ಸಂಶಯವೇ ಬೇಡ, ಕೊಬ್ಬು ಕರಗಿಸುವಲ್ಲಿ ಇವು ಎತ್ತಿದ ಕೈ!

ನಡುವಯಸ್ಸು ದಾಟುತ್ತಿದ್ದಂತೆಯೇ ಹೊಟ್ಟೆ ಮತ್ತು ಸೊಂಟದ ಸುತ್ತ ನಿಧಾನವಾಗಿ ಕೊಬ್ಬು ಆವರಿಸತೊಡಗುತ್ತದೆ. ಇದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣವನ್ನು ನೀಡುತ್ತಾರೆ. ಆಟ ನಿಲ್ಲಿಸಿರುವುದು, ಊಟ ಜಾಸ್ತಿಯಾಗುವುದು, ಕುಳಿತು ಕೆಲಸ ಮಾಡುವುದು ಹೆಚ್ಚಾಗಿರುವುದು ಇತ್ಯಾದಿ. ಆದರೆ ಈ ಸ್ಥೂಲಕಾಯಕ್ಕೆ ನಮ್ಮ ಶರೀರ ರಚನೆ ಮತ್ತು ವಂಶವಾಹಿನಿಗಳ ಮೂಲಕ ಬಂದ ಸೂಚನೆಯೇ ಕಾರಣ.

ಆರೋಗ್ಯಕ್ಕೆ ಮಾರಕವಾದ ಸೊಂಟದ ಕೊಬ್ಬನ್ನು ಕರಗಿಸಿ ಎಂದು ವೈದ್ಯರ ಸಹಿತ ಎಲ್ಲರೂ ಸಲಹೆ ನೀಡುವವರೇ. ಆದರೆ ಇದಕ್ಕೆ ಅನುಸರಿಸುವ ಮಾರ್ಗ ಯಾವುದು? ಬಹುತೇಕ ಸೋಮಾರಿಗಳಾಗಿರುವ ನಮಗೆ ವೈದ್ಯರು ತಿಳಿಸುವ ವ್ಯಾಯಾಮ, ಸರಿಯಾದ ನಿದ್ದೆ, ಆಹಾರ ಮೊದಲಾದವುಗಳು ಸಾಧಿಸಲು ಸಾಧ್ಯವೆಂದು ಅನ್ನಿಸುವುದೇ ಇಲ್ಲ.

ಇದೇ ಚಿಂತೆಯಲ್ಲಿ ದಿನ ಮುಂದೂಡುವ ನಮಗೆ ಹೊಟ್ಟೆ ಎಷ್ಟೋ ಮುಂದೆ ಬಂದಿರುವುದು ಗೊತ್ತೇ ಆಗಿರುವುದಿಲ್ಲ. ಆದರೆ ಇದಕ್ಕೊಂದು ಪರ್ಯಾಯ ವಿಧಾನವಿದೆ. ಅದೆಂದರೆ ಜೀರ್ಣಗೊಳ್ಳಲು ನಿಧಾನವಾಗಿದ್ದು ಹೆಚ್ಚಿನ ನಾರು ಹೊಂದಿರುವ ಮೂಲಕ ನಾರನ್ನು ಕರಗಿಸಲು ದೇಹದ ಕೊಬ್ಬನ್ನು ಬಳಸುವುದು. ಅಂದರೆ ಸೂಕ್ತವಾದ ಆಹಾರವನ್ನು ಸೂಕ್ತ ಪ್ರಮಾಣದಲ್ಲಿ, ಸೂಕ್ತ ಸಮಯದಲ್ಲಿ ಸೇವಿಸುವುದು. ನಿಧಾನವಾಗಿಯಾದರೂ ದೇಹದ ತೂಕ ಕಡಿಮೆಯಾಗುತ್ತಾ ಸೊಂಟದ ಸುತ್ತಳತೆ ಕಡಿಮೆಯಾಗುವುದು ಖಂಡಿತಾ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಇಂತಹ ಆಹಾರಗಳು ಎಲ್ಲಿ ಸಿಗುತ್ತವೆ? ಸುಲಭ, ನಮಗೆ ಸಿಗುವ ನಿತ್ಯದ ಹಣ್ಣು ಮತ್ತು ತರಕಾರಿಗಳೇ ಈ ಕೆಲಸ ಮಾಡಲು ಸಮರ್ಥವಾಗಿವೆ. ಇದಕ್ಕೆ ಪೂರಕವಾಗಿ ದಿನಕ್ಕೆ ಎಂಟು ಲೋಟಕ್ಕೂ ಹೆಚ್ಚು ನೀರನ್ನು ಕುಡಿಯುವುದು ಇನ್ನಷ್ಟು ಉತ್ತಮ. ಸಕ್ಕರೆಯ ಸೇವನೆಯನ್ನು ಕಡಿಮೆಗೊಳಿಸುವುದು ಇನ್ನೊಂದು ಮಾರ್ಗ. ಈ ನಿಟ್ಟಿನಲ್ಲಿ ನಿಮ್ಮ ತೂಕವನ್ನು ಕಡಿಮೆಗೊಳಿಸುವ ಸೂಪರ್ ಆಹಾರದ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಮಾಹಿತಿ ನೀಡಲು ಬೋಲ್ಡ್ ಸ್ಕೈ ತಂಡ ಹೆಮ್ಮೆಪಡುತ್ತದೆ.

