Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಇಲಿಗಳಿಗೆ ಬಳಸೋ ಕೆಮಿಕಲ್ ನಿಮ್ಮ ಹೊಟ್ಟೆ ಸೇರುತ್ತಿದೆ ಎಚ್ಚರಿಕೆ..
ವಾವ್ ರೋಟಿ, ಬಾಯಲ್ಲಿ ನೀರೂರಿಸೋ ಬೇಕರಿ ಪದಾರ್ಥಗಳು, ಒಂದಕ್ಕಿಂತ ಒಂದು ಟೇಸ್ಟಿಯಾಗಿರುತ್ತೆ. ಅದೆಷ್ಟೋ ಜನರ ಮನೆಯಲ್ಲಿ ಒಂದು ಡಬ್ಬದಲ್ಲಿ ಬೇಕರಿ ಆಹಾರ ಪದಾರ್ಥಗಳನ್ನು ಶೇಖರಿಸಿ ಇಟ್ಟುಕೊಂಡು ಬಿಡ್ತಾರೆ. ಮಕ್ಕಳು ಹಠ ಮಾಡಿದಾಗ, ಏನಾದ್ರೂ ತಿನ್ನಬೇಕು ಅನ್ನೋ ಚಪಲವಾದಾಗ, ಅಚಾನಕ್ ಆಗಿ ಅತಿಥಿಗಳು ಬಂದಾಗ ಈ ಆಹಾರ ಪದಾರ್ಥಗಳು ಅವರ ರೆಡಿಮೇಡ್ ಫುಡ್‌ಗಳು.. ಪ್ಯಾಕೆಟ್ ನಿಂದ ತೆಗೆದರಾಯ್ತು.. ತಿನ್ನೊಕೆ ಕೊಟ್ಟರಾಯ್ತು.
ಅತ್ಯಂತ ಸುಲಭದ ಕಾಯಕ ಅನ್ನೋ ಕಾರಣಕ್ಕೆ ಹೆಚ್ಚಿನ ಮಹಿಳೆಯರು ತಮ್ಮ ಮನೆಯಲ್ಲಿ ಇಂತದ್ದೊಂದು ಹವ್ಯಾಸ ಇಟ್ಟುಕೊಂಡಿರ್ತಾರೆ. ಆದ್ರೆ ನಿಮ್ಮ ಈ ಬೇಕರಿ ಆಹಾರ ಪದಾರ್ಥಗಳನ್ನು ಉಪಯೋಗಿಸುವ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ಬೀರುತ್ತಾ ಇರುವ ಪರಿಣಾಮ ಮಾತ್ರ ನೀವು ಊಹಿಸಲು ಅಸಾಧ್ಯವಾದದ್ದು.
ಬೇಕರಿ ಆಹಾರ ಪದಾರ್ಥ ಅಂದ್ರೆ ಅದ್ರಲ್ಲಿ ಪ್ರಮುಖವಾಗಿ ಬಳಸೋದು ಮೈದಾ ಹಿಟ್ಟು. ಕೇವಲ ಬೇಕರಿ ಮಾತ್ರವಲ್ಲ, ಕೆಲವರ ಮನೆಯಲ್ಲೂ ಮೈದಾ ಹಿಟ್ಟಿನ ಬಳಕೆ ಹೆಚ್ಚಿರುತ್ತೆ. ರೋಟಿ ತಯಾರಿಸುವಾಗ, ಕೆಲವು ಸ್ವೀಟ್ಸ್ ತಯಾರಿಸುವಾಗ ಹೀಗೆ ಮೈದಾ ಹಿಟ್ಟಿನ ಬಳಕೆ ಪ್ರಮುಖವಾಗಿ ಮಾಡ್ತಾರೆ. ಆದ್ರೆ ಮೈದಾ ನಿಮ್ಮನ್ನು ಮೈಪರಚಿಕೊಳ್ಳುವಂತೆ ಮಾಡುತ್ತೆ. ಯಾಕಂದ್ರೆ ಮೈದಾ ಹಿಟ್ಟು ಕೇವಲ ಒಂದು ಆಹಾರ ಪದಾರ್ಥವಲ್ಲ. ಬದಲಾಗಿ ವಿಷಪೂರಿತವಾದ ಆಹಾರ. ಹೇಗೆ ಅನ್ನೋದನ್ನು ತಿಳಿದುಕೊಳ್ಳಬೇಕಾ ಮುಂದೆ ಓದಿ..

