For Quick Alerts
ALLOW NOTIFICATIONS  
For Daily Alerts

ಅತಿಯಾಗಿ ಬೆವರುವಿಕೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು!

By Arshad
|

ಬೆವರುವ ಪ್ರಕ್ರಿಯೆ ಸಸ್ತನಿಗಳಿಗೆ ನಿಸರ್ಗ ನೀಡಿರುವ ಒಂದು ವರ. ಬಿಸಿರಕ್ತದ ಪ್ರಾಣಿಗಳಿಗೆ ಶರೀರದ ತಾಪಮಾನವನ್ನು ಒಂದೇ ರೀತಿಯಲ್ಲಿಟ್ಟು ಕೊಳ್ಳುವುದು ಅಗತ್ಯವಾದುದರಿಂದ ಹೆಚ್ಚಿನ ಬಿಸಿಯನ್ನು ಕಳೆದುಕೊಳ್ಳಲು ಬೆವರು ನೆರವಾಗುತ್ತದೆ. ತಾಪಮಾನವನ್ನು ಕಡಿಮೆ ಮಾಡುವುದು ಪ್ರಮುಖ ಉದ್ದೇಶವಾದರೂ ದೇಹ ಇತರ ಸಂದರ್ಭಗಳಲ್ಲೂ ಬೆವರುತ್ತದೆ.

ಭಯ, ಉದ್ವೇಗ, ಆತಂಕ ಮೊದಲಾದ ಸ್ಥಿತಿಯಲ್ಲಿಯೂ ದೇಹ ಬೆವರುತ್ತದೆ. ಶಾರೀರಿಕ ಚಟುವಟಿಕೆ ಹೆಚ್ಚಾದಾಗ, ಬಿಸಿಲಿನ ಝಳ ಹೆಚ್ಚಾದಾಗ, ಕೋಣೆಯಲ್ಲಿ ಗಾಳಿಯ ಬೀಸುವಿಕೆ ಇಲ್ಲದಿದ್ದಾಗ ಮೊದಲಾದ ಸಂದರ್ಭದಲ್ಲಿ ಬೆವರನ್ನು ಹೆಚ್ಚಿಸುವ ಮೂಲಕ ಶರೀರ ತಾಪಮಾನವನ್ನು ಸಮಸ್ಥಿತಿಯಲ್ಲಿಡಲು ನೆರವಾಗುತ್ತದೆ. ಬೆವರು ಯಾವುದೇ ರೀತಿಯಲ್ಲಿ ಹೊರಹರಿಯಲಿ, ದೇಹಕ್ಕೆ ಇದು ತುಂಬಾ ಅಗತ್ಯವಾಗಿದೆ.

ಮುಖ್ಯವಾಗಿ ದೇಹದಲ್ಲಿ ಸಂಗ್ರಹವಾಗಿದ್ದ ಉಪ್ಪು ಮತ್ತು ಇತರ ವಿಷಕಾರಿ ಅಂಶಗಳನ್ನು ಕಳೆದುಕೊಳ್ಳಲು ಬೆವರು ನೆರವಾಗುತ್ತದೆ. ಕರಾವಳಿ ಪ್ರದೇಶದಲ್ಲಿ ಸಮುದ್ರದಿಂದ ನೀರು ಸತತವಾಗಿ ಆವಿಯಾಗುವ ಕಾರಣ ಅಲ್ಲಿನ ಗಾಳಿಯಲ್ಲಿ ತೇವಾಂಶ ಅಧಿಕವಾಗಿರುತ್ತದೆ. ಈ ಪ್ರದೇಶಗಳಲ್ಲಿ ಅತಿ ಹೆಚ್ಚು ಬೆವರುವೆವು ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಬೆವರಿನಿಂದ ತ್ವಚೆಯ ಆರೋಗ್ಯ ವೃದ್ಧಿ! ಕೇಳಿ ಆಶ್ಚರ್ಯವಾಯಿತೇ?