ಅಣಬೆ

ಅಣಬೆ

ಹೊಟ್ಟೆಯನ್ನು ಕರಗಿಸಲು ಅಣಗೆ ಒಂದು ಅದ್ಭುತ ಆಹಾರವಾಗಿದೆ. ಏಕೆಂದರೆ ಕೊಂಚ ಪ್ರಮಾಣದ ಅಣಬೆ ಸೇವಿಸಿದರೂ ಹೊಟ್ಟೆ ತುಂಬಿಕೊಂಡಂತಾಗುತ್ತದೆ. ಪರಿಣಾಮವಾಗಿ ಹೊಟ್ಟೆಯ ಹಸಿವು ಇರುವುದಿಲ್ಲ. ಇದು ಅನಾರೋಗ್ಯಕರ ಆಹಾರಗಳನ್ನು ತಿನ್ನದೇ ಇರುವ ಮೂಲಕ ಹೊಟ್ಟೆ ಕರಗಲು ಪರೋಕ್ಷವಾಗಿ ನೆರವಾಗುತ್ತದೆ.

ಅಣಬೆ

ಅಣಬೆ

ಇತ್ತ ಹೊಟ್ಟೆ ತುಂಬಿರುವಂತೆ ಅನ್ನಿಸುವುದರಿಂದ ಕಡಿಮೆ ಆಹಾರ ಸುಲಭವಾಗಿ ಜೀರ್ಣವಾಗಿ ಕರುಳುಗಳಲ್ಲಿ ಸರಾಗವಾಗಿ ಮುಂದೆಹರಿಯುತ್ತವೆ. ಇದು ಹೊಟ್ಟೆ ಕರಗಲು ನೆರವಾಗುತ್ತದೆ.

ಬಾದಾಮಿ

ಬಾದಾಮಿ

ನಿತ್ಯವೂ ನಾಲ್ಕು ಅಥವಾ ಐದು ಬಾದಾಮಿಗಳನ್ನು (ಮಕ್ಕಳಿಗೆ ಮೂರು ಸಾಕು) ನಿತ್ಯವೂ ಸೇವಿಸುತ್ತಾ ಬರುವುದರಿಂದ ಇದರಲ್ಲಿರುವ ವಿಟಮಿನ್ ಇ ರಕ್ತದ ಕೊಲೆಸ್ಟಾಲ್ ಕರಗಿಸಿ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುತ್ತದೆ, ತನ್ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ.

