Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹುಳಿ ಮಿಶ್ರಿತ ಸಿಹಿ ಹಣ್ಣು ಅನಾನಸ್ ನಿಜವಾಗಿಯೂ ಆರೋಗ್ಯಕಾರಿಯೇ?
ಹೆಚ್ಚಾಗಿ ಉಷ್ಣವಲಯದ ಹಣ್ಣಾಗಿರುವಂತಹ ಅನಾನಸಿನಲ್ಲಿ ಕಿಣ್ವಗಳು, ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ಇವೆ. ಪ್ರತಿರೋಧಕ ಶಕ್ತಿ ಬಲಗೊಳಿಸುವುದು, ಬಲಿಷ್ಠ ಮೂಳೆಗಳು ಮತ್ತು ಜೀರ್ಣಕ್ರಿಯೆಗೆ ಇದು ನೆರವಾಗುವುದು. ಆದರೆ ಅನಾನಸಿನಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇದೆ. ಇದರ ಬಗ್ಗೆ ಈ ಲೇಖನದಲ್ಲಿ ನಿಮ್ಮೊಂದಿಗೆ ನಾವು ಮಾಹಿತಿಯನ್ನು ವಿವರವಾಗಿ ಹಂಚಿಕೊಳ್ಳಲಿದ್ದೇವೆ.

ಅಲರ್ಜಿ ಪ್ರತಿಕ್ರಿಯೆಗಳು
ಅನಾನಸ್ ತಿನ್ನುವ ಕೆಲವು ಮಹಿಳೆಯರು ಮತ್ತು ಪುರುಷರಲ್ಲಿ ಸೌಮ್ಯ ಅಲರ್ಜಿ ಪ್ರತಿಕ್ರಿಯೆಗಳು ಕಂಡುಬರುತ್ತವೆ. ತುಟಿ ಬಾವು ಮತ್ತು ಗಂಟಲು ಕೆರೆತಗಳಂತಹ ಲಕ್ಷಣಗಳು ಕಂಡುಬರುತ್ತವೆ. ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ, ಶುದ್ಧ ಉಪ್ಪು ನೀರಿನಲ್ಲಿ ಅನಾನಸ್ ಹೋಳುಗಳನ್ನು ಸ್ವಚ್ಛಗೊಳಿಸಿ ನಂತರ ಬಳಸಬೇಕು. ಹೀಗೆ ಮಾಡುವುದರಿಂದ ಹಣ್ಣಿನಲ್ಲಿರುವ ಒರಟು ಪರಿಣಾಮ ಬೀರುವಂತಹ ಕಿಣ್ವಗಳು ನಾಶವಾಗುತ್ತವೆ.

ಗರ್ಭಪಾತದ ಅಪಾಯ
ಸಾಮಾನ್ಯವಾಗಿ ಮಹಿಳೆಯರಲ್ಲಿ ಅನಾನಸ್ ಹಣ್ಣು ತಿಂದರೆ ಗರ್ಭಪಾತವಾಗುವುದೆಂಬ ಭಯವಿದೆ. ಆದ್ದರಿಂದ ಗರ್ಭಿಣಿಯರಿಗೆ ಈ ಹಣ್ಣನ್ನು ತಿನ್ನಬಾರದೆಂದು ಸಲಹೆ ನೀಡಲಾಗುತ್ತದೆ. ಆದರೆ ಮಹಿಳೆಯರು ಗರ್ಭಧಾರಣೆಯ ನಂತರದ ಹಂತಗಳಲ್ಲಿ ಈ ಹಣ್ಣನ್ನು ಸೇವಿಸಬಹುದಾಗಿದೆ.

ಕೀಲು ನೋವು ಹಾಗು ಸಂಧಿವಾತದ ಅಪಾಯ
ನೀವು ತಿಂದ ಅನಾನಸ್ ಹಣ್ಣು ಜೀರ್ಣಾಂಗವ್ಯೂಹ ತಲುಪಿದ ನಂತರ ಮದ್ಯವಾಗಿ ಬದಲಾಗುತ್ತದೆ!. ಪ್ರತಿಯಾಗಿ ಸಂಧಿವಾತ ಹಾಗು ಕೀಲು ನೋವುಗಳನ್ನು ಪ್ರಚೋದಿಸಬಹುದು. ಆದ್ದರಿಂದ, ಸಂಧಿವಾತ ಮತ್ತು ಕೀಲು ನೋವು ಇರುವ ಜನರು ಅನಾನಸ್‌ನ್ನು ಹೆಚ್ಚಾಗಿ ತಿನ್ನದಿರುವುದು ಒಳ್ಳೆಯದು.

ಬ್ಲಡ್ ಶುಗರ್ ಬೂಸ್ಟ್
ಅನಾನಸ್, ಸಾಕಷ್ಟು ಹೆಚ್ಚು ನೈಸರ್ಗಿಕ ಸಕ್ಕರೆ ಪ್ರಮಾಣವನ್ನು ಹೊಂದಿರುವ ಹಣ್ಣು. ಇದು ಮೂಲತಃ ಸುಕ್ರೋಸ್ ಮತ್ತು ಫ್ರಕ್ಟೋಸ್ ರೋಪದಲ್ಲಿದ್ದು, ಮಧುಮೇಹಿಗಳಿಗೆ ಅಷ್ಟಾಗಿ ಹಿತಕರವಲ್ಲ. ಇದು ರಕ್ತದ ಇನ್ಸುಲಿನ್ ಮಟ್ಟವನ್ನು ವೃದ್ಧಿಸಬಹುದಾಗಿದೆ. ಆದರೂ ನೀವು ಎಷ್ಟು ಗಾತ್ರದ ಹಣ್ಣು ತಿನ್ನುತ್ತೀರಿ ಹಾಗು ಎಷ್ಟು ಅವಧಿಗೊಮ್ಮೆ ತಿನ್ನುತ್ತೀರಿ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಆದ್ದರಿಂದ ರಕ್ತದ ಸಕ್ಕರೆ ಏರಿಕೆ ತಪ್ಪಿಸಲು ದಿನಕ್ಕೆ 2 ತುಂಡುಗಳನ್ನು ಮಾತ್ರ ತಿನ್ನುವುದು ಒಳಿತು.

