For Quick Alerts
ALLOW NOTIFICATIONS  
For Daily Alerts

ಲಿಂಬೆ ಹಣ್ಣಿನ ಸಿಪ್ಪೆ: ಅದೇನು ಮಾಯೆ, ಅದೇನು ಜಾದೂ!

By Lekhaka
|

ಇತ್ತೀಚಿನ ದಿನಗಳಲ್ಲಿ 40-45 ದಾಟಿದವರಲ್ಲಿ ಸಾಮಾನ್ಯವಾಗಿ ಕೇಳಿಬರುವ ಸಮಸ್ಯೆಯೆಂದರೆ ಕೀಲು ನೋವು. ಈ ಸಮಸ್ಯೆಯಿಂದ ಬೇಸತ್ತು ಹೋಗಿದ್ದೇನೆ. ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಕೀಲು ನೋವಿರುವ ಪ್ರತಿಯೊಬ್ಬರ ಅಳಲು. ಕೀಲು ನೋವಿನ ಈ ಸಮಸ್ಯೆಯನ್ನು ಸಂಧಿವಾತವೆಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಕೀಲುಗಳಲ್ಲಿ ಭಾರೀ ನೋವು ಮತ್ತು ಉರಿಯೂತ ಅನುಭವಿಸಬೇಕಾಗುತ್ತದೆ.

ಕೀಲುಗಳ ಮಧ್ಯೆ ಉಂಟಾಗುವ ಘರ್ಷಣೆಯಿಂದ ಈ ರೀತಿಯಾಗುವುದರಿಂದ ಮೃದ್ವಸ್ಥಿಗೆ ಹಾನಿಯಾಗಬಹುದು. ಸಂಧಿಗಳು ಮತ್ತು ಅಂಗಾಂಶಗಳಲ್ಲಿ ಯೂರಿಕ್ ಆ್ಯಸಿಡ್ ಶೇಖರಣೆಯಾಗಿ ಅಲ್ಲಿ ಕೀಲು ನೋವು ಉಂಟಾಗಬಹುದು. ಕೀಲುಗಳಿಗೆ ಆಗುವ ಗಾಯ, ಉಳುಕು ಮತ್ತು ಒತ್ತಡದಿಂದಾಗಿ ಸಂಧಿವಾತ ಕಾಣಿಸಿಕೊಳ್ಳಬಹುದು. ಎಲುಬುಗಳನ್ನು ಜೋಡಿಸುವ ಕೆಲಸ ಮಾಡುವ ಕೀಲುಗಳು ನಮ್ಮ ಚಲನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಲಿಂಬೆಯುಕ್ತ ನೀರಿನ ಅದ್ಭುತ ಆರೋಗ್ಯಕಾರಿ ಪ್ರಯೋಜನಗಳು

ಸಂಧಿವಾತಕ್ಕೆ ಮದ್ದು ತೆಗೆದುಕೊಂಡು ಗುಣವಾಗದೆ ರೋಸಿ ಹೋಗಿದ್ದೀರಾ? ನಿಮಗೊಂದು ಪರಿಹಾರ ಇಲ್ಲಿದೆ. ಲಿಂಬೆ ಹಣ್ಣಿನ ಸಿಪ್ಪೆಯು ಸಂಧಿವಾತಕ್ಕೆ ಒಳ್ಳೆಯ ಮದ್ದು. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲ ಎನ್ನುವುದು ನಿಮಗೆ ತಿಳಿದಿದೆಯಾ? ಲಿಂಬೆಯ ಸಿಪ್ಪೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ಪೆಕ್ಟಿನ್, ನಾರಿನಾಂಶ, ಖನಿಜಾಂಶಗಳಿಂದ ಸಮೃದ್ಧವಾಗಿದೆ.

