ರೋಗ ನಿವಾರಕ ಅರಿಶಿನ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆಯೇ?

By Super

ಅರಿಶಿನವು ಭಾರತೀಯರು ದಿನ ನಿತ್ಯ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಇದರಿಂದ ಹಲವಾರು ಆರೋಗ್ಯಕರವಾದ ಪ್ರಯೋಜನಗಳು ದೊರೆಯುವುದು ನಿಜವಾದರು, ಇದರಿಂದಲೂ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂಬುದು ಅಷ್ಟೇ ನಿಜ.

ನಮಗೆ ಇದುವರೆಗೂ ತಿಳಿದಿರುವಂತೆ ಅರಿಶಿನ ಬಳಸುವುದರಿಂದ ಉರಿಯೂತವನ್ನು ತಡೆಯಬಹುದು. ಕೆಲವೊಂದು ಸಂದರ್ಭದಲ್ಲಿ ಅರಿಶಿನವನ್ನು ಗಾಯಗಳಿಗೆ ಮದ್ದಾಗಿ ಸಹ ಬಳಸುತ್ತಾರೆ. ಆದರೆ, ಇಂದು ತಜ್ಞರು ಒಂದು ತೀರ್ಮಾನಕ್ಕೆ ಬಂದಿದ್ದಾರೆ, ಅದೇನಪ್ಪ ಎಂದರೆ- ಅರಿಶಿನವು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.

ಅರಿಶಿನವನ್ನು ಪ್ರತಿಯೊಂದು ಆಹಾರಕ್ಕೆ ಬಳಸುವುದರಿಂದ ನೀವು ನಿಬ್ಬೆರಗಾಗುವಂತಹ ರೋಗರುಜಿನಗಳಿಗೆ ಒಳಗಾಗುವಿರಿ ಎಂಬುದು ಅವರ ಮಾತು. ಅಧ್ಯಯನಗಳ ಪ್ರಕಾರ, ಅರಿಶಿನವನ್ನು ಅಧಿಕ ಪ್ರಮಾಣದಲ್ಲಿ ಬಳಸುವುದರಿಂದ ಚರ್ಮದಲ್ಲಿ ತುರಿಕೆ ಮತ್ತು ಒಣ ಚರ್ಮದ ಸಮಸ್ಯೆಯು ಕಂಡು ಬರುತ್ತದೆ.

ಜೊತೆಗೆ ಇದು ಜಠರದಲ್ಲಿ ಗೋಡೆಗಳನ್ನು ಸಹ ಹಾನಿ ಮಾಡುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯು ಸಹ ಮುಂದಿನ ದಿನಗಳಲ್ಲಿ ಕಂಡು ಬರಬಹುದು. ಇದರಿಂದ ಹಲವಾರು ಅಡ್ಡ ಪರಿಣಾಮಗಳು ಸಹ ಕಂಡು ಬರುತ್ತವೆ. ಬನ್ನಿ ಅರಿಶಿನದಿಂದ ಉಂಟಾಗುವ ಅಡ್ಡ ಪರಿಣಾಮಗಳ ಕುರಿತು ಒಂದು ನೋಟ ಹರಿಸೋಣ. ಹಾಗಲಕಾಯಿ ಜ್ಯೂಸ್‌ನಲ್ಲಿದೆ 15 ಆರೋಗ್ಯಕರ ಪ್ರಯೋಜನಗಳು

ಅಲರ್ಜಿಗಳಿಗೆ ಒಳ್ಳೆಯದಲ್ಲ

ಅಲರ್ಜಿಗಳಿಗೆ ಒಳ್ಳೆಯದಲ್ಲ

ಒಂದು ವೇಳೆ ನೀವು ಭಾರತದ ಯಾವುದಾದರು ಒಂದು ಮಸಾಲೆ ಪದಾರ್ಥಕ್ಕೆ ಅಲರ್ಜಿಯನ್ನು ಹೊಂದಿದ್ದಲ್ಲಿ, ಅರಿಶಿನ ಬಳಸುವಾಗ ಜಾಗರೂಕರಾಗಿರಿ. ಏಕೆಂದರೆ ಬಹುಶಃ ಈ ಹಳದಿ ಬಣ್ಣದ ಮಸಾಲೆ ಪದಾರ್ಥವು ಆ ಅಲರ್ಜಿಯನ್ನು ಹೆಚ್ಚಿಸಬಹುದು.

