Latest Updates
-
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್
ಚಳಿಗಾಲದಲ್ಲಿ ಬೆಚ್ಚಗಿರೋಕೆ ಬೇಕು ಇಂತಹ ಆಹಾರಗಳು!
ಚಳಿಗಾಲ ಶುರುವಾಯ್ತು.. ಎಷ್ಟು ಬೆಚ್ಚಗಿದ್ರೂ ಸಾಕಾಗಲ್ಲ. ಈ ಚುಮುಚುಮು ಚಳಿಗೆ ಉಲ್ಲನ್ನಿಂದು ಮೂರು ಸ್ವೆಟ್ಟರ್ ಹಾಕ್ಕೊಂಡು, ಮಫ್ಲರ್ ತೊಟ್ಕೊಂಡು, ಸಾಕ್ಸ್ ಹಾಕ್ಕೊಂಡು, ಬೆಡ್ಶೀಡ್ ಹೊದ್ಕೊಂಡ್ರೂ ಹಾಳಾದ ಚಳಿ ಮಾತ್ರ ಬಿಟ್ಟುಬಿಡದೇ ಕಾಡ್ತಾನೇ ಇರುತ್ತೆ.
ಬಟ್ ಅತಿಯಾಗಿ ಚಳಿ ಆಗೋದು ಯಾಕೆ ಗೊತ್ತಾ? ನೀವು ಸರಿಯಾಗಿ ಆಹಾರವನ್ನು ತೆಗೆದುಕೊಳ್ತಾ ಇಲ್ಲ. ನಿಮ್ಮ ಆಹಾರಕ್ರಮ ಚಳಿಗಾಲಕ್ಕೆ ಹೊಂದಿಕೊಳ್ಳುವಂತಿದ್ದರೆ ಖಂಡಿತ ನಿಮ್ಗೆ ಅಷ್ಟೊಂದು ಚಳಿ ಆಗೋಕೆ ಚಾನ್ಸೇ ಇಲ್ಲ..ಹಾಗಾದ್ರೆ ಏನು ತಿನ್ನಬೇಕು ಅಂತ ಕೇಳ್ತಾ ಇದ್ದೀರಾ?

ಕಾಳುಗಳು
ಚಳಿಗಾಲದಲ್ಲಿ ಕಾಳುಗಳ ಬಳಕೆ ಅಧಿಕವಾಗಿರಲಿ. ಅದ್ರಲ್ಲೂ ಹುರಳಿ ಕಾಳಿನ ಸಾರು,ಪಲ್ಯವನ್ನು ಮಾಡಿ ಸವಿದ್ರೆ ಚಳಿಯನ್ನು ತಡೆದುಕೊಳ್ಳುವ ಶಕ್ತಿ ಅಧಿಕವಾಗುತ್ತೆ. ಅಷ್ಟೇ ಅಲ್ಲ, ತೊಗರಿ, ಅವರೆ ಇತ್ಯಾದಿ ಹಸಿಕಾಳುಗಳು ಮಾರ್ಕೆಟ್ ನಲ್ಲಿ ಲಭ್ಯವಿರುತ್ತೆ. ಅವುಗಳನ್ನು ಕೊಂಡು ಅಡುಗೆಯಲ್ಲಿ ಬಳಕೆ ಮಾಡಿ , ರುಚಿರುಚಿಯಾದ ಅಡುಗೆಯನ್ನು ಸೇವಿಸಿ ಚಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಿ..

