Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ದಿನನಿತ್ಯ ಟೊಮೇಟೊ ಸೇವಿಸಿ, ಆರೋಗ್ಯ ವೃದ್ಧಿಸಿ
ನಮ್ಮಲ್ಲಿ ಒಂದು ವಿಶಿಷ್ಟ ಗುಣವಿದೆ. ಅಂದರೆ ಸುಲಭವಾಗಿ ಲಭ್ಯವಾಗದುದಕ್ಕೆ ಹೆಚ್ಚು ಬೆಲೆ ನೀಡುವುದು ಮತ್ತು ಅದಕ್ಕೆ ಸಮನಾದ, ಸುಲಭವಾಗಿ ಲಭ್ಯವಾಗುವುದನ್ನು ಕಡೆಗಣಿಸುವುದು. ಉದಾಹರಣೆಗೆ ಹತ್ತು ಸಾವಿರ ರೂಪಾಯಿಯ ಸೀರೆಗಿಂತಲೂ ಸಾವಿರ ರೂಪಾಯಿಯ ಸೀರೆ ಚೆನ್ನಾಗಿದ್ದರೂ ಬೆಲೆ ನೋಡಿದವರು ಹತ್ತು ಸಾವಿರದ ಸೀರೆಯೇ ಚೆನ್ನಾಗಿದೆ ಎನ್ನುತ್ತಾರೆ.
ಅಂತೆಯೇ ನಮ್ಮೆಲ್ಲರ ಅಡುಗೆಮನೆಯ ನಿತ್ಯಸಂಗಾತಿ ಟೊಮೇಟೊ'ಹಣ್ಣು' ಸಹಾ. ಹೌದು, ಟೊಮೇಟೊ ಸಸ್ಯಶಾಸ್ತ್ರದ ಪ್ರಕಾರ ಒಂದು ಹಣ್ಣು, ಆದರೆ ನಾವು ಅದನ್ನು ಒಂದು ತರಕಾರಿಯಂತೆ ಬಳಸುತ್ತಿದ್ದೇವಷ್ಟೇ. ಪ್ರತಿದಿನ ನಮ್ಮ ದೇಹಕ್ಕೆ ವಿಟಮಿನ್ ಎ ವಿಟಮಿನ್ ಅವಶ್ಯಕತೆ ಸುಮಾರು ಒಂಭೈನೂರು ಮೈಕ್ರೋಗ್ರಾಂ ಇದೆ. (ಹದಿಹರೆಯದಲ್ಲಿ ಕೊಂಚ ಹೆಚ್ಚು). ಟೊಮೇಟೊ ಆರೋಗ್ಯಕಾರಿ ತರಕಾರಿ ಹೇಗೆ?
ಮಧುಮೇಹಿಗಳು ಸಕ್ಕರೆ ಹೆಚ್ಚಿರುವ ಹಲವಾರು ಹಣ್ಣುಗಳನ್ನು ತಿನ್ನುವಂತಿಲ್ಲ. ಆದರೆ ಸಕ್ಕರೆ ರಕ್ತದಲ್ಲಿ ಸೇರುವ ಪ್ರಮಾಣ ಕಡಿಮೆ ಇರುವ ಕಾರಣ ಮಧುಮೇಹಿಗಳಿಗೆ ಉತ್ತಮವಾದ ಆಹಾರವಾಗಿದೆ. ಅಲ್ಲದೇ ನಿಯಮಿತ ಸೇವನೆಯಿಂದ ಮಧುಮೇಹ ಬರುವ ಸಾಧ್ಯತೆಯನ್ನೂ ದೂರಗೊಳಿಸುತ್ತದೆ. ಬರೀ 15 ನಿಮಿಷದಲ್ಲಿ ಟೊಮೇಟೊ ಚಟ್ನಿ ರೆಡಿ!
ಟೊಮೇಟೊ ಹಣ್ಣನ್ನು ನಿಯಮಿತ ಸೇವನೆಯಿಂದ ದೇಹದ ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳ್ಳುವುದು ಹಾಗೂ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ದೇಹದೊಳಗೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ, ತನ್ಮೂಲಕ ಹೃದಯ ಸಂಬಂಧಿ ಕಾಯಿಲೆ ಮತ್ತು ಹೃದಯಾಘಾತದ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. ಇನ್ನೂ ಯಾವ ಯಾವ ರೀತಿಯಲ್ಲಿ ನಮ್ಮೆಲ್ಲರ ಮೆಚ್ಚಿನ ಟೊಮೇಟೊ ದೇಹಕ್ಕೂ ಮೆಚ್ಚಿನದ್ದಾಗಿದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ತೋರಿಸುತ್ತದೆ....

