತ ತಲುಪಿ ಅನುಭವಿಸುವವರೆಗೆ? ಈ ವಿಷಯದ ಬಗೆಗಿನ ಚರ್ಚೆಯೇ ಹಲವರಿಗೆ ಕಿರಿಕಿರಿ. ವಯಸ್ಸಾದ ಮೇಲೆ ಹಲವಾರು ಸವಾಲುಗಳನ್ನು, ಅನಾರೋಗ್ಯದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಇವನ್ನು ಉತ್ಪ್ರೇಕ್ಷೆ ಮಾಡಲಾಗಿದೆ. ನಾವು ತಿಳಿದಂತೆ ಎಲ್ಲವೂ ಇರುವುದಿಲ್ಲ. ಈ ಋಣಾತ್ಮಕ ವೈಚಾರಿಕತೆಯನ್ನು ತೊಳೆದುಹಾಕಲು ಈ 10 ಮಿಥ್ಯಗಳು ಮತ್ತು ಸತ್ಯಗಳ ಬಗ್ಗೆ ಚರ್ಚೆ ಮಾಡೋಣ...

ವಯಸ್ಸಾಗುವುದೆಂದರೆ ಹಾಸಿಗೆಯಲ್ಲಿ ಬಿದ್ದುಕೊಂಡಿರುವುದು
ಖಂಡಿತ ಅಲ್ಲ. ದೈಹಿಕ ಸವಾಲುಗಳು ಎದುರಾಗುತ್ತವಾದರೂ, ಆರೋಗ್ಯ ಕಾಪಾಡಿಕೊಳ್ಳುವುದು ಪ್ರಥಮ ಆದ್ಯತೆಯಾದರೂ, ನಾವು ಸದಾ ಅನಾರೋಗ್ಯದಿಂದಲೇ ಇರುತ್ತೇವೆ, ಯಾವಾಗಲೂ ಸುಸ್ತಾಗಿರುತ್ತೇವೆ ಅಂತಲ್ಲ. ಸೂಕ್ತವಾದ ಪೌಷ್ಟಿಕ ಆಹಾರ, ನಿಯಮಿತವಾದ ವ್ಯಾಯಾಮ, ರೋಗನಿರೋಧಕ ಶಕ್ತಿ ಗಟ್ಟಿಯಾಗಿಟ್ಟುಕೊಂಡರೆ ಅನಾರೋಗ್ಯ ಅಷ್ಟು ಬೇಗ ಹತ್ತಿರ ಬರುವುದಿಲ್ಲ.

ವಯಸ್ಸಾಗುತ್ತಿದ್ದಂತೆ ಜಾಸ್ತಿ ಹಠಮಾರಿಯಾಗುತ್ತಾರೆ
ಇದು ಮತ್ತೊಂದು ಸುಳ್ಳು. ಅಸಲಿ ಸಂಗತಿಯೆಂದರೆ, ವಯಸ್ಸಾಗುತ್ತಿದ್ದಂತೆ ಅವರ ಮಾನಸಿಕ ಸ್ಥಿತಿ ಇನ್ನಷ್ಟು ಸುಸ್ಥಿರವಾಗಿರುತ್ತದೆ. ಎಂಥಾ ಪರಿಸ್ಥಿತಿಯನ್ನೂ ಎದುರಿಸುವ ಸ್ಥೈರ್ಯವಿರುತ್ತದೆ. ತಪ್ಪನ್ನು ಸರಿಪಡಿಸಿ, ಎಂಥ ಪರಿಸ್ಥಿತಿಗೂ ಹೊಂದಿಕೊಳ್ಳಬಲ್ಲರು.

