Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಫ್ಯಾಮಿಲಿ ಡಾಕ್ಟರ್ ಇಲ್ವಾ? ಹಾಗಾದ್ರೆ ಇದನ್ನು ಓದಿ
ಫ್ಯಾಮಿಲಿ ಡಾಕ್ಟರ್.. ಇದು ಇತ್ತೀಚಿನ ದಿನಗಳ ಪರಿಕಲ್ಪನೆ ಅಲ್ಲ. ಹಿಂದೆಲ್ಲ ವೈದ್ಯಕೀಯ ಪದ್ದತಿ ಜಾರಿಯಲ್ಲಿದ್ದುದ್ದೇ ಹೀಗೆ. ಆದ್ರೆ ಈಗ ಅಲ್ಲಲ್ಲಿ ಆಸ್ಪತ್ರೆ,. ವೈದ್ಯರ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳವಾಗಿರೋದ್ರಿಂದ ಒಬ್ರಲ್ದೇ ಇದ್ರೆ ಇನ್ನೊಬ್ರು ವೈದ್ಯರು ಸಿಗೋದ್ರಿಂದ ಫ್ಯಾಮಿಲಿ ಡಾಕ್ಟರ್ ಪರಿಕಲ್ಪನೆ ಸ್ವಲ್ಪ ಮರೆಮಾಚಿದೆ. ಆದ್ರೆ ಫ್ಯಾಮಿಲಿ ಡಾಕ್ಟರ್ ಇದ್ರೆ ಖಂಡಿತ ಒಳ್ಳೇದು ಅನ್ನೋದ್ರಲ್ಲಿ ಅನುಮಾನವೇ ಇಲ್ಲ.
ಫ್ಯಾಮಿಲಿ ಡಾಕ್ಟರ್ ಅಂದ್ರೆ ಮತ್ತಿನ್ನೇನು ಅಲ್ಲ, ನಿಮ್ಮ ಮನೆಯಲ್ಲಿ ಯಾರಿಗಾದ್ರೂ ಏನಾದ್ರೂ ಆದ್ರೆ ಮೊದಲು ಚಿಕಿತ್ಸೆಗೆಂದು ತೆರಳುವ ಏಕೈಕ ವೈದ್ಯರು ಅವರಾಗಿರ್ತಾರೆ ಅಷ್ಟೇ. ಹೀಗೆ ನೀವು ಯಾವಾಗ್ಲೂ ಒಬ್ಬರೇ ವೈದ್ಯರಿಗೆ ನಿಮ್ಮ ಆರೋಗ್ಯ ಸಂಬಂಧಿತ ಸಮಸ್ಯೆಯನ್ನು ತೋರಿಸೋದ್ರಿಂದ ಏನೆಲ್ಲ ಲಾಭಗಳಿವೆ ಗೊತ್ತಾ?

ಇಡೀ ಕುಟುಂಬದ ಆರೋಗ್ಯ ಗೊತ್ತಿರುತ್ತೆ
ನಿಮ್ಮ ಮನೆಯಲ್ಲಿರುವ ಎಲ್ಲಾ ಸದಸ್ಯರು ಒಬ್ಬರೇ ವೈದ್ಯರಿಗೆ ತೋರಿಸೋದ್ರಿಂದ ನಿಮ್ಮ ಕುಟುಂಬದವ್ರ ಆರೋಗ್ಯ ಸ್ಥಿತಿಗತಿ ನಿಮ್ಮ ವೈದ್ಯರಿಗೆ ತಿಳಿದಿರುತ್ತೆ. ಪ್ರತಿ ಬಾರಿ ವೈದ್ಯರನ್ನು ಬದಲಿಸೊದ್ರಿಂದ ಪ್ರತಿಬಾರಿಯೂ ನೀವು ನಿಮ್ಮ ಸಮಸ್ಯೆಯನ್ನು ಹೊಸ ವೈದ್ಯರಿಗೆ ತಿಳಿಸುವಂತಾಗುತ್ತೆ. ಅವ್ರ ಕ್ಯಾಲ್ಕುಲೇಷನ್ ಬದಲಾಗ್ಬಹುದು. ಯಾಕಂದ್ರೆ ನಿಮ್ಮ ಕೌಟುಂಬಿಕ ಹಿಸ್ಟರಿ ಹೊಸ ವೈದ್ಯರಿಗೆ ತಿಳಿದಿರೋದಿಲ್ಲ. ಫ್ಯಾಮಿಲಿ ಡಾಕ್ಟರ್ ಆದ್ರೆ ನಿಮ್ಮ ಬಗ್ಗೆ ಸರಿಯಾಗಿ ತಿಳಿದಿರ್ತಾರೆ. ನಿಮ್ಮ ಎಲ್ಲಾ ಸಮಸ್ಯೆಗಳ ಅರಿವು ಅವ್ರಿಗಿರುತ್ತೆ.
