For Quick Alerts
ALLOW NOTIFICATIONS  
For Daily Alerts

ಸಮೃದ್ಧ ಪೋಷಕಾಂಶಭರಿತ ಹಣ್ಣುಗಳ ಆರೋಗ್ಯಕಾರಿ ಲಾಭಗಳೇನು?

|

ನಾವು ಹಣ್ಣುಗಳನ್ನು ಸರಿಯಾಗಿ ತಿಳಿದುಕೊಂಡು ಸೇವಿಸುವುದರಿಂದ ನಾವು ಕಾಯಿಲೆಗಳನ್ನು ಮತ್ತು ನಮ್ಮ ದೇಹದಲ್ಲಿರುವ ನ್ಯೂನತೆಗಳನ್ನು ದೂರ ಮಾಡಿಕೊಳ್ಳಬಹುದು. ಬನ್ನಿ ಇಲ್ಲಿ ನಾವು ನಿಮಗಾಗಿ ವಿವಿಧ ಕಾಯಿಲೆಗಳ ವಿರುದ್ಧ ಹೋರಾಡುವ ಹಣ್ಣುಗಳ ಕುರಿತು ತಿಳಿಸುತ್ತಿದ್ದೇವೆ. ಮೊದಲಿಗೆ ಎಲ್ಲರಿಗು ತಿಳಿದಂತೆ ಹಣ್ಣುಗಳಲ್ಲಿ ವಿಟಮಿನ್‍ಗಳು ಮತ್ತು ಖನಿಜಾಂಶಗಳು ಇರುತ್ತವೆ. ಇದರ ಜೊತೆಗೆ ಅವುಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಸಹ ಇರುತ್ತವೆ.

ಹಣ್ಣುಗಳು ವಯಸ್ಸಾಗುವುದನ್ನು ತಡೆಯುತ್ತವೆ ಮತ್ತು ನಮ್ಮ ದೇಹದಲ್ಲಿರುವ ಹಲವಾರು ನ್ಯೂನತೆಗಳನ್ನು ನಿವಾರಿಸುತ್ತವೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಹಣ್ಣುಗಳನ್ನು ಸೇರಿಸುವುದರಿಂದ ನೀವು ಹಲವಾರು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದರಿಂದ ನಿಮ್ಮ ಆರೋಗ್ಯವು ಸಹ ಸುಧಾರಿಸುತ್ತದೆ. ಇದರ ಜೊತೆಗೆ ಸ್ವಲ್ಪ ಜಂಕ್ ಫುಡ್ ಸೇವಿಸುವುದನ್ನು ಕಡಿಮೆ ಮಾಡಿ ಮತ್ತು ಹಣ್ಣುಗಳನ್ನು ಸೇವಿಸುವುದನ್ನು ಹೆಚ್ಚು ಮಾಡಿ. ಇದರಲ್ಲಿ ಸಿಗುವ ಪ್ರಯೋಜನಗಳು ಯಾವುವು ಎಂದು ಕುತೂಹಲಗೊಂಡಿರುವಿರೆ? ಬನ್ನಿ ಈ ಕೆಳಗೆ ನಿಮ್ಮ ಕುತೂಹಲ ತಣಿಸಲು ಇಂದು ಸಮೃದ್ಧ ಪೋಷಕಾಂಶಭರಿತ ಹಣ್ಣುಗಳ ಪಟ್ಟಿ ನೀಡಿದ್ದೇವೆ ಓದಿಕೊಳ್ಳಿ..... ಘಮ ಘಮ ಕಾಫಿಯ ಸ್ವಾದಕ್ಕೆ ಬೆರಗಾಗದವರು ಯಾರಿದ್ದಾರೆ ಹೇಳಿ?

ಸೇಬು

ಸೇಬು

ಸೇಬಿನಲ್ಲಿ ಫ್ಲಾವನೋಯ್ಡ್‌ಗಳು (ಆಂಟಿ-ಆಕ್ಸಿಡೆಂಟ್‌ಗಳು) ಅಧಿಕವಾಗಿರುತ್ತವೆ. ಇವುಗಳು ಅಸ್ತಮಾ ಮತ್ತು ಮಧುಮೇಹವನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಇದರ ಜೊತೆಗೆ ಸೇಬುಗಳು ನಮ್ಮ ಹಲ್ಲುಗಳಿಗೆ ಬಿಳುಪನ್ನು ಸಹ ನೀಡುತ್ತವೆ ಮತ್ತು ಮೌತ್ ಫ್ರೆಶ್‌ನರ್ ಆಗಿ ಸಹ ಕಾರ್ಯ ನಿರ್ವಹಿಸುತ್ತವೆ.ಇದು ಸಹ ಮಧುಮೇಹದ ಮೇಲೆ ಹೋರಾಡುತ್ತದೆ.