ಪಿತ್ತಾಶಯದ ಸಮಸ್ಯೆಗಳು

ಪಿತ್ತಾಶಯದ ಸಮಸ್ಯೆಗಳು

ನಿಮಗೆ ಗೊತ್ತೆ ಅರಿಶಿನ ಬಳಸುವುದರಿಂದ ಪಿತ್ತಾಶಯದಲ್ಲಿ ಕಲ್ಲುಗಳ ಉತ್ಪತ್ತಿಯಾಗುವ ಸಂಭವ ಅಧಿಕವಾಗುತ್ತದೆಯಂತೆ? ಇದರ ಜೊತೆಗೆ ಗ್ಯಾಸ್ಟ್ರೋಸೆಫಜಿಯಲ್ ರಿಫ್ಲಕ್ಸ್ ಡಿಸಾರ್ಡರ್ (GERD) ಸಹ ಅಧಿಕಗೊಳ್ಳುತ್ತದೆ. ಇದು ಸಹ ಅರಿಶಿನ ಬಳಸುವುದರಿಂದ ಉಂಟಾಗುವ ಅಡ್ಡಪರಿಣಾಗಳಲ್ಲಿ ಒಂದಾಗಿದೆ.

ಯಕೃತ್ತಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ

ಯಕೃತ್ತಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ

ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿರುವವರು ಅರಿಶಿನವನ್ನು ಯಾವುದೇ ರೂಪದಲ್ಲಿ ಬಳಸದೆ ಇರುವುದು ಉತ್ತಮ. ಏಕೆಂದರೆ ಅರಿಶಿನದಲ್ಲಿರುವ ಅಂಶಗಳು ಈ ಸಮಸ್ಯೆಯನ್ನು ಹೆಚ್ಚಿಸುತ್ತವೆ.

ಗರ್ಭಿಣಿಯರಿಗೆ ಒಳ್ಳೆಯದಲ್ಲ

ಗರ್ಭಿಣಿಯರಿಗೆ ಒಳ್ಳೆಯದಲ್ಲ

ಬಹುತೇಕ ಗರ್ಭಿಣಿಯರು ಹಾಲಿನ ಜೊತೆಗೆ ಅರಿಶಿನವನ್ನು ಬೆರೆಸಿಕೊಂಡು ಸೇವಿಸುತ್ತಾರೆ. ಇದನ್ನು ಸೇವಿಸುವುದರಿಂದ ಅವರು ಒಳ್ಳೆಯ ರೂಪದಿಂದ ಕೂಡಿರುವ ಮಗುವಿಗೆ ಜನ್ಮ ನೀಡುತ್ತೇವೆ ಎಂಬ ಭಾವನೆ ಅವರಲ್ಲಿ ಮನೆ ಮಾಡಿರುತ್ತದೆ. ಆದರೆ ಅರಿಶಿನವು ಅವಧಿ ಪೂರ್ವ ಗರ್ಭಾಶಯದ ಕುಗ್ಗುವಿಕೆಯ ಸಮಸ್ಯೆಗೆ, ಗರ್ಭಾಶಯದ ರಕ್ತ ಸ್ರಾವ ಅಥವಾ ನೋವಿನಿಂದ ಕೂಡಿದ ಗರ್ಭಾಶಯದ ಸೆಳೆತಕ್ಕೆ ಕಾರಣವಾಗುತ್ತದೆ.