ತುರ್ತು ಪರಿಸ್ಥಿತಿಯಲ್ಲಿ ಸಹಕಾರಿ
ಅರ್ಜೆಂಟ್ ಯಾರಿಗೋ ಏನೋ ಆಯ್ತ. ಆಸ್ಪತ್ರೆಗೆ ಕರ್ಕೊಂಡು ಹೋಗೋಕು ಆಗ್ತಿಲ್ಲ ಅಂದಾಗ ಫ್ಯಾಮಿಲಿ ಡಾಕ್ಟರ್ ಇದ್ರೆ ಅವ್ರು ನಿಮ್ಮ ಮನೆಗೆ ಬಂದೂ ಚಿಕಿತ್ಸೆ ನೀಡ್ಬಹುದು.. ಇಲ್ಲವೇ ತುರ್ತು ಪರಿಸ್ಥಿತಿಯಲ್ಲಿ ಕೂಡಲೇ ಚಿಕಿತ್ಸೆ ಪಡೆಯಲು ಅವ್ರು ನೆರವಾಗ್ತಾರೆ. ಫ್ಯಾಮಿಲಿ ಡಾಕ್ಟರ್ ಮತ್ತು ನಿಮ್ಮ ನಡುವಿನ ನಂಬಿಕೆಯಿಂದಾಗಿ ತುರ್ತು ಪರಿಸ್ಥಿತಿಯಲ್ಲಿ ಅವ್ರು ನಿಮ್ಗೆ ಹೆಚ್ಚಿನ ಪ್ರಿಫರೆನ್ಸ್ ನೀಡ್ತಾರೆ. ಇನ್ನು ರಾತ್ರಿಯ ಸಮಯದಲ್ಲಿ ನಿಮ್ಮ ಫ್ಯಾಮಿಲಿಯಲ್ಲಿ ಯಾರಿಗೋ ಏನೋ ಸಮಸ್ಯೆಯಾದ್ರೆ ಕೂಡಲೇ ಫ್ಯಾಮಿಲಿ ಡಾಕ್ಟರ್ ಬಳಿ ಹೋದ್ರೆ ಅವ್ರು ನಿಮ್ಗೆ ಸೂಕ್ತ ಚಿಕಿತ್ಸೆ ನೀಡ್ತಾರೆ. ಇಲ್ಲವೆಂದಾದಲ್ಲಿ ವೈದ್ಯರನ್ನು ಸಂಪರ್ಕಿಸಲು ಹರಸಾಹಸ ಪಡುವಂತ ಸನ್ನಿವೇಶ ನಿರ್ಮಾಣವಾಗಿ ಬಿಡ್ಬಹುದು..
ಹಣ ವ್ಯಯವಾಗುವುದೂ ಉಳಿಯುತ್ತೆ
ಹುಷಾರಿಲ್ಲದಿದ್ದಾಗೆಲ್ಲ ಆಸ್ಪತ್ರೆಗೆ ಹೋಗೋದ್ರಿಂದ ಪ್ರತಿ ಬಾರಿಯೂ ದೊಡ್ಡ ಆಸ್ಪತ್ರೆಗಳಲ್ಲಾದ್ರೆ ಆ ಫೀಸ್ ಈ ಫೀಸ್ ಅಂತ ಹಣ ವ್ಯಯಿಸ್ಬೇಕಾಗುತ್ತೆ. ಆದ್ರೆ ಒಬ್ಬರೇ ವೈದ್ಯರಿಗೆ ತೋರಿಸ್ತಾ ಇರೋದ್ರಿಂದ ಸಣ್ಣಪುಟ್ಟ ಚೆಕಪ್‌ಗಳಿಗೆ ಅವ್ರು ಹಣ ಪಡೆಯದೇ ನಿಮ್ಗೆ ಟ್ರೀಟ್‌ಮೆಂಟ್ ನೀಡುವ ಸಾಧ್ಯತೆ ಇರುತ್ತೆ. ಅಷ್ಟೇ ಅಲ್ಲ, ಪ್ರತಿ ಬಾರಿ ಎಲ್ಲ ರೀತಿಯ ಚೆಕ್ ಅಪ್ ಮಾಡುವ ಅವಶ್ಯಕತೆ ಇರೋದಿಲ್ಲ. ಯಾಕಂದ್ರೆ ಫ್ಯಾಮಿಲಿ ವೈದ್ಯರಿಗೆ ಯಾವಾಗ್ಲೂ ಚೆಕ್‌ಅಪ್ ಮಾಡ್ತಾ ಇರೋದ್ರಿಂದ ನಿಮ್ಮ ಫ್ಯಾಮಿಲಿಯ ಎಲ್ಲಾ ಸದಸ್ಯರ ದೇಹಸ್ಥಿತಿಯ ಬಗ್ಗೆ ಗೊತ್ತಿರುತ್ತೆ.
