Latest Updates
-
ನಿಮ್ಮ ಅತ್ತಿಗೆಗೆ ಈ ಹಾರ್ಟ್ ಟಚಿಂಗ್ ಶಾಯರಿ ಕಳಿಸಿ! ಲವ್ & ಕನೆಕ್ಷನ್ ಡಬಲ್ ಆಗುತ್ತೆ - Happy Holi 2026 -
ಸಿಸ್ಟರ್.. 40ರ ಬಳಿಕ ಪಿಸ್ತಾ ಒಂದು ವರ! ಮೂಳೆ, ಹೃದಯ & ಹಾರ್ಮೋನ್ ಬ್ಯಾಲೆನ್ಸ್.. ಪಿಸ್ತಾನೇ ಏಕೆ ಬೇಕು? -
ಹೋಳಿ ಹಬ್ಬದಂದೇ 4 ಗ್ರಹಗಳ ವಕ್ರ ನಡೆ: ಈ 5 ರಾಶಿಗಳ ಮೇಲೆ ಭಾರೀ ಪರಿಣಾಮ.. ಭರ್ಜರಿ ಧನಲಾಭ! ನೀವೂ ಲಕ್ಕಿನಾ? -
ದೇಸಿ ಮಸಾಲೆಯ ಘಮ, ಮಣ್ಣಿನ ಮಡಕೆಯ ರುಚಿ! ಮನೆಯಲ್ಲೇ ಮಾಡಿ ಛತ್ತೀಸ್ಗಢ ಸ್ಪೆಷಲ್ ಚಿಕನ್ ಕರಿ.. ಈಸಿ ರೆಸಿಪಿ ಇಲ್ಲಿದೆ -
ಮಾತಿನ ಹೋಳಿ.. ಮನದ ಸಂಭ್ರಮ.. ಇದು ಬಣ್ಣಗಳ ಕೇಳಿ! ರೊಮ್ಯಾಂಟಿಕ್ ಶುಭಾಶಯಗಳು ಇಲ್ಲಿವೆ -
ಚಂದ್ರಗ್ರಹಣದ ದಿನ.. ಪ್ರೇಮ ಜೀವನದಲ್ಲಿ ಸಂಕಷ್ಟ! ಪ್ರಣಯ ಸಂಬಂಧಗಳಲ್ಲಿ ಎಚ್ಚರ -
March 03 Horoscope: ವರ್ಷದ ಮೊದಲ ಚಂದ್ರಗ್ರಹಣ.. ಅಪಘಾತ ಸಂಭವಿಸುವ ಸಾಧ್ಯತೆ! ಖರ್ಚುಗಳು ಹೆಚ್ಚಾಗಲಿವೆ -
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ?
ಕೇವಲ ಮ್ಯಾಗಿಯಷ್ಟೇ ಅಲ್ಲ, ಇವುಗಳು ಕೂಡ ಅಪಾಯಕಾರಿ!
ಇಂದು, ನಿನ್ನೆಯ ಎಲ್ಲಾ ಪತ್ರಿಕೆಗಳಲ್ಲಿಯೂ ಮ್ಯಾಗಿ ನೂಡಲ್ಸ್ ಒಳಗೊಂಡಿರುವ ಸೀಸದ ಕುರಿತೇ ಚರ್ಚೆಗಳು, ಮಾರುಕಟ್ಟೆಯಲ್ಲಿರುವ ಎಲ್ಲಾ ಮ್ಯಾಗಿ ಪೊಟ್ಟಣಗಳನ್ನು ಹಿಂದೆ ಪಡೆದುಕೊಳ್ಳುವ ನಿರ್ಧಾರಗಳೇ ರಾರಾಜಿಸುತ್ತಿವೆ. ಕರ್ನಾಟಕದ ಆರೋಗ್ಯ ಮಂತ್ರಿಗಳು ತಿಳಿಸಿದಂತೆ ಕರ್ನಾಟಕದಲ್ಲಿ ಮ್ಯಾಗಿಯ ಹೊರತಾಗಿ ಇನ್ನಿತರ ಸಿದ್ಧ ಆಹಾರಗಳನ್ನೂ ಕಠಿಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಸೀಸದ ಬಗ್ಗೆ ಕಾಳಜಿ ಇದು ಹೊಸತೇನಲ್ಲ. ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದೆ ನಮ್ಮ ನಗರಗಳಲ್ಲಿ ಸಿಗುತ್ತಿದ್ದ ಪೆಟ್ರೋಲ್ ನಲ್ಲಿ ಸೀಸದ ಅಂಶವಿತ್ತು. ಇದರ ಹೊಗೆಯ ಸೇವನೆಯಿಂದಲೂ ಸೀಸದ ಅಂಶ ರಕ್ತ ಸೇರುತ್ತದೆ ಎಂದು ಟ್ರಾಫಿಕ್ ಅಧಿಕಾರಿಯೊಬ್ಬರ ರಕ್ತತಪಾಸಣೆಯ ಬಳಿಕ ಖಾತರಿಯಾಗಿ ಕೇವಲ ಅನ್ ಲೆಡೆಡ್ ಪೆಟ್ರೋಲ್ ಅನ್ನು ಮಾತ್ರವೇ ಮಾರುವಂತೆ ಕಾನೂನು ರಚಿಸಲಾಯಿತು. ಆದರೆ ನಮ್ಮ ದಿನನಿತ್ಯದ ಬಳಕೆಯ ವಸ್ತುಗಳಿಂದಲೂ ಸೀಸ ನಮಗೆ ಅರಿವಿಲ್ಲದೇ ನಮ್ಮ ದೇಹಗಳನ್ನು ಸೇರುತ್ತಿದೆ ಎಂಬುದು ನಿಮಗೆ ಗೊತ್ತಿತ್ತೇ? ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ವೃತ್ತಪತ್ರಿಕೆಗಳನ್ನು ಆಹಾರವಸ್ತುಗಳನ್ನು ಪೊಟ್ಟಣ ಕಟ್ಟಲು ಉಪಯೋಗಿಸುವುದು. ಅಚ್ಚುಮೆಚ್ಚಿನ ಮ್ಯಾಗಿಯ ಹಿಂದಿರುವ ಕರಾಳ ಸತ್ಯ
ಹಳ್ಳಿಗಳೇ ಏಕೆ, ನಗರಗಳಲ್ಲಿಯೂ ಇಂದಿಗೂ ಹೋಟೆಲು ಮತ್ತು ರಸ್ತೆಬದಿಯ ಅಗ್ಗದ ಆಹಾರಗಳನ್ನು ಮಾರಾಟ ಮಾಡುವವರು ತಮ್ಮ ಉತ್ಪನ್ನಗಳನ್ನು ಹಳೆಯ ಪೇಪರಿನಲ್ಲಿಯೇ ಸುತ್ತಿ ಕೊಡುತ್ತಾರೆ. ಈ ಪತ್ರಿಕೆಗಳ ಮುದ್ರಣಕ್ಕೆ ಉಪಯೋಗಿಸಿದ ಶಾಯಿಗೆ ಕಪ್ಪು ಬಣ್ಣ ಬರುವುದೇ ಸೀಸದಿಂದ. ಈ ಬಣ್ಣ ಕರಗಿ ಆಹಾರ ಸೇರಿತೋ, ಅಷ್ಟು ಪ್ರಮಾಣದ ಸೀಸ ಆಹಾರದ ಮೂಲಕ ರಕ್ತ ಸೇರಿತು ಎಂದೇ ಲೆಕ್ಕ.
ಇದರ ಪ್ರಮಾಣವನ್ನು ಪರಿಗಣಿಸಿದರೆ ಮ್ಯಾಗಿಗಿಂತಲೂ ಇದು ಎಷ್ಟೋ ಸಾವಿರ ಪಟ್ಟು ಹೆಚ್ಚಿರಬಹುದು. ಸರ್ಕಾರ ಇದರ ನಿಟ್ಟಿನಲ್ಲಿಯೂ ಸ್ಪಷ್ಟ ಕಾನೂನು ಕಟ್ಟಳೆಗಳನ್ನು, ಸಾರ್ವಜನಿಕ ಅರಿವನ್ನು ಮೂಡಿಸುವ ಅಗತ್ಯವಿದೆ. ಸೀಸ ಇರುವ ಇನ್ನಿತರ ಆಹಾರವಸ್ತುಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಕುಡಿಯುವ ನೀರು
ಕುಡಿಯುವ ನೀರು ನಮಗೆ ಬಾಟಲಿಗಳಲ್ಲಿ ಅಥವಾ ಫಿಲ್ಟರುಗಳ ಮೂಲಕ ಸಿಗುತ್ತಿರಬಹುದು. ಆದರೆ ಬಾಟಲಿಗಳಲ್ಲಿ ತುಂಬಿಸುವ ಮೊದಲು ಹಾದು ಬರುವ ಪೈಪುಗಳ ಒಳಭಾಗ ತುಕ್ಕು ಹಿಡಿದಿದ್ದರೆ ಅದರಲ್ಲಿ ಕರಗುವ ಸೀಸವೂ ನೀರಿನಲ್ಲಿ ಕರಗಿ ನಮ್ಮ ದೇಹ ಸೇರಬಹುದು. ಎಷ್ಟೇ ಉತ್ತಮ ಗುಣಮಟ್ಟದ ನೀರು ಶುದ್ದೀಕರಣ ಯಂತ್ರಕ್ಕೂ ಸೀಸದ ಅಣುಗಳು ಸಿಕ್ಕಿಕೊಳ್ಳದಿರುವುದೇ ದೊಡ್ಡ ತೊಂದರೆ. ನೀರಿನ ತಪಾಸಣೆಯೇ ಅತ್ಯುತ್ತಮ ವಿಧಾನ.

