Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇಳಿವಯಸ್ಸಿನಲ್ಲಿ ಕೂದಲುದುರುವ ಸಮಸ್ಯೆ- ಕಾರಣ ತಿಳಿದುಕೊಳ್ಳಿ
ಇತ್ತೀಚಿನ ದಿನಗಳಲ್ಲಿ ನಗರದ ಧೂಳು, ವಾತಾವರಣದಿಂದಾಗಿ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಕೂದಲುದುರುವಿಕೆಯಂತೂ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ! ವಯಸ್ಸು ಇಪ್ಪತ್ತೈದು ಎಂದರೆ ಸಾಕು, ಪುರುಷ ಹಾಗೂ ಮಹಿಳೆಯರಲ್ಲಿ ಸೊಂಪಾಗಿ ಬೆಳೆಯಬೇಕಿದ್ದ ಕೂದಲು ಸಂಕುಚಿತವಾಗಿ ಉದುರಲು ಪ್ರಾರಂಭವಾಗುತದೆ!
ಅದರಲ್ಲೂ ಸಣ್ಣ ವಯಸ್ಸಿನಲ್ಲಿಯೇ ಕೂದಲು ಉದುರುತ್ತಿರುವುದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಸಾಮಾನ್ಯವಾಗಿ ಕೂದಲು ಉದುರುವುದಕ್ಕೆ ಶಕ್ತಿಹೀನತೆಯೇ ಮುಖ್ಯ ಕಾರಣ. ಪೋಷಕಾಂಶಗಳ ಅಭಾವದಿಂದ ಶಕ್ತಿಯ ಕೊರತೆಯುಂಟಾಗುವುದರಿಂದ ಇಳಿ ವಯಸ್ಸಿನಲ್ಲಿ ಹೆಚ್ಚು ಹೆಚ್ಚಾಗಿ ಕೂದಲು ಉದುರುವುದು. ಆದುದರಿಂದ ಉತ್ತಮ ಪೋಷಕಾಂಶಗಳುಳ್ಳ ಆಹಾರ ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದ್ದಲ್ಲಿ ಕೂದಲು ಉದುರುವಿಕೆ ಅಷ್ಟಾಗಿ ಕಂಡುಬರುವುದಿಲ್ಲ.
ಹೆಚ್ಚಿನವರು ತಲೆ ಕೂದಲು ಉದುರುವ ಬಗ್ಗೆ ಗಮನಹರಿಸುವುದಿಲ್ಲ. ಯಾಕೆಂದರೆ ಅದರಿಂದ ಹೊಸ ಕೂದಲು ಬರುತ್ತದೆ ಎಂದು ನಂಬಿರುತ್ತಾರೆ. ಕೂದಲು ಉದುರುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲವೆಂದಾದರೆ ಆಗ ನೀವು ಆದಷ್ಟು ಬೇಗ ತಜ್ಞ ವೈದ್ಯರನ್ನು ಕಂಡು ಇದಕ್ಕೆ ಚಿಕಿತ್ಸೆ ಪಡೆಯುವುದು ತುಂಬಾ ಮುಖ್ಯ. ಬನ್ನಿ ಇಪ್ಪತ್ತೈದರ ಹರೆಯದ ಮೊದಲೇ ಕೂದಲು ಉದುರಲು ಕಾರಣಗಳೇನು ಎನ್ನುವ ಬಗ್ಗೆ ನಾವೊಮ್ಮೆ ಗಮನಹರಿಸುವ...

ಒತ್ತಡ
ವ್ಯಕ್ತಿಯನ್ನು ನಿಧಾನವಾಗಿ ಕೊಲ್ಲುವ ವಿಷವೇ ಒತ್ತಡ. ಇದು ಸ್ಲೋ ಪಾಯಿಸನಂತೆ ಕೆಲಸ ಮಾಡುತ್ತದೆ. 25ರ ಹರೆಯಕ್ಕೆ ಮೊದಲು ಕೂದಲು ಉದುರಲು ಇದು ಒಂದು ಪ್ರಮುಖ ಕಾರಣ. ಯುವಕರಲ್ಲಿ ಒತ್ತಡದಿಂದಾಗಿ ಉಂಟಾಗುವ ಕೂದಲು ಉದುರುವಿಕೆಯನ್ನು ಟೆಲೊಗನ್ ಎಫ್ಲವಿಮ್ ಎಂದು ಕರೆಯಲಾಗುತ್ತದೆ. ಜೀವನವನ್ನು ಆನಂದಿಸಿ ಒತ್ತಡದಿಂದ ದೂರವಿದ್ದರೆ ತಲೆಯ ಕೂದಲು ಹಾಗೆ ಇರುತ್ತದೆ.