ಔಷಧಿ ಸೇವಿಸುವ ಮಧುಮೇಹಿಗಳು

ಔಷಧಿ ಸೇವಿಸುವ ಮಧುಮೇಹಿಗಳು

ಒಂದು ಹಂತದವರೆಗೆ ಮಧುಮೇಹಿಗಳಿಗೆ ಅರಿಶಿನದಿಂದ ಪ್ರಯೋಜನವೇ ಸಿಗುತ್ತಿರುತ್ತದೆ. ಆದರೆ ಇದನ್ನು ಅತಿಯಾಗಿ ಬಳಸಿದಲ್ಲಿ, ಅವರಿಗು ಸಹ ಅಪಾಯ ತಪ್ಪಿದ್ದಲ್ಲ. ಒಂದು ವೇಳೆ ಅವರು ಔಷಧಿಯನ್ನು ಸೇವಿಸುತ್ತಿದಲ್ಲಿ, ಅವರಲ್ಲಿ ಅರಿಶಿನದಿಂದ ಹೈಪೊಗ್ಲಿಸೆಮಿಯಾದ (ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕುಸಿಯುವುದು) ಕಂಡು ಬರುತ್ತದೆ.

ಸಂತಾನಹೀನತೆ ಸಮಸ್ಯೆಗಳು

ಸಂತಾನಹೀನತೆ ಸಮಸ್ಯೆಗಳು

ಕೆಲವೊಂದು ಸಂದರ್ಭಗಳಲ್ಲಿ, ಅರಿಶಿನವನ್ನು ಸೇವಿಸುವುದರಿಂದ, ಸಂತಾನೋತ್ಪತ್ತಿ ವ್ಯವಸ್ಥೆ ಮೇಲೆ ಅಡ್ಡ ಪರಿಣಾಮಗಳು ಕಂಡು ಬರುತ್ತದೆ. ವಿಶೇಷವಾಗಿ ಗಂಡಸರಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚು ಕಂಡು ಬರುತ್ತದೆ. ಅಧ್ಯಯನಗಳ ಪ್ರಕಾರ ಅತಿಯಾಗಿ ಅರಿಶಿನವನ್ನು ಸೇವಿಸುವುದರಿಂದ ವೀರ್ಯಗಳ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದ ಕುಸಿತ ಉಂಟಾಗುತ್ತದೆಯಂತೆ.

ಕಬ್ಬಿಣಾಂಶದ ಕೊರತೆ

ಕಬ್ಬಿಣಾಂಶದ ಕೊರತೆ

ಯಾರಿಗೆ ದೇಹದಲ್ಲಿ ಕಬ್ಬಿಣಾಂಶದ ಕೊರತೆಯು ಇರುತ್ತದೆಯೋ, ಅವರು ಅರಿಶಿನವನ್ನು ಬಳಸುವುದರಿಂದ ಗಂಭೀರವಾದ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಹಾಗಾಗಿ ನಿಮಗೆ ಅನಿಮಿಯಾದ ಸಮಸ್ಯೆ ಇದ್ದಲ್ಲಿ, ಅರಿಶಿನವನ್ನು ಬಳಸುವುದನ್ನು ಕಡಿಮೆ ಮಾಡಿ.

ಶಸ್ತ್ರ ಚಿಕಿತ್ಸೆ ಮಾಡಿದ ನಂತರ ಒಳ್ಳೆಯದಲ್ಲ

ಶಸ್ತ್ರ ಚಿಕಿತ್ಸೆ ಮಾಡಿದ ನಂತರ ಒಳ್ಳೆಯದಲ್ಲ

ಅಧಿಕ ಪ್ರಮಾಣದ ಅರಿಶಿನವನ್ನು ಬಳಸುವುದರಿಂದ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಂಡು ಬರುತ್ತದೆ. ಹಾಗಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರು ಅರಿಶಿನವನ್ನು ಹೆಚ್ಚಾಗಿ ಹಾಕಿದ ಆಹಾರವನ್ನು ಸೇವಿಸದಿದ್ದಲ್ಲಿ ಒಳ್ಳೆಯದು.

