For Quick Alerts
ALLOW NOTIFICATIONS  
For Daily Alerts

ಸಿಲಿಕಾನ್ ಬ್ರಾ ಸ್ತನಗಳ ಆರೋಗ್ಯಕ್ಕೆ ಎಷ್ಟು ಸೂಕ್ತ?

By Su.Ra
|

ಈಗಿನ ಫ್ಯಾಷನ್ ದುನಿಯಾದಲ್ಲಿ ಹೊರ ಉಡುಪುಗಳು ಮಾತ್ರವಲ್ಲ, ಒಳಉಡುಪುಗಳಿಗೂ ವಿಶೇಷ ಮಹತ್ವ ವಿದೆ. ಇಂತಹ ಡ್ರೆಸ್ಸಿಗೆ ಇಂತಹದ್ದೇ ಒಳಉಡುಪು ಸೂಕ್ತವಾಗುತ್ತೆ ಅಂತ ಕಂಡುಹಿಡಿದಿರುವ ಫ್ಯಾಷನ್‌ ಪ್ರಿಯರು ಅದಕ್ಕಾಗಿಯೇ ವಿಶೇಷ ಬ್ರಾಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರ್ತಾರೆ.

ಪ್ರತಿ ಮಹಿಳೆಯ ಸ್ತನದ ಸೈಜ್ ಬೇರೆಬೇರೆಯಾಗಿದ್ರೂ ಕೂಡ ಪ್ರತಿಯೊಬ್ಬರಿಗೂ ಸರಿಹೊಂದುವ ಬ್ರಾಗಳ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇದೆ ಮತ್ತು ಅದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಹಲವು ಅಧ್ಯಯನಕಾರರು ಮಹಿಳೆಯರಿಗೆ ನೀಡಿ ಅವರನ್ನು ಜಾಗೃತಗೊಳಿಸುತ್ತಲೇ ಇದ್ದಾರೆ.ಸ್ತನ ಕ್ಯಾನ್ಸರ್‌ ನಂತಹ ಮಾರಕ ರೋಗಗಳಿಂದ ಮಹಿಳೆಯರು ಬಲಿಯಾಗುತ್ತಿರುವ ಈ ಸಂದರ್ಭದಲ್ಲಿ ಸ್ತನಗಳ ಆರೋಗ್ಯದ ಬಗ್ಗೆ ಮಹಿಳೆಯರಿಗೆ ವಿಶೇಷ ಕಾಳಜಿ ನೀಡುವ ದೃಷ್ಟಿಕೋನದಿಂದ ಹಲವು ಸಂಶೋಧನೆ ಮತ್ತು ಮಾಹಿತಿ ಕಾರ್ಯಾಗಾರಗಳೂ ಕೂಡ ನಡೆಯುತ್ತವೆ.

ಇನ್ನು ಈಗಂತೂ ಬ್ಯಾಕ್ ಲೆಸ್ ಡ್ರೆಸ್‌ಗಳು ಕಾಮನ್. ಇಂತಹ ಡ್ರೆಸ್‌ಗಳು ಲೇಡಿಸ್‌ಗೂ ಕೂಡ ಫೇವರೆಟ್.. ಪಾರ್ಟಿಫಂಕ್ಷನ್‌ಗಳಿಗೆ ಬ್ಯಾಕ್ ಲೆಸ್ ಡ್ರೆಸ್‌ಗಳಲ್ಲಿ ಇಲ್ಲವೇ, ಬ್ಯಾಕ್ ಡೀಪ್ ಇರುವ ಡ್ರೆಸ್‌ಗಳನ್ನು ಆಯ್ಕೆ ಮಾಡ್ಕೊಂಡಾಗ ತಮ್ಮ ಸ್ತನಗಳ ಶೇಪ್‌ಗೆ ಅಂತಲೇ ಡಿಫರೆಂಟ್ ಬ್ರಾಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅಂತವುಗಳಲ್ಲಿ ಸಿಲಿಕಾನ್ ಬ್ರಾ ಅಥವಾ ಅದೃಷ್ಯ ಬ್ರಾ ಕೂಡ ಒಂದು..