ಮೈದಾ ಹಿಟ್ಟು
ಮೈದಾ ಹಿಟ್ಟು ಗೋಧಿಯ ನುಚ್ಚಿನಿಂದ ತಯಾರಿಸುವ ಒಂದು ಹಿಟ್ಟು. ಮೈದಾ ಹಿಟ್ಟಿನಲ್ಲಿ ಗ್ಲಿಸಮಿಕ್ ಇಂಡೆಕ್ಸ್ ಅಥ್ವಾ ಜಿ.ಐ ಅಧಿಕವಾಗಿರುತ್ತೆ. ಅಂದ್ರೆ ಇದು ಆಹಾರದಲ್ಲಿರುವ ಗ್ಲೂಕೋಸ್ ಅಂಶವನ್ನು ಅತ್ಯಂತ ವೇಗವಾಗಿ ರಕ್ತಕ್ಕೆ ಸೇರಿಸುವ ಶಕ್ತಿಯನ್ನು ಹೊಂದಿದೆ. ಕಡಿಮೆ ಜಿಐ ಒಳಗೊಂಡಿರುವ ಆಹಾರಗಳು ಗ್ಲೂಕೋಸ್ ಅಂಶವನ್ನು ರಕ್ತಕ್ಕೆ ಸೇರಿಸುವುದು ನಿಧಾನವಾಗಿರುತ್ತೆ.

ಡೇಂಜರಸ್ ಕೆಮಿಕಲ್ ಮಿಶ್ರಣ
ಮೈದಾಹಿಟ್ಟು ಹಳದಿ ಬಣ್ಣದಲ್ಲಿರುತ್ತೆ. ಇದು ಬೆನ್ಸಾಯಿಲ್ ಫೆರಾಕ್ಸೈಡ್ ಅನ್ನೋ ಕೆಮಿಕಲ್ ಬಳಸಿ ಬ್ಲೀಚ್ ಮಾಡಿ ತಯಾರಿಸಲಾಗಿರುತ್ತೆ. ಕೇವಲ ಬೆನ್ಸಾಯಿಲ್ ಫೆರಾಕ್ಸೈಡ್ ಮಾತ್ರವಲ್ಲ. ಇದ್ರ ಜೊತೆಗೆ ಅಲೋಕ್ಸೆನ್ (alloxen) ಅನ್ನೋ ಡೇಂಜರಸ್ ಕೆಮಿಕಲ್ ಕೂಡ ಮೈದಾ ಹಿಟ್ಟಿನ ತಯಾರಿಕೆಯಲ್ಲಿ ಬಳಸಲಾಗಿರುತ್ತೆ. ಈ ಬೆನ್ಸಾಯಿಲ್ ಫೆರಾಕ್ಸೈಡ್ ನ್ನು ಚೀನಾ, ಯುರೋಪಿಯನ್ ದೇಶಗಳು ಸೇರಿದಂತೆ ಯುಕೆಯಲ್ಲಿ ಬ್ಯಾನ್ ಮಾಡಲಾಗಿದೆ. ಆದ್ರೆ ದುರಂತವೆಂದ್ರೆ ದೇಹಕ್ಕೆ ಹಾನಿಕಾರಕವೆನ್ನಿಸಿರುವ ಈ ಬೆನ್ಸಾಯಿಲ್ ಫೆರಾಕ್ಸೈಡ್ ನ್ನು ಭಾರತದಲ್ಲಿ ಬ್ಯಾನ್ ಮಾಡಿಲ್ಲ. ಮತ್ತು ಮೈದಾ ಹಿಟ್ಟಿನಲ್ಲಿ ಬಳಕೆ ಮಾಡಲಾಗ್ತಿದೆ.

