Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಮಾಂಸಹಾರಿಗಳು ಓದಲೇ ಬೇಕಾದ ಸ್ಟೋರಿ ಇದು
ನಾನ್‌ವೆಜ್ ಅಂದ ಕೂಡ್ಲೆ ಕೆಲವರ ಬಾಯಲ್ಲಿ ನೀರು ಬರುತ್ತೆ. ಮಾಂಸಾಹಾರಿಗಳಿಗೆ ಚಿಕನ್ ಕಬಾಬ್, ಚಿಕನ್ ಚಿಲ್ಲಿ, ಚಿಕನ್ ತಂದೂರಿ, ಹೀಗೆ ವೆರೈಟಿ ವೆರೈಟಿ ಖಾದ್ಯ ಅಂದ್ರೆ ಪಂಚಪ್ರಾಣ.. ಆದ್ರೆ ಮಾಂಸ ತಿನ್ನುವ ಮುನ್ನ, ಹಾಗೂ ಅದನ್ನು ಕೊಂಡುಕೊಳ್ಳುವ ಮುನ್ನ ಕೆಲವು ಅಂಶಗಳ ಬಗ್ಗೆ ನೀವು ಜಾಗೃತರಾಗಿರಬೇಕು
ಮಾಂಸದೂಟ ಎಲ್ಲಿಂದ ತಂದ್ರಿ?
ನೀವು ಮಾಂಸಪ್ರಿಯರಾಗಿದ್ದು ಯಾವುದೋ ಹೋಟೆಲ್‌ನಲ್ಲಿ ಮಾಂಸ ತಿನ್ತಾ ಇದ್ದೀರಾ? ಅಥ್ವಾ ಮನೆಗೆ ಅದನ್ನು ಪಾರ್ಸಲ್ ಮಾಡಿಸ್ಕೊಂಡು ಹೋಗುವ ಮುನ್ನ ಆ ಮಾಂಸದೂಟ ಎಷ್ಟು ಫ್ರೆಶ್ ಆಗಿದೆ ಅನ್ನೋದನ್ನು ಪರಿಶೀಲಿಸಿಕೊಳ್ಳಬೇಕು. ನೀವು ಖರೀದಿಸಿರುವ ಮಾಂಸದೂಟವನ್ನು ಶುದ್ಧವಾಗಿ ತಯಾರಿ ಮಾಡಿದ್ದಾರಾ? ಸರಿಯಾದ ಮಾಂಸದಿಂದ ಅಡುಗೆ ಮಾಡಲಾಗಿದ್ಯಾ ಎಲ್ಲವೂ ಕೂಡ ಇಂಪಾರ್ಟೆಂಟ್ ಆಗುತ್ತೆ. ಎಲ್ಲೆಲ್ಲೋ ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಮುನ್ನ ಬಿ ಕೇರ್‌ಫುಲ್.

ಮಾಂಸವನ್ನು ತಂದ ಜಾಗ ಯಾವುದು?
ನೀವು ಮಾಂಸದೂಟ ತರದೇ ಪ್ರೆಶ್ ಮಾಂಸವನ್ನೇ ತಂದು ಮನೆಯಲ್ಲಿ ಅಡುಗೆ ಮಾಡುವ ಪ್ಲಾನ್ ಮಾಡ್ತಾ ಇದ್ರೆ ಮಾಂಸವನ್ನು ಎಲ್ಲಿಂದ ತಗೊಂಡು ಬಂದ್ರಿ? ನೀವು ತಂದಿರುವ ಮಾಂಸ ಎಂತಹ ಜಾಗದಿಂದ ಖರೀದಿಸಿದ್ದೀರಾ? ಅಲ್ಲಿ ಉತ್ತಮ ಮಾಂಸವನ್ನೇ ನೀಡಲಾಗುತ್ತಾ? ಅಥ್ವಾ ಇಲ್ವಾ? ನಿಮ್ಮ ಆರೋಗ್ಯ ಹಾಳಾಗ ಬಾರದು ಅಂದ್ರೆ ಸರಿಯಾದ ಜಾಗದಲ್ಲಿ ಮಾಂಸ ಖರೀದಿಸುವುದು ತುಂಬಾ ಇಂಪಾರ್ಟೆಂಟ್..
ಯಾವ ಪ್ರಾಣಿಯ ಮಾಂಸ ಖರೀದಿಸಿದ್ದೀರಾ?
ನೀವು ಚಿಕನ್ ತಿನ್ಬೇಕು ಅಂತ ಇದ್ರಾ? ಅಥ್ವಾ ಮಟನ್ ತಿನ್ಬೇಕು ಅಂತ ಇದ್ರಾ? ಅಥ್ವಾ ಇನ್ಯಾವುದೋ ನಿಮ್ಮ ಇಷ್ಟದ ಪ್ರಾಣಿಯ ಮಾಂಸ ತಿನ್ಬೇಕು ಅಂತ ಇದ್ರಾ? ನೀವು ಖರೀದಿಸಿರೋದು ಖಂಡಿತವಾಗ್ಲೂ ನೀವು ಆರ್ಡರ್ ಮಾಡಿರೋ ಮಾಂಸವೇನಾ? ಇದ್ರ ಬಗ್ಗೆ ಸರಿಯಾದ ಪರಿಶೀಲನೆ ಅತ್ಯಗತ್ಯ. ಸಿಕ್ತು ಅಂತ ಎಲ್ಲೆಲ್ಲೋ ಕೊಂಡುಕೊಂಡ್ರೆ ಯಾಮಾರಿ ಬಿಟ್ಟೀರಾ ಹುಷಾರ್..