ಹಣ್ಣಾಗದ ಅನಾನಸ್ ಹಣ್ಣಿನ ಅಡ್ಡ ಪರಿಣಾಮಗಳು
ಇನ್ನೂ ಹಣ್ಣಾಗದ ಅನಾನಸ್ ತಿನ್ನುವುದು ಅಥವಾ ಅದರ ರಸ ಸೇವಿಸುವುದು ಅಪಾಯಕಾರಿ. ಇದು ಸೇವಿಸಿದವರ ಆರೂಗ್ಯಕ್ಕೆ ವಿಷಕಾರಿಯಾಗಿ ಪರಿಣಮಿಸಬಹುದು. ಇದರಿಂದ ತೀವ್ರ ವಾಂತಿಯೂ ಉಂಟಾಗಬಹುದು .

ರಕ್ತವನ್ನು ತಿಳಿಯಾಗಿಸುವ ಔಷಧಗಳೊಂದಿಗೆ ಪ್ರತಿಕ್ರಿಯೆ
ರಕ್ತವನ್ನು ತಿಳಿಯಾಗಿಸುವ ಔಷಧಗಳನ್ನು ಸೇವಿಸುವ ಜನರು ಈ ಹಣ್ಣನ್ನು ತಿನ್ನಬಾರದು. ಅಲ್ಲದೆ ಈ ಹಣ್ಣು ರಕ್ತ ಹೆಪ್ಪುಗಟ್ಟುವಿಕೆ ಪ್ರಕ್ರಿಯೆಗೂ ಅಡ್ಡಿಯನ್ನುಂಟುಮಾಡುತ್ತದೆ.

ಬ್ರೋಮಿಲಿಯಾನ್ ಪ್ರತಿಕೂಲ ಪ್ರತಿಕ್ರಿಯೆಗಳು
ಅನಾನಸ್ ಹಣ್ಣಿನ ಪ್ರಮುಖ ಅಂಶವಾಗಿರುವ ಬ್ರೋಮಿಲಿಯಾನ್, ವಾಸ್ತವವಾಗಿ ಪ್ರೋಟೀನ್ ನನ್ನು ಒಡೆಯುತ್ತವೆ. ಕಾರಣ ಕೆಲವರಲ್ಲಿ ಚರ್ಮದ ಅಸಾಮಾನ್ಯ ತುರಿಕೆ ಹಾಗೂ ಅಲರ್ಜಿಗಳನ್ನು ಪ್ರಚೋದಿಸುತ್ತದೆ.

ದಂತಗಳ ಆರೋಗ್ಯ
ನಿಮ್ಮ ಕಳಪೆ ಹಲ್ಲಿನ ಆರೋಗ್ಯಕ್ಕೆ ಇದು ಪ್ರಮುಖ ಕಾರಣವಲ್ಲದಿದ್ದರೂ, ಅನಾನಸ್‌ನ ಮಿತಿಮೀರಿದ ಬಳಕೆಯಿಂದ ಹಲ್ಲುಗಳ ಮೇಲೆ ಕಲೆಗಳಾಗಬಹುದು. ಈ ಹಣ್ಣು ದಂತಕವಚದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಹಲ್ಲು ಕುಳಿಗಳು ಮತ್ತು ಪರಿದಂತದ ರೀತಿಯ ಬಾಯಿಯ ಸಮಸ್ಯೆಗಳನ್ನು ಹೊಂದಿರುವವರಿಗೆ ಅನಾನಸ್ ಅನ್ನು ತಿನ್ನಲು ನೀಡದಿರುವುದೇ ಲೇಸು.
ಈ ಹಣ್ಣು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದಾಗ್ಯೂ, ಹೆಚ್ಚಾದರೆ ಅಮೃತವೂ ವಿಷವಾಗಬಲ್ಲದು. ಆದ್ದರಿಂದ ಅನಾನಸ್‌ನ ಅಮೃತಮಯ ಫಲಿತಾಂಶವನ್ನು ಪಡೆಯಬೇಕಾದರೆ, ಚನ್ನಾಗಿ ಮಾಗಿದ ಹಣ್ಣನ್ನು ಮಿತವಾಗಿ - ಹಿತವಾಗಿ ಸೇವಿಸಿ.

ಬಾಯಲ್ಲಿ ಒಗರುತನದ ಅನುಭವ
ಅನಾನಸ್‌ನಲ್ಲಿ ಹೆಚ್ಚಿನ ಪ್ರಮಾಣದ ಆಮ್ಲತೆ ಇರುವದರಿಂದ ಇದು ಬಾಯಿ ಮತ್ತು ಗಂಟಲಿನಲ್ಲಿ ಜೊಲ್ಲುರಸದ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಅನಾನಸ್ ತಿಂದ ನಂತರ ಗಂಟಲು ಮತ್ತು ಬಾಯಿ ಒಗರಾಗುವ ಸಾಧ್ಯತೆ ಇದೆ. ಕೆಲವು ಜನರಲ್ಲಿ ಹೊಟ್ಟೆ ನೋವಿಗೂ ಕಾರಣವಾಗಬಹುದು.



Click it and Unblock the Notifications
