Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಧ್ಯಾನವೆಂಬುದು ದೇವರೊಂದಿಗೆ ಮಾತನಾಡುವ ಕ್ರಿಯೆ...
"ಪ್ರಾರ್ಥನೆಯೆಂಬುದು ನೀವು ದೇವರೊಂದಿಗೆ ಮಾತನಾಡುವ ಕ್ರಿಯೆ, ಅದೇ ಧ್ಯಾನವೆಂಬುದು ದೇವರೇ ನಿಮ್ಮೊಂದಿಗೆ ಮಾತನಾಡುವ ಕ್ರಿಯೆ" ಎಂಬುದು ಒಂದು ಪ್ರಸಿದ್ಧ ಸುಭಾಷಿತ. ಹಾಗೆಯೇ ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ನಾವು ಕೇಳಿರುತ್ತೇವೆ. ನಮಗೆ ನಮ್ಮ ಗುರಿ, ಉದ್ದೇಶಗಳು ಕಾಣಬೇಕೆಂದರೆ ಮನಸ್ಸು ನಮ್ಮ ಹತೋಟಿಯಲ್ಲಿರಬೇಕು. ಹಾಗೆ ಮನಸ್ಸನ್ನು ಹತೋಟಿಯಲ್ಲಿ ಇರಿಸಿಕೊಂಡವರಿಗೆ ಮಾತ್ರ ಮಾರ್ಗವು ತಕ್ಷಣ ಗೊತ್ತಾಗುತ್ತದೆ. ಯಶಸ್ಸು ಅವರನ್ನು ವರಿಸುತ್ತದೆ. ಮನಸ್ಸಿಟ್ಟು ಮಾಡಿದ ಯಾವುದೇ ಕೆಲಸವು ಇದುವರೆಗು ಯಶಸ್ವಿಯಾಗಲಿಲ್ಲ ಎಂದು ಹೇಳುವ ಒಂದೇ ಒಂದು ನಿದರ್ಶನ ನಮ್ಮ ಮುಂದೆ ಇಲ್ಲ. ಹಾಗೆ ಮನಸ್ಸನ್ನು ನಮ್ಮ ಯಶಸ್ಸಿಗೆ ಬಳಸಿಕೊಳ್ಳಲು ಸಹಾಯ ಮಾಡುವ ಕ್ರಿಯೆಯೇ ಧ್ಯಾನ. ಮನಸ್ಸಿನ ಶಾಂತಿ ನೆಮ್ಮದಿಗೆ-ಕಟ್ಟುನಿಟ್ಟಿನ ಧ್ಯಾನ
ಧ್ಯಾನವು ಮನಸ್ಸನ್ನು ಪ್ರಶಾಂತಗೊಳಿಸುವುದರ ಜೊತೆಗೆ, ಅದನ್ನು ಅದ್ಭುತವಾಗಿ ಬಳಸಿಕೊಳ್ಳುವ ಕಲೆಯನ್ನು ಸಹ ನಮಗೆ ಒದಗಿಸಿಕೊಡುತ್ತದೆ. ಮಹಾನ್ ಸಾಧಕರು ಎಂದೆನಿಸಿಕೊಂಡ ಯೋಗಿಗಳು ಧ್ಯಾನದ ಮೂಲಕವೇ ತಮ್ಮ ಸಾಧನೆಯನ್ನು ಕಂಡುಕೊಂಡವರು. ಯೋಗಿಗಳೇ ಧ್ಯಾನ ಮಾಡುತ್ತಿದ್ದರು ಅದನ್ನು ಮಾಡಲು ನಮಗೆ ಕಷ್ಟವಾಗಬಹುದು ಎಂಬ ಭಾವನೆ ನಿಮ್ಮದಾಗಿದ್ದರೆ ಅದು ಸುಳ್ಳು. ಧ್ಯಾನವನ್ನು ಎಲ್ಲರೂ ಮಾಡಬಹುದು. ಅದು ಸರಳಾತೀಸರಳ, ಅದು ಹೇಗೆ ಎಂದು ತಿಳಿದುಕೊಳ್ಳಲು ಮುಂದೆ ಓದಿ...

ಗಮನ ಕೇಂದ್ರೀಕರಿಸಿದ ಧ್ಯಾನ
ಇದು ಅತ್ಯಂತ ಪ್ರಸಿದ್ಧವಾದ ಒಂದು ಧ್ಯಾನದ ಬಗೆಯಾಗಿದೆ. ಈ ತಂತ್ರದ ಪ್ರಕಾರ ನೀವು ಧ್ಯಾನ ಮಾಡುವಾಗ ಒಂದೇ ಒಂದು ವಿಚಾರದ ಮೇಲೆ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಅದು ನಿಮ್ಮ ಮನಸ್ಸಿಗೆ ಇಷ್ಟವಾಗುವಂತಹ ಮತ್ತು ಶಾಂತಿಯನ್ನು ತರುವಂತಹ ಯಾವುದೇ ಅಂಶವಾಗಿರಬಹುದು. ಅದನ್ನು ಆರಿಸಿಕೊಂಡು ಅದರ ಮೇಲೆ ಧ್ಯಾನ ಮಾಡಿ.