ಅಸ್ತಮಾ ನಿಯಂತ್ರಿಸಲು ನೆರವಾಗುತ್ತದೆ
ಟೊಮೇಟೊದಲ್ಲಿರುವ ಲೈಕೋಪಿನ್ ಮತ್ತು ವಿಟಮಿನ್ ಎ ಶ್ವಾಸನಾಳಗಳನ್ನು ಹಿರಿದುಗೊಳಿಸಿ, ಸೆಡೆತಗೊಂಡಿದ್ದವನ್ನು ಸಡಿಲಗೊಳಿಸುವ ಮೂಲಕ ಶ್ವಾಸ ನಿರಾಳವಾಗಲು ನೆರವಾಗುತ್ತದೆ. ಇದಕ್ಕಾಗಿ ನಿತ್ಯವೂ ಸಾಕಷ್ಟು ಪ್ರಮಾಣದಲ್ಲಿ ಟೊಮೇಟೊ ಸೇವಿಸುವುದು ಅಗತ್ಯ.

ಮೂಳೆಗಳನ್ನು ದೃಢಗೊಳಿಸುತ್ತದೆ
ಕ್ಯಾಲ್ಸಿಯಂ ಕೇವಲ ಹಾಲಿನಲ್ಲಿದೆ ಎಂದು ತಿಳಿದವರಿಗೆ ಆಶ್ಚರ್ಯ ಕಾದಿದೆ. ಈ ಟೊಮೇಟೊದಲ್ಲಿಯೂ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ. ನಮಗೆ ಪ್ರತಿದಿನ 1,300ಮಿಲಿಗ್ರಾಂ ನಷ್ಟು ಕ್ಯಾಲ್ಸಿಯಂ ಬೇಕು. ಟೊಮೇಟೊದಲ್ಲಿ ನೂರು ಗ್ರಾಂ ನಲ್ಲಿ ಹತ್ತು ಮಿಲಿಗ್ರಾಂ ಕ್ಯಾಲ್ಸಿಯಂ ಇದೆ. ಆದರೆ ಯಾವುದೇ ಕ್ಯಾಲ್ಸಿಯಂ ನೇರವಾಗಿ ಮೂಳೆಗಳು ಹೀರಲು ಸಾಧ್ಯವಿಲ್ಲ. ಜೊತೆಗೆ ವಿಟಮಿನ್ ಡಿ ಸಹಾ ಬೇಕು.

ಮೂಳೆಗಳನ್ನು ದೃಢಗೊಳಿಸುತ್ತದೆ
ದಿನದ ಅವಶ್ಯಕತೆಯನ್ನು ಟೊಮೇಟೊ ಪೂರೈಸದಿದ್ದರೂ ಇದರಲ್ಲಿರುವ ಲೈಕೋಪಿನ್ ಕ್ಯಾಲ್ಸಿಯಂ ಪ್ರಮಾಣವನ್ನು ಗಾಢಗೊಳಿಸಲು ನೆರವಾಗುತ್ತದೆ. ಆದ್ದರಿಂದ ನಿತ್ಯ ಟೊಮೇಟೊ ಸೇವನೆ ಮೂಳೆಗಳನ್ನು ಗಟ್ಟಿಗೊಳಿಸುತ್ತಾ ಮೂಳೆಗಳಲ್ಲಿ ಗಾಳಿಗುಳ್ಳೆ ತುಂಬುವ ( osteoporosis) ಸ್ಥಿತಿಯಿಂದ ರಕ್ಷಿಸುತ್ತದೆ.

ಕ್ಯಾನ್ಸರ್ ಬರುವುದರಿಂದ ತಪ್ಪಿಸುತ್ತದೆ
ಟೊಮೇಟೊದಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಕ್ಯಾನ್ಸರ್ ಉಂಟು ಮಾಡಬಲ್ಲ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿವಾರಿಸಿ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆಮಾಡುತ್ತದೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನಮ್ಮ ಪ್ರತಿ ಜೀವಕೋಶದ ಕೇಂದ್ರವಾದ ಡಿಎನ್ಎ ಗಳನ್ನೂ ಸವೆತದಿಂದ ರಕ್ಷಿಸುತ್ತದೆ.

