Latest Updates
-
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ! -
ಶಾಖದ ಅಲೆ ಎಚ್ಚರಿಕೆ: ಎಸಿ ಇಲ್ಲದೆ ಮನೆಯನ್ನು ತಂಪಾಗಿಡಲು ಮತ್ತು ನಿಮ್ಮ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ಪಾನೀಯ ಮತ್ತು ಆಹಾರವೇ ಸಂಜೀವಿನಿ! -
ಸೀರೆ ಉಡೋದ್ರಲ್ಲಿ ಹೊಸ ಕ್ರಾಂತಿ: ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗ್ತಿರೋ 'ದೇಸಿ-ಕೋರ್' ಸೀರೆ ಸ್ಟೈಲ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲೂ ಫಿಟ್ ಆಗಿರಬೇಕೆ? ಮುಂಜಾನೆಯ ಈ ಸಣ್ಣ ಬದಲಾವಣೆ ನಿಮ್ಮ ಆರೋಗ್ಯಕ್ಕೆ ವರದಾನ! -
ಬಿಸಿಲ ಧಗೆಯಲ್ಲಿ ಮದುವೆ ಸಮಾರಂಭಗಳ ಸಂಕಟ: ಅತಿಥಿಗಳಿಗೂ ನಿಮಗೂ ಆರಾಮ ನೀಡುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ! -
ಬಿಸಿಲ ಬೇಗೆಯಿಂದ ಮನೆ ತತ್ತರ: ಎಸಿ ಇಲ್ಲದೆಯೇ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಸರಳ ಉಪಾಯಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮಗಳನ್ನು ಪಾಲಿಸಿ, ಆರೋಗ್ಯವಾಗಿರಿ! -
ಕಾನ್ ರೆಡ್ ಕಾರ್ಪೆಟ್ ಮೇಲೆ ದಿಶಾ ಮದನ್ ಅಬ್ಬರ: ಹಳೆಯ ಸೀರೆಯಿಂದ ಸೃಷ್ಟಿಯಾದ ಈ ಫ್ಯಾಷನ್ ಮ್ಯಾಜಿಕ್ ನೋಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಜೀವಕ್ಕೆ ಅಪಾಯವಾಗದಂತೆ ತಡೆಯಲು ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ಟಿವಿ ನೋಡ್ತಾ ಊಟ ಮಾಡೀರಾ....ಜೋಕೆ !
ಟಿವಿ.. ಈಗಂತೂ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತೆ,. ನೋಡೇ ನೋಡ್ತೀವಿ. ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳೋಕೆ ಟಿವಿ ಮಾಧ್ಯಮ ಬೆಸ್ಟ್ ನಿಜ. ಆದ್ರೆ ಟಿವಿ ನಮ್ಮ ದೈನಂದಿನ ಚಟುವಟಿಕೆಗಳನ್ನೂ ನಿಯಂತ್ರಿಸಬಾರದು. ಪ್ರತಿ ಮನೆಯಲ್ಲೂ ಒಬ್ಬರಲ್ಲ ಒಬ್ಬರು ಟಿವಿ ನೋಡ್ತಾ ಊಟ ಮಾಡುವ ಅಭ್ಯಾಸ ಹೊಂದಿರ್ತಾರೆ.. ಕೆಲವರ ಮನೆಯಲ್ಲಿ ಮನೆಮಂದಿಯೆಲ್ಲ ಟಿವಿ ನೋಡ್ತಲೇ ಊಟ ಮಾಡೋದು ಅಭ್ಯಾಸವಾಗಿ ಹೋಗಿರುತ್ತೆ.