ಏನಿದು ಸಿಲಿಕಾನ್ ಬ್ರಾ ಅಥವಾ ಅದೃಷ್ಯ ಬ್ರಾ?

ಏನಿದು ಸಿಲಿಕಾನ್ ಬ್ರಾ ಅಥವಾ ಅದೃಷ್ಯ ಬ್ರಾ?

ಬ್ರಾ ಅಂದ್ರೆ ಸ್ಟ್ರೈಪ್ಸ್ ಇರುತ್ತೆ ಅನ್ನೋದು ಸಾಮಾನ್ಯ ಕಲ್ಪನೆ, ಆದ್ರೆ ಇದು ಸ್ಟ್ರೈಪ್ಸ್‌ಗಳೇ ಇಲ್ಲದ ಬ್ರಾಗಳು.. ನಿಮ್ಮ ಸ್ತನಗಳಿಗೆ ಅಂಟಿಸಿಕೊಳ್ಳುವ ವಿಶೇಷ ಬ್ರಾಗಳು. ಹೌದು.. ಸ್ತನಗಳ ಸೈಜಿಗೆ ತಕ್ಕಂತೆ ಇದ್ರಲ್ಲಿರೋ ಅಂಟಿನಿಂದ ಅಂಟಿಸಿಕೊಳ್ಳಬಹುದಾದ ಬ್ರಾಗಳಿವು..ಹೆಚ್ಚಿನ ಫ್ಯಾಷನ್ ಪ್ರಿಯ ಮಹಿಳೆಯರು ಇತ್ತೀಚೆಗೆ ಇವುಗಳನ್ನು ಬಳಸ್ತಾ ಇದ್ದಾರೆ.

ಅದೃಷ್ಯ ಬ್ರಾ ಬಳಕೆ ಯಾಕೆ?

ಅದೃಷ್ಯ ಬ್ರಾ ಬಳಕೆ ಯಾಕೆ?

ಸಿಲಿಕಾನ್ ಬ್ರಾ ಅಥ್ವಾ ಅದೃಶ್ಯ ಬ್ರಾ ಅಂತ ಕರೆಯಲ್ಪಡುವ ಇವುಗಳು ಕೇವಲ ಕಪ್ ಮಾತ್ರವಲ್ಲ , ನಿಪ್ಪಲ್‌ಗೆ ಮಾತ್ರ ಅಂಟಿಸಿಕೊಳ್ಳುವಂತ ಸೈಜ್‌ನಲ್ಲೂ ಲಭ್ಯವಿದೆ. ಕೆಲವು ಬಾಲಿವುಡ್ ನಟಿಯರು ಟೀ ಶರ್ಟ್ ಧರಿಸಿದಾಗ ಅಥ್ವಾ ಟ್ರಾನ್ಸಪರೆಂಟ್ ಡ್ರೆಸ್‌ ಧರಿಸಿದಾಗ ನಿಪ್ಪಲ್ ಕಾಣದಂತೆ ಇರಲು ಈ ಸಿಲಿಕಾನ್ ಬ್ರಾ ತೊಡಲು ಇಚ್ಛಿಸ್ತಾ ಇದ್ದಾರೆ. ನಿಪ್ಪಲ್ ಸೈಜ್ ದೊಡ್ಡದಿರುವವರು ಅದನ್ನು ಮುಚ್ಚಿಕೊಳ್ಳಲು ಈ ಬ್ರಾಗಳಿಗೆ ಮೊರೆ ಹೋಗ್ತಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅದೃಷ್ಯ ಬ್ರಾ ಬಳಕೆ ಯಾಕೆ?

ಅದೃಷ್ಯ ಬ್ರಾ ಬಳಕೆ ಯಾಕೆ?

