ಗುಲಾಬಿ ಗುಲ್ಕಂದ್-ಆರೋಗ್ಯಕ್ಕೂ ಸೈ, ಸೌಂದರ್ಯಕ್ಕೂ ಜೈ

By Su.Ra

ಗುಲಾಬಿ ಅಂದ್ರೆ ಹೂವುಗಳಲ್ಲೇ ಅತ್ಯಂತ ಸುಂದರವಾದ, ಹೆಚ್ಚಿನವ್ರು ತಮ್ಮ ಲೈಕ್ ಮುದ್ರೆ ಒತ್ತುವ ಬ್ಯೂಟಿಫುಲ್ ಫ್ಲವರ್..ಹೂವುಗಳ ರಾಣಿ ಅಂದ್ರೆ ಗುಲಾಬಿ. ಪ್ರೀತಿಯ ಸಂಕೇತ ಅಂದ್ರೆ ಗುಲಾಬಿ.ನೋವು, ನಲಿವು, ಗೆಳೆತನ ಹೀಗೆ ಭಾವನೆಗಳನ್ನು ವ್ಯಕ್ತಪಡಿಸಲು ಬಳಸುವ ಹೂವು ಗುಲಾಬಿ. ಸೌಂದರ್ಯ ಮತ್ತು ಪರಿಮಳದ ಹೊರತಾಗಿ ಗುಲಾಬಿ ತನ್ನ ಆಯರ್ವೇದಿಯ ಶಕ್ತಿಯಿಂದ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತೆ. ಸ್ಪಾ ಮತ್ತು ಇತರೆ ಬ್ಯೂಟಿ ಟ್ರೀಟ್ ಮೆಂಟ್ ಗಳಲ್ಲಿ ಗುಲಾಬಿಯನ್ನು ಬಳಸಲಾಗುತ್ತೆ.ಇದನ್ನು ಹೊರತು ಪಡಿಸಿ ಗುಲಾಬಿ ದಳಗಳಿಂದ ತಯಾರಿಸುವ ಗುಲ್ಕಂದ್ ಬಾಯಲ್ಲಿ ನೀರೂರಿಸುತ್ತೆ. ಪಾನ್ ಬೀಡಾದ ಸಿಹಿ 'ಗುಲ್ಕಂದ್' ಆರೋಗ್ಯದ ಕೀಲಿಕೈ!

ಗುಲಾಬಿ ದಳಗಳ ಈ ಜ್ಯಾಮ್ ಹಲವು ಆಹಾರ ಪದಾರ್ಥಗಳಲ್ಲಿ ಉದಾಹರಣೆಗೆ ಕೇಕ್, ಪುಡ್ಡಿಂಗ್ಸ್‌ಗಳಲ್ಲಿ ಅಲಂಕಾರಕ್ಕಾಗಿ ಬಳಸಲಾಗುತ್ತೆ. ಅಷ್ಟೇ ಅಲ್ಲ ಗುಲ್ಕಂದ್ ಬಳಸಿ ರೋಸ್ ಮಿಲ್ಕ್ ಕೂಡ ತಯಾರಿಸ್ತಾರೆ. ಗುಲ್ಕಂದ್ ಆಯುರ್ವೇದಿಕ್ ಶಾಪ್ ಮತ್ತು ಇತರೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಸಿಗೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದ್ರೆ ಹೀಗೆ ಕೊಂಡುಕೊಳ್ಳುವ ಬದಲು ನೀವೇ ಮನೆಯಲ್ಲಿ ಸುಲಭದಲ್ಲಿ ಗುಲಾಬಿ ಗುಲ್ಕಂದ್ ತಯಾರಿಸಿಕೊಳ್ಳಬಹುದು...