ವಾಸ್ತವವಾಗಿ ಈ ಸ್ಥಳದ ಹವೆಯಲ್ಲಿರುವ ತೇವಾಂಶ ಚರ್ಮದ ಸಂಪರ್ಕಕ್ಕೆ ಸಿಕ್ಕಿದ ಕೂಡಲೇ ತಣಿದು ದ್ರವರೂಪ ತಳೆಯುತ್ತದೆ. ಕೊಂಚ ಹೊತ್ತು ಹೀಗೇ ಸಂಗ್ರಹವಾದ ನೀರಿನ ಕಣಗಳು ಬಿಂದುವಿನ ರೂಪ ಪಡೆಯುತ್ತವೆ. ಇದನ್ನೇ ಜನರು ಹೆಚ್ಚಿನ ಬೆವರು ಎಂದು ತಿಳಿದಿದ್ದಾರೆ. ಏಸಿ ಇದ್ದ ಕೋಣೆಯಿಂದ ಆದ್ರತೆಯಿದ್ದ ಸ್ಥಳಕ್ಕೆ ಬಂದ ಕೂಡಲೇ ಗಾಳಿಯ ಆರ್ದ್ರತೆ ತಣಿದು ಕನ್ನಡಕದ ಮೇಲೆ ಮಬ್ಬು ಕವಿಯುವಂತಾಗುವುದೂ ಇದೇ ಕಾರಣಕ್ಕೆ. ಬೆವರಿನ ಇನ್ನಷ್ಟು ಉತ್ತಮ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ ಮೈ ತುಂಬಾ ಬೆವರುವುದನ್ನು ತಡೆಯಲು ಟಿಪ್ಸ್

ಹೃದಯಕ್ಕೆ ಉತ್ತಮ

ಹೃದಯಕ್ಕೆ ಉತ್ತಮ

ದೇಹದ ಎಲ್ಲಾ ಭಾಗಗಳಿಗೆ ರಕ್ತವನ್ನು ಸತತವಾಗಿ ಒದಗಿಸುವ ಹೃದಯಕ್ಕೆ ಬೆವರುವುದು ಅತಿ ಅಗತ್ಯವಾಗಿದೆ. ಬೆವರಿನ ಮೂಲಕ ರಕ್ತದಲ್ಲಿದ್ದ ವಿಷಕಾರಿ ಅಂಶ ಮತ್ತು ಮುಖ್ಯವಾಗಿ ಉಪ್ಪು ಹೊರಹೋಗುವುದರಿಂದ ಹೃದಯಕ್ಕೆ ಹೆಚ್ಚಿನ ಭಾರ ತಪ್ಪುತ್ತದೆ. ಇದು ಆರೋಗ್ಯಕ್ಕೆ ಪೂರಕವಾಗಿದೆ.

ಚರ್ಮದ ಕಾಂತಿ ಹೆಚ್ಚುತ್ತದೆ

ಚರ್ಮದ ಕಾಂತಿ ಹೆಚ್ಚುತ್ತದೆ

ನಮ್ಮ ಚರ್ಮದಲ್ಲಿ ಅತಿ ಸೂಕ್ಷ್ಮವಾದ ಲಕ್ಷಾಂತರ ರಂಧ್ರಗಳಿದ್ದು ಬೆವರ ಗ್ರಂಥಿ ಈ ರಂಧ್ರಗಳ ಬುಡದಲ್ಲಿರುತ್ತದೆ. ಬೆವರು ಹೊರಬರುವುದು ಈ ರಂಧ್ರಗಳಿಂದಲೇ. ಯಾವುದೋ ಮಾಯದಲ್ಲಿ ಈ ಸೂಕ್ಷ್ಮರಂಧ್ರಗಳ ಒಳಗೂ ಅದಕ್ಕಿಂತಲೂ ಸೂಕ್ಷ್ಮವಾದ ಧೂಳು, ಪರಾಗ, ಬ್ಯಾಕ್ಟೀರಿಯಾ ಮೊದಲಾದವು ಸೇರಿಕೊಂಡಿರುತ್ತವೆ. ಬೆವರು ಇವನ್ನೆಲ್ಲಾ ಒಳಗಿನಿಂದಲೇ ಗುಡಿಸಿ ಆ ರಂಧ್ರದಿಂದ ಹೊರಗೋಡಿಸಿ ಚರ್ಮವನ್ನು ಮಾಲಿನ್ಯರಹಿತವಾಗಿರಿಸುತ್ತದೆ. ಇದು ಚರ್ಮದ ಆರೈಕೆ ಮತ್ತು ಕಾಂತಿಗೆ ಅಗತ್ಯವಾಗಿದೆ.