ಚಕ್ಕೆ, ಲವಂಗ ಮಸಾಲೆ ಪದಾರ್ಥಗಳು
ಚಳಿಗಾಲ ಮಸಾಲೆ ಪದಾರ್ಥಗಳನ್ನು ಸೇವಿಸಲು ಸೂಕ್ತ ಸಮಯ. ದೇಹವನ್ನು ಬೆಚ್ಚಗಿಡುವ ಸಾಮರ್ಥ್ಯ ಮಸಾಲೆ ಪದಾರ್ಥಗಳಿಗಿರುತ್ತೆ. ಅಡುಗೆಯಲ್ಲಿ ಚಕ್ಕೆ, ಲವಂಗ, ಜೀರಿಗೆ, ಮೊಗ್ಗು, ಒಣಗಿಸಿದ ಕೊತ್ತುಂಬರಿ ಬೀಜಗಳು ಇತ್ಯಾದಿಗಳನ್ನು ಬಳಕೆ ಮಾಡೋದ್ರಿಂದ ಚಳಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಆದ್ರೆ ಅತಿಯಾಗಿ ಮಸಾಲೆ ಬಳಕೆ ಮಾಡೋದು ಕೂಡ ದೇಹಕ್ಕೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಬಲ್ಲದು ಅನ್ನೋದು ನೆನಪಿರಲಿ..

ಚೆನ್ನಾಗಿ ನೀರು ಕುಡಿಯಿರಿ
ಚಳಿಗಾಲದಲ್ಲಿ ನೀರು ಕುಡಿಯೋದು ಕಷ್ಟ ಅನ್ನಿಸುತ್ತೆ. ಹೆಚ್ಚಿನವ್ರಿಗೆ ಬಾಯಾರಿಕೆ ಆಗೋದು ಕೂಡ ಕಡಿಮೆಯೇ. ಆದ್ರೆ ಬೇಸಿಗೆಯಲ್ಲಾದಂತೆ ಚಳಿಗಾಲದಲ್ಲಿ ಬಾಯಾರಿಕೆ ಆಗದೆ ಚರ್ಮದ ಬಿರುಕು, ಕಾಲು ಒಡೆಯುವುದು ಇತ್ಯಾದಿ ಸಮಸ್ಯೆಗಳನ್ನು ಡಿಹೈಡ್ರೇಷನ್ ಉಂಟುಮಾಡುತ್ತೆ. ಹಾಗಾಗಿ ತಣ್ಣಗಿನ ನೀರು ಕುಡಿಯಲು ಅಸಾಧ್ಯ ಅನ್ನಿಸಿದ್ರೆ ನೀರನ್ನು ಸ್ವಲ್ಪ ಬಿಸಿ ಮಾಡಿ ಬೆಚ್ಚಗೆ ಮಾಡ್ಕೊಂಡು ಕುಡಿಯೋದ್ರಿಂದ ಆರೋಗ್ಯಯುತರಾಗಿ ಬೆಚ್ಚಗಿರಲು ಸಾಧ್ಯವಾಗುತ್ತೆ.

ಹಣ್ಣುಗಳನ್ನು ಚೆನ್ನಾಗಿ ಸೇವಿಸಿ
ಚಳಿಗಾಲದಲ್ಲಿ ಚಳಿಯನ್ನು ತಡೆದುಕೊಳ್ಳುವ ಶಕ್ತಿ ಬರಬೇಕು ಅಂದ್ರೆ ನಿಮ್ಮ ದೇಹದಲ್ಲಿ ಸೂಕ್ತ ಪೋಷಕಾಂಶಗಳಿರಬೇಕು.. ಸೂಕ್ತ ಪೋಷಕಾಂಶಗಳು ಲಭ್ಯವಾಗೋದು ಹಣ್ಣುಗಳಿಂದ.. ಆದ್ರೆ ಸೀಸನಲ್ ಫುಡ್ ಸ್ವೀಕರಿಸಿ.. ಈಗಿನ ಕಾಲದಲ್ಲಿ ಎಲ್ಲಾ ಹಣ್ಣುಗಳು ಎಲ್ಲಾ ಕಾಲದಲ್ಲೂ ಸಿಗುತ್ತೆ. ಆದ್ರೆ ಎಲ್ಲವನ್ನೂ ಎಲ್ಲಾ ಕಾಲದಲ್ಲೂ ಸ್ವೀಕರಿಸೋದು ಅಷ್ಟು ಸೂಕ್ತವಲ್ಲ. ಕಿತ್ತಲೆ , ದಾಳಿಂಬೆ, ಸಪೋಟ, ರಾಮಫಲ, ಸೀತಾಫಲ, ಸೀಬೆ, ಪಪ್ಪಾಯಿ ಹಣ್ಣುಗಳು ಚಳಿಗಾಲದ ಸಮಯದಲ್ಲಿ ಸಿಗುವ ಪ್ರಮುಖ ಹಣ್ಣುಗಳಾಗಿವೆ. ಇನ್ನು ಸಾರ್ವಕಾಲಿಕ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಚಳಿಗಾಲದಲ್ಲೂ ದಿನಕ್ಕೊಂದು ಬಾಳೆಹಣ್ಣು ಸೇವಿಸೋದು ಉತ್ತಮ.