ಹಿಂದಿನ ಕಾಲದಲ್ಲಿ ಚಿಕ್ಕ ಮಕ್ಕಳಿಗೆ ತಾಯಂದಿರು ಚಂದಿರನನ್ನು ತೋರಿಸಿ ಊಟ ಮಾಡಿಸ್ತಾ ಇದ್ರು. ಆದ್ರೀಗ ಈಗಿನ ಮಹಿಳೆಯರು ಟಿವಿ ತೋರಿಸಿ, ಅದ್ರಲ್ಲಿ ಬರೋ ಕಾರ್ಟೂನ್‌ಗಳನ್ನು ತೋರಿಸಿ, ಆಮಿಷ ಒಡ್ಡಿ ಊಟ ಮಾಡಿಸೋ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. ಹಾಗಾದ್ರೆ ಈ ರೀತಿ ಮಾಡೋದು ಎಷ್ಟು ಸರಿ? ಊಟದ ಸಮಯದಲ್ಲೂ ಟಿವಿ ನೋಡೋದು ಒಳಿತಲ್ಲ ಅನ್ನೋದ್ರ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಯಾಕೆ ಊಟ ಮಾಡುವಾಗ ಟಿವಿ ನೋಡ್ಬಾರ್ದು. ನೋಡಿದ್ರೆ ಏನಾಗುತ್ತೆ? ಟಿವಿ ನೋಡ್ತಾ ಊಟ ಮಾಡಿದ್ರೆ ಸರಿಯಾಗಿ ಊಟ ಸೇರುತ್ತಾ? ಹಾಗೆ ಊಟ ಮಾಡಿದ್ರೆ ಆಗುವ ಅಡ್ಡ ಪರಿಣಾಮಗಳೇನು?
ಈಗಿನ ಎಂಗ್ ಜನರೇಷನ್‌ಗೆ ಟಿವಿ ಅಂದ್ರೆ ಇಷ್ಟ.. ಅದನ್ನು ಬಿಟ್ಟು ಇರೋಕೆ ಆಗಲ್ಲ. ಹಾಗೆಂದು ಟಿವಿ ಮೂರ್ಖರ ಪೆಟ್ಟಿಗೆಯೇನಲ್ಲ. ಅದನ್ನು ಸಕಾಲಕ್ಕೆ ನೋಡಬೇಕು. ಜ್ಞಾನ ಹೆಚ್ಚಿಸಿಕೊಳ್ಳಬೇಕು ಇದು ಸತ್ಯ ವಿಚಾರ. ಅದನ್ನು ಬಿಟ್ಟು ಊಟ ಮಾಡೋವಾಗ ನೋಡೋದು.. ತಿಂಡಿ ತಿನ್ನುವಾಗ ನೋಡೋದು ಇದೆಷ್ಟು ಸರಿ ಅನ್ನೋ ಪ್ರಶ್ನೆ ಹುಟ್ಟುತ್ತೆ. ಊಟ ನೀವದನ್ನು ಬಿಟ್ಟಿರೋಕೆ ಆಗಲ್ಲ. ಬಟ್ ಊಟದ ಸಮಯಕ್ಕೆ ನೀವು ಟಿವಿ ಬಿಟ್ಟಿರಲೇಬೇಕು. ಇಲ್ಲ ಅಂದ್ರೆ ನಿಮಗೆ ಹಲವು ಸಮಸ್ಯೆಗಳು ನಿಮ್ಮನ್ನ ಕಾಡುತ್ತೆ. ಹಾಗಾದ್ರೆ ಯಾವೆಲ್ಲ ಸಮಸ್ಯೆಗಳು ಕಾಡುತ್ತೆ ಅನ್ನೋದನ್ನು ಡೀಟೈಲಾಗಿ ತಿಳ್ಕೋಬೇಕಾ? ಇಲ್ಲಿ ನೋಡಿ..

