For Quick Alerts
ALLOW NOTIFICATIONS  
For Daily Alerts

ಅಚ್ಚರಿಯಾದರೂ ನಿಜ, ವೃದ್ಧಾಪ್ಯಕ್ಕೆ ಇವೇ ಕಾರಣ..

By Arshad
|

ವೃದ್ಧಾಪ್ಯ ಜೀವನದ ಒಂದು ಅನಿವಾರ್ಯ ಘಟ್ಟವಾಗಿದೆ. ವಯಸ್ಸಾಗುತ್ತಿದ್ದಂತೆಯೇ ಎಲ್ಲರೂ ಯೌವನದಿಂದ ಮುಪ್ಪಿಗೆ ಜಾರಲೇ ಬೇಕು. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಸರ್ಗದ ನಿಯಮದ ಅನುಸಾರ ಬಾಲ್ಯ ಯೌವನ ಮತ್ತು ವೃದ್ಧಾಪ್ಯ ಪ್ರತಿ ಜೀವಿ ಅನುಭವಿಸಬೇಕಾದ ಘಟ್ಟಗಳಾಗಿವೆ. ಆದರೆ ವೃದ್ಧಾಪ್ಯ ಆವರಿಸುವ ವಯಸ್ಸು ಪ್ರತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಇದಕ್ಕೆ ಜೀವನಶೈಲಿ, ಕುಟುಂಬದ ಇತಿಹಾಸ, ಭಾವಾವೇಶ, ಉದ್ವೇಗ, ಆರೋಗ್ಯದ ಲಕ್ಷಣಗಳು, ಔಷಧಿಗಳ ಪರಿಣಾಮಗಳು, ಉತ್ತಮ ಆಹಾರದ ಕೊರತೆ ಮೊದಲಾದ ಹತ್ತು ಹಲವು ಕಾರಣಗಳಿವೆ.

ಮೇಲ್ನೋಟಕ್ಕೆ ನೋಡಿದರೆ ಸದಾ ಚಟುವಟಿಕೆಯಿಂದಿದ್ದು ಮದ್ಯಪಾನ, ಧೂಮಪಾನಗಳಂತಹ ಚಟಗಳಿಂದ ದೂರವಿದ್ದವರು ಹೆಚ್ಚು ಚಟುವಟಿಕೆಯಿಲ್ಲದ, ಧೂಮಪಾನಿ ಮತ್ತು ಮದ್ಯಪಾನಿಗಳಿಗಿಂತ ನಿಧಾನವಾಗಿ ಮುಪ್ಪಿಗೆ ಜಾರುತ್ತಾರೆ. ಮುಪ್ಪಿಗೆ ಅನಾರೋಗ್ಯವೂ ಇನ್ನೊಂದು ಪ್ರಮುಖ ಕಾರಣವಾಗಿದೆ. ವೃದ್ಧಾಪ್ಯಕ್ಕೆ ಇದುವರೆಗೆ ಯಾವುದೇ ವಿಜ್ಞಾನಿಯ ಬಳಿ ಉತ್ತರವಿಲ್ಲ. ಕೇವಲ ಕಟ್ಟು ಕಥೆಗಳಿವೆ ಅಷ್ಟೇ.

ವೃದ್ಧಾಪ್ಯವನ್ನು ತಡೆಯಲು ಸಾಧ್ಯವಿಲ್ಲದಿದ್ದರೂ ಸಾಕಷ್ಟು ಮುಂದೂಡಲು ಸಾಧ್ಯ. ಇದಕ್ಕಾಗಿ ಮೊತ್ತ ಮೊದಲು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದಕ್ಕೆ ಪ್ರಥಮ ಆದ್ಯತೆ ನೀಡಬೇಕು. ಉತ್ತಮ ಪೌಷ್ಠಿಕ ಆಹಾರ, ಸಾಕಷ್ಟು ನಿದ್ದೆ, ವ್ಯಾಯಾಮ ಮೊದಲಾದವುಗಳಿಂದ ಆರೋಗ್ಯ ಪಡೆಯುವುದರ ಜೊತೆಗೇ ಮುಪ್ಪನ್ನೂ ಮುಂದೂಡಬಹುದು. ಆದರೆ ಅದಕ್ಕೂ ಮುನ್ನ ಮುಪ್ಪು ಬೇಗನೇ ಆವರಿಸಲು ಯಾವ ಕಾರಣಗಳಿವೆ ಎಂದು ತಿಳಿದರೆ ಇದನ್ನು ಅನುಸರಿಸದೇ ಮುಪ್ಪು ಬೇಗನೇ ಆವರಿಸದಿರುವಂತೆ ನೋಡಿಕೊಳ್ಳುವುದು ಜಾಣತನವಾಗಿದೆ. ಈ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡಲಾಗಿದೆ ಮುಂದೆ ಓದಿ...