ಗರ್ಭಧಾರಣೆ
ಮಹಿಳೆಯರಲ್ಲಿ ಸಾಮಾನ್ಯವಾಗಿ ಗರ್ಭಧಾರಣೆ ವೇಳೆ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಹೆಚ್ಚು ಗಂಭೀರವಲ್ಲದಿದ್ದರೂ ಮುಂದುವರಿದರೆ ಅದರ ಬಗ್ಗೆ ಗಮನಹರಿಸುವುದು ಅತ್ಯಗತ್ಯ. ಮೂರು ತಿಂಗಳ ಬಳಿಕವೂ ಇದು ಮುಂದುವರಿದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ.

ವಿಟಮಿನ್ ಎ
ನಮ್ಮ ದೇಹಕ್ಕೆ ಎಲ್ಲಾ ರೀತಿಯ ಪೌಷ್ಠಿಕಾಂಶಗಳು ಬೇಕಾಗುತ್ತದೆ. ಅದರಲ್ಲಿ ವಿಟಮಿನ್ ಕೊರತೆಯಾದರೆ ದೇಹವು ಅದರ ಚಿಹ್ನೆಗಳನ್ನು ತೋರಿಸುತ್ತದೆ. ಅದರಲ್ಲಿ ಒಂದು ಕೂದಲು ಉದುರುವುದು. 25ರ ಹರೆಯದ ವೇಳೆ ನೀವು ಹಠಾತ್ ಆಗಿ ಕೂದಲು ಉದುರುವ ಸಮಸ್ಯೆಗೆ ಒಳಗಾದರೆ ಆಗ ವಿಟಮಿನ್ ಪರೀಕ್ಷೆ ಮಾಡಿಕೊಳ್ಳಿ.

ಪ್ರೋಟೀನ್ ಕೊರತೆ
ನಮ್ಮ ದೇಹವನ್ನು ಆರೋಗ್ಯಕರ ಹಾಗೂ ಫಿಟ್ ಆಗಿಡಲು ಪ್ರೋಟೀನ್ ತುಂಬಾ ಮಹತ್ವದ ಕಾರ್ಯ ನಿರ್ವಹಿಸುತ್ತದೆ. ನಮ್ಮ ದೇಹಕ್ಕೆ ಪ್ರೋಟೀನ್ ಕೊರತೆಯಾದರೆ ಅತಿಯಾಗಿ ಕೂದಲು ಉದುರುವ ಸಮಸ್ಯೆ ಎದುರಾಗುತ್ತದೆ. ಈ ಸಮಸ್ಯೆ ನಿವಾರಿಸಲು ಪ್ರೋಟೀನ್ ಸೇವನೆಯನ್ನು ಹೆಚ್ಚಿಸಿ.

ಅನುವಂಶೀಯ
25ರ ಹರೆಯಕ್ಕೆ ಮೊದಲು ಕೂದಲು ಉದುರಲು ಒಂದು ಆರೋಗ್ಯ ಕಾರಣವೆಂದರೆ ಅನುವಂಶೀಯತೆ. ಇದು ತುಂಬಾ ಅಪರೂಪ ಮತ್ತು 50ರಲ್ಲಿ ಒಬ್ಬರಲ್ಲಿ ಮಾತ್ರ ಇದು ಕಂಡುಬರುತ್ತದೆ.

ಹಾರ್ಮೋನುಗಳ ಸಮಸ್ಯೆ
ಹಾರ್ಮೋನುಗಳ ಅಸಮತೋಲನ ನಿಮ್ಮ ಜೀವನವನ್ನು ನರಕ ಮಾಡಬಹುದು. 25ರ ಕೆಳಹರೆಯದ ಮಹಿಳೆಯರಲ್ಲಿ ಕೂದಲು ಉದುರಲು ಪ್ರಮುಖ ಕಾರಣವೆಂದರೆ ಹಾರ್ಮೋನುಗಳ ಬದಲಾವಣೆ. ಯುವತಿಯರಲ್ಲಿ ಕೂದಲು ಉದುರಲು ಹಾರ್ಮೋನು ಅಸಮತೋಲನವೇ ಪ್ರಮುಖ ಆರೋಗ್ಯ ಕಾರಣ.



Click it and Unblock the Notifications