ಓಟ್ಸ್

ಓಟ್ಸ್

ಹೊಟ್ಟೆ ಕರಗಿಸುವ ಇರಾದೆಯುಳ್ಳವರಿಗೆ ಓಟ್ಸ್ ಉತ್ತಮ ಆಯ್ಕೆಯಾಗಿದೆ. ಬೆಳಗ್ಗಿನ ಉಪಾಹಾರಕ್ಕೆ ಓಟ್ಸ್ ಉತ್ತಮ ಆಯ್ಕೆಯಾಗಿದ್ದು ದಿನಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುವ ಜೊತೆಗೇ ಇದು ಜೀರ್ಣಗೊಳ್ಳಲು ಶರೀರದ ಕೊಬ್ಬನ್ನು ಬಳಸುವ ಮೂಲಕ ಕೊಬ್ಬು ಕರಗಲು ನೆರವಾಗುತ್ತದೆ.

ಓಟ್ಸ್

ಓಟ್ಸ್

ಇದರಲ್ಲಿ ಕರಗದ ನಾರು ಅತಿ ಹೆಚ್ಚಾಗಿರುವ ಕಾರಣ ಇದನ್ನು ಜೀರ್ಣಿಸಿಕೊಳ್ಳುವ ಯತ್ನದಲ್ಲಿ ದೇಹ ಹೆಚ್ಚಿನ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ಅಲ್ಲದೇ ಪದೇ ಪದೇ ಹಸಿವಾಗುವುದರಿಂದ ರಕ್ಷಿಸುತ್ತದೆ.

 ಬಾಳೆಹಣ್ಣು

ಬಾಳೆಹಣ್ಣು

ಊಟದ ಬಳಿಕ ಬಾಳೆಹಣ್ಣು ತಿನ್ನುವುದರಿಂದ ಅದರಲ್ಲಿರುವ ವಿವಿಧ ಕಿಣ್ವಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತವೆ. ಅಲ್ಲದೇ ಹೆಚ್ಚಿನ ಪೊಟ್ಯಾಶಿಯಂ ಮತ್ತು ಇತರ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ತನ್ಮೂಲಕ ಸೊಂಟದ ಸುತ್ತಳತೆಯನ್ನುಕಿರಿದಾಗಿಸುತ್ತದೆ.

ಸೇಬು

ಸೇಬು

ಸೇಬಿನಲ್ಲಿ ಉತ್ತಮ ಪ್ರಮಾಣದ ಕರಗುವ ನಾರುಇದೆ. ಒಂದು ಸೇಬು ತಿಂದ ಬಳಿಕ ಹೊರಗೆ ಅಡ್ಡಾಡುವ ಮೂಲಕ ಹೆಚ್ಚಿನ ಕೊಬ್ಬು ಬಳಕೆಯಾಗಿ ಸೊಂಟದ ಸುತ್ತಳತೆ ಕಡಿಮೆಯಾಗಲು ಸಾಧ್ಯವಾಗುತ್ತದೆ.

ಹಸಿರುದ್ರಾಕ್ಷಿ

ಹಸಿರುದ್ರಾಕ್ಷಿ

ದ್ರಾಕ್ಷಿಹಣ್ಣನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆದುಕೊಳ್ಳೀ. ಹಸಿರು ದ್ರಾಕ್ಷಿಯ ರಸವನ್ನು ನಿತ್ಯವೂ ಕುಡಿಯುವ ಮೂಲಕ ಹತ್ತೇ ದಿನದಲ್ಲಿ ಹತ್ತು ಪೌಂಡ್ (ನಾಲ್ಕೂವರೆ ಕೇಜಿ) ತೂಕ ಇಳಿದಿರುವುದು ಪರೀಕ್ಷೆಗಳ ಮೂಲಕ ಸಾಬೀತಾಗಿದೆ.

ಹಸಿರುದ್ರಾಕ್ಷಿ

ಹಸಿರುದ್ರಾಕ್ಷಿ

ಇದಕ್ಕಾಗಿ ಪ್ರತಿನಿತ್ಯ ಹಸಿರು ದ್ರಾಕ್ಷಿಗಳ ತಾಜಾ ಜ್ಯೂಸ್ ದಿನದ ಒಂದೇ ಹೊತ್ತಿನಲ್ಲಿ ಸೇವಿಸುತ್ತಾ ಬರಬೇಕು. ಹಸಿರು ದ್ರಾಕ್ಷಿಯಿಲ್ಲದಿದ್ದರೆ ಕಪ್ಪು ದ್ರಾಕ್ಷಿಯನ್ನೂ ಸೇವಿಸಬಹುದು, ಆದರೆ ಹಸಿರು ದ್ರಾಕ್ಷಿಯಷ್ಟು ಪರಿಣಾಮಕಾರಿಯಲ್ಲ.

