Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರೋಗ್ಯಕರ ಆಹಾರ ಸೇವನೆಗಾಗಿ ಆಯುರ್ವೇದ ಸಲಹೆಗಳು
ಆಹಾರವು ನಮ್ಮ ದೈನಂದಿನ ಜೀವನದ ಅತ್ಯಗತ್ಯ ಅಂಶಗಳಲ್ಲಿ ಪ್ರಮುಖವಾಗಿದೆ. ಆಹಾರವನ್ನು ಸೇವಿಸುವುದರ ಜೊತೆಗೆ ಅದನ್ನು ಹೇಗೆ ಸೇವಿಸಬೇಕು ಎಂದು ರೀತಿ-ನೀತಿ ತಿಳಿದುಕೊಂಡು ಸೇವಿಸುವುದು ಒಳ್ಳೆಯದು. ನಾವು ಆಹಾರ ಸೇವಿಸುವುದರಲ್ಲಿ ಸರಿಯಾದ ಕ್ರಮವನ್ನು ಬಳಸಿದರೆ, ಮುಂದೆ ಸಂಭವಿಸಬಹುದಾದ ಅಜೀರ್ಣ ಮುಂತಾದ ಸಮಸ್ಯೆಗಳನ್ನು ನಿಯಂತ್ರಿಸಬಹುದು.
ಸರಿಯಾದ ಆಹಾರಗಳನ್ನು ಸೇವಿಸುವ ಮೂಲಕ ಸಹ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಜೊತೆಗೆ ಸರಿಯಾದ ಆಹಾರವನ್ನು ಸರಿಯಾದ ಕ್ರಮದಲ್ಲಿ ಸೇವಿಸುವ ಮೂಲಕ ಗ್ಯಾಸ್, ಅಜೀರ್ಣ, ಮುಂತಾದ ಸಮಸ್ಯೆಗಳು ಬರದಂತೆ ಕಾಪಾಡಿಕೊಳ್ಳಬಹುದು. ಈ ಕೆಳಗೆ ಸೂಚಿಸಲಾಗಿರುವ ನಿಯಮಗಳನ್ನು ಪಾಲಿಸಿ, ಜೀರ್ಣಕ್ರಿಯೆಯನ್ನು ಸುಲಭ ಮಾಡಿಕೊಳ್ಳಿ ಮತ್ತು ಅಸೌಖ್ಯವನ್ನು ತಡೆಗಟ್ಟಿ.

ಆಹಾರವನ್ನು ಚೆನ್ನಾಗಿ ಅಗಿಯಿರಿ
ಆಹಾರವನ್ನು ನುಂಗುವ ಮೊದಲು ಚೆನ್ನಾಗಿ ಅಗಿಯಿರಿ.
ಟಿವಿಯಿಂದ ದೂರವಿರಿ
ದೂರದರ್ಶನ ನೋಡುವುದು, ಅಧಿಕವಾಗಿ ಮಾತನಾಡುವುದು ಅಥವಾ ಓದುವಿಕೆ ಮುಂತಾದ ಅಡ್ಡಿ ಆತಂಕಗಳ ನಡುವೆ ಊಟವನ್ನು ಮಾಡಬೇಡಿ.
ತಂಪು ಪಾನೀಯ ಸೀವಿಸಬೇಡಿ
ಊಟಕ್ಕೆ ಮೊದಲು ತಂಪು ಪಾನೀಯಗಳನ್ನು ಸೇವಿಸಬೇಡಿ. ಇದು ಜೀರ್ಣ ಕ್ರಿಯೆಯನ್ನು ಕುಂಠಿತಗೊಳಿಸುತ್ತದೆ.
ಅಧಿಕ ಪ್ರಮಾಣದಲ್ಲಿ ಪಾನೀಯಗಳನ್ನು ಸೇವಿಸಬೇಡಿ
ಊಟ ಮಾಡುವಾಗ ಅಧಿಕ ಪ್ರಮಾಣದಲ್ಲಿ ಪಾನೀಯಗಳನ್ನು ಸೇವಿಸಬೇಡಿ, ಇದು ನಿಮ್ಮ ಜೀರ್ಣಕ್ರಿಯೆಗೆ ಸಹಕರಿಸುವ ಶಾಖವನ್ನು ದುರ್ಬಲಗೊಳಿಸುತ್ತದೆ. ಕೊಠಡಿಯ ಉಷ್ಣಾಂಶದಲ್ಲಿರುವ ಅರ್ಧ-ಕಪ್ ನೀರು ಸಾಕು. ಒಣ ಆಹಾರಗಳನ್ನು ಸೇವಿಸುವಾಗ ನೀರು ಕುಡಿಯುವ ಅಗತ್ಯವಿರುತ್ತದೆ. ಆದರೆ ಸೂಪ್ ಮುಂತಾದ ದ್ರವ ಆಹಾರಗಳನ್ನು ಸೇವಿಸುವಾಗ ಇದರ ಅವಶ್ಯಕತೆ ಇರುವುದಿಲ್ಲ. ಊಟ ಮಾಡುವಾಗ ಸ್ವಲ್ಪ ಗುಟುಕು ವೈನ್ ಸೇವಿಸಬಹುದು. ಈ ಮಳೆಗಾಲವನ್ನು ಆಯುರ್ವೇದ ಮಾರ್ಗದಲ್ಲಿ ಆನಂದಿಸಿ!