ರಾಸ್‌ಬೆರ್ರಿ

ರಾಸ್‌ಬೆರ್ರಿ

ಮೊದಲಿಗೆ ಇದರಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಅಧಿಕವಾಗಿರುತ್ತವೆ. ಎರಡನೆಯದಾಗಿ ಇದರಲ್ಲಿ ಎಲ್ಲಾಜಿಕ್ ಆಮ್ಲಗಳು ಸಹ ಅಧಿಕವಾಗಿರುತ್ತವೆ. ಈ ಹಣ್ಣು ಕೆಲವು ಕ್ಯಾನ್ಸರ್‌ಗಳನ್ನು (ಕೋಲನ್ ಕ್ಯಾನ್ಸರ್, ಸರ್ವಿಕಲ್ ಕ್ಯಾನ್ಸರ್ ಮತ್ತು ಎಸೊಫಜೆಲ್ ಕ್ಯಾನ್ಸರ್) ನಿಯಂತ್ರಿಸುತ್ತದೆ. ಇದರ ಜೊತೆಗೆ ಇದರಲ್ಲಿರುವ ಕೆಸ್ಟೋನ್ ತಿರುಳು ನಿಮ್ಮ ಜೀರ್ಣಾಂಗ ವ್ಯೂಹವನ್ನು ಚಟುವಟಿಕೆಯಿಂದ ಇರಿಸುತ್ತದೆ. ಇದು ಕ್ಯಾನ್ಸರ್ ನಿವಾರಿಸಲು ಎಷ್ಟು ಪರಿಣಾಮಕಾರಿಯೋ, ಮಧುಮೇಹವನ್ನು ಸಹ ನಿವಾರಿಸಲು ಅಷ್ಟೇ ಪರಿಣಾಮಕಾರಿ.

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳು

ಈ ಹಣ್ಣಿನಲ್ಲಿ ಅಧಿಕ ಪ್ರಮಾಣದ ಆಂಟಿ ಆಕ್ಸಿಡೆಂಟ್‌ಗಳು ಇರುತ್ತವೆ. ಇದು ಮಧುಮೇಹ ಮತ್ತು ಕ್ಯಾನ್ಸರ್ ಎರಡನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ. ಜೊತೆಗೆ ಪಾರ್ಶ್ವವಾಯುವನ್ನು ಸಹ ಇದು ನಿವಾರಿಸುತ್ತದೆ. ಕೆಲವು ದೇಶಗಳಲ್ಲಿ ಇದನ್ನು ಅರ್ಥರಿಟಿಸ್‌ಗೆ ಸಹ ಮದ್ದಾಗಿ ಬಳಸುತ್ತಾರೆ.

ಪಿಯರ್

ಪಿಯರ್

ಈ ಹಣ್ಣಿನಲ್ಲಿ ನಾರಿನಂಶವು ಅಧಿಕವಾಗಿರುತ್ತವೆ. ಇದು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಹೃದ್ರೋಗಗಳನ್ನು ಸಹ ನಿವಾರಿಸುತ್ತದೆ. ಇದು ಹೃದ್ರೋಗದ ಜೊತೆಗೆ ಮಧುಮೇಹವನ್ನು ಸಹ ನಿವಾರಿಸಲು ಸಹಾಯ ಮಾಡುತ್ತದೆ.

ದ್ರಾಕ್ಷಿ

ದ್ರಾಕ್ಷಿ

ದ್ರಾಕ್ಷಿಯಲ್ಲಿ ಸಮೃದ್ಧವಾದ ರೆಸ್ವೆರಟ್ರೊಲ್ ಇರುತ್ತದೆ. ಇದು ಸಹ ಒಂದು ಬಗೆಯ ಆಂಟಿಆಕ್ಸಿಡೆಂಟ್ ಆಗಿದ್ದು, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಈ ಹಣ್ಣು ಕ್ಯಾನ್ಸರ್ ಕೋಶಗಳನ್ನು (ಕೋಲನ್ ಕ್ಯಾನ್ಸರ್ ಮತ್ತು ಜಠರದ ಕ್ಯಾನ್ಸರ್) ಬೆಳೆಯದಂತೆ ಕಾಪಾಡುತ್ತದೆ. ಮಧುಮೇಹಿಗಳು ಇದನ್ನು ಸೇವಿಸಬಹುದು.

ಟೊಮೇಟೊ

ಟೊಮೇಟೊ

ಟೊಮೇಟೊದಲ್ಲಿರುವ ಲೈಕೊಪೇನ್ ಒಂದು ಆಂಟಿ ಆಕ್ಸಿಡೆಂಟ್ ಆಗಿದ್ದು, ಅದು ಪ್ರೋಸ್ಟೇಟ್ ಕ್ಯಾನ್ಸರ್ ನಿವಾರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಈ ಹಣ್ಣು ಹಲವಾರು ಕಾಯಿಲೆಗಳ ವಿರುದ್ಧ ಹೋರಾಡುತ್ತದೆ.