ಮೂಳೆಗಳು ಶಕ್ತಿ ಕಳೆದುಕೊಳ್ಳುತ್ತವೆ, ಕೀಲುಗಳು ನೋಯುತ್ತಿರುತ್ತವೆ
ಇದಕ್ಕೆಲ್ಲ ಕಾರಣ ನಮ್ಮ ಅಡ್ಡಾದಿಡ್ಡಿ ಜೀವನಶೈಲಿಯೇ ಹೊರತು ಪ್ರತಿ ವಯಸ್ಸಾದವರ ಮೂಳೆಗಳು ಶಕ್ತಿ ಕಳೆದುಕೊಳ್ಳುವುದಿಲ್ಲ ಮತ್ತು ಕೀಲುಗಳು ನೋಯುತ್ತಿರುವುದಿಲ್ಲ. ಹಾಗಾಗಿ, ಮಧ್ಯ ವಯಸ್ಸಿನಿಂದಲೇ ಉತ್ತಮ ಜೀವನಕ್ರಮ ರೂಢಿಸಿಕೊಳ್ಳುವುದು ಉತ್ತಮ.

ವಯಸ್ಸಾಗುತ್ತಿದ್ದಂತೆ ಲೈಂಗಿಕ ಶಕ್ತಿ ಕುಂದುತ್ತದೆ
ಲೈಂಗಿಕ ಶಕ್ತಿ ಕುಂದುವುದು ನಿಜವಾದರೂ ಯಾರಿಗೇ 70 ವಯಸ್ಸು ದಾಟುತ್ತಿದ್ದಂತೆ ಇದು ಸಹಜ ಕೂಡ. ಹಲವರಿಗೆ ಹೈಬಿಪಿ, ಸಕ್ಕರೆ ರೋಗ, ಖಿನ್ನತೆಯಿಂದ ಲೈಂಗಿಕ ಆಸಕ್ತಿ ಕುಂದುತ್ತದೆ. ಎಲ್ಲ ವಯಸ್ಸಾದವರಿಗೂ ಹೀಗಾಗುವುದಿಲ್ಲ. ಕೆಲ ವ್ಯಾಯಾಮಗಳನ್ನು ಮಾಡಿದರೆ ಲೈಂಗಿಕ ಶಕ್ತಿಯನ್ನು ವಾಪಸ್ ಪಡೆಯಬಹುದು.

ನಿದ್ರೆ ಬೇಗನೆ ಆವರಿಸಿಕೊಳ್ಳುವುದಿಲ್ಲ
ಇದು ಅಷ್ಟು ನಿಜವಲ್ಲ. ಇದು ವಯಸ್ಸಾದವರಿಗೆ ಮಾತ್ರವಲ್ಲ ಯಾರಿಗಾದರೂ ಆಗಬಹುದು. ನಿದ್ದೆ ಮಾಡುವ ಕ್ರಮದಲ್ಲಿ ಕೆಲ ವ್ಯತ್ಯಾಸವಾಗಬಹುದು ಅಷ್ಟೇ. ಎಲ್ಲ ಚಿಂತೆಗಳನ್ನು ಬಿಸಾಕಿದರೆ ನಿದಿರಾದೇವೆ ಯಾಕೆ ಆವರಿಸಿಕೊಳ್ಳುವುದಿಲ್ಲ?

ಏಕಾಂಗಿತನ ಅನಿವಾರ್ಯ
ಕೆಲವರು ತಮ್ಮಷ್ಟಕ್ಕೆ ತಾವು ಹೆಚ್ಚಾಗಿ ಇರಲು ಬಯಸುತ್ತಾರೆ, ಆದರೆ ಅದು ಏಕಾಂಗಿತನವಲ್ಲ. ಕೆಲವರು ಇನ್ನೂ ಕೆಲಸ ಮಾಡಲು ಇಷ್ಟಪಡುತ್ತಾರೆ. ಹಲವರು ಸಮಯ ಕಳೆಯಲು ಸಂಜೆಯ ಸ್ನೇಹಿತರ ಗುಂಪಿನೊಂದಿಗೆ ಕಾಲಕಳೆಯಲು ಇಷ್ಟಪಡುತ್ತಾರೆ. ಮಾಡಲಿ ಬಿಡಿ ತಪ್ಪೇನಿದೆ?