ಸೊಪ್ಪು, ತರಕಾರಿ
ಚಳಿಗಾಲದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸೊಪ್ಪು ಸೇವನೆ ಒಳಿತು. ಅಟ್ಲೀಸ್ಟ್ ವಾರಕ್ಕೆ ಮೂರು ಬಾರಿಯಾದ್ರೂ ಸೊಪ್ಪಿನ ಅಡುಗೆಗಳನ್ನು ಮನೆಯಲ್ಲಿ ತಯಾರಿಸಿ ಮನೆಮಂದಿಗೆಲ್ಲ ಬಡಿಸಿ.. ಒಂದೇ ತರಕಾರಿಗೆ ಮಾರು ಹೋಗದೆ ಎಲ್ಲಾ ರೀತಿಯ ತರಕಾರಿಗಳನ್ನು ಅಡುಗೆಯಲ್ಲಿ ಬಳಸಿದ್ರೆ ಚಳಿಯನ್ನ ತಡೆದುಕೊಳ್ಳುವ ಶಕ್ತಿ ಲಭ್ಯವಾಗುತ್ತೆ.

ಶುಂಠಿ, ಬೆಳ್ಳುಳ್ಳಿ ಬಳಸಿ
ಹಿಂದಿನ ಕಾಲದಲ್ಲಿ ಚಳಿಗಾಲದಲ್ಲಿ ಬೆಳ್ಳುಳ್ಳಿ ಒಗ್ಗರಣೆಯನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸ್ತಾ ಇದ್ರು.. ಕಾಳಿನ ಸಾರು ಮಾಡಿದಾಗ ಕೊನೆಗೊಂದು ಬೆಳ್ಳುಳ್ಳಿ ಒಗ್ಗರಣೆ ಕೊಟ್ಟು ನೋಡಿ.. ರುಚಿಯೇ ಬೇರೆಯಾಗಿರುತ್ತೆ. ಅಷ್ಟೇ ಅಲ್ಲ ಆರೋಗ್ಯಕ್ಕೂ ಹಿತವಾಗಿರುತ್ತೆ...ಅಷ್ಟೇ ಅಲ್ಲ ಬೆಳ್ಳುಳ್ಳಿ ಪೇಸ್ಟ್, ಶುಂಠಿ ಪೇಸ್ಟ್ ಬಳಕೆ ಮಾಡಿದಾಗ ಮೈ ಬೆಚ್ಚಗಿರಲು ನೆರವಾಗುತ್ತೆ. ಪಲ್ಯ, ಸಾರು, ಗೊಜ್ಜು, ಹೀಗೆ ಯಾವುದೇ ಅಡುಗೆಯಲ್ಲಾದ್ರೂ ಕೂಡ ಇವುಗಳನ್ನು ಬಳಸಿ ಅಡುಗೆ ಮಾಡಿದ್ರೆ ನೀವು ಚಳಿಯಲ್ಲೂ ಬೆಚ್ಚಗಿರಲು ನಿಮ್ಮ ಇಮ್ಯುನಿಟಿ ಅಧಿಕವಾಗಿರುತ್ತೆ.



Click it and Unblock the Notifications