Factors That Speed Up Ageing

ಮಾನಸಿಕ ಕ್ಷೋಭೆ
ಒತ್ತಡ, ಖಿನ್ನತೆ, ಉದ್ವೇಗ, ದುಃಖ ಮೊದಲಾದ ಮಾನಸಿಕ ಕ್ಷೋಭೆಗಳು ಮುಪ್ಪನ್ನು ಬೇಗನೇ ಆವರಿಸುವಂತೆ ಮಾಡುತ್ತವೆ. ಒತ್ತಡದಿಂದ ವ್ಯಕ್ತಿಯ ಮಾನಸಿಕ ಮತ್ತು ಭಾವೋದ್ವೇಗದ ಶಕ್ತಿ ಉಡುಗುತ್ತದೆ. ಇದು ನೇರವಾಗಿ ದೈಹಿಕ ಬೆಳವಣಿಗೆಯ ಮೇಲೆ ಅಪಾರವಾದ ಪರಿಣಾಮ ಬೀರುತ್ತದೆ. ಈ ಪರಿಣಾಮ ಮುಪ್ಪನ್ನು ಬೇಗನೇ ಆವರಿಸುವಂತೆ ಮಾಡುತ್ತದೆ. ಜೈಲಿನಲ್ಲಿರುವ ಖೈದಿಗಳು ಶಿಕ್ಷೆ ಮುಗಿಸಿ ಹೊರಬಂದಾಗ ತಮ್ಮ ವಯಸ್ಸಿಗೂ ಮೀರಿದ ಮುಪ್ಪಿನ ಚಿಹ್ನೆಗಳನ್ನು ಹೊಂದಿರುವುದು ಇದೇ ಕಾರಣಕ್ಕೆ.

ಅನಾರೋಗ್ಯಕರ ಆಹಾರಕ್ರಮ
ಒಂದು ಹೊತ್ತು ಉಣ್ಣವನು ಯೋಗಿ, ಎರಡು ಹೊತ್ತು ಉಣ್ಣವನು ಭೋಗಿ, ಮೂರು ಹೊತ್ತು ಉಣ್ಣವ ರೋಗಿ, ನಾಲ್ಕು ಹೊತ್ತು ಉಣ್ಣವನನ್ನು ಹೊತ್ತುಕೊಂಡು ಹೋಗಿ ಎಂಬುದೊಂದು ಕನ್ನಡ ಗಾದೆ. ಆ ಪ್ರಕಾರ ನಮ್ಮ ಆಹಾರವನ್ನು ದಿನಕ್ಕೆ ಎರಡು ಬಾರಿ ಸೇವಿಸುವುದು ಉತ್ತಮ. ಆದರೆ ಆಧುನಿಕ ವಿಜ್ಞಾನದ ಪ್ರಕಾರ ಬೆಳಗ್ಗಿನ ಅಲ್ಪ ಉಪಾಹಾರ ಮತ್ತು ಮಧ್ಯಾಹ್ನ ಮತ್ತು ರಾತ್ರಿಯೂಟಗಳು ಉತ್ತಮ ಆರೋಗ್ಯಕ್ಕೆ ಪೂರಕವಾಗಿವೆ.
ಆದರೆ ಆಧುನಿಕತೆಯ ಭರಾಟೆಯಲ್ಲಿ ಭರದಿಂದ ಮಾರಾಟವಾಗುತ್ತಿರುವ ಸಿದ್ಧ ಆಹಾರಗಳನ್ನು ಸೇವಿಸಲು ನಾವು ಯಾವುದೇ ಅಳುಕು ತೋರುತ್ತಿಲ್ಲ.