ಅಷ್ಟೇ ಅಲ್ಲ ಇವುಗಳು ನಿಮ್ಮ ಚರ್ಮದ ಬಣ್ಣದಲ್ಲೇ ಲಭ್ಯವಿರೋದ್ರಿಂದ ನೀವು ಬ್ರಾ ಧರಿಸಿದ್ದೀರೋ ಇಲ್ವೋ ಅನ್ನೋದು ಇತರರಿಗೆ ಗೊತ್ತಾಗೋದೆ ಇಲ್ಲ ಅನ್ನೋ ಕಾರಣಕ್ಕೆ ಮಹಿಳೆಯರು ಈ ಅದೃಷ್ಯ ಬ್ರಾಗಳ ಮೊರೆ ಹೋಗುತ್ತಾ ಇದ್ದಾರೆ.

ಒಂದು ಬ್ರಾ ಎಷ್ಟು ಸಲ ಬಳಕೆ ಮಾಡ್ಬಹುದು?

ಒಂದು ಬ್ರಾ ಎಷ್ಟು ಸಲ ಬಳಕೆ ಮಾಡ್ಬಹುದು?

ಅರೆ ಅಂಟಿಸಿಕೊಳ್ಳೋದಾ.. ಹಾಗಾದ್ರೆ ಇದು ಶ್ರೀಮಂತರಿಗೆ ಮಾತ್ರ.. ನಮ್ಮಂತ ಮಧ್ಯಮವರ್ಗದವ್ರು ಕೊಂಡುಕೊಳ್ಳೋಕೆ ಆಗೋದಿಲ್ಲ ಅಂತ ಅಂದುಕೊಳ್ಳಬೇಡಿ. ಅಂಟಿಸಿಕೊಳ್ಳುವ ಬ್ರಾ ಆಗಿದ್ರೂ ಕೂಡ ಇವುಗಳನ್ನು ಅನೇಕ ಬಾರಿ ಬಳಕೆ ಮಾಡ್ಬಹುದು. ಒಮ್ಮೆ ಬಳಸಿದ ನಂತ್ರ ಮತ್ತೆ ಮುತುವರ್ಜಿಯಿಂದ ನೋಡಿಕೊಳ್ಳಬೇಕು ಅಷ್ಟೇ.. ಬ್ರಾನಲ್ಲಿ ಅಂಟಿಕೊಂಡಿದ್ದ ರ್ಯಾಪರ್‌ನ್ನು ಬಳಸಿದ ನಂತ್ರ ಮತ್ತೆ ಮೊದಲಿನಂತೆಯೇ ಅಂಟಿಸಿ ಇಡಬೇಕು. ರಫ್ ಯ್ಯೂಸ್ ಗೆ ಇದು ಅಷ್ಟು ಸೂಕ್ತವಲ್ಲ ಅನ್ನೋದಲ್ಲಿ ಅನುಮಾನವೇನಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಒಂದು ಬ್ರಾ ಎಷ್ಟು ಸಲ ಬಳಕೆ ಮಾಡ್ಬಹುದು?

ಒಂದು ಬ್ರಾ ಎಷ್ಟು ಸಲ ಬಳಕೆ ಮಾಡ್ಬಹುದು?

ಆದ್ರೆ ನೆನಪಿರಲಿ. ಸರಿಯಾಗಿ ಕಾಳಜಿಯಿಂದ ನೋಡಿಕೊಳ್ಳದೇ ಇದ್ರೆ ಇವು ನಿಮಗೆ ಸಮಸ್ಯೆ ಕೊಡೋದು ಗ್ಯಾರೆಂಟಿ. ಸುಮಾರು 8 ರಿಂದ 9 ಬಾರಿ ಬಳಸಿದಾಗ ಅಂಟು ಕಡಿಮೆಯಾಗುತ್ತೆ. ತದ ನಂತ್ರ ಈಗಾಗಲೇ ತಿಳಿಸಿದ ಹಾಗೆ ಗಮ್ ಕೊಂಡುಕೊಂಡು ಸ್ಟಿಕ್ ಮಾಡಿಕೊಳ್ಳಬೇಕಾಗುತ್ತೆ. ಒಂದು ವರ್ಷದ ವರೆಗೂ ಈ ಸಿಲಿಕಾನ್ ಬ್ರಾ ಬಳಕೆ ಮಾಡ್ಬಹುದಾಗಿದೆ ಅನ್ನೋದು ತಯಾರಕರ ಅಭಿಪ್ರಾಯ.