ಮಾವಿನ ಹಣ್ಣು

ಮಾವಿನ ಹಣ್ಣು

ಮಾವಿನ ಹಣ್ಣಿನಲ್ಲಿರುವ ಜಿಯಾಕ್ಸಾಂತಿನ್ ಮತ್ತು ಲೂಟೇನ್ ಎಂಬ ಆಂಟಿಆಕ್ಸಿಡೆಂಟ್‌ಗಳು ಮಧುಮೇಹ ಮತ್ತು ಕೆಲವೊಂದು ನಿರ್ದಿಷ್ಟ ಬಗೆಯ ಕಣ್ಣಿನ ಡಿಸಾರ್ಡರ್‌ಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ.

ಅವೊಕ್ಯಾಡೊ

ಅವೊಕ್ಯಾಡೊ

ಈ ಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣವು ಅಧಿಕವಾಗಿರುತ್ತವೆ. ಈ ಹಣ್ಣು ಸಹ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಮಕ್ಕಳಿಗು ಸಹ ಈ ಹಣ್ಣುಗಳನ್ನು ತಿನ್ನಿಸಬಹುದು.

ಗ್ರೇಪ್ ಫ್ರೂಟ್

ಗ್ರೇಪ್ ಫ್ರೂಟ್

ಇದರಲ್ಲಿ ಫ್ಲಾವೊನಾಯ್ಡ್ಸ್ ಮತ್ತು ಲೈಕೊಪೀನ್ ಎಂಬ ಎರಡು ಅಂಶಗಳು ಇರುತ್ತವೆ. ಇವು ಸಹ ಕೆಲವೊಂದು ಕ್ಯಾನ್ಸರ್ ರೋಗಗಳನ್ನು ನಿವಾರಿಸುತ್ತದೆ. ಇದರ ಜೊತೆಗೆ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಈ ಹಣ್ಣು ಸಹಾಯ ಮಾಡುತ್ತದೆ.

ಚೆರ್ರಿ

ಚೆರ್ರಿ

ಈ ಹಣ್ಣಿನಲ್ಲಿ ಅಂಟೊಸಿಯಾನಿನ್ ಎಂಬ ಆಂಟಿ ಆಕ್ಸಿಡೆಂಟ್ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಉರಿಯೂತ ಮತ್ತು ಆರ್ಥರಿಟಿಸ್‌ನಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಅನಾನಸ್

ಅನಾನಸ್

ಅನಾನಸಿನಲ್ಲಿ ಬ್ರೊಮೆಲೈನ್ (ಕಿಣ್ವ) ಎಂಬ ಅಂಶವಿರುತ್ತದೆ. ಈ ಕಿಣ್ವಗಳು ಜೀರ್ಣಶಕ್ತಿಗೆ ಸಹಾಯ ಮಾಡುತ್ತವೆ ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತವೆ.

ನಿಂಬೆಹಣ್ಣು

ನಿಂಬೆಹಣ್ಣು

ನಿಂಬೆಹಣ್ಣು ರಕ್ತದೊತ್ತಡ, ಮಧುಮೇಹ,ಮಲಬದ್ಧತೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಕೆಲಸ ಮಾಡುತ್ತದೆ. ಕೆಲವೊಂದು ಮೂಲಗಳ ಪ್ರಕಾರ ಇವು ಮೂತ್ರ ಪಿಂಡಗಳಲ್ಲಿರುವ ಕಲ್ಲುಗಳನ್ನು ಸಹ ನಿವಾರಿಸುತ್ತವೆ. ಮಧಮೇಹವನ್ನು ನಿವಾರಿಸಲು ಇದು ಹೇಳಿ ಮಾಡಿಸಿದ ಹಣ್ಣಾಗಿದೆ.

ಕಿವಿ ಹಣ್ಣು

ಕಿವಿ ಹಣ್ಣು

ಕಿವಿ ಹಣ್ಣುಗಳಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಹಲ್ಲು, ದವಡೆ ಮತ್ತು ಮೂಳೆಗಳಿಗೆ ಒಳ್ಳೆಯದು.

ಕಿತ್ತಳೆ

ಕಿತ್ತಳೆ

ಕಿತ್ತಳೆ ಹಣ್ಣಿನಲ್ಲಿ ಫೋಲೆಟ್ ಅಧಿಕ ಪ್ರಮಾಣದಲ್ಲಿರುತ್ತದೆ. ಈ ಹಣ್ಣು ಸಹ ನರ ನಾಳಗಳ ಸಮಸ್ಯೆಯನ್ನು ನಿವಾರಿಸುತ್ತದೆ. ಕಿತ್ತಳೆಯು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.

English summary

Top Fruits That Fight Diseases

Fruits are tasty and they can also be consumed as snacks. But do they have health benefits? Do they prevent any disorders? Of course, yes, this article is about a list of fruits that fight diseases. Firstly, fruits contain vitamins and minerals. Apart from that, they contain antioxidants too. have a look
Story first published: Friday, January 30, 2015, 11:53 [IST]
X
Desktop Bottom Promotion