ಬೊಜ್ಜಿನ ಸಮಸ್ಯೆ: ರಾತ್ರಿ ಬೆಳಗಾಗುವುದರ ಒಳಗೆ ವ್ಯತ್ಯಾಸ ನೋಡಿ!

By manu

ನಮ್ಮ ದೇಹದಲ್ಲಿ ಅತ್ಯಂತ ಕಷ್ಟಕರವಾಗಿ ಮತ್ತು ಅತ್ಯಂತ ಕಡೆಯದಾಗಿ ಕರಗುವ ಕೊಬ್ಬು ಎಂದರೆ ಹೊಟ್ಟೆ ಮತ್ತು ಸೊಂಟದ ಕೊಬ್ಬು. ಇದನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಕಠಿಣ ಪರಿಶ್ರಮದ ಬಳಿಕ ಕರಗಿದ್ದ ಹೊಟ್ಟೆ ಒಂದು ಸ್ವಲ್ಪ ಸಡಿಲ ಬಿಟ್ಟರೆ ಮತ್ತು ಶೀಘ್ರದಲ್ಲಿಯೇ ತುಂಬಿಕೊಂಡು ನಿಮ್ಮ ಕನ್ನಡಿಯನ್ನೇ ಪರಿಹಾಸ್ಯ ಮಾಡುತ್ತದೆ.

ಹೌದು ನಮಗರಿವಿಲ್ಲದೇ ಆವರಿಸಿದ ಸ್ಥೂಲಕಾಯವನ್ನು ಕರಗಿಸುವುದು ಮಾತ್ರ ಬಹಳ ಕಷ್ಟ. ಅದರಲ್ಲೂ ಸೊಂಟದ ಸುತ್ತಳತೆಯನ್ನು ಹೆಚ್ಚಿಸಿರುವ ಕೊಬ್ಬನ್ನು ಕರಗಿಸುವುದು ಮಾತ್ರ ಅತ್ಯಂತ ಕಷ್ಟ. ಈಗಾಗಲೇ ತೂಕವನ್ನು ಕಳೆದುಕೊಂಡಿರುವವರನ್ನು ವಿಚಾರಿಸಿದರೆ ಹೊಟ್ಟೆಯನ್ನು ಕರಗಿಸುವ ಕಷ್ಟವೇನೆಂದು ಅರಿವಾಗುತ್ತದೆ. ಹೊಟ್ಟೆಯ ಕೊಬ್ಬು ಕರಗಿಸಲು ಅದ್ಭುತ ಹಸಿರು ಜ್ಯೂಸ್‌ಗಳು

ಒಂದು ವೇಳೆ ನಿಮ್ಮ ಸೊಂಟದ ಸುತ್ತಳತೆಯೂ ವಿಪರೀತ ಹೆಚ್ಚಾಗಿದ್ದು ಇದನ್ನು ಕರಗಿಸಲು ಯೋಚಿಸುತ್ತಿದ್ದರೆ, ಬೋಲ್ಡ್ ಸ್ಕೈ ಇಂದು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು, ಈ ವಿಧಾನಗಳನ್ನು ಕಟ್ಟುನಿಟ್ಟಾಗಿ ರಾತ್ರಿ ಮಲಗುವ ಮುನ್ನ ಸುಮಾರು ಮೂರು ತಿಂಗಳಾದರೂ ಅನುಸರಿಸಬೇಕು. ಬಳಿಕವೇ ಇದರ ಪರಿಣಾಮಗಳು ಅರಿವಿಗೆ ಬರುತ್ತವೆ. ಬನ್ನಿ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಿರುವ ಸಲಹೆಗಳು ನಿಮ್ಮ ನೆರವಿಗೆ ಬರಲಿವೆ..

ಹಸಿರು ಟೀ ಕುಡಿಯಿರಿ

ಹಸಿರು ಟೀ ಕುಡಿಯಿರಿ

ಗ್ರೀನ್ ಟೀಯಲ್ಲಿರುವ ಪೋಷಕಾಂಶಗಳು, ಅಂಟಿ ಆಕ್ಸಿಡೆಂಟ್‌ಗಳು (ಉತ್ಕರ್ಷಣ ನಿರೋಧಕ) ಮತ್ತು ಇತರ ಖನಿಜಗಳ ಪ್ರಮಾಣವನ್ನು ಪರಿಗಣಿಸಿದರೆ ಇದೊಂದು ಅತ್ಯುತ್ತಮವಾದ ಪೇಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಸಿರು ಟೀ ಕುಡಿಯಿರಿ