ಲಿಂಬೆ ಹಣ್ಣಿನಲ್ಲಿರುವ ಈ ಎಲ್ಲಾ ಅಂಶಗಳು ದೇಹವನ್ನು ಸರಿಪಡಿಸಿ ಗುಣಮುಖವಾಗಿಸುತ್ತದೆ. ಲಿಂಬೆಯ ಸಿಪ್ಪೆಯನ್ನು ತಿನ್ನಬಹುದು. ಆದರೆ ಸಂಧಿವಾತಕ್ಕೆ ಇದನ್ನು ನೀವು ಹಚ್ಚಿಕೊಳ್ಳಬೇಕಾಗುತ್ತದೆ. ಈ ಲೇಖನದಲ್ಲಿ ಲಿಂಬೆ ಹಣ್ಣಿನ ಸಿಪ್ಪೆಯಿಂದ ಸಂಧಿವಾತಕ್ಕೆ ಯಾವ ರೀತಿಯಿಂದ ಮದ್ದು ಮಾಡಬಹುದು ಮತ್ತು ಲಿಂಬೆ ಹಣ್ಣಿನ ಸಿಪ್ಪೆಯಿಂದ ಆಗುವ ಇತರ ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳುವ...

ಸಂಧಿವಾತಕ್ಕೆ ಲಿಂಬೆಯ ಲಾಭಗಳು

ಸಂಧಿವಾತಕ್ಕೆ ಲಿಂಬೆಯ ಲಾಭಗಳು

ಲಿಂಬೆ ಹಣ್ಣು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ ಮತ್ತು ದಿನದಲ್ಲಿ ಬೇಕಾಗಿರುವ ಶೇ.30ರಷ್ಟು ವಿಟಮಿನ್ ಸಿ ಯನ್ನು ಅದು ನಮ್ಮ ದೇಹಕ್ಕೆ ಒದಗಿಸುತ್ತದೆ. ಮುಂದೆ ಓದಿ

ಸಂಧಿವಾತಕ್ಕೆ ಲಿಂಬೆಯ ಲಾಭಗಳು

ಸಂಧಿವಾತಕ್ಕೆ ಲಿಂಬೆಯ ಲಾಭಗಳು

ವಿಟಮಿನ್ ಸಿ ಯು ದೇಹದಲ್ಲಿ ಶಮನಕವಾಗಿ ಕೆಲಸ ಮಾಡುತ್ತದೆ ಮತ್ತು ಪ್ರೋಟೀನ್ ರಚನೆಗೆ ನೆರವಾಗುತ್ತದೆ. ಅಸ್ಥಿರಜ್ಜು, ಸ್ನಾಯು ಮತ್ತು ಚರ್ಮದ ರಚನೆಗೆ ಪ್ರೋಟೀನ್ ತುಂಬಾ ಮುಖ್ಯ.

ಲಿಂಬೆ ಹಣ್ಣಿನಲ್ಲಿರುವ ಕ್ಯಾಲ್ಸಿಯಂ

ಲಿಂಬೆ ಹಣ್ಣಿನಲ್ಲಿರುವ ಕ್ಯಾಲ್ಸಿಯಂ

ನಿಮ್ಮ ಎಲುಬುಗಳಿಗೆ ಬೇಕಾಗಿರುವ ಮತ್ತೊಂದು ಪ್ರಮುಖ ಖನಿಜಾಂಶವೆಂದರೆ ಅದು ಕ್ಯಾಲ್ಸಿಯಂ. ಲಿಂಬೆಯ ಸಿಪ್ಪೆಯಲ್ಲಿ ಕ್ಯಾಲ್ಸಿಯಂ ಕೂಡ ಇರುವುದರಿಂದ ಅದು ಎಲುಬಿನ ಆರೋಗ್ಯವನ್ನು ಸುಧಾರಿಸುತ್ತದೆ.

ಸಂಧಿವಾತಕ್ಕೆ ಲಿಂಬೆ ಹಣ್ಣಿನ ಸಿಪ್ಪೆಯಿಂದ ಮದ್ದು ತಯಾರಿಸುವುದು ಹೇಗೆ?

ಸಂಧಿವಾತಕ್ಕೆ ಲಿಂಬೆ ಹಣ್ಣಿನ ಸಿಪ್ಪೆಯಿಂದ ಮದ್ದು ತಯಾರಿಸುವುದು ಹೇಗೆ?