ಬ್ರಾ ಕಾಳಜಿ ಹೇಗಿರಬೇಕು?

ಬ್ರಾ ಕಾಳಜಿ ಹೇಗಿರಬೇಕು?

ಇನ್ನು ಇದನ್ನು ಮೈಂಟೈನ್ ಮಾಡುವಾಗ ಸ್ವಲ್ಪ ಕೇರ್ ಫುಲ್ ಆಗಿ ಇರಲೇಬೇಕು. ಒಮ್ಮೆ ಬಳಸಿದ ನಂತರ ಸ್ವಲ್ಪ ತೊಳೆದು ಇಲ್ಲವೇ ಒದ್ದೆ ಬಟ್ಟೆಯಿಂದ ಒರೆಸಿ, ಅದು ಒಣಗಿದ ನಂತ್ರ ಮತ್ತೆ ಸೇಫ್ ಆಗಿ ಬ್ರಾ ಇಡಲೆಂದೇ ನೀಡಲಾಗಿರುವ ಬಾಕ್ಸ್ ನಲ್ಲಿ ಇಡಬೇಕಾಗುತ್ತೆ. ಇಲ್ಲದೇ ಇದ್ರೆ ಫಂಗಸ್ ಗಳು, ಬ್ಯಾಕ್ಟೀರಿಯಾಗಳು ಬ್ರಾ ಒಳಗಡೆ ಕೂತು ಮುಂದಿನ ಬಾರಿ ನೀವು ಉಪಯೋಗಿಸಿದಾಗ ಖಂಡಿತ ಸಮಸ್ಯೆ ನೀಡಬಲ್ಲವು. ಅಷ್ಟೇ ಅಲ್ಲ ಬ್ರಾಗಳಲ್ಲಿ ಅಂಟಿಸಿರುವ ಅಂಟಿನ ಬಗ್ಗೆ ಕೂಡ ನೀವು ಜಾಗೃತರಾಗಿರಬೇಕು

 ಪದೇ ಪದೇ ಬಳಸಿದ್ರೆ ಅಂಟು ಹಾಳಾಗೋದಿಲ್ವಾ?

ಪದೇ ಪದೇ ಬಳಸಿದ್ರೆ ಅಂಟು ಹಾಳಾಗೋದಿಲ್ವಾ?

ಮತ್ತೆ ಮತ್ತೆ ಬಳಸುವಾಗ ಅಂಟಿಸಿಕೊಳ್ಳಲು ಇರುವ ಅಂಟಿನ ಅಂಶ ಹೋಗುತ್ತೆ ಮತ್ತು ಅದು ಸರಿಯಾಗಿ ನಿಮ್ಮ ಸ್ತನಗಳಲ್ಲಿ ಕೂರೋದಿಲ್ಲ..ಆದ್ರೆ ಅದಕ್ಕಾಗಿ ತಲೆಕೆಡಿಸಿಕೊಳ್ಳೋ ಅಗತ್ಯವಿಲ್ಲ. ಪದೇಪದೇ ಬಳಸಿ ಗಮ್ ಹಾಳಾದ್ರೆ ಈ ಅಂಟು ಚಿಕ್ಕ ಬಾಟಲಿಯಲ್ಲಿ ಮೆಡಿಕಲ್ ಶಾಪ್ ನಲ್ಲಿ ಸಿಗುತ್ತೆ. ಅದನ್ನು ತಂದು ಮತ್ತೆ ಅಂಟಿಸಿಕೊಳ್ಳಬಹುದು.