ಮೂತ್ರಪಿಂಡಗಳಿಗೂ ಉತ್ತಮ

ಮೂತ್ರಪಿಂಡಗಳಿಗೂ ಉತ್ತಮ

ಹೆಚ್ಚು ಬೆವರುವ ಮೂಲಕ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನೀರಡಿಕೆ ಹೆಚ್ಚುತ್ತದೆ. ತನ್ಮೂಲಕ ಹೆಚ್ಚು ನೀರು ಕುಡಿಯುವುದರಿಂದ ಮೂತ್ರಪಿಂಡಗಳ ಕ್ಷಮತೆಯೂ ಉತ್ತಮಗೊಳ್ಳುತ್ತದೆ.

ವಿಷಕಾರಿ ವಸ್ತುಗಳು ಹೊರಬೀಳುತ್ತವೆ

ವಿಷಕಾರಿ ವಸ್ತುಗಳು ಹೊರಬೀಳುತ್ತವೆ

ಪ್ರತಿಬಾರಿ ಬೆವರು ಹೊರಹರಿದಾಗಲೂ ಕೆಲವಾರು ವಿಷಕಾರಿ ವಸ್ತುಗಳು ಇದರ ಮೂಲಕ ಹೊರಹರಿಯುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

ಮನೋಭಾವವನ್ನು ಸಂತೋಷವಾಗಿರಿಸುತ್ತದೆ

ಮನೋಭಾವವನ್ನು ಸಂತೋಷವಾಗಿರಿಸುತ್ತದೆ

ಬೆವರನ್ನು ಶ್ರಮದ ಪ್ರತಿಫಲವೆಂದು ಅತಿ ಹಿಂದಿನಿಂದಲೂ ನಂಬಿಕೊಂಡು ಬಂದಿದ್ದೇವೆ. ಕೃಷಿಯಲ್ಲಂತೂ ಬೆವರಿಗೇ ಮುಖ್ಯ ಸ್ಥಾನ. ತಾವು ಸಂಪಾದಿಸಿದ ಧನವನ್ನು ಉಲ್ಲೇಖಿಸುವಾಗಲೂ ಹಿರಿಯರು ತಾವು ಬೆವರು ಸುರಿಸಿ ಸಂಪಾದಿಸಿದ ಧನ ಎಂದೇ ಉಲ್ಲೇಖಿಸುತ್ತಾರೆ. ಆದ್ದರಿಂದ ಪ್ರತಿಬಾರಿಯೂ ದೈಹಿಕ ಶ್ರಮದಿಂದ ಬೆವರು ಹರಿದಾಗ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಈ ಉಲ್ಲಾಸ ಪ್ರತಿಬಾರಿ ಬೆವರು ಹರಿದಾಗಲೂ ಉಂಟಾಗುವುದರಿಂದ ಮನೋಭಾವವನ್ನು ಸಂತೋಷವಾಗಿರಿಸಿಕೊಳ್ಳಲು ನೆರವಾಗುತ್ತದೆ.

ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ

ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ

ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಒಳಬರಲು ಯತ್ನಿಸುವ ಸೂಕ್ಷ್ಮಜೀವಿಗಳನ್ನು ನಿಗ್ರಹಿಸಲು ದೇಹದ ಪ್ರತಿರೋಧ ವ್ಯವಸ್ಥೆ ಪ್ರಯೋಗಿಸುವ ಅಸ್ತ್ರಗಳನ್ನು ಬೆವರಿನ ಮೂಲಕ ಚರ್ಮದ ಅಡಿಭಾಗಕ್ಕೆ ಒದಗಿಸಲಾಗುತ್ತದೆ. ಈ ಮೂಲಕ ದೇಹದ ರಕ್ಷಣಾ ವ್ಯವಸ್ಥೆಗೆ ಬೆವರು ತನ್ನ ಸಹಕಾರವನ್ನು ನೀಡಿ ದೇಹದ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಗಾಯಗಳನ್ನು ಶೀಘ್ರವಾಗಿ ಮಾಗಿಸುತ್ತದೆ

ಗಾಯಗಳನ್ನು ಶೀಘ್ರವಾಗಿ ಮಾಗಿಸುತ್ತದೆ

ಚರ್ಮದ ಗಾಯಗಳು ಶೀಘ್ರವಾಗಿ ಮಾಗಲು ಮತ್ತು ಹೊಸಚರ್ಮ ಬೆಳೆಯಲು ಬೆವರು ಸಹಾ ಅಗತ್ಯ ಎಂಬುದನ್ನು ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ.

ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ

ರೋಗ ನಿರೋಧಕ ಶಕ್ತಿ ಉತ್ತಮವಾಗಿರುವುದಕ್ಕೂ ಉತ್ತಮ ಪ್ರಮಾಣದಲ್ಲಿ ಬೆವರುವುದಕ್ಕೂ ನೇರ ಸಂಬಂಧವಿದೆ. ಆದ್ದರಿಂದಲೂ ಆರೋಗ್ಯ ತಜ್ಞರು ಬಲವಂತವಾಗಿಯಾದರೂ ಬೆವರಲು ಸಲಹೆ ನೀಡುತ್ತಾರೆ. ಸೌನಾ ಸ್ನಾನವೂ ಈ ಸಲಹೆಯ ಒಂದು ಸಾಕಾರವಾಗಿದೆ.

ತಾಪಮಾನವನ್ನು ಸಮಸ್ಥಿತಿಯಲ್ಲಿಡುತ್ತದೆ

ತಾಪಮಾನವನ್ನು ಸಮಸ್ಥಿತಿಯಲ್ಲಿಡುತ್ತದೆ

ವಾತಾವರಣದ ತಾಪಮಾನದ ವೈಪರೀತ್ಯಗಳಿಗೆ ಅನುಗುಣವಾಗಿ ಬೆವರಿನ ಪ್ರಮಾಣವನ್ನು ಹೆಚ್ಚಿಸುವ ಮತ್ತು ಕಡಿಮೆಗೊಳಿಸುವ ಮೂಲಕ ದೇಹ ಒಳಗಿನ ತಾಪಮಾನವನ್ನು ಸಮಸ್ಥಿತಿಯಲ್ಲಿಡಲು ನೆರವಾಗುತ್ತದೆ.

ತಾಪಮಾನವನ್ನು ಸಮಸ್ಥಿತಿಯಲ್ಲಿಡುತ್ತದೆ

ತಾಪಮಾನವನ್ನು ಸಮಸ್ಥಿತಿಯಲ್ಲಿಡುತ್ತದೆ

ಈ ಬಗ್ಗೆ ನಿಮ್ಮಲ್ಲಿ ಇನ್ನೂ ಹೆಚ್ಚಿನ ಮಹತ್ವದ ಮತ್ತು ಸ್ವಾರಸ್ಯಕರವಾದ ಮಾಹಿತಿಗಳಿದ್ದರೆ ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.

English summary

How Sweating Makes You Healthy

There are so many health reasons to sweat a lot. Whether you are sweating it out in the gym or under the sun, it benefits in some ways. Sweating is a release- the release of toxins from the body. Sweating is a sign of intense activity. Your body is busy trying to adjust itself with its environment. In fact, when you work hard and sweat in the gym, you tend to feel fulfilled. Do you know why sweating is good? Well, read on to know about the benefits of sweating.
X
Desktop Bottom Promotion