ಗ್ಯಾಸ್ಟ್ರಿಕ್ ಸಮಸ್ಯೆ

ಗ್ಯಾಸ್ಟ್ರಿಕ್ ಸಮಸ್ಯೆ

ಅರಿಶಿನವನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ, ಜಠರದ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ. ಇದು ಡೈಯೋರ್ರಿಯಾ ಮತ್ತು ಮಲಬದ್ಧತೆಯಂತಹ ಸಮಸ್ಯೆಗೆ ಎಡೆ ಮಾಡಿಕೊಡಬಹುದು. ಇದು ಅರಿಶಿನದ ಅತ್ಯಂತ ದೊಡ್ಡ ಅಡ್ಡ ಪರಿಣಾಮವಾಗಿರುತ್ತದೆ.

ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ

ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ

ಅರಿಶಿನವು ರೋಗ ನಿರೋಧಕ ಶಕ್ತಿಯ ಮೇಲೆ ಸಹ ಪ್ರಭಾವ ಬೀರುತ್ತದೆ. ಏಕೆಂದರೆ ಅರಿಶಿನದ ಬಳಕೆಯಿಂದ ರೋಗ ನಿರೋಧಕ ಶಕ್ತಿಯು ಕುಂದುತ್ತದೆ.

ನಾಸಿಯಾವನ್ನು ಹೆಚ್ಚಿಸುತ್ತದೆ

ನಾಸಿಯಾವನ್ನು ಹೆಚ್ಚಿಸುತ್ತದೆ

ಅರಿಶಿಣದ ಅಧಿಕ ಬಳಕೆಯಿಂದ ನಾಸಿಯಾದ ಅನುಭವ ಹೆಚ್ಚಾಗುತ್ತದೆ. ಅರಿಶಿಣ ಹೆಚ್ಚಾಗಿರುವ ಆಹಾಯ ತಿಂದರೆ ವಾಂತಿ ಬರುವ ಹಾಗೆ ಆಗುತ್ತದೆ. ಇದು ಸಹ ಅರಿಶಿಣದ ಒಂದು ಅಡ್ಡಪರಿಣಾಮವಾಗಿದೆ.

ಮೈಗ್ರೇನ್ ಇರುವವರಿಗೆ ಒಳ್ಳೆಯದಲ್ಲ

ಮೈಗ್ರೇನ್ ಇರುವವರಿಗೆ ಒಳ್ಳೆಯದಲ್ಲ

ಅರಿಶಿನವು ಮೈಗ್ರೇನ್ ತಲೆನೋವಿಗೆ ಕಾರಣವಾಗುತ್ತದೆ. ಹಾಗಾಗಿ ನಿಮಗೆ ಮಧ್ಯಾಹ್ನದ ಊಟದ ನಂತರ ತಲೆನೋವು ಬಂದಲ್ಲಿ, ಅದು ಅರಿಶಿನದಿಂದ ಬಂದಿರಬಹುದಾಗಿರುತ್ತದೆ.

ಸ್ತನ ಕ್ಯಾನ್ಸರ್

ಸ್ತನ ಕ್ಯಾನ್ಸರ್

ಕೆಲವೊಂದು ಸಂದರ್ಭಗಳಲ್ಲಿ, ಅರಿಶಿನವು ಸ್ತನ ಕ್ಯಾನ್ಸರ್‌ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕ್ಯಾನ್ಸರ್‌ಕಾರಕ ಕೋಶಗಳ ಮೇಲೆ ಹೋರಾಡುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಇದು ಉಲ್ಟಾ ಪಲ್ಟಾ ಆಗುತ್ತದೆ. ಅರಿಶಿನವೇ ಸ್ತನ ಕ್ಯಾನ್ಸರ್‌ಗೆ ಕಾರಣವಾಗಿ ಬಿಡುತ್ತದೆ. ಆದ್ದರಿಂದ ತಜ್ಞರು ಇದನ್ನು ಬಳಸದಿರುವಂತೆ ಎಚ್ಚರಿಸುತ್ತಾರೆ.

X
Desktop Bottom Promotion