Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ತಿನ್ನುವ ವಿಷಯಕ್ಕೆ ಬಂದಾಗ, ಚಿಂತೆ ಕಾಡುತ್ತದೆಯೇ..?
ಇಂದಿನ ದಿನಗಳಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ ಬೊಜ್ಜಿನದಾಗಿದೆ. ಇಷ್ಟಪಟ್ಟಿರುವುದನ್ನು ತಿನ್ನಲೂ ಆಗದೇ ಆಹಾರದ ಮೇಲೆ ನಿಯಂತ್ರಣವನ್ನು ಹೇರಿಕೊಳ್ಳುತ್ತಾ ತಮಗೆ ತಾವೇ ಶಿಕ್ಷೆಯನ್ನು ನೀಡುವುದರ ಮೂಲಕ ಡಯಟ್ ಯೋಜನೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಆದರೆ ಈ ಯೋಜನೆ ಒಮ್ಮೊಮ್ಮೆ ಅವರಿಗೆ ಮುಳುವಾಗಿಬಿಡುತ್ತದೆ ಎಂಬ ಸಣ್ಣ ಆಲೋಚನೆಯನ್ನೂ ಮಾಡದೇ ಅಪರೂಪಕ್ಕೆ ಇಷ್ಟವಾದ ತಿನಿಸು ತಿನ್ನುವಾಗ ಹೊಟ್ಟೆ ತುಂಬಾ ತಿಂದು ಕಷ್ಟಪಟ್ಟು ಮಾಡಿದ ತಿಂಗಳ ಡಯಟ್‌ಗೆ ನೀರನ್ನು ಸುರಿದುಬಿಡುತ್ತಾರೆ. ನಂತರ ಅಲವತ್ತುಕೊಳ್ಳುವುದೂ ಇದ್ದೇ ಇದೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಉದಾಹರಣೆಯಂತೆ ನಮ್ಮ ಅನಾರೋಗ್ಯಕ್ಕೆ ಕಾರಣವಾಗಿಬಿಡುತ್ತೇವೆ. ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!
ಹಾಗಿದ್ದರೆ ನಮಗೆ ಇಷ್ಟಪಟ್ಟಿದ್ದನ್ನು ತಿನ್ನುವುದರ ಜೊತೆಗೆ ಕೊಬ್ಬಿನ ನಿಯಂತ್ರಣವನ್ನು ಮಾಡುವುದು ಹೇಗೆ ಎಂಬುದರ ಬಗ್ಗೆಯೇ ಇಂದಿನ ಲೇಖನ ದೃಷ್ಟಿ ಹರಿಸಲಿದೆ. ಉತ್ತಮ ಆರೋಗ್ಯಕ್ಕಾಗಿ ನೀವು ಪಾಲಿಸಬೇಕಾದ ಈ ಕ್ರಮಗಳು ನಿಮಗೆ ಬೇಕಾದ್ದನ್ನು ತಿನ್ನುವುದಕ್ಕೆ ಅನುವು ಮಾಡಿಕೊಡುವುದರೊಂದಿಗೆ ನಿಮ್ಮ ಆರೋಗ್ಯಕ್ಕೂ ಅಡಿಪಾಯ ಹಾಕಿಕೊಡಲಿದೆ. ಬನ್ನಿ ಹಾಗಿದ್ದರೆ ಇಷ್ಟಪಟ್ಟನ್ನು ತಿನ್ನುವುದರ ಜೊತೆಗೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಮೂಲಭೂತವಾಗಿರುವ ಅಂಶಗಳನ್ನು ಅರಿತುಕೊಳ್ಳೋಣ.