ಈ ಮದ್ದನ್ನು ತಯಾರಿಸಲು ನಿಮಗೆ ಐದು ಲಿಂಬೆ ಹಣ್ಣು, ಆಲಿವ್ ಎಣ್ಣೆ, ಒಂದು ಪ್ಲಾಸ್ಟಿಕ್ ಚೀಲ, ನವಿರುಜಾಲರಿ, ಉಣ್ಣೆಯ ಶಾಲು ಮತ್ತು ಒಂದು ಜಾರ್ ಬೇಕು. ಲಿಂಬೆಯ ಸಿಪ್ಪೆ ತೆಗೆಯಿರಿ ಮತ್ತು ಅದನ್ನು ಜಾರ್ ಗೆ ಹಾಕಿ. ಅದಕ್ಕೆ ಆಲಿವ್ ಎಣ್ಣೆಯನ್ನು ಹಾಕಿ. ಅದರಲ್ಲಿ ಸಿಪ್ಪೆಗಳು ಮುಳುಗಲಿ. ಇದನ್ನು ಗಟ್ಟಿಯಾಗಿ ಮುಚ್ಚಿಟ್ಟು ಮೂರು ವಾರಗಳ ಕಾಲ ಹಾಗೆ ಇಡಿ. ಈ ಮದ್ದು ತಯಾರಾದ ಬಳಿಕ ಅದರ ಸ್ವಲ್ಪ ಭಾಗವನ್ನು ನವಿರುಜಾಲರಿಗೆ ಹಾಕಿ ಮತ್ತು ನೋವಿರುವ ಸಂಧಿಗೆ ಅದನ್ನು ಇಡಿ. ಮುಂದೆ ಓದಿ

ಸಂಧಿವಾತಕ್ಕೆ ಲಿಂಬೆ ಹಣ್ಣಿನ ಸಿಪ್ಪೆಯಿಂದ ಮದ್ದು ತಯಾರಿಸುವುದು ಹೇಗೆ?

ಸಂಧಿವಾತಕ್ಕೆ ಲಿಂಬೆ ಹಣ್ಣಿನ ಸಿಪ್ಪೆಯಿಂದ ಮದ್ದು ತಯಾರಿಸುವುದು ಹೇಗೆ?

ಸಂಧಿಯನ್ನು ಪ್ಲಾಸ್ಟಿಕ್ ಚೀಲ ಮತ್ತು ಉಣ್ಣೆಯ ಶಾಲಿನಿಂದ ಮುಚ್ಚಿ. ಆಗ ಉಷ್ಣತೆ ಹೆಚ್ಚಾಗಿ ಸಂಧಿಯು ಅದರ ನೀರನ್ನು ಹೀರಿಕೊಳ್ಳುವಂತಾಗಲಿ. ರಾತ್ರಿ ಮಲಗುವ ಮೊದಲು ಇದನ್ನು ಮಾಡಿ. ಬೆಳಗ್ಗೆ ಏಳುವಾಗ ನಿಮಗೆ ಕೀಲು ನೋವಿನಿಂದ ಆರಾಮ ಸಿಕ್ಕಿದ ಅನುಭವವಾಗುತ್ತದೆ.

ಲಿಂಬೆ ಹಣ್ಣಿನ ಸಿಪ್ಪೆ ತಿನ್ನುವುದು ಹೃದಯಕ್ಕೆ ಒಳ್ಳೆಯದು

ಲಿಂಬೆ ಹಣ್ಣಿನ ಸಿಪ್ಪೆ ತಿನ್ನುವುದು ಹೃದಯಕ್ಕೆ ಒಳ್ಳೆಯದು

ಲಿಂಬೆ ಹಣ್ಣಿನ ಸಿಪ್ಪೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಲಿಂಬೆ ಸಿಪ್ಪೆಯಲ್ಲಿ ಪೊಟಾಶಿಯಂ ಅಧಿಕವಾಗಿರುವ ಕಾರಣ ಅದು ಸಾಮಾನ್ಯ ರಕ್ತದೊತ್ತಡವನ್ನು ಕಾಯ್ದುಕೊಳ್ಳುತ್ತದೆ.