ಕಾಡಿಗೆ
ಕಣ್ಣುಗಳ ಸೌಂದರ್ಯ ಹೆಚ್ಚಿಸುವ ಕಾಡಿಗೆಗೆ ಕಪ್ಪು ಬಣ್ಣ ನೀಡುವ ಅಂಶವೇ ಸೀಸ. ನಿಮ್ಮ ನೆಚ್ಚಿನ ಕಾಜಲ್ ಅಥವಾ ಕಾಡಿಗೆ (ಕಣ್ಕಪ್ಪು)ಯನ್ನು ಖರೀದಿಸುವ ಮುನ್ನ ಅಥವಾ ಈಗಾಗಲೇ ಖರೀದಿಸಿದ್ದರೆ ಅದರಲ್ಲಿರುವ ಅಂಶಗಳನ್ನು ಓದಿಕೊಳ್ಳಿ. ಅದರಲ್ಲಿ ಸೀಸ ಇರುವ ಅಂಶ ಇದ್ದರೆ ಖರೀದಿಸಬೇಡಿ ಅಥವಾ ಈಗಾಗಲೇ ಖರೀದಿಸಿದ್ದರೆ ಕಸದ ಬುಟ್ಟಿಗೆಸೆಯಿರಿ.

ಲಿಪ್ ಸ್ಟಿಕ್
ತುಟಿಗಳಿಗೆ ರಂಗು ನೀಡುವ ಈ ಪ್ರಸಾದನಗಳ ಮುಖ್ಯ ಸಾಮಾಗ್ರಿ ಎಂದರೆ ಮೀನಿನ ಹುರುಪೆ. ಜೊತೆಗೆ ಬಣ್ಣ ನೀಡಲು, ಅದರಲ್ಲೂ ಗಾಢವಾದ ಬಣ್ಣವನ್ನು ನೀಡಲು ಸೀಸವನ್ನು ಉಪಯೋಗಿಸಲಾಗುತ್ತದೆ. ಈ ಸೀಸದ ಅಣುಗಳು ಎಷ್ಟು ಚಿಕ್ಕವು ಎಂದರೆ ತುಟಿಗಳ ಚರ್ಮದ ಸೂಕ್ಷ್ಮ ರಂಧ್ರಗಳು ಈ ಸೀಸವನ್ನು ನೇರವಾಗಿ ಹೀರಿಬಿಡುತ್ತವೆ. ಉತ್ತಮ ಗುಣಮಟ್ಟದ ಲಿಪ್ ಸ್ಟಿಕ್ ಗಳು ತಮ್ಮ ಉತ್ಪನ್ನದಲ್ಲಿ ಸೀಸ ಇಲ್ಲ ಎಂದು ಇತ್ತೀಚೆಗೆ ದೃಢೀಕರಿಸುತ್ತಿವೆ. ಈ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನೇ ಖರೀದಿಸಿ. ಯಾವುದೇ ಕಾರಣಕ್ಕೆ (ಮುಖ್ಯವಾಗಿ ಅಗ್ಗ ಎಂಬ ಕಾರಣಕ್ಕೆ) ದೃಢೀಕರಣ ಇಲ್ಲದ ಅಥವಾ ಉತ್ತಮ ಬ್ರಾಂಡ್ ಅಲ್ಲದ ಉತ್ಪನ್ನಗಳನ್ನು ಖರೀದಿಸಲೇ ಬೇಡಿ.