ಗುಲ್ಕಂದ್ ತಯಾರಿಸುವ ಸುಲಭ ಮಾರ್ಗ

ಗುಲ್ಕಂದ್ ತಯಾರಿಸುವ ಸುಲಭ ಮಾರ್ಗ

ಮೊದಲು ಒಂದಷ್ಟು ಪಿಂಕ್ ಬಣ್ಣದ ಪರಿಮಳಯುಕ್ತವಾದ ಗುಲಾಬಿ ದಳಗಳನ್ನು ತೆಗೆದುಕೊಂಡು ಸ್ವಚ್ಛಗೊಳಿಸಿ. ಬೇರೆ ಕಲರಿನ ಗುಲಾಬಿ ದಳಗಳಿಂದಲೂ ಗುಲ್ಕಂದ್ ತಯಾರಿಸ್ತಾರೆ. ಎಲ್ಲ ಕಲರಿನ ಗುಲಾಬಿ ದಳಗಳಿಂದಲೂ ಹೆಚ್ಚುಕಡಿಮೆ ಒಂದೇ ರೀತಿಯ ಗುಲ್ಕಂದ್ ತಯಾರಾಗುತ್ತೆ. ಆದ್ರೆ ಪಿಂಕ್ ಬಣ್ಣದ ಗುಲಾಬಿ ಗುಲ್ಕಂದ್ ತಯಾರಿಸಲೆಂದೇ ಆಯುರ್ವೇದಿಯವಾಗಿ ಪ್ರಾಶಸ್ತ್ಯವಿರುವ ಗುಲಾಬಿಯಾಗಿರೋದ್ರಿಂದ ಅದನ್ನು ಬಳಸಿದ್ರೆ ಹೆಚ್ಚು ಪರಿಣಾಮಕಾರಿಯಾಗಿರುತ್ತೆ. ನಂತ್ರ ಎಷ್ಟು ಗುಲಾಬಿ ದಳಗಳನ್ನು ತೆಗೆದುಕೊಂಡಿದ್ದೀರೋ ಅಷ್ಟೇ ಪ್ರಮಾಣದ ಬೆಲ್ಲವನ್ನು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image source - Wikimedia Commons

ಗುಲ್ಕಂದ್ ತಯಾರಿಸುವ ಸುಲಭ ಮಾರ್ಗ

ಗುಲ್ಕಂದ್ ತಯಾರಿಸುವ ಸುಲಭ ಮಾರ್ಗ

ಪಾಕ ತಯಾರಿಸಿಕೊಂಡು ಅದಕ್ಕೆ ಗುಲಾಬಿ ದಳಗಳನ್ನು ಹಾಕಿ ನೆನಸಿ ಇಡಬಹುದು. ಬೇಕು ಅನ್ನಿಸಿದ್ರೆ ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ. ಪಾಕ ತಯಾರಿಸದೇ ಮಾಡಿರುವ ಗುಲ್ಕಂದ್ ಆಗಿದ್ರೆ ಅದನ್ನು ಸುಮಾರು 7 ರಿಂದ 8 ದಿನಗಳವರೆಗೆ ಪ್ರತಿದಿನ ಗಾಜಿನ ಬಾಟಲಿಯಲ್ಲಿ ಹಾಕಿಟ್ಟು ಬಿಸಿಲಿನಲ್ಲಿಡಿ. ಆಗ ಬೆಲ್ಲ ಕರಗಿ ಗುಲಾಬಿ ದಳಗಳೊಡನೆ ಬೆರೆತು ಟೇಸ್ಟಿಯಾಗಿರುವ ಗುಲ್ಕಂದ್ ತಯಾರಾಗುತ್ತೆ. ಬೇಕು ಅನ್ನಿಸಿದ್ರೆ ನೀವು ಇದಕ್ಕೆ ಡ್ರೈಫ್ರೂಟ್ಸ್ ಗಳನ್ನು ಕೂಡ ಮಿಕ್ಸ್ ಮಾಡಿ ಇಟ್ಟುಕೊಳ್ಳಬಹುದು..ತಿನ್ನಲು ಮತ್ತಷ್ಟು ಹೆಲ್ತಿಯಾಗಿರುತ್ತೆ.

Wikimedia Commons

ಗುಲ್ಕಂದ್ ಸೇವಿಸುವುದರ ಆರೋಗ್ಯ ಲಾಭಗಳು

ಗುಲ್ಕಂದ್ ಸೇವಿಸುವುದರ ಆರೋಗ್ಯ ಲಾಭಗಳು

ಈಗಾಗಲೇ ಹೇಳಿರುವಂತೆ ಗುಲ್ಕಂದ್ ಆಯುರ್ವೇದಿಯ ಮೆಡಿಸಿನ್.. ಹಲವು ರೋಗಗಳನ್ನು ಗುಣಪಡಿಸುವ ತಾಕತ್ತು ಗುಲ್ಕಂದ್ ಗಿದೆ. ಉತ್ತರ ಭಾರತೀಯರು ಮೊದಲೆಲ್ಲ ಇದನ್ನು ಹೆಚ್ಚಾಗಿ ಬಳಸುತ್ತಾ ಇದ್ದರು. ಇತ್ತೀಚೆಗೆ ದಕ್ಷಿಣ ಭಾರತದಲ್ಲೂ ಕೂಡ ಪಾಪ್ಯೂಲರ್ ಆಗಿದೆ.