ಸಂಧಿವಾತ ಮತ್ತು ಉರಿಯೂತಗಳನ್ನು ಕಡಿಮೆಗೊಳಿಸುತ್ತದೆ
ಟೊಮೇಟೊ ಹಣ್ಣಿನ ತಿರುಳನ್ನು ಗೊಟಾಯಿಸಿ ತಯಾರಿಸಿದ ಜ್ಯೂಸ್ ಕುಡಿಯುವುದರಿಂದ ಹೊಟ್ಟೆ ಮತ್ತು ಎದೆಯುರಿ ಕಡಿಮೆಯಾಗುತ್ತದೆ. ಇದರಲ್ಲಿರುವ TNF-alpha ಎಂಬ ಪೋಷಕಾಂಶಗಳು ಆಮ್ಲೀಯತೆಯಿಂದ ಉಂಟಾದ ಅನಿಲಗಳನ್ನು ಶಮನಗೊಳಿಸಿ ಉರಿಯೂತ ಮತ್ತು ಸಂಧಿವಾತದಿಂದ ರಕ್ಷಣೆ ನೀಡುತ್ತವೆ.

ಸಂಧಿವಾತ ಮತ್ತು ಉರಿಯೂತಗಳನ್ನು ಕಡಿಮೆಗೊಳಿಸುತ್ತದೆ
ಆದ್ದರಿಂದ ಮೈಯಲ್ಲಿ ಉರಿ ಅಥವಾ ನೋವಿದ್ದರೆ ಸಾಕಷ್ಟು ಪ್ರಮಾಣದಲ್ಲಿ ಟೊಮೇಟೊ ಸಾಲಾಡ್ ರೂಪದಲ್ಲಿ ಅಥವಾ ಜ್ಯೂಸ್ ಮಾಡಿಕೊಂಡು ಕುಡಿಯಿರಿ.

ಆರೋಗ್ಯಕರ ಕಣ್ಣು, ಚರ್ಮ ಮತ್ತು ಮೂಳೆಗಳನ್ನು ನೀಡುತ್ತದೆ
ಟೊಮೇಟೊದಲ್ಲಿ ಹೇರಳವಾಗಿರುವ ವಿಟಮಿನ್ ಎ ವಿಷೇಶವಾಗಿ ಕಣ್ಣು, ಚರ್ಮ ಮತ್ತು ಮೂಳೆಗಳಿಗೆ ಉತ್ತಮ ಪೋಷಣೆ ನೀಡುತ್ತದೆ. ಇದನ್ನು ಪಡೆಯಲು ಕನಿಷ್ಟ ದಿನಕ್ಕೊಂದು ಕಪ್ ಚಿಕ್ಕದಾಗಿ ತುಂಡರಿಸಿದರ ಟೊಮೇಟೊ ಹಣ್ಣನ್ನು ಸೇವಿಸುವುದು ಅಗತ್ಯವಾಗಿದೆ.

ಮಧುಮೇಹಿಗಳಿಗೆ ಅಗತ್ಯವಾದ ಹಣ್ಣು ಆಗಿದೆ
ಮಧುಮೇಹಿಗಳು ತಮ್ಮ ರಕ್ತದಲ್ಲಿ ಸೇರಿದ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆಹಾರದೊಂದಿಗೆ ಕೆಲವು ಟೊಮೇಟೊಹಣ್ಣುಗಳನ್ನೂ ಸೇವಿಸುವುದರಿಂದ ಈ ಸಕ್ಕರೆಯ ಮಟ್ಟ ಧಿಡೀರನೇ ಏರುವುದನ್ನು ತಪ್ಪಿಸಿ ನಿಧಾನಕ್ಕೆ ಬಿಡುಗಡೆ ಮಾಡುತ್ತದೆ.

ಮಧುಮೇಹಿಗಳಿಗೆ ಅಗತ್ಯವಾದ ಹಣ್ಣು ಆಗಿದೆ
ಈ ಗುಣ ಮಧುಮೇಹಿಗಳಿಗೆ ವರದಾನವಾಗಿದೆ. ಆದ್ದರಿಂದ ದಿನದ ಒಂದೆರಡು ಹೊತ್ತಾದರೂ ಸಾಕಷ್ಟು ಪ್ರಮಾಣದಲ್ಲಿ ಟೊಮೇಟೊಸೇವಿಸುವುದು ಮಧುಮೇಹಿಗಳಿಗೆ ಶ್ರೇಯಸ್ಕರವಾಗಿದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಟೊಮೇಟೊದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇರುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಅಂತೆಯೇ ಯಾವುದಾದರೂ ರೋಗ ಬಾಧಿಸಿದ್ದು ಚೇತರಿಸಿಕೊಳ್ಳುತ್ತಿದ್ದರೆ ಟೊಮೇಟೊ ಈ ಗತಿಯನ್ನು ಹೆಚ್ಚಿಸುತ್ತದೆ. ಗಾಯಗಳು ಬೇಗನೇ ಮಾಗಲು ಸಹಾ ನೆರವಾಗುತ್ತದೆ.