ಅಸ್ತಿತ್ವ ಧ್ಯಾನ
ಧ್ಯಾನದ ತಂತ್ರಗಳಿಗೆ ಹೊರತಾಗಿ, ಇದರಲ್ಲಿ ನೀವು ಈಗ ನಿಮ್ಮ ವರ್ತಮಾನದಲ್ಲಿ ಏನು ನಡೆಯುತ್ತಿದೆ ಎಂದು ಧ್ಯಾನ ಮಾಡುತ್ತೀರಿ. ಇದನ್ನು ನೀವು ಯಾವಾಗ ಅಭ್ಯಾಸ ಮಾಡುತ್ತೀರೋ, ಆಗ ನಿಮ್ಮ ಮನಸ್ಸಿಗೆ ಬರುವ ಎಲ್ಲಾ ವಿಚಾರಗಳ ಕುರಿತು ನೀವು ಆಲೋಚನೆ ಮಾಡುತ್ತಾ ಧ್ಯಾನ ಮಾಡುತ್ತೀರಿ. ಹಾಗೆಯೇ ನಿಮ್ಮ ಸುತ್ತ ಮುತ್ತ ನಡೆಯುವ ವಿಚಾರಗಳ ಕುರಿತು ಧ್ಯಾನ ಮಾಡುತ್ತೀರಿ.

ಉಸಿರಿನ ಮೇಲೆ ಗಮನ ಕೇಂದ್ರೀಕರಿಸಿ
ಈ ತಂತ್ರದಲ್ಲಿ ನೀವು ಉಸಿರಿನ ಮೇಲೆ ಗಮನವನ್ನು ಕೇಂದ್ರೀಕರಿಸಿ ಧ್ಯಾನ ಮಾಡುತ್ತೀರಿ. ನಿಮ್ಮ ಉಸಿರಾಟದ ವೇಗ ಮತ್ತು ಅದರ ಆಳ, ಆವರ್ತನಗಳ ಮೇಲೆ ನೀವು ಗಮನ ಕೇಂದ್ರೀಕರಿಸಿ. ಅದನ್ನು ಬಿಟ್ಟು ನೀವು ಯಾವುದೇ ವಿಚಾರಗಳ ಮೇಲೆ ಗಮನವನ್ನು ಕೇಂದ್ರೀಕರಿಸಬೇಡಿ.

ಮಂತ್ರದ ಧ್ಯಾನ
ಇದು ಅತ್ಯಂತ ಜನಪ್ರಿಯವಾಗಿರುವ ಧ್ಯಾನದ ಬಗೆಯಾಗಿದೆ. ಯಾರಿಗೆ ಮಂತ್ರಗಳು ಇಷ್ಟವಾಗುತ್ತವೆಯೋ ಮತ್ತು ಮಂತ್ರಗಳ ಉಚ್ಛಾರಣೆ ಸರಿಯಾಗಿ ಬರುತ್ತದೆಯೋ, ಅವರು ಈ ಧ್ಯಾನವನ್ನು ಮಾಡಬಹುದು. "ಓಂ ನಮಃ ಶಿವಾಯಃ" ರೀತಿಯ ಸಾಮಾನ್ಯ ಬೀಜಾಕ್ಷರ ಮತ್ತು ನಾಮ ಮಂತ್ರಗಳನ್ನು ಸಹ ಧ್ಯಾನಕ್ಕೆ ಬಳಸಿಕೊಳ್ಳಬಹುದು. ಇದು ಧ್ಯಾನ ಮಾಡಲು ಹೇಳಿ ಮಾಡಿಸಿದಂತಹ ಎಲ್ಲಾ ವಿಧಾನಗಳಲ್ಲಿ ಅತ್ಯುತ್ತಮವಾದವುಗಳಲ್ಲಿ ಒಂದಾಗಿದೆ.

ವಸ್ತುವಿನ ಮೇಲೆ ಗಮನ ಕೇಂದ್ರೀಕರಿಸುವುದು
ಇದು ಯಾವುದಾದರು ಒಂದು ವಸ್ತುವಿನ ಮೆಲೆ ಗಮನ ಕೇಂದ್ರೀಕರಿಸುವ ಬಗೆಯ ಧ್ಯಾನವಾಗಿದೆ. ಇದರಲ್ಲಿ ವಿಗ್ರಹ, ದೀಪ, ಸ್ಟೇಷನರಿ ವಸ್ತು ಇತ್ಯಾದಿಗಳ ಮೇಲೆ ಗಮನ ಕೇಂದ್ರೀಕರಿಸಿ ಧ್ಯಾನ ಮಾಡಬಹುದು.

ದೇಹದ ಮೇಲೆ ಗಮನ ಕೇಂದ್ರೀಕರಿಸುವಿಕೆ
ಈ ವಿಧಾನದಲ್ಲಿ ನಿಮ್ಮ ಗಮನವನ್ನು ನಿಮ್ಮ ದೇಹದ ಅಂಗಗಳ ಮೇಲೆ ಕೇಂದ್ರೀಕರಿಸುವ ಮೂಲಕ ಧ್ಯಾನ ಮಾಡಬಹುದಾಗಿದೆ. ಇದು ನಿಮ್ಮ ಕಾಲು ಬೆರಳುಗಳಿಂದ ಶುರು ಮಾಡಿ ತಲೆಯವರೆಗೆ ಒಂದೊಂದೆ ದೇಹದ ಅಂಗವನ್ನು ಏಕಾಗ್ರತೆಯಿಂದ ಗಮನವಿಟ್ಟು ಧ್ಯಾನ ಮಾಡುವ ಕ್ರಿಯೆಯಾಗಿರುತ್ತದೆ. ಇವುಗಳು ಧ್ಯಾನ ಮಾಡಲು ಹೇಳಿ ಮಾಡಿಸಿದಂತಹ 10 ಅತ್ಯುತ್ತಮ ಬಗೆಯ ಮಾರ್ಗಗಳಾಗಿವೆ.



Click it and Unblock the Notifications