ಹಸಿರುದ್ರಾಕ್ಷಿಕಹಿ ಹುಳಿ ಅಥವಾ ಕಹಿ ಲಿಂಬೆಹಣ್ಣು

ಹಸಿರುದ್ರಾಕ್ಷಿಕಹಿ ಹುಳಿ ಅಥವಾ ಕಹಿ ಲಿಂಬೆಹಣ್ಣು

ಕಹಿ ಕಿತ್ತಳೆ ನೈಸರ್ಗಿಕವಾಗಿ ದೇಹದ ತೂಕ ಇಳಿಸುತ್ತದೆ. ಇದು ದೇಹದ ಅನೇಕ ಭಾಗದಲ್ಲಿ ಅಧಿಕವಾಗಿ ತುಂಬಿಕೊಂಡ ಬೊಜ್ಜನ್ನು ಕ್ರಮೇಣ ಕರಗಿಸುತ್ತದೆ. ಹೃದಯದ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೂ ಕಹಿ ಕಿತ್ತಳೆ ಸೇವನೆ ಒಳ್ಳೆಯದು. ಪಿತ್ತ ನಿವಾರಿಸುತ್ತದೆ.

ಶುಂಠಿ

ಶುಂಠಿ

ಎಲ್ಲರ ಮನೆಯಲ್ಲೂ ಸರ್ವೇ ಸಾಮಾನ್ಯವಾಗಿರುವ ಶುಂಠಿ ಬೊಜ್ಜು ಕರಗಿಸುವಲ್ಲಿ ಹೆಚ್ಚು ಸಹಕಾರಿ. ಹಾಲಿನೊಂದಿಗೆ ಒಂದು ಚಮಚ ಶುಂಠಿ ಪೌಡರ್ ಬೆರೆಸಿ ಕುಡಿದರೆ ಫಿಟ್ ನೆಸ್ ಕಾಪಾಡಿಕೊಳ್ಳಬಹುದು.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಕಲ್ಲಂಗಡಿಯಲ್ಲಿ ಅತ್ಯಧಿಕ ಪ್ರಮಾಣದ ನೀರು ಇದೆ. ಅಲ್ಲದೇ ಉತ್ತಮ ಪ್ರಮಾಣದ ವಿಟಮಿನ್ ಎ, ಸಿ ಮತ್ತು ಅಮೈನೋ ಆಮ್ಲಗಳಿವೆ. ಪ್ರತಿದಿನ ಕಲ್ಲಂಗಡಿಯನ್ನು ಸೇವಿಸುವುದರಿಂದ ಸೊಂಟದ ಕೊಬ್ಬು ಕರಗಲು ನೆರವಾಗುತ್ತದೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಟೊಮೇಟೊ ಹಣ್ಣಿನಲ್ಲಿಯೂ ಕೊಬ್ಬು ಕರಗಿಸುವ ಪೋಷಕಾಂಶಗಳಿವೆ. ಅಲ್ಲದೇ ಇದರ ನಿಯಮಿತ ಸೇವನೆಯಿಂದ ಸೋಡಿಯಂ, ಉಪ್ಪು ಮೊದಲಾದ ದೇಹದ ವಿಷಕಾರಿ ವಸ್ತುಗಳು ಸುಲಭವಾಗಿ ಹೊರಹರಿಯುತ್ತವೆ. ಅಲ್ಲದೇ ಸೊಂಟದ ಸುತ್ತ ತುಂಬಿಕೊಂಡಿದ್ದ ನೀರು ಮತ್ತು ಕೊಬ್ಬನ್ನು ಕರಗಿಸುವ ಮೂಲಕ ಹೊಟ್ಟೆ ಕರಗಲು ಸಾಧ್ಯವಾಗುತ್ತದೆ.


X
Desktop Bottom Promotion