ಹಸಿರು ಟೀ ಕುಡಿಯಿರಿ

ಹಾಗಾಗಿ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಸಿರು ಟೀ ಕುಡಿಯುವುದರಿಂದ ರಾತ್ರಿ ಮಲಗಿದ ಬಳಿಕ ನಡೆಯುವ ಜೀವರಾಸಾಯನಿಕ ಕ್ರಿಯೆಗಳು ಚುರುಕುಗೊಳ್ಳುವ ಮೂಲಕ ಹೆಚ್ಚು ಕೊಬ್ಬನ್ನು ಕಬಳಿಸುತ್ತವೆ. ಇದು ಪರೋಕ್ಷವಾಗಿ ಸೊಂಟದ ಸುತ್ತಳತೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಸಕ್ಕರೆ ಮತ್ತು ಪಿಷ್ಟದಿಂದ ದೂರವಿರಿ

ಸಕ್ಕರೆ ಮತ್ತು ಪಿಷ್ಟದಿಂದ ದೂರವಿರಿ

ಸಕ್ಕರೆ ಮತ್ತು ಪಿಷ್ಟಗಳು ಅಪ್ಪಟ ಕಾರ್ಬೋಹೈಡ್ರೇಟುಗಳಾಗಿದ್ದು ದೇಹದಲ್ಲಿ ಇನ್ಸುಲಿನ್ ಎಂಬ ಹಾರ್ಮೋನು ಅಥವಾ ರಸದೂತ ಸ್ರಾವವನ್ನು ಹೆಚ್ಚಿಸಲು ಕಾರಣವಾಗಿವೆ. ಶರೀರದಲ್ಲಿ ಕೊಬ್ಬು ಸಂಗ್ರಹವಾಗಲು ಈ ಇನ್ಸುಲಿನ್ ಕಾರಣವಾಗಿದೆ. ಆದ್ದರಿಂದ ನಿಮ್ಮ ದೇಹಕ್ಕೆ ಅಗತ್ಯವಿದ್ದಷ್ಟು ಮಾತ್ರ ಇನ್ಸುಲಿನ್ ಉತ್ಪತ್ತಿಯಾಗುವಷ್ಟು ಆಹಾರವನ್ನು ಸೇವಿಸುವುದು ಜಾಣತನ. ಮುಂದಿನ ಸ್ಲೈಟ್ ಕ್ಲಿಕ್ ಮಾಡಿ

ಸಕ್ಕರೆ ಮತ್ತು ಪಿಷ್ಟದಿಂದ ದೂರವಿರಿ

ಸಕ್ಕರೆ ಮತ್ತು ಪಿಷ್ಟದಿಂದ ದೂರವಿರಿ

ಸಕ್ಕರೆ ಮತ್ತು ಅಕ್ಕಿಯ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಇನ್ಸುಲಿನ್ ಕಡಿಮೆ ಉತ್ಪತ್ತಿಯಾಗಿ ಹೆಚ್ಚಿನ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ. ಆದ್ದರಿಂದ ರಾತ್ರಿ ಮಲಗುವ ಮುನ್ನ ಅಕ್ಕಿ ಮತ್ತು ಸಕ್ಕರೆಯಿಂದ ದೂರವಿರಿ.

ರಾತ್ರಿಯೂಟದಲ್ಲಿ ಮೆಣಸು ಇರಲಿ

ರಾತ್ರಿಯೂಟದಲ್ಲಿ ಮೆಣಸು ಇರಲಿ

ನಿಮ್ಮ ರಾತ್ರಿಯೂಟದಲ್ಲಿ ಕೊಂಚ ಪ್ರಮಾಣದಲ್ಲಿ ಮೆಣಸು ಇರಲಿ. ಏಕೆಂದರೆ ಮೆಣಸನ್ನು ಅರಗಿಸಿಕೊಳ್ಳಲು ಜೀರ್ಣಾಂಗಗಳಿಗೆ ಹೆಚ್ಚಿನ ಕೊಬ್ಬು ಅಗತ್ಯವಿರುವುದರಿಂದ ಶೀಘ್ರವಾಗಿ ಸೊಂಟದ ಸುತ್ತಳತೆ ಕಡಿಮೆಯಾಗುತ್ತದೆ.

ನಿತ್ಯ ಒಂದೇ ಸಮಯದಲ್ಲಿ ಪೂರ್ಣಪ್ರಮಾಣದ ನಿದ್ದೆ ಮಾಡಿ

ನಿತ್ಯ ಒಂದೇ ಸಮಯದಲ್ಲಿ ಪೂರ್ಣಪ್ರಮಾಣದ ನಿದ್ದೆ ಮಾಡಿ

ಪೂರ್ಣನಿದ್ದೆಗೂ ಕೊಬ್ಬು ಕರಗುವುದಕ್ಕೂ ಸಂಬಂಧವಿದೆ. ದಿನಕ್ಕೆ ಎಂಟರಿಂದ ಒಂಬತ್ತು ಗಂಟೆಯ ಪೂರ್ಣಪ್ರಮಾಣದ ನಿದ್ದೆ ಮಾಡುವ ಮೂಲಕ ಅನೈಚ್ಛಿಕ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಈ ಅನೈಚ್ಛಿಕ ಕಾರ್ಯಗಳು ಪೂರ್ಣಗೊಳ್ಳಲು ಹೆಚ್ಚಿನ ಪ್ರಮಾಣದ ಕೊಬ್ಬು ಬಳಸಲ್ಪಡುವುದರಿಂದ ತೂಕ ಶೀಘ್ರವಾಗಿ ಇಳಿಯುತ್ತದೆ.