ರೋಗ ಪ್ರತಿರೋಧಕ ಗುಣವನ್ನು ಹೆಚ್ಚಿಸುತ್ತದೆ

ರೋಗ ಪ್ರತಿರೋಧಕ ಗುಣವನ್ನು ಹೆಚ್ಚಿಸುತ್ತದೆ

ಲಿಂಬೆ ಸಿಪ್ಪೆಯಲ್ಲಿರುವ ವಿಟಮಿನ್ ಸಿ ನಿಮ್ಮ ದೇಹದ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಶೀತ, ಜ್ವರ ಮತ್ತು ಗಂಟಲಿನ ಸೋಂಕು ಕಾಣಿಸಿಕೊಳ್ಳುವುದಿಲ್ಲ.

ಮಲಬದ್ಧತೆ ಮತ್ತು ಗ್ಯಾಸ್ ನಿವಾರಿಸುತ್ತದೆ

ಮಲಬದ್ಧತೆ ಮತ್ತು ಗ್ಯಾಸ್ ನಿವಾರಿಸುತ್ತದೆ

ಲಿಂಬೆ ಸಿಪ್ಪೆಯಲ್ಲಿರುವ ಇದು ನಾರಿನಾಂಶವು ಕರುಳಿನ ಕ್ರಿಯೆಯು ಸರಿಯಾಗಿ ಆಗುವಂತೆ ಮಾಡಿ ದೊಡ್ಡಕರುಳನ್ನು ಸ್ವಚ್ಛಗೊಳಿಸುತ್ತದೆ. ಇದರಿಂದ ಸರಿಯಾಗಿ ಜೀರ್ಣಕ್ರಿಯೆ ನಡೆದು ಗ್ಯಾಸ್ ಸಂಗ್ರಹವಾಗುವುದು ತಪ್ಪುವುದು.

ತೂಕ ಕಳ್ಳಕೊಳ್ಳಲು

ತೂಕ ಕಳ್ಳಕೊಳ್ಳಲು

ಲಿಂಬೆ ಸಿಪ್ಪೆಯು ತೂಕ ಕಳ್ಳಕೊಳ್ಳಲು ಒಳ್ಳೆಯ ಮದ್ದು. ಇದರಲ್ಲಿರುವಂತಹ ಪೆಕ್ಟಿನ್ ಎನ್ನುವ ಅಂಶವು ಕರುಳಿನಲ್ಲಿರುವ ಸಕ್ಕರೆ ಅಂಶವನ್ನು ರಕ್ತವು ಹೀರಿಕೊಳ್ಳದಂತೆ ತಡೆಯುತ್ತದೆ. ಇದರಿಂದ ತೂಕ ಹೆಚ್ಚುವುದು ತಪ್ಪುವುದು.

ಮಧುಮೇಹ ತಡೆಯುತ್ತದೆ

ಮಧುಮೇಹ ತಡೆಯುತ್ತದೆ

ಲಿಂಬೆಯ ಸಿಪ್ಪೆಯು ಮಧುಮೇಹಿಗಳಿಗೆ ಕೂಡ ತುಂಬಾ ಒಳ್ಳೆಯದು. ಇದು ರಕ್ತ ಹೀರಿಕೊಳ್ಳುವ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಇದು ಚಯಾಪಚಾಯ ಕ್ರಿಯೆಗೂ ನೆರವಾಗುತ್ತದೆ.

ಆರೋಗ್ಯಕರ ಚರ್ಮ

ಆರೋಗ್ಯಕರ ಚರ್ಮ

ನಿಮ್ಮ ತ್ವಚೆಗೆ ಪರಿಣಾಮಕಾರಿಯಾಗಿರುವಂತಹ ಮದ್ದನ್ನು ನೀವು ಹುಡುಕುತ್ತಾ ಇದ್ದೀರಾ? ಲಿಂಬೆ ಹಣ್ಣಿನ ಸಿಪ್ಪೆಯು ಕಪ್ಪು ಕಲೆ, ನೆರಿಗೆ ಮತ್ತು ವಯಸ್ಸಾಗುವಂತೆ ಮಾಡುವ ಇತರ ಲಕ್ಷಣಗಳನ್ನು ತಡೆಯುತ್ತದೆ. ಲಿಂಬೆ ಸಿಪ್ಪೆಯನ್ನು ತಿನ್ನಬಹುದು ಅಥವಾ ತ್ವಚೆಗೆ ಹಚ್ಚಿಕೊಳ್ಳಬಹುದು.