ಹಂದಿ, ಇಲಿಗಳಿಗೆ ಬಳಸುವ ಕೆಮಿಕಲ್
ಈ ಬೆನ್ಸಾಯಿಲ್ ಫೆರಾಕ್ಸೈಡ್ ಅನ್ನೋ ಕೆಮಿಕಲ್ ಪ್ರಮುಖವಾಗಿ ಬಳಕೆ ಮಾಡೋದು ಹಂದಿ ಮತ್ತು ಇಲಿಗಳ ಇನ್ಸುಲಿನ್ ಟೆಸ್ಟ್ ನಲ್ಲಿ..ಸಂಶೋಧಕರು ಪ್ರಾಣಿಗಳಿಗೆ ಈ ಕೆಮಿಕಲ್ ಮಿಶ್ರಿತ ಇಂಜೆಕ್ಷನ್ ನೀಡಿ ಡಯಾಬೆಟಿಕ್ ನಿಂದ ಅವುಗಳು ಪರಿಣಾಮಕ್ಕೆ ಒಳಗಾದ ನಂತ್ರ ತಾವು ತಯಾರಿಸಿದ ಮೆಡಿಸಿನ್ ಗಳ ಪ್ರಯೋಗವನ್ನು ಪ್ರಾಣಿಗಳ ಮೇಲೆ ಮಾಡ್ತಾರೆ. ಇಂತಹ ಕೆಮಿಕಲ್ ಈಗ ಮನುಷ್ಯನ ಹೊಟ್ಟೆ ಸೇರುತ್ತಾ ಇರೋದು ದುರಂತವೇ ಸರಿ.

ಬಟ್ಟೆ ತಯಾರಿಕಾ ಕಂಪೆನಿಯಲ್ಲಿ ಬಳಸುವ ಕೆಮಿಕಲ್
ತಿನ್ನಲು ಅಯೋಗ್ಯವಾಗಿರುವ ಈ ಬೆನ್ಸಾಯಿಲ್ ಫೆರಾಕ್ಸೈಡ್ ಅನ್ನುವ ಕೆಮಿಕಲ್ ಬಟ್ಟೆ ತಯಾರಿಕಾ ಕಂಪೆನಿಗಳಲ್ಲೂ ಬಳಕೆ ಮಾಡ್ತಾರೆ. ನೀವು ಈ ಕೆಮಿಕಲ್ ನ್ನು ನೀರಿನೊಂದಿಗೆ ಬೆರಿಸಿದ್ರೆ ಸಣ್ಣಸಣ್ಣ ಗುಳ್ಳೆಗಳು ಬರುತ್ತೆ. ಅಷ್ಟೇ ಅಲ್ಲ ಕಣ್ಣಿಗೆ ನೇರವಾಗಿ ಗೋಚರಿಸದ ಬೆಂಕಿಯೂ ಕಾಣಿಸಿಕೊಂಡಿರುತ್ತೆ. ಇದು ನಿಮ್ಮ ಚರ್ಮಕ್ಕೆ ಹಾನಿಯುಂಟು ಮಾಡುವ ಡೇಂಜರಸ್ ಕೆಮಿಕಲ್.

ಟೈಪ್ 2 ಡಯಾಬಿಟೀಸ್ ಗೆ ಕಾರಣವಾಗುತ್ತೆ
ಈಗಾಗಲೇ ಹೇಳಿರುವಂತೆ ಗ್ಲೂಕೋಸ್ ಅಂಶವನ್ನು ರಕ್ತಕ್ಕೆ ಸೇರಿಸುವ ಈ ಮೈದಾ ಹಿಟ್ಟು, ಗ್ಲುಕೋಸ್ ರಕ್ತದಲ್ಲಿ ಕರಗಲು ಬೇಕಾಗುವ ಯಾವುದೇ ಅಂಶವನ್ನು ಪೂರೈಸೋದಿಲ್ಲ. ಹಾಗಾಗಿ ಅನಗತ್ಯವಾಗಿ ದೇಹದಲ್ಲಿ ಗ್ಲುಕೋಸ್ ಅಂಶ ಅಧಿಕವಾಗುತ್ತೆ. ಗ್ಲೂಕೋಸ್ ಅಧಿಕವಾದಾಗ ಇನ್ಸುಲಿನ್ ಹಾರ್ಮೋನಿನಲ್ಲಿ ವ್ಯತ್ಯಯವಾಗಿ ನಿಮಗೆ ಟೈಪ್ 2 ಡಯಾಬಿಟೀಸ್ ಕೊಡುಗೆಯಾಗಿ ಬರಲಿದೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಟೈಪ್ 2 ಡಯಾಬಿಟೀಸ್ ಗೆ ಕಾರಣವಾಗುತ್ತೆ
ಯಾರು ಅತೀ ಹೆಚ್ಚು ಮೈದಾ ಹಿಟ್ಟಿನ ಬಳಕೆ ಮಾಡ್ತಾರೋ ಅವ್ರಿಗೆ ಟೈಪ್ 2 ಡಯಾಬಿಟೀಸ್ ಮಾಮೂಲಾಗಿ ಕಂಡುಬರುತ್ತೆ.