ತಿನ್ನುವುದರಲ್ಲಿಯೂ ಸಾಹಸವನ್ನು ಪ್ರದರ್ಶಿಸಿರಿ!
ನಿಮಗೆ ಪ್ರಿಯವಾದ ಆಹಾರ ಪದಾರ್ಥಗಳಿಗೆ ಅಂಟಿಕೊಂಡಿರುವುದೆನೋ ಸುಲಭ. ಆದರೂ ಕೂಡ ನೀವೇಕೆ ಒಮ್ಮೆ ನಿಮ್ಮ ಸ್ಥಳೀಯ ಮಾರುಕಟ್ಟೆಯಲ್ಲಿಯೇ ಲಭ್ಯವಿರಬಹುದಾದ ಒಂದು ಹೊಸ ಜಾತಿಯ ಬೇರೆ ಪ್ರದೇಶದಲ್ಲಿ ಬೆಳೆಯುವ ಹಣ್ಣು, ತರಕಾರಿ ಅಥವಾ ಇತರ ಹೊಸ ಉತ್ಪನ್ನಗಳನ್ನು ವಾರಕ್ಕೊಮ್ಮೆ ಏಕೆ ಪ್ರಯತ್ನಿಸಬಾರದು?! ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಿನ್ನುವುದರಲ್ಲಿಯೂ ಸಾಹಸವನ್ನು ಪ್ರದರ್ಶಿಸಿರಿ!
ಇತ್ತೀಚಿನ ದಿನಗಳಲ್ಲಂತೂ ದಿನಸಿ ಅಂಗಡಿಗಳಲ್ಲಿ ಪ್ರಪಂಚದ ನಾನಾ ಮೂಲೆಗಳಿಂದ ಹರಿದು ಬರುವ ವಸ್ತುಗಳ ಒಂದು ಅದ್ಭುತ ಸಂಗ್ರಹವೇ ಇದ್ದು, ಇವುಗಳ ಪೈಕಿ ನಿಮಗಿಷ್ಟವಾದ, ಒಳ್ಳೆಯ ಹೊಸ ವಸ್ತುಗಳನ್ನು ಆರಿಸಿಕೊಳ್ಳಿ (ಹಸಿರು ತರಕಾರಿ, ಹಣ್ಣು ಹಂಪಲು) ಮತ್ತು ಇವುಗಳನ್ನು ನಿಮ್ಮ ಹಳೆಯ ವಸ್ತುಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳಲು ಮರೆಯದಿರಿ..!

ಬ್ರೇಕ್‌ಫಾಸ್ಟ್‌ನೊಂದಿಗೆ ಚಕ್ಕೆ ಚೂರನ್ನು ಸೇರಿಸಿ
ಬೆಳಗಿನ ಉಪಹಾರದೊಂದಿಗೆ ಅತ್ಯುತ್ತಮವಾಗಿ ಹೊಂದಿಕೆಯಾಗುವ ಈ ಚೆಕ್ಕೆಯು ಬಹಳಷ್ಟು ಪ್ರಮಾಣದಲ್ಲಿ ರೋಗದೊಂದಿಗೆ ಹೋರಾಡುವ ಆಂಟಿಆಕ್ಸಿಡೆಂಟ್ ಗಳನ್ನು ಹೊಂದಿದೆ ಹಾಗೂ ದೇಹದ ಯಾವುದೇ ನೋವು ಮತ್ತು ಅಸೌಖ್ಯದ ಪ್ರಮಾಣವನ್ನು ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಹೊಂದಿದೆ. ಓಟ್ ಉಪಹಾರ, ಟೋಸ್ಟ್, granola, ಧಾನ್ಯ ಇವುಗಳೆಲ್ಲದರೊಂದಿಗೆ ಚೆಕ್ಕೆಯು ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ. ಚೆಕ್ಕೆಯ ಚೂರುಗಳನ್ನು ಇವುಗಳ ಮೇಲೆ ಉದುರಿಸಿ ಸೇವಿಸಬಹುದು. ಈ ಚೆಕ್ಕೆಯು ಯಾವುದೇ ಹೆಚ್ಚುವರಿ ಕ್ಯಾಲೋರಿಗಳನ್ನು ಹೊಂದಿಲ್ಲ