ಗೋಡೆಯ ಬಣ್ಣಗಳು
ಗೋಡೆಗೆ ಹೊಡೆಯುವ ಡಿಸ್ಟೆಂಪರ್ ಮತ್ತು ವಿಶೇಷವಾಗಿ ಆಯಿಲ್ ಪೇಂಟುಗಳಲ್ಲಿ ಸೀಸ ಅಧಿಕ ಪ್ರಮಾಣದಲ್ಲಿದೆ. ಬಣ್ಣ ಒಣಗಿದ ಬಳಿಕ ಸೀಸ ಪುಡಿಪುಡಿಯಾಗಿ ಬಣ್ಣದಲ್ಲಿ ಅಂಟಿಕೊಂಡಿರುತ್ತದೆ. ಈ ಬಣ್ಣ ಹಳೆಯದಾದಾಗ ಸ್ವಲ್ಪ ಉಜ್ಜಿದರೇ ಪುಡಿಪುಡಿಯಾಗಿ ಉದುರುತ್ತದೆ. (ಹೊಸ ಪೇಂಟ್ ಹೊಡೆಸಲು ಹಳೆಯ ಬಣ್ಣವನ್ನು ಹೆರೆದು ತೆಗೆಯುವಾಗ ಈ ಪ್ರಮಾಣ ಅತ್ಯಧಿಕ). ಈ ಧೂಳಿನಲ್ಲಿ ಸೀಸದ ಪ್ರಮಾಣ ಅತ್ಯಧಿಕವಾಗಿದ್ದು ಪ್ರತಿ ಉಸಿರಿನ ಮೂಲಕವೂ ನಮ್ಮ ದೇಹ ಸೇರುತ್ತದೆ. ಆದ್ದರಿಂದ ಈ ಕೆಲಸವನ್ನು ಮಾಡುವಾಗ ಮಾಸ್ಕ್ ಉಪಯೋಗಿಸಬೇಕು ಹಾಗೂ ನೀರು ಚಿಮುಕಿಸಿ ಬಣ್ಣವನ್ನು ಹೆರೆಯಬೇಕು.

ಸಿರಾಮಿಕ್ ಪಾತ್ರೆಗಳ ಬಣ್ಣಗಳು
ನಿಮ್ಮ ಮನೆಯಲ್ಲಿರುವ ಸಿರಾಮಿಕ್ ತಟ್ಟೆಗಳಲ್ಲಿ ವಿಭಿನ್ನ ಬಣ್ಣದ ಚಿತ್ತಾರವಿದೆಯೇ? ಹೌದಾದರೆ ಈ ಚಿತ್ತಾರದಲ್ಲಿರುವ ಸೀಸದ ಅಂಶ ಆಹಾರದ ಮೂಲಕ ನಿಮ್ಮ ಹೊಟ್ಟೆ ಸೇರುವ ಸಾಧ್ಯತೆ ತುಂಬಾ ಹೆಚ್ಚು. ಏಕೆಂದರೆ ಸಿರಾಮಿಕ್ ತಟ್ಟೆಗಳಿಗೆ ಹೊಳಪು ನೀಡಲು ಉಪಯೋಗಿಸುವ ಪದರದಲ್ಲಿ ಸೀಸ ಅತ್ಯಧಿಕ ಪ್ರಮಾಣದಲ್ಲಿದೆ. ಕೈಕೆಲಸದ ಮೂಲಕ ಹಚ್ಚಿದ ಚಿತ್ತಾರಕ್ಕೆ ಉಪಯೋಗಿಸಿದ ಬಣ್ಣದಲ್ಲಿಯೂ ಸೀಸವಿದೆ. ಪ್ರತಿಬಾರಿ ಊಟ ಮಾಡುವಾಗ, ಅದರಲ್ಲಿಯೂ ಆಹಾರದಲ್ಲಿ ಲಿಂಬೆ, ಹುಣಸೆಹುಳಿ ಮೊದಲಾದ ಆಮ್ಲೀಯ ಪದಾರ್ಥಗಳಿದ್ದರೆ ಅವುಗಳ ಮೂಲಕ ಸೀಸ ಅಲ್ಪ ಪ್ರಮಾಣದಲ್ಲಿ ಕರಗಿ ನಿಮ್ಮ ದೇಹ ಸೇರುತ್ತದೆ.