ಒಬೆಸಿಟಿ ಸಮಸ್ಯೆಗೆ ಕಾರಣವಾಗುವ ಮೈದಾ
ದೇಹದಲ್ಲಿ ಅತಿಯಾದ ಗ್ಲೂಕೋಸ್ ಅಂಶ ಫ್ಯಾಟ್ ಪ್ರಮಾಣವನ್ನು ಅನವಶ್ಯಕವಾಗಿ ಶೇಖರಿಸುತ್ತೆ. ಹಾಗಾಗಿ ಯಾವಾಗಲೂ ಮೈದಾ ಬಳಸುವವರಿಗೆ ಒಬೆಸಿಟಿ ಸಮಸ್ಯೆ ಎದುರಾಗುತ್ತೆ. ಒಬೆಸಿಟಿ ಮುಂದೆ ಹೃದಯದ ಸಮಸ್ಯೆಗೆ ಕಾರಣವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾಕಂದ್ರೆ ಒಬೆಸಿಟಿ ಮತ್ತು ಹೃದಯದ ಸಮಸ್ಯೆ ಒಂದಕ್ಕೊಂದು ಅಣ್ಣತಮ್ಮಂದಿರಿದ್ದಂತೆ.
Image courtesy - www.zliving.com

ಚರ್ಮ ರೋಗಕ್ಕೆ ಮುನ್ನುಡಿ ಬರೆಯುತ್ತೆ ಮೈದಾ ಹಿಟ್ಟು
ಈಗಾಗಲೇ ಹೇಳಿದಂತೆ ಬ್ಯಾನ್ ಆಗಬೇಕಿರುವ ಕೆಮಿಕಲ್ ನಿಮ್ಮ ಹೊಟ್ಟೆ ಸೇರಿ ಮಾಡುವ ಕೆಟ್ಟ ಪರಿಣಾಮಗಳಿಗೆ ಇತಿಮಿತಿಯೇ ಇಲ್ಲ ಅಂದ್ರೆ ತಪ್ಪಾಗಲಿಕ್ಕಿಲ್ಲ. ಅದ್ರಲ್ಲೂ ಚರ್ಮದ ರೋಗಕ್ಕೆ ಮುನ್ನುಡಿ ಬರೆಯುವ ಮೈದಾಹಿಟ್ಟಿನಿಂದ ನೀವು ದೂರವಿರುವುದೇ ಲೇಸು.. ಮೈದಾ ಹಿಟ್ಟನ್ನು ನೀರಿನೊಂದಿಗೆ ಕಲಸಿದಾಗ ಮತ್ತೊಂದಿಷ್ಟು ಕೆಮಿಕಲ್ ರಿಯಾಕ್ಷನ್ ಗಳಾಗುತ್ತೆ. ಅವು ನಿಮ್ಮ ಆರೋಗ್ಯದ ಮೇಲೆ ನೇರ ಪರಿಣಾಮವನ್ನುಂಟು ಮಾಡುತ್ತೆ.

ನೈಸರ್ಗಿಕವಾಗಿರುವ ಬ್ಯಾಕ್ಟೀರಿಯಾಗಳನ್ನು ಸಾಯಿಸಲಾಗಿರುತ್ತೆ
ಪ್ರತಿ ಆಹಾರ ಪದಾರ್ಥದಲ್ಲೂ ನೈಸರ್ಗಿಕವಾಗಿ ಒಂದಷ್ಟು ಬ್ಯಾಕ್ಟೀರಿಯಾಗಳಿರುತ್ತೆ. ಉದಾಹರಣಗೆ ನೀವು ಗಮನಿಸ್ಬಹುದು, ಕೊಬ್ಬರಿ ಎಣ್ಣೆಯಿಂದ ಯಾವುದಾದ್ರೂ ಆಹಾರ ಪದಾರ್ಥಗಳನ್ನು ತಯಾರಿಸಿದ್ರೆ ಕೆಲವು ದಿನಗಳ ನಂತ್ರ ಆ ಆಹಾರ ವಸ್ತು ಕೆಟ್ಟ ವಾಸನೆ ಹೊಡೆಯುತ್ತೆ. ಅದಕ್ಕೆ ಕಾರಣ ಕೊಬ್ಬರಿ ಎಣ್ಣೆಯಲ್ಲಿರುವ ಕೆಲವು ನೈಸರ್ಗಿಕ ಬ್ಯಾಕ್ಟೀರಿಯಾಗಳು.