ನೀವು ತಂದಿರುವ ಮಾಂಸ ಫ್ರೆಶ್ ಆಗಿದ್ಯಾ?
ನೀವು ಖರೀದಿಸಿರುವ ಮಾಂಸ ಎಷ್ಟು ಪ್ರೆಶ್ ಆಗಿದೆ. ಯಾವತ್ತು ಆ ಪ್ರಾಣಿಯನ್ನು ಕೊಂದು ಈ ಮಾಂಸವನ್ನು ರೆಡಿ ಮಾಡಿ ಮಾರಾಟಕ್ಕೆ ಇಡಲಾಗಿದೆ ಅನ್ನೋದು ಇಂಪಾರ್ಟೆಂಟ್.. ತೀರಾ ಹಳೆಯ ಮಾಂಸವನ್ನು ಅಡುಗೆಗೆ ಬಳಸಲೇಬೇಡಿ..
ನೀವು ಖರೀದಿಸಿರುವ ಮಾಂಸ ಎಲ್ಲಿಯದ್ದು?
ನೀವು ಮಾಂಸ ಖರೀದಿಸಿರೋದು ಯಾವ ಜಾಗದಲ್ಲಿ ಅನ್ನೋದಷ್ಟೇ ತಿಳಿದಿದ್ರೆ ಸಾಲದು.. ನೀವು ಖರೀದಿಸುತ್ತಿರುವ ಮಾಂಸದ ಪ್ರಾಣಿ ಎಲ್ಲಿಯದ್ದು.. ಯಾವ ಪ್ರದೇಶದಿಂದ ಅದನ್ನು ತರಿಸಿ ಮಾಂಸವನ್ನು ಮಾರಾಟ ಮಾಡಲಾಗ್ತಿದೆ ಅನ್ನೋದು ಕೂಡ ಇಂಪಾರ್ಟೆಂಟ್.. ಕೆಲವೊಂದು ಪ್ರದೇಶಾವಾರು ಆರೋಗ್ಯ ಸಮಸ್ಯೆಗಳು ಪ್ರಾಣಿಗಳಿಗೆ ಬಂದಿರಬಹುದು, ಆ ಪ್ರದೇಶದ ಪ್ರಾಣಿಯನ್ನು ನೀವು ಸೇವಿಸೋದ್ರಿಂದ ನಿಮ್ಗೂ ಸಮಸ್ಯೆಯಾಗ್ಬಹುದು ಅನ್ನೋದು ನೆನಪಿರಲಿ...
ಮಾಂಸ ಖರೀದಿಯಲ್ಲಿ ನೀವು ಮೋಸ ಹೋಗಿಲ್ವಾ?
ಮಾಂಸದ ರೇಟ್ ಎಷ್ಟು? ಯಾವ ಮಾಂಸಕ್ಕೆ ಎಷ್ಟು ರೇಟ್. ನೀವು ಅದೇ ಮಾಂಸವನ್ನು ಖರೀದಿಸಿದ್ದೀರ ಅನ್ನೋದು ಕೂಡ ಇಂಪಾರ್ಟೆಂಟ್.. ಮಾಂಸದ ರೇಟಿನಲ್ಲಿ ಆಗಾಗ ವ್ಯತ್ಯಯ ಆಗ್ತಾ ಇರೋದು ಮಾಮೂಲಿ. ಆದ್ರೆ ಅದ್ರ ಬಗ್ಗೆ ನಿಮ್ಗೆ ಸರಿಯಾದ ಮಾಹಿತಿ ಇರೋದು ಬೆಸ್ಟ್... ಎಸ್ಪೆಷಲಿ ಯಾವ್ಯಾವ ಮೀನಿಗೆ ಎಷ್ಟು ರೇಟ್ ಅನ್ನೋದನ್ನು ಸರಿಯಾಗಿ ತಿಳಿದುಕೊಂಡಿರಿ.
ಖರೀದಿಸಿದ ಮಾಂಸವನ್ನು ಯಾವತ್ತು ಅಡುಗೆ ಮಾಡ್ತಾ ಇದ್ದೀರ?
ಇನ್ನು ನೀವು ಖರೀದಿಸಿ ತಂದ ಮಾಂಸವನ್ನು ಕೂಡಲೇ ಅಡುಗೆ ಮಾಡಿ. ಫ್ರಿಝರ್‌ನಲ್ಲಿಟ್ಟು ನಾಳೆ ಮಾಡಿದ್ರಾಯ್ತು. ಇವತ್ತು ಟೈಮ್ ಆಗಿ ಬಿಡ್ತು ಅಂತೆಲ್ಲ ಯೋಚಿಸಿ ಶೇಖರಿಸಿ ಇಡಬೇಡಿ. ಬದಲಾಗಿ ಖರೀದಿಸಿದ ಮಾಂಸದಿಂದ ಅಂದೇ ಖಾದ್ಯ ತಯಾರಿಸಿ ಸವಿದು ಬಿಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