ಚರ್ಮ ಶೀಘ್ರವೇ ಬೆಳವಣಿಗೆ ಪಡೆಯುತ್ತದೆ
ಟೊಮೇಟೊದಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೇ ಚರ್ಮ ಘಾಸಿಗೊಂಡಿದ್ದರೆ ಆ ಸ್ಥಳದಲ್ಲಿ ಕೊಲಾಜೆನ್ ಎಂಬ ಅಂಗಾಂಶವನ್ನು ಉತ್ಪತ್ತಿಸಲು ನೆರವಾಗುವ ಮೂಲಕ ಹೊಸ ಚರ್ಮ ಬೆಳೆಯಲು ಸಾಧ್ಯವಾಗುತ್ತದೆ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ
ರಕ್ತ ದೇಹದಿಂದ ಹೊರಹರಿಯುವಾಗ ಶೀಘ್ರವೇ ಹೆಪ್ಪುಗಟ್ಟಬೇಕು. ಆದರೆ ದೇಹದೊಳಗಿನ ರಕ್ತಸ್ರಾವವಾದರೆ ಹೆಪ್ಪುಗಟ್ಟಬಾರದು ಅಥವಾ ತುಂಬಾ ತಡವಾಗಿ ಹೆಪ್ಪುಗಟ್ಟಬೇಕು. ಆಂತರಿಕ ಸ್ರಾವರಿಂದ ರಕ್ತ ಹೆಪ್ಪುಗಟ್ಟಿದರೆ ಹೃದಯದ ಮೇಲೆ ಅತೀವ ಒತ್ತಡ ಬಿದ್ದು ಹೃದಯ ಸ್ತಂಭನವೂ ಎದುರಾಗಬಹುದು. ಮುಂದೆ ಓದಿ

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ
ಟೊಮೇಟೊ ದಲ್ಲಿರುವ ಪೋಷಕಾಂಶಗಳು ಆಂತರಿಕ ಸ್ರಾವದ ಮೂಲಕ ರಕ್ತ ಹೆಪ್ಪುಗಟ್ಟುವುದನ್ನು ತುಂಬಾ ನಿಧಾನಗೊಳಿಸುತ್ತದೆ.

ಪಾರ್ಶ್ವವಾಯು ಬಡಿಯುವ ಸಂಭವವನ್ನು ಕಡಿಮೆಗೊಳಿಸುತ್ತದೆ
ಪಾರ್ಶ್ವವಾಯುವಿಗೆ ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾಗುವುದು ಅಥವಾ ನಿಂತುಹೋಗುವುದೇ ಕಾರಣವಾಗಿದೆ. ಟೊಮೇಟೊ ಹಣ್ಣಿನ ನಿತ್ಯದ ಸೇವನೆಯಿಂದ ಮೆದುಳಿಗೆ ಹರಿಯುವ ರಕ್ತದ ಪ್ರಮಾಣದಲ್ಲಿ ಹೆಚ್ಚಳವಾಗುವ ಮೂಲಕ ಪಾರ್ಶ್ವವಾಯು ಬಡಿಯುವ ಸಂಭವವನ್ನು ಕಡಿಮೆಗೊಳಿಸುತ್ತದೆ. ಮುಂಧಿನ ಸ್ಲೈಡ್ ಕ್ಲಿಕ್ ಮಾಡಿ

ಪಾರ್ಶ್ವವಾಯು ಬಡಿಯುವ ಸಂಭವವನ್ನು ಕಡಿಮೆಗೊಳಿಸುತ್ತದೆ
ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಪಾರ್ಶ್ವವಾಯುವಿನ ತೊಂದರೆ ಇದ್ದರೆ ಟೊಮೇಟೊವನ್ನು ನಿತ್ಯವೂ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಈ ಸಾಧ್ಯತೆಗಳನ್ನು ದೂರಗೊಳಿಸಬಹುದು.



Click it and Unblock the Notifications









