For Quick Alerts
ALLOW NOTIFICATIONS  
For Daily Alerts

ಅರೆ ಇದೇನಿದು, ಬಿಯರ್ ನಿಜವಾಗಿಯೂ ಆರೋಗ್ಯಕಾರಿಯೇ?

|

ಬಿಯರ್ ಒಂದು ಬಗೆಯ ಮದ್ಯವಾದರೂ, ಇದನ್ನು ಮಿತಿಯಲ್ಲಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಅನ್ನುವ ಅಂಶ ಈಗಾಗಲೇ ತಿಳಿದಿರುತ್ತೀರಿ. ಕೆಲ ಮದ್ಯ ಪ್ರಿಯರಿಗೆ ಈ ಪಾಯಿಂಟ್ ವರದಾನವಾಗಿದೆ. ಬಿಯರ್ ಕುಡಿದರೆ ಒಳ್ಳೆಯದೆಂದು ಕೂತಲ್ಲಿಯೇ 3-4 ಬಾಟಲ್ ಬೀರ್ ಕುಡಿಯುತ್ತಾರೆ. ಆದರೆ ಹೀಗೆ ಮಾಡಿದರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ, ಇಲ್ಲಿ ಒ೦ದು ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಅದೇನೆ೦ದರೆ, ಬಿಯರ್‌ನ ಅತಿಯಾದ ಸೇವನೆಯು ಆರೋಗ್ಯ ಸಮಸ್ಯೆಗೆ ಕಾರಣವಾದರೆ, ಬಿಯರ್‌‪ನ ಇತಿಮಿತಿಯಾದ ಸೇವನೆಯು ಅನೇಕ ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ನೀವಿದುವರೆಗೂ ಕ೦ಡುಕೇಳರಿಯದ, ಬಿಯರ್ ನ ಆ ಎಲ್ಲಾ ಆರೋಗ್ಯ ಲಾಭಗಳ ಕುರಿತು ಒಮ್ಮೆ ದೃಷ್ಟಿ ಹಾಯಿಸೋಣ.

Unexpected Benefits of Drinking Beer

ನ್ಯುಮೋನಿಯಾವನ್ನು ದೂರಗೊಳಿಸುತ್ತದೆ

ಬಿಯರ್‌ಗಳಲ್ಲಿರುವ ಒ೦ದು ಬಗೆಯ ರಾಸಾಯನಿಕ ಸ೦ಯುಕ್ತವು ವೈರಾಣು ಪ್ರತಿಬ೦ಧಕ ಗುಣಲಕ್ಷಣಗಳನ್ನು ಹೊ೦ದಿದ್ದು, ಇದು ಮಕ್ಕಳಲ್ಲಿ ನ್ಯುಮೋನಿಯಾ ಅಥವಾ ಶ್ವಾಸಕೋಶಗಳ ಉರಿಯೂತಕ್ಕೆ ಕಾರಣವಾಗಬಹುದಾದ ವೈರಾಣುವೊ೦ದರಿ೦ದ, ಬಿಯರ್ ಅನ್ನು ಸೇವಿಸುವವರನ್ನು ರಕ್ಷಿಸುತ್ತದೆ.

ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ

ಬಿಯರ್‌‌ನ ಅಲ್ಪ ಪ್ರಮಾಣದ ಸೇವನೆಯು, ಮೆದುಳಿನ ಕಾರ್ಯಕ್ಷಮತೆಯ ಕುಸಿತದ ಅಪಾಯವನ್ನು ಕಡಿಮೆ ಮಾಡುತ್ತದೆ ಹಾಗೂ ನಿಮ್ಮ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

Unexpected Benefits of Drinking Beer

ರಕ್ತ ಹೆಪ್ಪುವುದನ್ನು ನಿಲ್ಲಿಸುತ್ತದೆ

ಹೃದಯ, ಕುತ್ತಿಗೆ, ಅಥವಾ ಮೆದುಳಿಗೆ ರಕ್ತ ಸ೦ಚಾರವಾಗುವುದನ್ನು ತಡೆಗಟ್ಟಬಲ್ಲ ರಕ್ತದ ಹೆಪ್ಪುಗಟ್ಟಿದ ಉ೦ಡೆಗಳು ಉ೦ಟಾಗುವುದನ್ನು ಬಿಯರ್ ತಡೆಗಟ್ಟುತ್ತದೆ ಹಾಗೂ ತನ್ಮೂಲಕ ಲಕ್ವ ಹೊಡೆಯುವುದನ್ನು ನಿವಾರಿಸುತ್ತದೆ.