ಸಿಲಿಕಾನ್ ಬ್ರಾ ಸೈಡ್ ಎಫೆಕ್ಟ್ ಗಳು

ಸಿಲಿಕಾನ್ ಬ್ರಾ ಸೈಡ್ ಎಫೆಕ್ಟ್ ಗಳು

ಯಾವುದೇ ಸೈಡ್ ಎಫೆಕ್ಟ್ ಆಗೋದಿಲ್ಲ ಅನ್ನೋದು ಸದ್ಯದ ಮಾತು.. ಹಾಗೆ ನೋಡಿದ್ರೆ ಕೆಲವರಿಗೆ ಫ್ಯಾಬ್ರಿಕ್ ಬ್ರಾಗಳೂ ಕೂಡ ಇರಿಟೇಷನ್ ಮಾಡಿರುತ್ತೆ. ಅಂತದ್ರಲ್ಲಿ ಅಂಟಿನ ಅಂಶವಿರುವ ಈ ಸಿಲಿಕಾನ್ ಬ್ರಾ ಕೂಡ ಕೆಲವೊಮ್ಮೆ ನಿಮ್ಮ ಸ್ಕಿನ್ ಟೋನ್‌ಗೆ ಸೂಟ್ ಆಗದೇ ಇರಬಹುದು. ಗಮ್ ಹಾಕಿ ಅಂಟಿಸಿಕೊಳ್ಳೋದ್ರಿಂದ ಆ ಅಂಟು ಉತ್ತಮ ಕ್ವಾಲಿಟಿಯದ್ದಾಗಿರಬೇಕು. ಇನ್ನು ನಿಮ್ಮ ಚರ್ಮಕ್ಕೆ ಅದು ಸರಿಹೊಂದಿದ್ರೆ ಓಕೆ, ಇಲ್ಲದೇ ಇದ್ರೆ ಖಂಡಿತ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಅಷ್ಟೇ ಅಲ್ಲ ಬಳಸಿದ ಬ್ರಾವನ್ನೇ ಹೆಚ್ಚು ಬಾರಿ ಬಳಕೆ ಮಾಡೋದು, ತುಂಬಾ ಸಮಯದವರೆಗೆ ಹಾಕಿಕೊಂಡೇ ಇರೋದು, ಸರಿಯಾಗಿ ತೊಳೆಯದೇ ಇಟ್ಟುಕೊಳ್ಳೋದ್ರಿಂದ ಅದೃಷ್ಯ ಬ್ರಾಗಳು ಸಮಸ್ಯೆಗೆ ಕಾರಣವಾಗುತ್ತೆ. ಅತಿಯಾದ ಸ್ತನಗಳ ಬೆವರುವಿಕೆಗೂ ಕಾರಣವಾಗುವ ಸಾಧ್ಯತೆ ಇರುತ್ತೆ. ಅದೂ ಸ್ತನಗಳ ತುರಿಕೆಗೆ ಕಾರಣವಾಗಬಹುದು.

ಎಲ್ಲಾ ಸೈಜಿನಲ್ಲೂ ಸಿಲಿಕಾನ್ ಬ್ರಾ ಸಿಗುತ್ತಾ?

ಎಲ್ಲಾ ಸೈಜಿನಲ್ಲೂ ಸಿಲಿಕಾನ್ ಬ್ರಾ ಸಿಗುತ್ತಾ?

ಪ್ರತಿಯೊಬ್ಬ ಮಹಿಳೆಯರ ಸ್ತನವೂ ಒಬ್ಬರಿಗಿಂತ ಒಬ್ಬರದ್ದು ವಿಭಿನ್ನವಾಗೇ ಇರುತ್ತೆ. ಹಾಗಾಗಿ ಸಿಲಿಕಾನ್ ಬ್ರಾದಲ್ಲಿ ಕೆಲವು ಸೈಜ್‌ಗಳಿವೆ. ಎಲ್ಲವೂ ಎಲ್ಲರಿಗೂ ಹೊಂದಾಣಿಕೆಯಾಗುತ್ತೆ ಅಂತ ಹೇಳೋಕೆ ಆಗಲ್ಲ. ಹಾಗಾಗಿ ಲಭ್ಯವಿರುವ ಅಳತೆಯಲ್ಲಿ ನಿಮ್ಗೆ ಯಾವುದು ಸೂಕ್ತ ಅನ್ನೋದನ್ನು ನೋಡಿ ಖರೀದಿಸಬೇಕಾಗುತ್ತೆ.