ಹಲ್ಲು ನೋವಿಗೆ ರಾಮಬಾಣ

ಹಲ್ಲು ನೋವಿಗೆ ರಾಮಬಾಣ

ಹಲ್ಲುಗಳ ಮೇಲೆ ಲಿ೦ಬೆಯ ಸಿಪ್ಪೆಯಿಂದ ಮಸಾಜ್ ಮಾಡಿಕೊಳ್ಳುವುದರಿ೦ದ, ಒಸಡಿನ ರಕ್ತಸ್ರಾವವು ನಿಲ್ಲುತ್ತದೆ. ಮಾತ್ರವಲ್ಲ, ಲಿ೦ಬೆಯು ವಸಡುಗಳಿಗೆ ಸ೦ಬ೦ಧಿಸಿದ ವಿವಿಧ ರೋಗಗಳಿ೦ದ ಉ೦ಟಾಗಬಹುದಾದ ಉಸಿರಿನ ದುರ್ವಾಸನೆಯನ್ನು ನಿವಾರಿಸುತ್ತದೆ.

ಮೂತ್ರಪಿ೦ಡದ ಕಲ್ಲು

ಮೂತ್ರಪಿ೦ಡದ ಕಲ್ಲು

ಪಿತ್ತಕೋಶ ಹಾಗೂ ಮೂತ್ರಪಿ೦ಡದ ಕಲ್ಲುಗಳ ನಿವಾರಣೆಗಾಗಿ ಲಿ೦ಬೆಯ ರಸದಲ್ಲಿರುವ ಸಿಟ್ರಿಕ್ ಆಮ್ಲವು ಪಿತ್ತಕೋಶದ ಕಲ್ಲುಗಳು, ಕ್ಯಾಲ್ಸಿಯ೦ನ ಸ೦ಚಯನಗಳು, ಹಾಗೂ ಮೂತ್ರಪಿ೦ಡಗಳ ಹರಳುಗಳನ್ನು ಕರಗಿಸಿಬಿಡುತ್ತವೆ. ಮುಂದೆ ಓದಿ

ಮೂತ್ರಪಿ೦ಡದ ಕಲ್ಲು

ಮೂತ್ರಪಿ೦ಡದ ಕಲ್ಲು

ಆದ್ದರಿ೦ದ, ಒ೦ದು ವೇಳೆ ನೀವೇನಾದರೂ ಇ೦ತಹ ಸಮಸ್ಯೆಗಳಿ೦ದ ಬಳಲುತ್ತಿದ್ದಲ್ಲಿ, ಲಿ೦ಬೆಯ ಈ ಸರಳ ಆರೋಗ್ಯ ಸ೦ಬ೦ಧಿ ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳಿರಿ.

ಮೆದುಳಿನ ರೋಗಗಳ ಚಿಕಿತ್ಸೆಗಾಗಿ

ಮೆದುಳಿನ ರೋಗಗಳ ಚಿಕಿತ್ಸೆಗಾಗಿ

ಮೆದುಳಿನ ರೋಗಗಳ ಚಿಕಿತ್ಸೆಗಾಗಿ ಲಿ೦ಬೆಯ ಸಿಪ್ಪೆಯು phytonutrient tangeretin ಎ೦ಬ ರಾಸಾಯನಿಕವನ್ನು ಹೊ೦ದಿದ್ದು, ಇದು ಮೆದುಳಿಗೆ ಸ೦ಬ೦ಧಿಸಿದ ರೋಗಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎ೦ದು ದೃಢಪಟ್ಟಿದೆ.

ಉದರ ಸ೦ಬ೦ಧೀ ತೊ೦ದರೆಗೆ

ಉದರ ಸ೦ಬ೦ಧೀ ತೊ೦ದರೆಗೆ

ಜ೦ತು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ ಲಿ೦ಬೆ ಹಣ್ಣಿನ ಅತ್ಯುತ್ತಮವಾದ ಆರೋಗ್ಯ ಸ೦ಬ೦ಧೀ ಪ್ರಯೋಜನವೇನೆ೦ದರೆ, ಅದು ಸಣ್ಣಕರುಳುಗಳಲ್ಲಿರುವ ಜ೦ತು ಅಥವಾ ಹುಳುಗಳನ್ನು ನಿವಾರಿಸುತ್ತದೆ.