Authour: Miansari66

Wikimedia Common

ದೇಹದ ದುರ್ವಾಸನೆ ನಿಯಂತ್ರಣಕ್ಕೆ ಗುಲ್ಕಂದ್

ದೇಹದ ದುರ್ವಾಸನೆ ನಿಯಂತ್ರಣಕ್ಕೆ ಗುಲ್ಕಂದ್

ನಿಮ್ಮ ಬಾಡಿ ಆಡರ್ ಸರಿಯಾಗಿಲ್ಲ. ಅದಕ್ಕಾಗಿ ಯಾವ್ಯುವುದೋ ಪರ್ಫ್ಯೂಮ್ ಬಳಸ್ತಾ ಇದ್ದೀರಾದ್ರೆ ಇನ್ಮುಂದೆ ಅಂತಹ ದುಸ್ಸಾಹಸ ಮಾಡಿ ಚರ್ಮ ಹಾಳು ಮಾಡಿಕೊಳ್ಳಬೇಡಿ. ಬದಲಾಗಿ ಪ್ರತಿದಿನ ಒಂದರಿಂದ ಎರಡು ಸ್ಪೂನ್ ಗುಲ್ಕಂದ್ ಸೇವಿಸಿ ನೋಡಿ. ಹೆಚ್ಚು ಬೆವರುವಿಕೆಯನ್ನು ನಿಯಂತ್ರಣದಲ್ಲಿಟ್ಟು, ದೇಹದ ದುರ್ವಾಸನೆ ನಿಯಂತ್ರಣಕ್ಕೆ ಗುಲ್ಕಂದ್ ನಿಮಗೆ ಸಹಾಯ ಮಾಡಲಿದೆ.ದೇಹವನ್ನು ಡೀಟಾಕ್ಷಿಫೈ ಮಾಡಿ ದೇಹದ ಒಳ ಉಷ್ಣಾಂಶವನ್ನು ಹೀರಿಕೊಂಡು ಆರಾಮದಾಯಕವಾಗಿರುವಂತೆ ಮಾಡುತ್ತೆ.

ತುರಿಕೆ, ನೆರಿಗೆ, ಮೊಡವೆ ಸಮಸ್ಯೆಗಳ ನಿವಾರಣೆಗೂ ಸೈ

ತುರಿಕೆ, ನೆರಿಗೆ, ಮೊಡವೆ ಸಮಸ್ಯೆಗಳ ನಿವಾರಣೆಗೂ ಸೈ

ಪ್ರತಿ ದಿನ ಗುಲಾಬಿ ದಳದ ಜ್ಯಾಮ್ ಸೇವಿಸೋದ್ರಿಂದ ಚರ್ಮದ ಆರೋಗ್ಯ ಉತ್ತಮಗೊಳ್ಳುತ್ತೆ. ತುರಿಕೆ,ಗುಳ್ಳೆಗಳಾಗೋದು,ನೆರಿಗೆಯ ಸಮಸ್ಯೆ,ಮೊಡವೆಗಳು, ಕಪ್ಪು ಕಲೆಗಳಾಗೋದು,ಹೀಗೆ ಚರ್ಮದ ಅನೇಕ ಸಮಸ್ಯೆಗಳಿಗೆ ಇದು ರಾಮಬಾಣವಿದ್ದಂತೆ. ಇದು ನೈಸರ್ಗಿಕವಾಗಿ ನಿಮ್ಮನ್ನ ಯಂಗ್ ಆಗಿ ಇರುವಂತೆ ಮಾಡುತ್ತೆ.

ದೇಹಕ್ಕೆ ಶಕ್ತಿ ನೀಡುತ್ತೆ ಗುಲ್ಕಂದ್

ದೇಹಕ್ಕೆ ಶಕ್ತಿ ನೀಡುತ್ತೆ ಗುಲ್ಕಂದ್

ಗುಲ್ಕಂದ್ ನಲ್ಲಿ ಹೆಚ್ಚು ಪ್ರಮಾಣ ಆಂಟಿ ಆಕ್ಸಿಡೆಂಟ್ ಗಳಿದ್ದು ಇವು ದೇಹಕ್ಕೆ ಶಕ್ತಿಯನ್ನು ಒದಗಿಸುವಲ್ಲಿ ನೆರವಾಗುತ್ತೆ. ಅಲ್ಸರ್, ಮಲಬದ್ಧತೆ, ಹೊಟ್ಟೆಯ ಉಷ್ಣ, ಹೊಟ್ಟೆಯುರಿ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯ ಗುಲ್ಕಂದ್ ಗಿದೆ..