ಈ ಸಿದ್ಧ ಆಹಾರಗಳಲ್ಲಿ ಹಾನಿಕಾರಕ ಫ್ರೀ ರ್‍ಯಾಡಿಕಲ್ ಎಂಬ ವಿಷಕಾರಿ ಕಣಗಳಿದ್ದು ಇವು ಕ್ಯಾನ್ಸರ್ ಬರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಅನಾರೋಗ್ಯಕರ ಆಹಾರದ ಸೇವನೆಯಿಂದ ಚರ್ಮದಲ್ಲಿ ಸಡಿಲತೆ, ನೆರಿಗೆ, ಕೂದಲು ಹಣ್ಣಾಗುವುದು ಮೊದಲಾದ ಲಕ್ಷಣಗಳು ಚಿಕ್ಕವಯಸ್ಸಿನಲ್ಲಿಯೇ ಕಂಡುಬರುತ್ತವೆ. ಬದಲಿಗೆ ಕ್ಲುಪ್ತಕಾಲಕ್ಕೆ ಮನೆಯಲ್ಲಿ ತಯಾರಿಸಿದ ಹಾಗೂ ಪೌಷ್ಟಿಕ ಆಹಾರ, ಆಯಾ ದಿನಗಳಲ್ಲಿ ಸುಲಭವಾಗಿ ಲಭ್ಯವಾಗುವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಮೂಲಕ ಆರೋಗ್ಯವನ್ನು ಉತ್ತಮವಾಗಿಸಿಕೊಂಡು ವೃದ್ಧಾಪ್ಯವನ್ನು ದೂರವಾಗಿಸಬಹುದು.

ಕ್ರಮಬದ್ಧವಲ್ಲದ ನಿದ್ದೆಯ ಅಭ್ಯಾಸ
ಮುಪ್ಪು ಬೇಗನೇ ಆವರಿಸಲು ಕ್ರಮಬದ್ದವಲ್ಲದ ನಿದ್ದೆಯ ಅಭ್ಯಾಸವೂ ಒಂದು ಕಾರಣವಾಗಿದೆ. ನಿದ್ದೆ ಮಾಡಬೇಕಾದ ಸಮಯದಲ್ಲಿ ಎಚ್ಚರಿದ್ದು ಎಚ್ಚರಿರಬೇಕಾದ ಸಮಯದಲ್ಲಿ ನಿದ್ದೆ ಹೋಗುವುದು, ಅತಿ ಹೆಚ್ಚು ಅಥವಾ ಅತಿ ಕಡಿಮೆ ಸಮಯ ನಿದ್ದೆ ಮಾಡುವುದು ಮೊದಲಾದವು ಕ್ರಮಬದ್ದವಲ್ಲದ ನಿದ್ದೆಯ ಅಭ್ಯಾಸಗಳಾಗಿವೆ. ಉತ್ತಮ ಆರೋಗ್ಯಕ್ಕೆ ನಿತ್ಯವೂ ನಿಯಮಿತ ಸಮಯದಲ್ಲಿ ಆರರಿಂದ ಎಂಟು ಗಂಟೆಗಳ ಗಾಢ ನಿದ್ದೆ ಬೇಕು.


ನಿದ್ದೆ ಸರಿ ಇಲ್ಲದಿದ್ದರೆ ಮುಖ್ಯವಾಗಿ ಕಣ್ಣುಗಳ ಕೆಳಗೆ ಮತ್ತು ಸುತ್ತಲ ಭಾಗ ಕಪ್ಪಗಾಗಲು ತೊಡಗುತ್ತದೆ. ಅಸಮರ್ಪಕ ನಿದ್ದೆ ಮಾನಸಿಕ ಜಾಗರೂಕತೆ, ಚುರುಕುತನವನ್ನೂ ಕುಂಠಿತಗೊಳಿಸುತ್ತದೆ ಹಾಗೂ ಮುಪ್ಪಿನ ಸೂಚನೆಗಳು ಚಿಕ್ಕವಯಸ್ಸಿಗೇ ಆಗಮಿಸುವಂತೆ ಮಾಡುತ್ತದೆ.