ಅನುವಂಶೀಯತೆ ಬಗ್ಗೆ ವೈದ್ಯರಿಗೆ ಮಾಹಿತಿ
ಅದೆಷ್ಟೋ ಕಾಯಿಲೆಗಳು ಅನುವಂಶೀಯತೆಯಿಂದ ಬರುತ್ತೆ. ಹಿಂದಿನವ್ರಿನಿಂದ ಬಳುವಳಿಯಾಗಿ ಬರುವ ಕಾಯಿಲೆಗಳ ಅರಿವು ಕೆಲವೊಮ್ಮೆ ಗೊತ್ತೇ ಇರೋದಿಲ್ಲ. ಬಟ್ ಫ್ಯಾಮಿಲಿ ಡಾಕ್ಟರ್ ಇದ್ರೆ ಅವ್ರಿಗೆ ನಿಮ್ಮ ಫ್ಯಾಮಿಲಿಯ ಹಿಸ್ಟರಿ ಗೊತ್ತಿರುತ್ತೆ. ಹಾಗಾಗಿ ಅವ್ರು ನಿಮ್ಮ ಕಾಯಿಲೆಯ ಹಿಂದಿನ ಕಾರಣ ಹೆರಿಡಿಟಿ ಆಗಿದ್ರೆ ಇಮಿಡಿಯಟ್ಲಿ ಕಂಡಿಹಿಡಿದು ಚಿಕಿತ್ಸೆ ನೀಡ್ತಾರೆ.
ಫೋನ್ ಮೂಲಕವೂ ಚಿಕಿತ್ಸೆ ಲಭ್ಯವಾಗುತ್ತೆ
ಕೆಲವೊಮ್ಮೆ ತಲೆನೋವು, ಮೈಕೈನೋವು, ಸಣ್ಣಪುಟ್ಟ ಜ್ವರ ಇತ್ಯಾದಿ ಸಮಯದಲ್ಲಿ ವೈದ್ಯರ ಬಳಿ ಹೋಗಿಯೇ ಟ್ರೀಟ್‌ಮೆಂಟ್ ತೆಗೆದುಕೊಳ್ಳಬೇಕು ಅಂತೇನೂ ಇರೋದಿಲ್ಲ. ಆಗ ನಿಮ್ಮಗೊಬ್ರು ಫ್ಯಾಮಿಲಿ ಡಾಕ್ಟರ್ ಇದ್ರೆ ಅವ್ರ ಬಳಿ ಸೂಕ್ತ ಸಲಹೆಯನ್ನು ಫೋನ್ ಮೂಲಕವೂ ಪಡೀಬಹುದು. ಸುಲಭದಲ್ಲೇ ಅವ್ರು ಎಲ್ಲಾ ಸಮಯದಲ್ಲೂ ಲಭ್ಯವಾಗ್ತಾರೆ. ಆದ್ರೆ ನಿಮ್ಮ ಫ್ಯಾಮಿಲಿ ಡಾಕ್ಟರ್ ನಿಮ್ಮ ಬಳಿ ಇಲ್ಲದಿದ್ರೆ ನೀವೂ ವೈದ್ಯರನ್ನು
ಸಂಪರ್ಕಿಸಲು ಹರಸಾಹಸ ಪಡುವಂತಾಗ್ಬಹುದು..
ಒಟ್ಟಿನಲ್ಲಿ ಪ್ರತಿ ಫ್ಯಾಮಿಲಿಗೂ ಒಬ್ಬರು ಫ್ಯಾಮಿಲಿ ಡಾಕ್ಟರ್ ಇರೋದು ಎಲ್ಲಾ ರೀತಿಯಲ್ಲೂ ಉತ್ತಮವೇ. ನಿಮ್ಮ ಫ್ಯಾಮಿಲಿ ಯಾವುದೇ ವೈದ್ಯರನ್ನೂ ಫ್ಯಾಮಿಲಿ ವೈದ್ಯರು ಅಂತ ಪರಿಗಣಿಸದೇ ಇದ್ದಲ್ಲಿ ಕೂಡಲೇ ಒಬ್ಬರು ವೈದ್ಯರನ್ನು ಫ್ಯಾಮಿಲಿ ವೈದ್ಯರು ಅಂತ ಪರಿಗಣಿಸಿ ನೀವು ಅವರ ಬಳಿಯೇ ಚಿಕಿತ್ಸೆ ಪಡೆಯುವುದು ಸೂಕ್ತ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