ತರಕಾರಿಗಳು
ಹೌದು, ತರಕಾರಿಗಳಲ್ಲಿಯೂ ಸೀಸದ ಅಂಶ ಇರಬಹುದು. ಏಕೆಂದರೆ ಕೃತಕ ಗೊಬ್ಬರ ಬಳಸಿ ಬೆಳೆದಿರುವ ಈ ತರಕಾರಿಗಳಲ್ಲಿ ಗೊಬ್ಬರದ ಮೂಲಕ ಅಥವಾ ಗಾಳಿಯಲ್ಲಿರುವ ಸೀಸದ ಮೂಲಕ ಕೊಂಚ ಅಂಶ ಸೇರಿರಬಹುದು. ಒಂದು ವೇಳೆ ತರಕಾರಿಯಲ್ಲಿ ಸೀಸದ ಅಂಶ ಸೇರಿದ್ದರೆ ಅದನ್ನು ತೊಳೆಯುವ ಅಥವಾ ಬೇಯಿಸುವ ಮೂಲಕ ಹೊರಹಾಕಲು ಸಾಧ್ಯವೇ ಇಲ್ಲ!

ಮೀನು
ಇಂದು ಹಲವು ಕಾರ್ಖಾನೆಗಳು ತಮ್ಮ ತ್ಯಾಜ್ಯವನ್ನು ನೇರವಾಗಿ ಸಮುದ್ರ, ನದಿಗಳಿಗೆ ಬಿಡುತ್ತವೆ. ಈ ಮಲಿನ ನೀರು ನದಿ ಸಮುದ್ರದ ನೀರನ್ನು ಕಲುಷಿತಗೊಳಿಸಿ ಸೀಸ ಮತ್ತಿತರ ಅಂಶಗಳನ್ನು ಬೆರೆಸುತ್ತದೆ. ಈ ನೀರಿನಲ್ಲಿ ಬೆಳೆದ ಮೀನುಗಳಲ್ಲಿಯೂ ತನ್ಮೂಲಕ ಸೀಸ ಸಂಗ್ರಹವಾಗುತ್ತದೆ. ಈ ಮೀನನ್ನು ಸೇವಿಸುವ ಮೂಲಕ ಸೀಸದ ಅಂಶ ಸೇವಿಸಿದವರ ಹೊಟ್ಟೆಯನ್ನು ಸೇರುತ್ತದೆ.

ಆಟಿಕೆಗಳು
ಮಕ್ಕಳ ಆಟಿಕೆಗಳನ್ನು ಆಕರ್ಷಕವಾಗಿಸಲು ವಿವಿಧ ಪ್ರಕಾರದ ಪ್ರಖರ ಬಣ್ಣಗಳನ್ನು ಉಪಯೋಗಿಸಲಾಗುತ್ತದೆ. ಈ ಬಣ್ಣಗಳಲ್ಲಿಯೂ ಸೀಸದ ಅಂಶ ಇರುತ್ತದೆ. ರಸ್ತೆಬದಿ ಅಥವಾ ಟ್ರಾಫಿಕ್ ನಲ್ಲಿ ಮಾರಾಟ ಮಾಡಲಾದ ಆಟಿಕೆಗಳಲ್ಲಿ ಈ ಬಣ್ಣದ ಪ್ರಮಾಣ ಹೆಚ್ಚು. ಸಾಮಾನ್ಯವಾಗಿ ಮಕ್ಕಳು ತಮ್ಮ ಆಟಿಕೆಗಳನ್ನು ಬಾಯಿಗೆ ಹಾಕಿಕೊಳ್ಳುತ್ತವೆ. ಆಗ ಈ ಬಣ್ಣ ಕರಗಿ ಮಗುವಿನ ಹೊಟ್ಟೆ ಸೇರಿದರೆ ಅತ್ಯಂತ ಮಾರಕವಾಗಿದೆ. ಆದ್ದರಿಂದ ನಿಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಮತ್ತು ಸೀಸ ರಹಿತವೆಂದು ಪ್ರಮಾಣಿತ ಆಟಿಕೆಗಳನ್ನೇ ಕೊಳ್ಳಿ. ಅಪ್ಪಿ ತಪ್ಪಿಯೂಹಾದಿಬದಿಯ ಆಟಿಕೆಗಳು ಬೇಡ.



Click it and Unblock the Notifications