ಉದರ ಸ೦ಬ೦ಧೀ ತೊ೦ದರೆಗೆ

ಉದರ ಸ೦ಬ೦ಧೀ ತೊ೦ದರೆಗೆ

ಮಕ್ಕಳನ್ನು ಪದೇ ಪದೇ ಬಾಧಿಸುವ ಭೇದಿ ಹಾಗೂ ಇತರ ಉದರ ಸ೦ಬ೦ಧೀ ತೊ೦ದರೆಗಳನ್ನು ನಿವಾರಿಸುವ ಅತ್ಯುತ್ತಮ ಮಾರ್ಗವೆ೦ದರೆ ಅವರಿಗೆ ಲಿ೦ಬೆರಸವನ್ನು ನೀಡುವುದು.

ಅಧಿಕ ರಕ್ತದೊತ್ತಡದ ಆರೈಕೆಗಾಗಿ

ಅಧಿಕ ರಕ್ತದೊತ್ತಡದ ಆರೈಕೆಗಾಗಿ

ಲಿ೦ಬೆಯ ರಸವು ಪೊಟ್ಯಾಷಿಯ೦ ಅನ್ನು ಒಳಗೊ೦ಡಿರುವುದರಿ೦ದ, ಲಿ೦ಬೆಯ ರಸವು ಅಧಿಕ ರಕ್ತದೊತ್ತಡ, ತಲೆ ಸುತ್ತುಬರುವುದು, ಮತ್ತು ವಾಕರಿಕೆಯನ್ನು ನಿಯ೦ತ್ರಿಸುವ ಶಕ್ತಿಯನ್ನು ಹೊ೦ದಿದೆ.

ಅಧಿಕ ರಕ್ತದೊತ್ತಡದ ಆರೈಕೆಗಾಗಿ

ಅಧಿಕ ರಕ್ತದೊತ್ತಡದ ಆರೈಕೆಗಾಗಿ

ಜೊತೆಗೆ, ಲಿ೦ಬೆಯ ರಸಕ್ಕೆ ಮಾನಸಿಕ ಶಾ೦ತಿಯನ್ನು ನೀಡುವ ಸಾಮರ್ಥ್ಯವಿರುವುದರಿ೦ದ, ಅದು ಅಧಿಕ ರಕ್ತದೊತ್ತಡವನ್ನು ನಿಯ೦ತ್ರಿಸಬಲ್ಲುದಾಗಿದೆ.

ಆ೦ತರಿಕ ರಕ್ತಸ್ರಾವವನ್ನು ತಡೆಗಟ್ಟಲು

ಆ೦ತರಿಕ ರಕ್ತಸ್ರಾವವನ್ನು ತಡೆಗಟ್ಟಲು

ಲಿ೦ಬೆಹಣ್ಣಿನ ರಸದಲ್ಲಿರುವ ವಿಟಮಿನ್ ಪಿಯು ರಕ್ತನಾಳಗಳನ್ನು ಶಕ್ತಿಯುತವಾಗಿಸುತ್ತವೆ. ಲಿ೦ಬೆ ಹಣ್ಣಿನ ಈ ಸಾಮರ್ಥ್ಯದ ಕಾರಣದಿ೦ದ ಅದು ಆ೦ತರಿಕ ರಕ್ತಸ್ರಾವವನ್ನು (Internal Bleeding) ತಡೆಗಟ್ಟಲು ಸಶಕ್ತವಾಗಿದೆ.

English summary

Lemon Peel For Joint Pain And Other Health Benefits

Joint pain is usually caused by a condition known as arthritis. In this condition, there is severe pain and inflammation of joints due to friction between joint bones. This can lead to wear and tear of cartilage. Joint pain can also be caused by gout, in which there is accumulation of uric acid in the joints and tissues.
X
Desktop Bottom Promotion