Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ಮರೆವಿನ ಕಾಯಿಲೆಯಿಂದ ಬಳಲುತ್ತಿರುವಿರಾ? ಇಲ್ಲಿದೆ ಪರಿಹಾರ
ಪ್ರತಿನಿತ್ಯ ಆದೆಷ್ಟೋ ಜನರು ನಾನಾ ತರಹದ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ, ಅದರಲ್ಲೂ ಅಲೈಮರ್ಸ್ ಎಂಬ ಕಾಯಿಲೆ ಬಗ್ಗೆ ಹೇಳಬೇಕೆಂದರೆ ಒಮ್ಮೆ ಈ ಕಾಯಿಲೆಯು ಯಾವುದೇ ವ್ಯಕ್ತಿಗೆ ಬಂತೆಂದರೆ ಸಾಕು ಅದು ಆ ವ್ಯಕ್ತಿಯಲ್ಲಿರುವ ನೆನಪಿನ ಸಾಮಾರ್ಥ್ಯ ಮತ್ತು ಚಿಂತಿಸುವ ಸಾಮಾರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆ ಹೆಚ್ಚಾಗಿ ಮಕ್ಕಳನ್ನು ಬಾಧಿಸುತ್ತಿದ್ದು, ಇದು ಸಾಮಾನ್ಯವಾಗಿ ವಂಶವಾಹಿನಿಗಳ ಪ್ರಭಾವದಿಂದ ಕಂಡುಬರುತ್ತಿದೆ.
ಅಲೈಮರ್ಸ್ ಎಂಬುದು ಎಲ್ಲರನ್ನು ಭಯಪಡಿಸುವ ಕಾಯಿಲೆಯಾಗಿದೆ. ಈ ಕಾಯಿಲೆಯು ಒಮ್ಮೆ ಬಂದರೆ ಅದು ಆ ವ್ಯಕ್ತಿಯಲ್ಲಿರುವ ಕಾರಣ ನೀಡುವ ಸಾಮರ್ಥ್ಯ ಮತ್ತು ಚಿಂತಿಸುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಅಲೈಮರ್ಸ್ ಕಾಯಿಲೆಯು ಇತ್ತೀಚೆಗೆ ಎಳೆ ಮಕ್ಕಳಲ್ಲಿ ಸಾಮಾನ್ಯವಾಗುತ್ತಿದೆ. ಮುಖ್ಯವಾಗಿ ಅಲೈಮರ್ಸ್ ಕಾಯಿಲೆಯು ವಂಶವಾಹಿಗಳ ಪ್ರಭಾವದಿಂದ ಬರುತ್ತವೆ.
ಆದರೆ ಆರೋಗ್ಯ ತಙ್ಞರು ಈ ಕಾಯಿಲೆ ಬರಲು ಇರುವ ಇನ್ನಿತರ ಕಾರಣಗಳ ಬಗ್ಗೆ ಪಟ್ಟಿ ನೀಡುತ್ತಾರೆ. ಅವುಗಳಲ್ಲಿ ಪೋಷಕಾಂಶಗಳು, ಶಿಕ್ಷಣ, ಮಧುಮೇಹ, ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳು ಸೇರಿವೆ. ನಾವು ಸೇವಿಸುವ ಆರೋಗ್ಯಕರವಾದ ಆಹಾರದಿಂದ ಆದೆಷ್ಟೋ ರೋಗಗಳನ್ನು ಸ್ಪಲ್ಪ ಮಟ್ಟಿಗಾದರೂ ತಡೆಗಟ್ಟಬಹುದು. ಅದರಲ್ಲೂ ಕೂಡ ಮರೆವು ಕಾಯಿಲೆಗೆ ನಮ್ಮ ಆಹಾರ ಪದ್ಧತಿಯು ಕೂಡ ಕಾರಣವಾಗಿರುತ್ತದೆ.
ಮೊಸರು

ಮೊಸರಿನಲ್ಲಿ ಅಮೈನೋ ಆಮ್ಲಗಳು ಅಧಿಕವಿರುತ್ತವೆ. ಇವು ಒತ್ತಡವನ್ನು ಕಡಿಮೆ ಮಾಡುತ್ತವೆ. ಒತ್ತಡವು ನಿಮ್ಮ ಮೆದುಳಿನಲ್ಲಿರುವ ಕೋಶಗಳು ಕ್ಷಿಪ್ರಗತಿಯಲ್ಲಿ ವಯಸ್ಸಾಗುವಂತೆ ಮಾಡುತ್ತವೆ ಎಂಬುದು ತಿಳಿದಿರಲಿ.
ಮೊಟ್ಟೆಗಳು
ಮೊಟ್ಟೆಗಳಲ್ಲಿ ವಿಟಮಿನ್ ಬಿ 12 ಅತ್ಯಧಿಕ ಪ್ರಮಾಣದಲ್ಲಿವೆ. ಇವು ಮೆದುಳಿನ ಜೀವಕೋಶಗಳನ್ನು ಹೆಚ್ಚಿಸಿ, ನೆನಪಿನಶಕ್ತಿಯನ್ನು ದ್ವಿಗುಣಗೊಳಿಸುತ್ತದೆ.
ಟೊಮೇಟೊ
ಟೊಮೇಟೊದಲ್ಲಿ ಲೈಕೊಪಿನ್ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಇವು ದೇಹದಲ್ಲಿರುವ ಜೀವಕೋಶಗಳ ಹಾನಿಯನ್ನು ತಪ್ಪಿಸಿ ಡಿಮೆನ್ಶಿಯ ಮತ್ತು ಅಲೈಮರ್ಸ್ ಕಾಯಿಲೆಯು ಬರದಂತೆ ರಕ್ಷಿಸುತ್ತವೆ.
ಮೀನು
ಮೀನುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಮೀನುಗಳನ್ನು ತಿನ್ನುವುದರಿಂದ ಮೆದುಳಿನ ಬೆಳವಣಿಗೆಯುಂಟಾಗುತ್ತದೆ. ಮೀನಿನಲ್ಲಿರುವ ಸಮೃದ್ಧ ಪ್ರೊಟೀನ್ ಮತ್ತು ಕ್ಯಾಲ್ಸಿಯಂಗಳು ಇದಕ್ಕೆ ಕಾರಣವಾಗುತ್ತವೆ.
ಕಪ್ಪು ದ್ರಾಕ್ಷಿ
ಕಪ್ಪು ದ್ರಾಕ್ಷಿಗಳಲ್ಲಿ ಆಂಟಿ ಆಕ್ಸಿಡೆಂಟ್‍ಗಳು ಸಮೃದ್ಧವಾಗಿರುತ್ತವೆ. ಇವುಗಳು ಫ್ರೀ ರಾಡಿಕಲ್‍ಗಳಿಂದ ಉಂಟಾದ ಜೀವಕೋಶಗಳ ಹಾನಿಯನ್ನು ಸರಿಪಡಿಸುತ್ತವೆ. ಈ ಹಣ್ಣುಗಳು ದೇಹದಲ್ಲಿರುವ ಜೀವಕೋಶಗಳಿಗೆ ವಯಸ್ಸಾದಂತೆ ದೇಹದೊಂದಿಗೆ ಹೊಂದಿಕೊಂಡು ಹೋಗುವ ಸಾಮರ್ಥ್ಯವನ್ನು ಒದಗಿಸುತ್ತವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



