Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅಚ್ಚುಮೆಚ್ಚಿನ ಮ್ಯಾಗಿಯ ಹಿಂದಿರುವ ಕರಾಳ ಸತ್ಯ
ಬರೇ ಎರಡು ನಿಮಿಷದಲ್ಲಿ ಜಾದೂ ಮಾಡುತ್ತಿದ್ದ ಮ್ಯಾಗಿಗೆ ಇದೀಗ ಶ್ರದ್ಧಾಂಜಲಿ ಕೋರುವ ಸಮಯ ಒದಗಿ ಬಂದಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮನೆಮಾತಾಗಿದ್ದ ಮ್ಯಾಗಿ ತೆರೆಮರೆಗೆ ಸರಿಯಲು ಸಿದ್ಧವಾಗಿದೆ ಎಂದೇ ಹೇಳಬಹುದು. ವಿಷಕಾರಿ ಅಂಶಗಳು ಪತ್ತೆಯಾಗಿರುವ ಹಿನ್ನಲೆಯಲ್ಲಿ ಮ್ಯಾಗಿ ನಿಷೇಧಕ್ಕೆ ಇಂದು ಕಟ್ಟಾಜ್ಞೆಯನ್ನು ಹೊರಡಿಸಿದ್ದು ಜನತೆಯಲ್ಲಿ ವಿಷಾದವನ್ನುಂಟು ಮಾಡಿದೆ.
ಒತ್ತಡದ ಜೀವನ ಶೈಲಿ, ಕಚೇರಿಗೆ ಹೋಗುವ ಗಡಿಬಿಡಿ, ಮಕ್ಕಳನ್ನು ಶಾಲೆಗೆ ಸಿದ್ಧಗೊಳಿಸುವ ಧಾವಂತದಲ್ಲಿ ಮೆಚ್ಚಿನ ಸಂಗಾತಿಯಾಗಿ ಮ್ಯಾಗಿಯೇ ಸಾಥ್ ಕೊಡುತ್ತಿತ್ತು. ಇನ್ನು ಮಕ್ಕಳಂತೂ ಬೇರೆಲ್ಲಾ ತಿಂಡಿಗಿಂತಲೂ ಮ್ಯಾಗಿಯನ್ನೇ ಬಯಸಿ ಬಯಸಿ ಸೇವಿಸುತ್ತಿದ್ದರು ಇದರಿಂದ ಬೆಳಗ್ಗಿನ ತಿಂಡಿಯಿಂದ ಹಿಡಿದು ರಾತ್ರಿಯೂಟದವರೆಗೂ ಮ್ಯಾಗಿಯನ್ನೇ ಪುಟಾಣಿಗಳು ಬಯಸುತ್ತಿದ್ದರು. ಆದರೆ ಮ್ಯಾಗಿಗೆ ಹಠಾತ್ತನೇ ಬಂದೊದಗಿರುವ ಸಂಕಷ್ಟ ಮ್ಯಾಗಿಗೆ ಮಾತ್ರವಲ್ಲದೆ ಅದರ ಉಪಉತ್ಪನ್ನಗಳಿಗೂ ಸಂಚಕಾರವನ್ನುಂಟು ಮಾಡಿದೆ.
ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್‌ನಲ್ಲಿ ವಿಷಕಾರಿ ಅಂಶಪತ್ತೆಯಾದ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಚರ್ಚೆಗಳು ನಡೆಯುತ್ತಿದೆ ಅಲ್ಲದೆ ಇದನ್ನು ನಿಷೇಧಿಸಬೇಕು ಎನ್ನುವ ಕೂಗು ಕೂಡ ಕೇಳಿಬರುತ್ತಿದೆ. ಮ್ಯಾಗಿಯಲ್ಲಿ ಮೋನೊಸೋಡಿಯಂ ಗ್ಲುಟಮೇಟ್ ಮತ್ತು ವಿಷಕಾರಿ ಸೀಸದ ಅಂಶ ಕೂಡ ನಿಗದಿತ ಮಟ್ಟಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇರುವುದನ್ನು ಪತ್ತೆ ಹಚ್ಚಿದ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿ ಮ್ಯಾಗಿಗೆ ತಿಲಾಂಜಲಿ ಇಡುವುದರ ಜೊತೆಗೆ ಇದರ ಪರವಾಗಿ ಪ್ರಚಾರ ನಡೆಸಿದ ಚಲನ ಚಿತ್ರ ತಾರೆಯರಿಗೂ ಕೂಡ ನೋಟಿಸ್ ಜಾರಿ ಮಾಡಿತ್ತು. ಬನ್ನಿ ಮ್ಯಾಗಿ ಹೇಗೆ ವಿಷಕಾರಿ ಎಂಬುದನ್ನು ಕೆಳಗಿನ ಸ್ಲೈಡರ್ಗಳಲ್ಲಿರುವ ಮಾಹಿತಿಯಿಂದ ತಿಳಿದುಕೊಳ್ಳಿ...