ಬಿಯರ್ ಕೂಡ ಒ೦ದು ನೈಸರ್ಗಿಕವಾದ ಪೇಯ

ಕಿತ್ತಳೆ ಹಣ್ಣಿನ ಜ್ಯೂಸ್ ಅಥವಾ ಹಾಲಿನ೦ತೆಯೇ ಬಿಯರ್ ಕೂಡ ಒ೦ದು ನೈಸರ್ಗಿಕವಾದ ಪೇಯವಾಗಿದ್ದು, ಇದಕ್ಕೆ ಯಾವುದೇ ವಿಧವಾದ ಸ೦ರಕ್ಷಕಗಳನ್ನು ಸೇರಿಸುವ ಅಗತ್ಯವಿಲ್ಲ. ಇದು ಬ್ರೆಡ್ ನ೦ತೆಯೇ ಸ೦ಸ್ಕರಿತವಾದ ಒ೦ದು ಪೇಯರೂಪದ ವಸ್ತುವಾಗಿದೆ.

Unexpected Benefits of Drinking Beer

ಶಕ್ತಿವರ್ಧಕ ಪಾನೀಯ

ನಿಶ್ಯಕ್ತಿಯಿಂದ ಬಳಲುತ್ತಿದ್ದರೆ ದಿನಾ ಸ್ವಲ್ಪ ಬಿಯರ್ ಕುಡಿದರೆ ಬೇಗನೆ ಚೇತರಿಸಿಕೊಳ್ಳಬಹುದೆಂದು ಸಂಶೋಧನೆಯಿಂದ ಸಾಭೀತಾಗಿದೆ.

ಹೃದಯದ ಸ್ವಾಸ್ಥ್ಯಕ್ಕೆ

ಯಾವುದೇ ಬಗೆಯ ಹೃದಯದ ಸಮಸ್ಯೆ ಇದ್ದರೂ ದಿನಾ ಬೀರ್ ಕುಡಿಯುವುದು ಒಳ್ಳೆಯದಂತೆ. ಆಸಕ್ತಿಕರ ವಿಷಯವೆಂದರೆ ಇದು ಪ್ಲಾಸ್ಮಾ antioxidants ಅನ್ನು ರಕ್ಷಣೆ ಮಾಡಿ, ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ.

Unexpected Benefits of Drinking Beer

ಕಂಡೀಶನರ್

ಕೂದಲಿಗೆ ಮಾಮೂಲಿನಂತೆ ಶಾಂಪೂ ಹಾಕಿ. ನಂತರ ಅದರ ಮೇಲೆ ಸ್ವಲ್ಪ ಬಿಯರ್ ಚಿಮುಕಿಸಿ. ಇದು ಬೀಯರನ್ನು ನಿಮ್ಮ ಕೂದಲಿಗೆ ಬಳಸಿಕೊಳ್ಳಲು ಇರುವ ಉಪಯೋಗಗಳಲ್ಲಿ ಒಂದಾಗಿದೆ. ಕೂದಲಿಗೆ ಕಂಡೀಶನಿಂಗ್ ನೀಡಲು ಮೊಟ್ಟೆಗಳು ಸಹ ಕೆಲಸ ಮಾಡುತ್ತವೆ. ಆದರೆ ಬೀಯರನ್ನು ನಿಮ್ಮ ಕೂದಲಿನ ಮೇಲೆ ಚಿಮುಕಿಸುವುದರಿಂದ ಒಳ್ಳೆಯ ಫಲಿತಾಂಶಗಳನ್ನು ಪಡೆಯಬಹುದು.

English summary

Unexpected Benefits of Drinking Beer

Beer is not always bad! Yes, you heard it right. Your doctor will say beer is not good for your heal. lDid you know that there are multiple facts and myths about beer that have been circulating for ages now? These facts on beer are however true and if you read on, you will be amazed. have a look
Story first published: Wednesday, February 4, 2015, 23:10 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X