ನಿತ್ಯ ಒಂದೇ ಸಮಯದಲ್ಲಿ ಪೂರ್ಣಪ್ರಮಾಣದ ನಿದ್ದೆ ಮಾಡಿ

ನಿತ್ಯ ಒಂದೇ ಸಮಯದಲ್ಲಿ ಪೂರ್ಣಪ್ರಮಾಣದ ನಿದ್ದೆ ಮಾಡಿ

ಅಲ್ಲದೇ ರಾತ್ರಿ ಮಲಗುವ ಮುನ್ನ ಕೊಂಚ ಕಾಲ ವಿರಮಿಸುವುದೂ ಅಗತ್ಯ. ಈ ಹೊತ್ತಿನಲ್ಲಿ ಸಂಗೀತ ಕೇಳುವುದು ಅಥವಾ ಧ್ಯಾನದಲ್ಲಿ ಮುಳುಗುವುದು ಉತ್ತಮ ನಿದ್ದೆಗೆ ಪೂರಕವಾಗಿದೆ.

ಸಿದ್ಧ ಆಹಾರಗಳಿಂದ ದೂರವಿರಿ

ಸಿದ್ಧ ಆಹಾರಗಳಿಂದ ದೂರವಿರಿ

ಸಿದ್ಧ ಆಹಾರಗಳನ್ನು ತಯಾರಿಸಲು ಕೇವಲ ಲಾಭವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ರುಚಿನೀಡುವ ಹೆಚ್ಚು ಕೊಬ್ಬಿಗೆ ಕಾರಣವಾಗುವ ಅಂಶಗಳನ್ನು ಸೇರಿಸಿರಲಾಗುತ್ತದೆ.

ಸಿದ್ಧ ಆಹಾರಗಳಿಂದ ದೂರವಿರಿ

ಸಿದ್ಧ ಆಹಾರಗಳಿಂದ ದೂರವಿರಿ

ಇವುಗಳನ್ನು ತಿನ್ನುವ ಮೂಲಕ ಕೊಬ್ಬಿಗೆ ಆಹ್ವಾನ ನೀಡುತ್ತಿದ್ದೀರಿ. ಕೊಬ್ಬು ಕರಗಿಸಬೇಕೆಂದರೆ ಪಿಜ್ಜಾ, ಬರ್ಗರ್, ಪಾಸ್ತಾ, ಐಸ್ ಕ್ರೀಂ ಮೊದಲಾದ ಸಿದ್ಧ ಆಹಾರಗಳಿಂದ ದೂರವಿರಿ.

ತಣ್ಣೀರು ಬಿಡಿ, ಬಿಸಿನೀರು ಸೇವಿಸಿ

ತಣ್ಣೀರು ಬಿಡಿ, ಬಿಸಿನೀರು ಸೇವಿಸಿ

ನಮ್ಮ ಜೀರ್ಣಾಂಗಗಳಿಗೆ ತಣ್ಣೀರು ಸಲ್ಲದು. ಆದ್ದರಿಂದ ರಾತ್ರಿ ಮಲಗುವ ಮುನ್ನ ಸರ್ವಥಾ ಐಸ್ ನೀರು ಕುಡಿಯುವುದು ಸಲ್ಲದು. ಇದರಿಂದ ಆಹಾರ ಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಕೊಬ್ಬು ಬಳಸಲ್ಪಡುವುದಿಲ್ಲ.

ತಣ್ಣೀರು ಬಿಡಿ, ಬಿಸಿನೀರು ಸೇವಿಸಿ

ತಣ್ಣೀರು ಬಿಡಿ, ಬಿಸಿನೀರು ಸೇವಿಸಿ

ಬದಲಿಗೆ ಉಗುರುಬೆಚ್ಚನೆಯ ನೀರು ಕುಡಿಯುವುದರಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ ಹಾಗೂ ಪೂರ್ಣವಾಗಿ ಜೀರ್ಣಗೊಳ್ಳುವ ಆಹಾರ ಕೊಬ್ಬನ್ನು ಬಳಸುವ ಮೂಲಕ ಸ್ಥೂಲಕಾಯ ನಿವಾರಣೆಗೆ ನೆರವಾಗುತ್ತದೆ.

X
Desktop Bottom Promotion