ನೈಸರ್ಗಿಕವಾಗಿರುವ ಬ್ಯಾಕ್ಟೀರಿಯಾಗಳನ್ನು ಸಾಯಿಸಲಾಗಿರುತ್ತೆ
ಆದ್ರೆ ಮೈದಾಹಿಟ್ಟಿನಲ್ಲಿರುವ ಅಂತಹ ಬ್ಯಾಕ್ಟೀರಿಯಾಗಳನ್ನು ಕೆಮಿಕಲ್ ಗಳು ಸಾಯಿಸಿರುತ್ತೆ.. ಹಾಗಾಗಿ ಅತೀ ಹೆಚ್ಚು ದಿನ ಮೈದಾ ಆಹಾರ ಪದಾರ್ಥಗಳು ಹಾಳಾಗುವುದಿಲ್ಲ. ಅದೇ ಕಾರಣಕ್ಕೆ ಬೇಕರಿ ಪದಾರ್ಥಗಳಲ್ಲಿ ಮೈದಾ ಬಳಕೆ ಅತ್ಯಂತ ಹೆಚ್ಚಾಗಿರುತ್ತೆ. ಇದೂ ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಪ್ರಮುಖ ಅಂಶಗಳಲ್ಲಿ ಒಂದು ಅನ್ನೋದನ್ನು ಮತ್ತೊಮ್ಮೆ ಹೇಳುವ ಅಗತ್ಯವಿಲ್ಲವೆನಿಸುತ್ತೆ.

ಮೈದಾ ಜೊತೆ ಸೇರಿಕೊಳ್ಳುತ್ತೆ ಇನ್ನಷ್ಟು ಕೆಮಿಕಲ್‌ಗಳು
ಮೈದಾದಲ್ಲಿ ಕೇವಲ ಅಷ್ಟಕ್ಕೆ ಕೆಮಿಕಲ್ ಗಳ ಮಿಶ್ರಣ ಮುಗಿಯಿತು ಅಂದುಕೊಳ್ಳಬೇಡಿ. ಮೈದಾದಿಂದ ಆಹಾರ ಪದಾರ್ಥಗಳನ್ನು ತಯಾರಿಸುವಾಗ ಇನ್ನಷ್ಟು ಕೆಮಿಕಲ್ ಗಳು ಅದ್ರಲ್ಲಿ ಸೇರಿಕೊಂಡು ಬಿಡುತ್ತೆ.

ಮೈದಾ ಜೊತೆ ಸೇರಿಕೊಳ್ಳುತ್ತೆ ಇನ್ನಷ್ಟು ಕೆಮಿಕಲ್‌ಗಳು
ಅದ್ರಲ್ಲೂ ಪ್ರಮುಖವಾಗಿ ಅಜಿನೋಮೋಟೋ, ಮಿನರಲ್ ಆಯಿಲ್, ಟೇಸ್ಟ್ ಮೇಕರ್ಸ್, ಪ್ರಿಸರ್ವೇಟಿವ್ಸ್, ಡಾಲ್ಡಾ, ಸ್ಯಾಕ್ರೀನ್, ಸಕ್ಕರೆಯ ಕೆಮಿಕಲ್ ಗಳು ಇತ್ಯಾದಿಗಳು ಬೇಕರಿ ಆಹಾರ ಪದಾರ್ಥಗಳಲ್ಲಿ ಸೇರಿಕೊಳ್ಳುತ್ತೆ. ಅರ್ಥಾತ್ ಮೈದಾ ಹಿಟ್ಟಿನಿಂದ ತಯಾರಿಸುವ ಬೇಕರಿ ಆಹಾರ ಪದಾರ್ಥಗಳಲ್ಲಿ ಸೇರಿಕೊಳ್ಳುವ ಈ ಎಲ್ಲಾ ಕೆಮಿಕಲ್ ಗಳು ನಿಮ್ಮ ಆರೋಗ್ಯವನ್ನು ಹಾಳು ಮಾಡಿ ಬಿಡುತ್ತೆ.



Click it and Unblock the Notifications
