Latest Updates
-
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ!
ಜೇನು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು
ಜೇನು ಸೇರಿಸಿದ ನೀರು ನಿತ್ಯವೂ ಕುಡಿಯುವುದರ ಮಹತ್ವ ಬಲ್ಲಿರಾ? ಹೆಚ್ಚಿನವರಿಗೆ ನಿತ್ಯವೂ ಬಿಸಿನೀರು ಕುಡಿಯುವ ಮಹತ್ವ ಗೊತ್ತಿರುತ್ತದೆ. ಆದರೆ ಜೇನು ಬೆರೆಸಿದ ನೀರಿನ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇರುವುದಿಲ್ಲ.
ಆದರೆ ಜೇನು ಹೇಗೆ ಆರೋಗ್ಯಕ್ಕೆ ಪೂರಕವೋ, ಅಂತೆಯೇ ಜೇನು ಬೆರೆಸಿದ ನೀರು ಸಹಾ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ. ಇಂದು ಈ ಮಹತ್ವದ ಗುಣಗಳ ಬಗ್ಗೆ ಅರಿಯೋಣ. ಜೇನು-ಲಿಂಬೆ ನೀರಿನ ಮಿಶ್ರಣ, ಆರೋಗ್ಯಕ್ಕೆ ಸಿದ್ಧೌಷಧ
ಜೇನು ಒಂದು ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕವಾದುದರಿಂದ ದೇಹವನ್ನು ಹಲವು ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ. ಇದೇ ಕಾರಣದಿಂದ ನಿತ್ಯವೂ ಉಗುರುಬೆಚ್ಚನೆಯ ನೀರಿನಲ್ಲಿ ಜೇನು ಬೆರೆಸಿ ಕುಡಿಯುವ ಮೂಲಕ ಹಲವು ರೀತಿಯಲ್ಲಿ ದೇಹ ಪೋಷಣೆಯನ್ನು ಪಡೆಯುತ್ತದೆ. ದಿನದ ಸುಸ್ತು ನಿವಾರಿಸುವುದು, ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವುದು, ಕೊಬ್ಬನ್ನು ಕರಗಿಸಿ ತೂಕ ಇಳಿಯಲು ನೆರವಾಗುವುದು ಮೊದಲಾದ ಹಲವು ಪ್ರಯೋಜನಗಳಿವೆ. ಈ ಪ್ರಯೋಜನಗಳ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಹಲವು ಮಾಹಿತಿಗಳನ್ನು ನೀಡಲಾಗಿದೆ. ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!

ಸುಸ್ತಿನಿಂದ ಬೇಗನೇ ಚೇತರಿಕೆ ನೀಡುತ್ತದೆ
ಒಂದು ವೇಳೆ ನೀವು ನಿತ್ಯವೂ ಹೆಚ್ಚಿನ ವ್ಯಾಯಾಮ ಮಾಡುತ್ತಿದ್ದರೆ ಜೇನು ಬೆರೆಸಿದ ನೀರು ಕುಡಿಯುವುದರಿಂದ ವ್ಯಾಯಾಮದ ಸುಸ್ತಿನಿಂದ ಬೇಗನೇ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಗಂಟಲ ಬೇನೆ ಕೊನೆಗೊಳಿಸುತ್ತದೆ
ಜೇನು ಬೆರೆಸಿದ ನೀರು ಕುಡಿಯುವುದರಿಂದ ಗಂಟಲ ಬೇನೆ, ಕೆಮ್ಮು ಮತ್ತು ಶ್ವಾಸ ಸಂಬಂಧಿ ತೊಂದರೆಗಳಿಂದ ಶೀಘ್ರ ಮುಕ್ತಿ ಪಡೆಯಬಹುದು. ಇದು ಜೇನಿನ ಅತ್ಯುತ್ತಮ ಗುಣಗಳಲ್ಲಿ ಒಂದಾಗಿದೆ.

ಚರ್ಮದ ಸೋಂಕು ನಿವಾರಿಸುತ್ತದೆ
ಜೇನು ಬೆರೆಸಿದ ನೀರು ಕುಡಿಯುವುದರಿಂದ ಚರ್ಮದ ಆರೈಕೆ ಪೂರ್ಣವಾಗಿ ಚರ್ಮಕ್ಕೆ ತಗುಲಬಹುದಾಗಿದ್ದ ಹಲವು ಸೋಂಕುಗಳಿಂದ ರಕ್ಷಣೆ ದೊರಕುತ್ತದೆ.ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಮತ್ತು ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮವನ್ನು ಕೋಮಲ, ಕಾಂತಿಯುತ ಮತ್ತು ನೆರಿಗೆರಹಿತವಾಗಿರಿಸಲು ನೆರವಾಗುತ್ತದೆ.

ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ
ಕೆಲವು ಸ್ವಾಸ್ಥ್ಯ ಸಂಸ್ಥೆಗಳ ಪ್ರಕಾರ ಜೇನು ಬೆರೆಸಿದ ನೀರು ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆಯ ಅಂಶದ ಮಟ್ಟವನ್ನು ಆರೋಗ್ಯಕರ ಮಟ್ಟದಲ್ಲಿರಿಸಿಕೊಳ್ಳಲು ನೆರವಾಗುತ್ತದೆ.

ಸಕ್ಕರೆ ತಿನ್ನುವ ಬಯಕೆಯನ್ನು ತೊಲಗಿಸುತ್ತದೆ
ಸಕ್ಕರೆಯ ಸೇವನೆಯಿಂದ ಒಮ್ಮೆಯೇ ಆಗಾಧ ಪ್ರಮಾಣದ ಪೋಷಕಾಂಶಗಳು ದೊರಕುವುದರಿಂದ ದೇಹಕ್ಕೆ ಹಾನಿಯಾಗುವುದೇ ಹೆಚ್ಚು. ಆದರೆ ಮನಸ್ಸು ಸಿಹಿಯನ್ನು ಕಂಡಾಕ್ಷಣ ತಿನ್ನುವ ಬಯಕೆಯನ್ನು ಮೂಡಿಸಿ ಅನಾರೋಗ್ಯದೆಡೆ ದೂಡುತ್ತದೆ. ಜೇನು ಬೆರೆಸಿದ ನೀರು ಕುಡಿಯುವುದರಿಂದ ಈ ಬಯಕೆ ಕಡಿಮೆಯಾದ ಕಾರಣ ಸಿಹಿ ತಿನ್ನುವುದು ಕಡಿಮೆಯಾಗಿ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

ಹೃದಯಕ್ಕೆ ಉತ್ತಮ
ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹೃದಯಕ್ಕೆ ಉತ್ತಮ ಆರೈಕೆ ನೀಡುವ ಕಾರಣ ಹೃಯದ ಹಲವು ತೊಂದರೆಗಳಿಂದ ರಕ್ಷಣೆ ಪಡೆಯುತ್ತದೆ. ಇದೊಂದು ಬಹುದೊಡ್ಡ ಪ್ರಯೋಜನವಾಗಿದೆ.

ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ
ಕೆಲವು ಸ್ವಾಸ್ಥ್ಯಸಂಸ್ಥೆಗಳ ಪ್ರಕಾರ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ನಿವಾರಿಸಲು ಜೇನು ನೆರವಾಗುತ್ತದೆ. ಇದು ದೇಹದಲ್ಲಿ ಹೆಚ್ಚಿನ ಶಕ್ತಿಯನ್ನೂ ಚೈತನ್ಯವನ್ನೂ ಮೂಡಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಇದರಲ್ಲಿರುವ ವಿಟಮಿನ್‌ಗಳು ಮತ್ತು ವಿವಿಧ ಖನಿಜ ಮತ್ತು ಪೋಷಕಾಂಶಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ
ಜೇನಿನಲ್ಲಿರುವ ಪೋಷಕಾಂಶಗಳು ಜೀರ್ಣಾಂಗಗಳ ಕೆಲಸಕ್ಕೆ ಪೂರಕವಾಗಿದ್ದು ಮಲಬದ್ಧತೆಯಿಂದ ರಕ್ಷಿಸುತ್ತದೆ. ಜೊತೆಗೇ ಹೊಟ್ಟೆಯುಬ್ಬರ, ಹುಳಿತೇಗು ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ.

ಬಾಯಿಯ ದುರ್ವಾಸನೆಯನ್ನು ತಡೆಯುತ್ತದೆ
ಒಂದು ವೇಳೆ ಬಾಯಿಯ ದುರ್ವಾಸನೆಯಿಂದ ಬಳಲುತ್ತಿದ್ದರೆ ಉಗುರುಬೆಚ್ಚನೆಯ ನೀರಿನಲ್ಲಿ ಲಿಂಬೆ ಮತ್ತು ಜೇನನ್ನು ಬೆರೆಸಿ ಬೆಳಿಗ್ಗೆ ಕುಡಿಯುವ ಮೂಲಕ ಬಾಯಿಯ ದುರ್ವಾಸನೆಯನ್ನು ದೂರವಾಗಿಸಬಹುದು.

ಜೇನಿನ ಗುಣ
ಜೇನಿನ ಗುಣಗಳಲ್ಲಿ ಇವು ಕೆಲವು ಮಾತ್ರವೇ ಆಗಿವೆ. ನಿಮ್ಮ ಬಳಿ ಇನ್ನೂ ಹೆಚ್ಚಿನ ಮಾಹಿತಿಯಿದ್ದರೆ ಕೆಳಗಿನ ಕಮೆಂಟ್ಸ್ ಸ್ಥಳದಲ್ಲಿ ನೀಡುವ ಮೂಲಕ ಇತರರಿಗೂ ನೆರವಾಗಿ.



Click it and Unblock the Notifications