ಮಕ್ಕಳ ಮೇಲೆ ಪರಿಣಾಮ
ಮುಖ್ಯವಾಗಿ ಮಕ್ಕಳು ಈ ರೀತಿ ಮಾಡೋದು ಹೆಚ್ಚು. ಇದ್ರಿಂದ ಮಕ್ಕಳ ಕ್ರಿಯಾಶೀಲತೆ ಕುಂದಬಹುದು. ಓದಿನಲ್ಲಿ ಅವ್ರ ಕಾನ್ಸನ್‌ಟ್ರೇಷನ್ ಕಡಿಮೆಯಾಗ್ಬಹುದು. ಊಟ ರುಚಿಯನ್ನು ಸರಿಯಾಗಿ ಸವಿಯದೇ ಬೇಕಾಬಿಟ್ಟಿ ತಿನ್ನಲು ಆರಂಭಿಸ್ತಾರೆ. ಸುಮ್ಮನೆ ತಿನ್ನಿಸ್ತಾ ಇದ್ದಾರೆ ಅನ್ನೋ ಕಾರಣಕ್ಕೆ ತಿನ್ನುವ ಅಭ್ಯಾಸ ಬೆಳೆದು ಬಿಡಬಹುದು ಇಲ್ಲವೇ ಇದರ ಉಲ್ಟಾ ಆಗ್ಬಹುದು. ಅಂದ್ರೆ ಬೇಕಾಬಿಟ್ಟಿಯಾಗಿ ಅಗತ್ಯಕ್ಕಿಂತ ಹೆಚ್ಚು ತಿನ್ನುವ ಅಭ್ಯಾಸ ಬೆಳೆಯಬಹುದು.

ಬೊಜ್ಜಿಗೆ ಕಾರಣ
ಟಿವಿ ನೋಡ್ತಾ ಊಟ ಮಾಡಿದ್ರೆ ನೀವು ಎಷ್ಟು ತಿಂದ್ರಿ ಅನ್ನೋ ಲೆಕ್ಕವೇ ಸಿಕ್ಕುವುದಿಲ್ಲ. ಬೇಕಾಬಿಟ್ಟಿ ತಿನ್ನುತ್ತಲೇ ಇರ್ತೀರಾ.. ಹೀಗೆ ತಿನ್ನುವ ಅಭ್ಯಾಸದಿಂದ ಬೊಜ್ಜು ಕೊಡುಗೆಯಾಗಿ ಬರಬಹುದು. ಮತ್ತೂ ಕೆಲವರು ಸರಿಯಾದ ಪ್ರಮಾಣದ ಕ್ಯಾಲೋರಿ ಸ್ವೀಕರಿಸದೇ ಇರ್ಬಹುದು.

ರುಚಿಯೇ ಗೊತ್ತಿರೋದಿಲ್ಲ
ತಿನ್ನಲು ಸಿಕ್ತು ಅಂತ ತಿನ್ತಲೇ ಇರ್ತೀರಾ ಹೊರತು ರುಚಿಯ ಬಗ್ಗೆ ಯೋಚನೆ ಮಾಡೋದಿಲ್ಲ. ಪ್ಲೇಟ್‌ನಲ್ಲಿ ಇರೋದು ಟಿವಿ ನೋಡ್ತಾ ಖಾಲಿಯಾಗುತ್ತೆ ನಿಜ. ಆದ್ರೆ ತಿಂತಿದ್ದು ಮನಸ್ಸಿಗೂ ಹಿಡಿಸಬೇಕು. ಆದ್ರೆ ನಿಮ್ಮೆಲ್ಲ ಕಾನ್ಸನ್‌ಟ್ರೇಷನ್ ಟಿವಿ ಮೇಲೆಯೇ ಇರೋದ್ರಿಂದ ಊಟದ ಅಥ್ವಾ ತಿಂಡಿಯ ರುಚಿ ಬಗ್ಗೆ ನೀವು ಆ ಸಂದರ್ಭದಲ್ಲಿ ತಲೆಕೆಡಿಸಿಕೊಳ್ಳೋದೇ ಇಲ್ಲ.