ಅಧಿಕ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಸ್
ಕಾರ್ಬೋಹೈಡ್ರೇಟ್ ಅಧಿಕವಾಗಿರುವ ಮೈದಾವನ್ನು ಬಳಸಿ ಮ್ಯಾಗಿಯನ್ನು ಮಾಡಲಾಗುತ್ತದೆ. ಜೊತೆಗೆ ಎಲ್ಲಾ ರೀತಿಯ ಮ್ಯಾಗಿಯಲ್ಲೂ ಕೊಬ್ಬಿನ ಅಂಶ ಅಧಿಕವಾಗಿರುತ್ತದೆ. ಮ್ಯಾಗಿ ಅಟ್ಟಾ ನೂಡಲ್ಸ್ 84.2 % ರಷ್ಟು ಹಿಟ್ಟು, ಮ್ಯಾಗಿ ಓಟ್ಸ್ ನೂಡಲ್ಸ್ 78.4 % ಹಿಟ್ಟು ಅದರಲ್ಲಿ ಶೇಖಡ 52 ರಷ್ಟು ಓಟ್ಸ್ ಹೀಗೆ ಬೇರೆಬೇರೆ ವಿಧದ ಮ್ಯಾಗಿಯಲ್ಲಿ ಇದೇ ಪ್ರಮಾಣದ ಕೊಬ್ಬಿನಂಶವಿರುತ್ತದೆ.

ಕಡಿಮೆ ಪೋಷಕಾಂಶ, ಪ್ರೋಟೀನ್ ಮತ್ತು ಫೈಬರ್
ಮ್ಯಾಗಿಯಲ್ಲಿ ಶುಷ್ಕ ರೀತಿಯಲ್ಲಿರುವ ತರಕಾರಿಗಳು ಆರೋಗ್ಯಕರವಲ್ಲ. ಮ್ಯಾಗಿಯಲ್ಲಿ ಪ್ರೋಟೀನ್, ನಾರಿನಂಶ ಮತ್ತು ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿರುತ್ತವೆ. ಇದರ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ಮ್ಯಾಗಿ ಪ್ಯಾಕಿನ ಹಿಂಬದಿಯಲ್ಲಿ ನೀಡಿರುವ ಪ್ರಮಾಣಗಳ ಮಾಹಿತಿ ನೋಡಿ. ಆದ್ದರಿಂದ ಮ್ಯಾಗಿಯನ್ನು ಬಿಟ್ಟು ಬೇರೆ ಆರೋಗ್ಯಕರ ಸ್ನ್ಯಾಕ್ಸ್ ತಿನ್ನುವುದನ್ನು ರೂಡಿಸಿಕೊಳ್ಳುವುದು ಸೂಕ್ತ.

ಅಧಿಕ ಸೋಡಿಯಂ
ಒಂದು ಬೌಲ್ ಮ್ಯಾಗಿ ಸುಮಾರು 1090 ಮಿಲಿ ಗ್ರಾಂನಷ್ಟು ಸೋಡಿಯಂ ಹೊಂದಿರುತ್ತದೆ. ಅಂದರೆ ದಿನದಲ್ಲಿ ನಮಗೆ ಬೇಕಾದ ಶೇಖಡಾ 50 ರಷ್ಟು ಸೋಡಿಯಂ ಇದರಲ್ಲಿರುತ್ತದೆ ಹಾಗಾಗಿ ಉಳಿದ ಪದಾರ್ಥಗಳು, ಸ್ನ್ಯಾಕ್ಸ್ ಇತರ ಎಲ್ಲಾ ತಿಂಡಿಗಳನ್ನು ಇನ್ನು ಕೇವಲ ಅರ್ಧ ಚಮಚ ಉಪ್ಪಿನಲ್ಲಿ ಮಾಡಿ ಮುಗಿಸಬೇಕು. ಅಧಿಕ ರಕ್ತದೊತ್ತಡ ಮತ್ತು ಹೃದಯ ತೊಂದರೆಗಳಿದ್ದವರು ಇದನ್ನು ತಿನ್ನುವುದನ್ನು ತಪ್ಪಿಸಬೇಕು. ಮ್ಯಾಗಿ ಬಗ್ಗೆ ತಜ್ಞರು ನೀಡುವ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಜೀರ್ಣಿಸಿಕೊಳ್ಳುವುದು ಸುಲಭವಲ್ಲ
ಮ್ಯಾಗಿಯಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುವುದರಿಂದ ಸುಲಭವಾಗಿ ಜೀರ್ಣಿಸಿಕೊಳ್ಳಲಾಗುವುದಿಲ್ಲ. ನಿಮಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರೆ ಇದಕ್ಕೆ ಕಾರಣ ಮ್ಯಾಗಿ ಸೇವನೆಯಾಗಿರಬಹುದು.



Click it and Unblock the Notifications
