Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಕ್ಕೋತ ಸೊಪ್ಪಿನ ಚಮತ್ಕಾರ ಬಲ್ಲಿರೇನು?
ಚಕ್ಕೋತ ಚಕ್ಕೋತ ಬಂದಳಪ್ಪೋ ಚಕ್ಕೋರಿ ಹಾಡು ಕೇಳಿದ್ದೀರಾ ಅಲ್ವಾ? ಬಟ್ ನಾವಿವತ್ತು ಆ ಚಕ್ಕೋತ ಬಗ್ಗೆ ಮಾತಾಡ್ತಾ ಇಲ್ಲ. ಎಲ್ಲರಿಗೂ ಚಿರಪರಿಚಿತವಾದ ಚಕ್ಕೋತ ಸೊಪ್ಪಿನ ಬಗ್ಗೆ ಕೆಲವು ಇಂಟರೆಸ್ಟಿಂಗ್ ಅಂಶಗಳನ್ನು ತಿಳಿಸಿಕೊಡ್ತೀವಿ.. ತಿನ್ನಲು ಬಲು ರುಚಿಯಾಗಿರುವ ಈ ಸೊಪ್ಪಿನಲ್ಲಿ ಹಲವು ಔಷಧೀಯ ಗುಣಗಳಿವೆ..
ಚಕ್ಕೋತ ಸೊಪ್ಪಿನ ಸಾಂಬಾರು, ಸಾಸಿವೆ, ಮಜ್ಜಿಗೆ ಹುಳಿ, ಹೀಗೆ ವೆರೈಟಿ ಅಡುಗೆಗಳನ್ನು ಮಾಡಿ ಸವಿದ್ರೆ ನಿಮ್ಮ ಆರೋಗ್ಯ ಸುಧಾರಿಸುತ್ತೆ. ಹಾಗಾದ್ರೆ ಯಾವೆಲ್ಲ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಚಕ್ಕೊತಾ ಸೊಪ್ಪಿಗಿದೆ ಅನ್ನೋದ್ರ ಡೀಟೈಲ್ಸ್ ತಿಳ್ಕೋಬೇಕಾ.. ಹಾಗಾದ್ರೆ ಇಲ್ಲಿ ನೋಡಿ.

ಮಲಮೂತ್ರ ಶುದ್ಧಿಗೆ ಚಕ್ಕೋತ
ಸ್ವಲ್ಪ ಚಕ್ಕೋತ ಸೊಪ್ಪನ್ನು ಮಿಕ್ಸಿ ಮಾಡಿ ರಸ ತೆಗೆದುಕೊಳ್ಳಿ. ಆ ರಸಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ, ರಾತ್ರಿ ಮಲಗುವ ವೇಳೆ ಸೇವಿಸಿದರೆ ಮಲಮೂತ್ರ ಶುದ್ಧಿಯಾಗುತ್ತದೆ. ಹಾಗಂತ ಈ ಜ್ಯೂಸ್ ಅಷ್ಟು ರುಚಿಯಾಗಿ ಇರೋದಿಲ್ಲ. ಕುಡಿಯೋದಕ್ಕೆ ಕಷ್ಟ ಅನ್ನಿಸ್ಬಹುದು.. ಆದ್ರೆ ಮಲಮೂತ್ರ ವಿಸರ್ಜನೆಯಲ್ಲಿ ತೊಂದರೆ ಇದ್ದಾಗ ಟ್ರೈ ಮಾಡ್ಬಹುದು.
ಜ್ವರಕ್ಕೂ ರಾಮಬಾಣ ಚಕ್ಕೋತ
ಚಕ್ಕೋತ ಸೊಪ್ಪಿನ ಕಷಾಯ ಸೇವಿಸಿದರೆ ಜ್ವರ ನಿವಾರಣೆಯಾಗಲಿದೆ. ಆದ್ರೆ ಮಾಡುವ ಮೆಥೆಡ್‌ನಲ್ಲೇ ಕಷಾಯ ಮಾಡಬೇಕು ಅನ್ನೋದು ನೆನಪಿರಲಿ. ಅಷ್ಟೇ ಅಲ್ಲ ಮೂಲವ್ಯಾಧಿ ಸಮಸ್ಯೆ ಕೂಡ ಚಕ್ಕೋತ ಸೊಪ್ಪಿನ ಕಷಾಯದಿಂದ ಕಡಿಮೆಯಾಗುತ್ತದೆ.