ಇಳಿವಯಸ್ಸು ಮಿದುಳಿನ ಶಕ್ತಿಯನ್ನು ಕುಂದಿಸುತ್ತದೆ
ವಯಸ್ಸಾಗುತ್ತಿದ್ದಂತೆ ಹಲವರು ಮರೆಗುಳಿಗಳಾಗುತ್ತಾರೆ, ಖಿನ್ನತೆ ಆವರಿಸಿಕೊಳ್ಳುತ್ತದೆ ಎಂದೆಲ್ಲ ತಿಳಿದಿದ್ದಾರೆ. ಇದು ಖಂಡಿತ ನಿಜವಲ್ಲ. ವಸ್ತುಸ್ಥಿತಿಯೇನೆಂದರೆ, ವಯಸ್ಸಾಗುತ್ತಿದ್ದಂತೆ ಮತ್ತಷ್ಟು ಕಲಿಯಲು ಹುಮ್ಮಸ್ಸು ಬರುತ್ತದೆ. ಹಲ ದೊಡ್ಡವರು ಮಕ್ಕಳಂತಾಗಿಬಿಡುತ್ತಾರೆ. ಮಿದುಳಿನ ಶಕ್ತಿ ಕಡಿಮೆಯಾಗುತ್ತದೆನ್ನುವುದು ಎಲ್ಲರಿಗೂ ಅನ್ವಯಿಸುವುದಿಲ್ಲ.

ವಯಸ್ಸಾದವರು ಸ್ಪರ್ಧಾತ್ಮಕವಾಗಿರುವುದಿಲ್ಲ
ಇಳಿವಯಸ್ಸು ಬರುತ್ತಿದ್ದಂತೆ ಸಹಜವಾಗಿ ದೈಹಿಕ ಶಕ್ತಿ ಕಡಿಮೆಯಾಗುತ್ತದೆ. ಆದರೆ, ಅವರ ಮನೋಬಲವೇನು ಕಡಿಮೆಯಾಗುವುದಿಲ್ಲ. ಹಾಗಾಗಿ, ಇದೂ ಕೂಡ ಒಂದು ಮಿಥ್ಯವೆ.

ಆಹಾರ ಪದ್ಧತಿ ಬದಲಾಯಿಸಬಾರದು
ಸಣ್ಣ ವಯಸ್ಸಿನಲ್ಲಿ ನಾವು ಬೇಕಾದ್ದನ್ನು ತಿನ್ನಬಹುದು, ತಿಂದು ಅರಗಿಸಿಕೊಳ್ಳಬಹುದು. ಆದರೆ, ವಯಸ್ಸಾಗುತ್ತಿದ್ದಂತೆ ಇದು ಬದಲಾಗಲೇಬೇಕಾಗುತ್ತದೆ. ದೇಹದ ಪ್ರಕೃತಿಗೆ ತಕ್ಕಂತೆ ಆಹಾರದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕಾಗುತ್ತದೆ.

ಕೆಲ ಪರಿಣಾಮಗಳನ್ನು ತಪ್ಪಿಸಲು ಸಾಧ್ಯವೇ ಇಲ್ಲ
ಯಾರು ಹೇಳಿದ್ದು? ಇದು ತೀರ ಉತ್ಪ್ರೇಕ್ಷೆಯಿಂದ ಕೂಡಿದ್ದು. ಹೌದು, ಕೆಲ ಬದಲಾವಣೆಗಳು ಆಗುವುದು ಸಹಜವಾದರೂ, ನಮ್ಮ ಜೀವನಕ್ರಮವನ್ನು ತಕ್ಕಂತೆ ಮಾರ್ಪಡಿಸಿಕೊಂಡರೆ ಇಳಿವಯಸ್ಸಿನಲ್ಲಿ ಆಗುವ ಕೆಲ ಪರಿಣಾಮಗಳನ್ನು ತಗ್ಗಿಸಬಹುದಾಗಿದೆ.



Click it and Unblock the Notifications