ಸಸ್ಯಾಹರ ಊಟ ಎಂದಾಗ ಮುಖ ಸಿಂಡರಿಸಬೇಡಿ
ಸತತ ಅಧ್ಯಯನಗಳಿಂದ ತಿಳಿದು ಬಂದಿರುವ ಅಂಶವೇನೆಂದರೆ, ಮಾಂಸಾಹಾರದ ಕಡಿಮೆ ಸೇವನೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸಸ್ಯಾಹರವನ್ನು ಸೇವಿಸುವುದು, ಆರೋಗ್ಯಕರವಾದ ಧೀರ್ಘಾಯುಶೀ ಜೀವನದೊಂದಿಗೆ ಸಂಬಂಧವನ್ನು ಹೊಂದಿದೆ. ಹಾಗಾಗಿ ಭೂಮಿಯಲ್ಲಿ ಬೆಳೆದ ವಸ್ತುಗಳಿoದೊಡಗೂಡಿದ ಅಹಾರವನ್ನು ನಿಮ್ಮ ಪ್ರಮುಖ ಅಹಾರಕ್ರಮವನ್ನಾಗಿ ಅಳವಡಿಸಿಕೊಳ್ಳಲು ಪ್ರಾರoಭಿಸಿರಿ. ಹೀಗೆ ಮಾಡುವುದರ ಮೂಲಕವೂ ಕೂಡ ನೀವು ಮೊದಲಿನ ಆಹಾರ ಪದ್ಧತಿಯಲ್ಲಿನ ಅಂಶಗಳನ್ನೇ ಸೇವಿಸಿದಂತಾಗುತ್ತದೆ, ವ್ಯತ್ಯಾಸವೇನೆಂದರೆ, ಈಗ ನೀವು ಹೆಚ್ಚು ಆರೋಗ್ಯಯುತವಾದ ಹಾಗೂ ಕಡಿಮೆ ಕ್ಯಾಲರಿ ಮತ್ತು ಕೊಬ್ಬಿನ ಅಂಶವನ್ನು ಸೇವಿಸಿದಂತಾಗುತ್ತದೆ.

ಅಣಬೆ
ಪ್ರಕೃತಿದತ್ತವಾಗಿ ಸಿಗುವಂತಹ ಕೆಲವೊಂದು ಆಹಾರಗಳಲ್ಲಿ ಸಹಜವಾಗಿಯೇ ಮನುಷ್ಯನಿಗೆ ಬೇಕಾಗಿರುವಂತಹ ಪೌಷ್ಠಿಕಾಂಶಗಳಿರುತ್ತದೆ. ಅಂತಹ ಆಹಾರಗಳಲ್ಲಿ ಅಣಬೆ ಕೂಡ ಒಂದು. ಇಂದಿನ ದಿನಗಳಲ್ಲಿ ಅಣಬೆಯನ್ನು ಅದರ ಬೇಡಿಕೆಗೆ ಅನುಗುಣವಾಗಿ ಕೃತಕವಾಗಿ ಬೆಳೆಯಲಾಗುತ್ತಿದೆ. ಅಣಬೆ ಇಂದು ಜನಪ್ರಿಯ ಆಹಾರವಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಹೌದು ಅಣಬೆಗಳು ಸೂರ್ಯನ ಬೆಳಕಿನಿಂದ ನೈಸರ್ಗಿಕವಾಗಿ ವಿಟಮಿನ್ ಡಿಯನ್ನು ಪಡೆಯುತ್ತದೆ. ಅಣಬೆಯಲ್ಲಿರುವ ವಿಟಮಿನ್ ಡಿಯಿಂದ ಎಲುಬಿನ ಆರೋಗ್ಯ ಉತ್ತಮವಾಗುತ್ತದೆ. ದೇಹಕ್ಕೆ ಒಂದು ದಿನಕ್ಕೆ ಬೇಕಾಗಿರುವ ಶೇ.20ರಷ್ಟು ವಿಟಮಿನ್ ಡಿ ಅಣಬೆಯಲ್ಲಿದೆ. ಹಾಗಾಗಿ ವಾರಕ್ಕೆ ಒಮ್ಮೆಯಾದರೂ ಅಣಬೆಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ

ಟೊಮೇಟೊ ಹಣ್ಣು
ಟೊಮೇಟೊದಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಬೇಟಾ ಕ್ಯಾರೊಟೀನ್‌ನೊಂದಿಗೆ ಸಮ್ಮಿಶ್ರಗೊಂಡು ರಕ್ತದಲ್ಲಿನ ವಿನಾಶಕಾರಿ ಮುಕ್ತ ರೇಡಿಕಲ್ಸ್‌ನೊಂದಿಗೆ ಉತ್ಕರ್ಷಣದಂತೆ ಕಾರ್ಯನಿರ್ವಹಿಸುತ್ತದೆ. ಹಸಿ ಟೊಮೇಟೊವನ್ನು ತಿಂದಷ್ಟು ನಿಮ್ಮಲ್ಲಿ ಬೇಟಾ ವಿಟಮಿನ್ ಅಂಶ ಜಾಸ್ತಿಯಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ. ಟೊಮೇಟೊವನ್ನು ಬೇಯಿಸಿದಂತೆ ಈ ಅಂಶ ಕಡಿಮೆಯಾಗುತ್ತದೆ.



Click it and Unblock the Notifications