ಜೀರ್ಣಶಕ್ತಿ ವೃದ್ಧಿಸುವ ಶಕ್ತಿ ಚಕ್ಕೋತ ಸೊಪ್ಪಿಗಿದೆ
ಚಕ್ಕೋತ ಮಾತ್ರವಲ್ಲ. ಎಲ್ಲಾ ಹಸಿರು ಸೊಪ್ಪಿನಲ್ಲಿ ಜೀರ್ಣಶಕ್ತಿಯನ್ನು ವೃದ್ಧಿಸುವ ಸಾಮರ್ಥ್ಯವಿರುತ್ತೆ. ಅದ್ರಲ್ಲಿ ಚಕ್ಕೋತ ಕೂಡ ಒಂದು..15 ಮಿಲಿ ಚಕ್ಕೋತ ಸೊಪ್ಪಿನ ರಸವನ್ನು 1 ಲೋಟ ಮಜ್ಜಿಗೆ ಜೊತೆ ಊಟದ ಅರ್ಧ ಗಂಟೆ ಮುಂಚೆ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಜೀರ್ಣಶಕ್ತಿಯ ಸಮಸ್ಯೆ ಇರುವವರು ಇದನ್ನು ಟ್ರೈ ಮಾಡ್ಬಹುದು..
ನಿಶ್ಯಕ್ತಿ ಸಮಸ್ಯೆ ದೂರ ಮಾಡುತ್ತೆ ಚಕ್ಕೋತ
ಚಕ್ಕೋತ ಸೊಪ್ಪನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದು ಸಕ್ಕರೆ ಬೆರೆಸಿ ಸೇವಿಸಿದರೆ ಶಕ್ತಿ ಹೆಚ್ಚುತ್ತದೆ. ನಿಶ್ಯಕ್ತಿಯಿಂದ ಬಳಲುವವರು ಈ ಸೊಪ್ಪನ್ನು ಹೀಗೆ ಸೇವನೆ ಮಾಡೋದು ಒಳಿತು..ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿರುವ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಚಕ್ಕೋತ ಸೊಪ್ಪನ್ನು ಆಗಾಗ ಅಡುಗೆ ಮನೆಯಲ್ಲಿ ಬಳಕೆ ಮಾಡ್ತಾ ಇರಿ.. ನಿಮ್ಮ ಆರೋಗ್ಯ ಹೆಚ್ಚಿಸುವ ಸೊಪ್ಪುಗಳನ್ನು ಚಕ್ಕೋತ ಕೂಡ ಒಂದು.. ಇಂತಹ ಕಾಯಿಲೆಗೆ ಹೀಗೆ ಬಳಕೆ ಮಾಡಬೇಕು ಅನ್ನೋದು ಒಂದು ಕ್ರಮವಾದ್ರೆ, ಆರೋಗ್ಯದ ದೃಷ್ಟಿಯಿಂದ ಎಲ್ಲಾ ರೀತಿಯ ಅಡುಗೆಗಳನ್ನು ಅಡುಗೆ ಮನೆಯಲ್ಲಿ ತಯಾರು ಮಾಡೋದು ಮತ್ತೊಂದು ವಿಧಾನ. ಆ ನಿಟ್ಟಿನಲ್ಲಿ ಪ್ರತಿ ಅಡುಗೆ ಮನೆಯಲ್ಲೂ ಮಹಿಳೆಯರು ಜವಾಬ್ದಾರಿಯುತವಾಗಿ ಅಡುಗೆ ಮಾಡೋದು ಒಳ್ಳೇದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