ಅದೃಷ್ಯ ಬ್ರಾ ಕಂಫರ್ಟ್ ಆಗಿರುತ್ತಾ?

ಅದೃಷ್ಯ ಬ್ರಾ ಕಂಫರ್ಟ್ ಆಗಿರುತ್ತಾ?

ಈ ಬ್ರಾ ಉದ್ದೇಶವೇ ಬ್ಯಾಕ್ ಲೆಸ್ ಡ್ರೆಸ್‌ಗಳಲ್ಲಿ ಇಲ್ಲವೇ ಬ್ಯಾಕ್ ಡೀಪ್ ಇರೋ ಬ್ಲೌಸ್ ಅಥ್ವಾ ಡ್ರೆಸ್‌ಗಳಲ್ಲಿ ಬ್ರಾ ಕಿರಿಕಿರಿ ಮಾಡದೇ ಸ್ತನಗಳಿಗೆ ಬೆಸ್ಟ್ ಶೇಪ್ ಇರಬೇಕು ಅನ್ನೋದು. ಹಾಗಾಗಿ ಯಾವುದೇ ಕಿರಿಕಿರಿ ಆಗೋದಿಲ್ಲ ಅನ್ನೋದು ತಯಾರಕರ ಮತ್ತು ಬಳಕೆ ಮಾಡ್ತಾ ಇರುವವರ ಅಭಿಪ್ರಾಯ. ನಿಜವಾಗ್ಲೂ ಸ್ತನಗಳಿಗೆ ಸರಿಯಾದ ಶೇಪ್ ನೀಡುತ್ತಾ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಾ ಇರಬಹುದು. ಅದಕ್ಕುತ್ತರ ನೀವು ಹೇಗೆ ಸಿಲಿಕಾನ್ ಬ್ರಾವನ್ನು ಅಂಟಿಸಿಕೊಳ್ತೀರ ಅನ್ನೋದ್ರ ಮೇಲೂ ಆಧಾರಿತವಾಗಿರುತ್ತಂತೆ. ಸರಿಯಾದ ರೀತಿಯಲ್ಲಿ ಅಂಟಿಸಿಕೊಂಡಲ್ಲಿ ಶೇಪ್ ಕೂಡ ಅದ್ಭುತವಾಗಿರುತ್ತೆ. ಸೂಪರ್ ಲುಕ್ ಇರುತ್ತೆ ಅಂತ ಹೇಳಲಾಗುತ್ತೆ. ಆದ್ರೆ ಎಲ್ಲದಕ್ಕಿಂತ ಪ್ರಮುಖವಾಗಿ ಅದು ನಿಮ್ಮ ಚರ್ಮಕ್ಕೆ ಹೊಂದಾಣಿಕೆಯಾಗುತ್ತಾ ಅನ್ನೋದು ಬಹುಮುಖ್ಯವಾದ ಅಂಶ ಅನ್ನೋದು ನೆನಪಿನಲ್ಲಿರಿ. ಸ್ಟೈಲ್ ಮಾಡೋಕೆ ಹೋಗಿ ಯಡವಟ್ಟು ಮಾಡಿಕೊಳ್ಳಬೇಡಿ.....

English summary

Tips How to Wear Silicon Bra Safety and Healthy

Silicone bras form the perfect undergarment for a daring top or dress when you want maximum coverage, flexibility and support as well as want... have a look
X
Desktop Bottom Promotion