ಮುಟ್ಟಿನ ಸಮಸ್ಯೆಗಳಿಗೆ ರಾಮಬಾಣ ಗುಲ್ಕಂದ್

ಮುಟ್ಟಿನ ಸಮಸ್ಯೆಗಳಿಗೆ ರಾಮಬಾಣ ಗುಲ್ಕಂದ್

ಹೆಚ್ಚು ರಕ್ತಸ್ರಾವವಾಗುವುದು, ಸರಿಯಾದ ಸಮಯಕ್ಕೆ ಮುಟ್ಟು ಬಾರದೇ ಇರುವುದು, ಮುಟ್ಟಿನ ದಿನಗಳಲ್ಲಿ ಕಾಡುವ ಅತಿಯಾದ ನೋವು, ಇತ್ಯಾದಿ ಮುಟ್ಟಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಗುಲ್ಕಂದ್ ಸೇವನೆ ಪರಿಣಾಮಕಾರಿಯಾಗಿದೆ. ಗುಲ್ಕಂದ್ ನಿಮ್ಮ ದೇಹಕ್ಕೆ ಗ್ಲೂಕೋಸ್ ನ್ನು ಪೂರೈಸುತ್ತೆ ಮತ್ತು ದೇಹದಲ್ಲಿ ಶಕ್ತಿಯ ಕೊರತೆಯಾಗದಂತೆ ನೋಡಿಕೊಳ್ಳುತ್ತೆ.

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಆಯುರ್ವೇದದ ಹಲವು ಮೆಡಿಸಿನ್ ಗಳಲ್ಲಿ ಗುಲ್ಕಂದ್ ಬಳಕೆ ಮಾಡಲಾಗುತ್ತೆ. ಇದು ಹೊಟ್ಟೆಯ ಸಮಸ್ಯೆಗೆ ಪರಿಹಾರ ನೀಡುತ್ತೆ. ನೀವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಿ ತೊಂದರೆ ನೀಡದಂತೆ ನೋಡಿಕೊಳ್ಳುವ ಸಾಮರ್ಥ್ಯ ಗುಲ್ಕಂದ್ ಗಿದೆ. ಹಾಗಾಗಿ ಅನೇಕ ಟಾನಿಕ್ ಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತೆ. ಅಷ್ಟೇ ಅಲ್ಲ ಇದು ಅಸಿಡಿಟಿ ಸಮಸ್ಯೆಗೂ ಕೂಡ ಪರಿಹಾರ ನೀಡುತ್ತೆ.

ರಕ್ತವನ್ನು ಶುದ್ಧೀಕರಿಸುತ್ತೆ ಗುಲ್ಕಂದ್

ರಕ್ತವನ್ನು ಶುದ್ಧೀಕರಿಸುತ್ತೆ ಗುಲ್ಕಂದ್

ರಕ್ತ ಶುದ್ಧೀಕರಿಸಿ, ದೇಹದಲ್ಲಿ ರಕ್ತಪರಿಚಲನೆ ಸರಾಗವಾಗಿರುವಂತೆ ನೋಡಿಕೊಳ್ಳುತ್ತೆ ಗುಲ್ಕಂದ್. ರಕ್ತದ ಆರೋಗ್ಯವನ್ನು ಉತ್ತಮ ಪಡಿಸುವ ಹಲವು ಟಾನಿಕ್ ಗಳಲ್ಲಿ ಗುಲಾಬಿ ದಳಗಳನ್ನು ಬಳಸುವ ಉದ್ದೇಶವೂ ಇದೇ ಆಗಿದೆ.

ಬೇಸಿಗೆಯಲ್ಲಿ ಕಾಡುವ ಸಮಸ್ಯೆಗಳಿಗೆ ಪರಿಹಾರ ಗುಲ್ಕಂದ್

ಬೇಸಿಗೆಯಲ್ಲಿ ಕಾಡುವ ಸಮಸ್ಯೆಗಳಿಗೆ ಪರಿಹಾರ ಗುಲ್ಕಂದ್

ಬೇಸಿಗೆಯಲ್ಲಿ ಪ್ರತಿ ದಿನ ಗುಲ್ಕಂದ್ ಸೇವಿಸೋದ್ರಿಂದ ದೇಹದ ಉಷ್ಣತೆ ನಿಯಂತ್ರಣದಲ್ಲಿದ್ದು ಸ್ಟ್ರೋಕ್ ಹೊಡೆಯುವುದು, ಮೂಗಿನಲ್ಲಿ ರಕ್ತಸ್ರಾವವಾಗುವುದು ಇತ್ಯಾದಿ ಸಮಸ್ಯೆಗಳನ್ನು ಕಂಟ್ರೋಲ್ ಮಾಡುತ್ತೆ.ಒಟ್ಟಿನಲ್ಲಿ ಗುಲಾಬಿ ದಳಗಳು ನಿಮ್ಮ ಸೌಂದರ್ಯ ಮತ್ತು ಆರೋಗ್ಯ ಎರಡನ್ನೂ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ ಅನ್ನೋದು ಮಾತ್ರ ಸತ್ಯ.

X
Desktop Bottom Promotion