ಮನೆಮಂದಿಯ ಜೊತೆ ಬಾಂಧವ್ಯ ಸಡಿಲಿಸುತ್ತೆ
ಮನೆಮಂದಿಯ ಜೊತೆ ಕೂತು ಊಟ ಮಾಡುವ ಅಭ್ಯಾಸ ಎಲ್ಲರ ನಡುವಿನ ಬಾಂಧವ್ಯ ಗಟ್ಟಿಗೊಳಿಸುತ್ತೆ. ಆದ್ರೆ ಒಬ್ಬೊಬ್ಬರೂ ಒಮ್ಮೊಮ್ಮೆ ಅಂತ ಟಿವಿ ಮುಂದೆ ಕೂತು ಊಟ ಮಾಡಿದ್ರೆ ಮನೆಯ ಸದಸ್ಯರ ನಡುವೆ ಮಾತುಕತೆ ಇಲ್ಲದಂತಾಗುತ್ತೆ. ಎಲ್ಲರೂ ಮೌನವಾಗಿ ಟಿವಿಯಲ್ಲಿ ಬರುತ್ತಿರುವ ಕಾರ್ಯಕ್ರಮದಲ್ಲೇ ಮುಳುಗಿ ಹೋಗ್ತಿರೇ ವಿನಃ ನಿಮ್ಮ ಸುಖದುಃಖಗಳ ಬಗ್ಗೆ, ನಿಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳೋದಿಲ್ಲ. ಅಥ್ವಾ ಕಷ್ಟಪಟ್ಟು ಅಡುಗೆ ಮಾಡಿದ ಮಹಿಳೆಗೆ ತಾನು ಮಾಡಿದ ಅಡುಗೆ ಹೇಗೆ ಆಗಿದೆ ಅಂತ ಹೇಳಿದ್ರೆ ಖುಷಿಯಾಗುತ್ತೆ. ಅದ್ರಲ್ಲೂ ಚೆನ್ನಾಗಿದೆ ಇವತ್ತಿನ ಊಟ ಅಂತ ಮನೆಯ ಸದಸ್ಯರು ಖುಷಿಯಿಂದ ಊಟ ಮಾಡಿದಾಗ ಆಕೆಗಾಗುವ ಖುಷಿ ಇಮ್ಮಡಿ ಅಂತಲೇ ಹೇಳ್ಬಹುದು. ಆದ್ರೆ ಅದ್ಯಾವುದಕ್ಕೂ ಟಿವಿ ಅವಕಾಶವನ್ನೇ ಕೊಡೋದಿಲ್ಲ..

ಮನೆಯ ಮಹಿಳೆಗೆ ಇನ್ನಷ್ಟು ಕೆಲ್ಸದ ಹೊರೆ
ಇನ್ನು ಒಬ್ಬೊಬ್ಬರಿಗೆ ಒಂದೊಂದು ಸಲ ಊಟ ಬಡಿಸೋದು ಮನೆಯ ಮಹಿಳೆಗೂ ಕಿರಿಕಿರಿ ಅನ್ನಿಸ್ಬಹುತ್ತೆ. ಸುಮ್ಮನೆ ಕೆಲ್ಸದ ಹೊರೆ ಆಕೆಗೆ ಹೆಚ್ಚಾಗಿರುತ್ತೆ. ಒಟ್ಟಿನಲ್ಲಿ ಟಿವಿಯವ್ರೇನೋ ನೀವು ನೋಡ್ಬೇಕು ಅಂತ 24 ಗಂಟೆ ಕೆಲ್ಸ ಮಾಡಿ ಕಾರ್ಯಕ್ರಮಗಳನ್ನು ಕೊಡ್ತಾರೆ. ಆದ್ರೆ ಅವ್ರು ಹಾಕಿದ ಕಾರ್ಯಕ್ರಮವನ್ನೆಲ್ಲ ನೀವು ನೋಡ್ಬೇಕು ಅಂತೇನಿಲ್ಲ. ಬದಲಾಗಿ ನಿಮ್ಮ ಬಿಡುವಿನ ಸಮಯವನ್ನಷ್ಟೇ ಟಿವಿಗೆ ಮೀಸಲಿಡಿ.. ಇನ್ನೂ ಊಟದ ಸಮಯವನ್ನು ಬಿಡುವಿನ ಸಮಯ ಅಂತ ಯಾವತ್ತೂ ಪರಿಗಣಿಸಬೇಡಿ.. ದಯವಿಟ್ಟು ಊಟಕ್ಕೊಂದು ಬ್ರೇಕ್ ತೆಗೆದುಕೊಳ್ಳಿ.. ಸುಖವಾಗಿ ಖುಷಿಯಿಂದ ಆರೋಗ್ಯವಾಗಿರಿ.



Click it and Unblock the Notifications