ಧೂಮಪಾನ ಮತ್ತು ಮದ್ಯಪಾನ
ಸಾಮಾಜಿಕ ಪಿಡುಗುಗಳಾದ ಈ ಎರಡು ದುರಭ್ಯಾಸಗಳು ಮುಪ್ಪನ್ನು ಬೇಗೇ ಆವರಿಸುವಲ್ಲಿ ಪ್ರಮುಖ ಕಾರಣವಾಗಿವೆ ಎಂಬ ಮಾತಿನಲ್ಲಿ ಯಾವುದೇ ಸಂಶಯವಿಲ್ಲ. ಇವುಗಳ ಸೇವನೆಯಿಂದ ದೇಹದ ಮುಖ್ಯ ಅಂಗಗಳಾದ ಮೂತ್ರಪಿಂಡಗಳು ಮತ್ತು ಶ್ವಾಸಕೋಶಗಳು ಬಾಧೆಗೊಳಗಾಗುತ್ತವೆ. ಅಲ್ಲದೇ ಚರ್ಮವೂ ಸಡಿಲಗೊಂಡು ನೆರಿಗೆಗಳು ಮೂಡಲು ತೊಡಗುತ್ತದೆ. ದಿನಗಳೆದಂತೆ ಇದರ ವ್ಯಸನಕ್ಕೆ ಒಳಗಾದವರು ಸೇವನೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಆರೋಗ್ಯವನ್ನು ಇನ್ನಷ್ಟು ಕೆಡಿಸಿಕೊಳ್ಳುವುದಲ್ಲದೇ ಜೋಲುಬಿದ್ದ ಚರ್ಮ, ಗುಳಿಬಿದ್ದ ಕಣ್ಣುಗಳು, ಕೆಲಭಾಗ ಕೆಂಪಗಾಗಿ ಸವೆದ ಚರ್ಮ ಮೊದಲಾದ ಲಕ್ಷಣಗಳಿಂದ ಚಿಕ್ಕವಯಸ್ಸಿಗೇ ಮುಪ್ಪಿಗೀಡಾದವರಂತೆ ಕಾಣುತ್ತಾರೆ.

ಆಂಟಿ ಆಕ್ಸಿಡೆಂಟುಗಳಿರುವ ಆಹಾರದ ಕೊರತೆ
ನಮ್ಮ ಆಹಾರದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟುಗಳಿರುವಂತೆ ನೋಡಿಕೊಳ್ಳುವುದು ಆರೋಗ್ಯದ ಗುಟ್ಟು. ಇದರ ಕೊರತೆಯಿಂದ ಮುಪ್ಪು ಆವರಿಸುವ ಗತಿ ಹೆಚ್ಚಾಗುತ್ತದೆ. ಅಲ್ಲದೇ ದೇಹದಲ್ಲಿ ಈಗಾಗಲೇ ಇರುವ ಕ್ಯಾನ್ಸರ್ ಕಾರಕ ಕಣಗಳಿಗೆ ಯಾವುದೇ ತಡೆ ಇಲ್ಲದೇ ದೇಹಕ್ಕೆ , ಅದರಲ್ಲೂ ವಿಶೇಷವಾಗಿ ಚರ್ಮಕ್ಕೆ ಹಾನಿ ಎಸಗಲು ಸಾಧ್ಯವಾಗುತ್ತದೆ. ಇದು ಮುಪ್ಪಿನ ಗುರುತುಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಕೊರತೆಯನ್ನು ನೀಗಿಸಲು ಸಾಕಷ್ಟು ತಾಜಾ ಹಣ್ಣು, ತರಕಾರಿ, ಸೊಪ್ಪು, ಲಿಂಬೆ, ಕಿತ್ತಳೆ ಮೊದಲಾದ ಹಣ್ಣುಗಳನ್ನು ಸೇವಿಸುತ್ತಾ ಇರಬೇಕು.

English summary

Factors That Speed Up Ageing

In this article, we at Boldsky are listing out some of the factors that speed up the ageing process. Read on to know more about it. ಈ ಲೇಖನದಲ್ಲಿ, ನಿಮ್ಮನ್ನು ಮುಪ್ಪಿಗೆ ತಳ್ಳುವ ಸಂಗತಿಗಳು ಯಾವುದು ಎಂಬುದನ್ನು ತಿಳಿಸಿದ್ದೇವೆ ಮುಂದೆ ಓದಿ...
X
Desktop Bottom Promotion