ಪ್ರೀತಿಯಿಂದ ಆಹಾರ ಸೇವಿಸಿ
ನಿಮ್ಮ ಪ್ರೀತಿ ಪಾತ್ರರು ತಯಾರಿಸಿರುವ ಆಹಾರವನ್ನು, ನಿಮಗೆ ಇಷ್ಟವಾಗುವ ರೀತಿಯಲ್ಲಿ ಸೇವಿಸಿ. ಅವರ ಪ್ರೀತಿ ಮಾಡಿದ ಆಹಾರದಲ್ಲಿಯೂ ಸಹ ಬೆರೆತಿರುತ್ತದೆ. ಅಸಮಾಧಾನದಿಂದ ಮಾಡಲಾದ ಆಹಾರವನ್ನು ಸೇವಿಸುವುದನ್ನು ನಿಯಂತ್ರಿಸಿ.
ನೆಮ್ಮದಿಯಾಗಿ ಊಟ ಮಾಡಿ
ಊಟ ಮಾಡುವುದನ್ನು ಒಂದು ಧಾರ್ಮಿಕ ಕ್ರಿಯೆ ಎಂಬಂತೆ ಮಾಡಿ. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು, (ಪ್ರಾರ್ಥನೆ ಬೇಕಾದರು ಮಾಡಿ) ನೆಮ್ಮದಿಯಾಗಿ ಊಟ ಮಾಡಿ.
ಬೇರೆ ಚಟುವಟಿಕೆಗಳನ್ನು ಮಾಡುವ ಮುನ್ನ
ಊಟವಾದ ನಂತರ ಬೇರೆ ಚಟುವಟಿಕೆಗಳನ್ನು ಮಾಡುವ ಮುನ್ನ ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ತೆಗೆದುಕೊಂಡು, ಮುಂದುವರಿಯಿರಿ.
ಮಧ್ಯಮ ವೇಗದಲ್ಲಿ ಸೇವಿಸಿ
ನಿಮ್ಮ ಊಟ ಮುಕ್ಕಾಲು ಭಾಗ ಮುಗಿಯುವವರೆಗು ಮಧ್ಯಮ ವೇಗದಲ್ಲಿ ಸೇವಿಸಿ
ಮೂರು ಗಂಟೆಗಳ ವಿಶ್ರಾಮ
ಪ್ರತಿ ಊಟದ ನಡುವೆ ಮೂರು ಗಂಟೆಗಳ ಬಿಡುವನ್ನು ನೀಡಿ. ಆಯುರ್ವೇದ ಶಾಸ್ತ್ರದಲ್ಲಿ ನೀರು ಕುಡಿಯುವ ಸರಳ ವಿಧಾನ
ಆಹಾರ ಸೇವಿಸುವ ಕ್ರಮ
ಮಧ್ಯಾಹ್ನದ ಸಮಯದಲ್ಲಿ ಜೀರ್ಣಕ್ರಿಯೆಯು ಅಧಿಕ ಪ್ರಮಾಣದಲ್ಲಿರುತ್ತದೆ. ಇದನ್ನು ನಿಮ್ಮ ದೇಹದ ಪ್ರಕೃತಿಯಲ್ಲಿ ಸಹ ನೀವು ನೋಡಬಹುದು. ಆದ್ದರಿಂದ ಮಧ್ಯಾಹ್ನದ ಸಮಯದಲ್ಲಿ, ಅಧಿಕ ಪ್ರಮಾಣದ ಆಹಾರವನ್ನು ಸೇವಿಸಿ. ಬೆಳಗ್ಗೆ ಮತ್ತು ಸಂಜೆ ಲಘು ಆಹಾರವನ್ನು ಸೇವಿಸಿ.
ಸೇವಿಸುವ ಪಾನಿಯದ ಕುರಿತು ಎಚ್ಚರವಿರಲಿ
ಎಲ್ಲಾ ಪಾನೀಯ ಮತ್ತು ನೀರನ್ನು ಕೊಠಡಿಯ ಉಷ್ಣಾಂಶದಲ್ಲಿ ತೆಗೆದುಕೊಳ್ಳಿ. ತಂಪು ಪಾನೀಯಗಳು ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುವ ಉಷ್ಣಾಂಶವನ್ನು ಕಡಿಮೆ ಮಾಡಿಬಿಡುತ್ತದೆ. ಇದು ಕೇವಲ ಊಟದ ಸಮಯದಲ್ಲಷ್ಟೇ ಅಲ್ಲದೆ, ದಿನದ ಇತರೆ ಸಮಯದಲ್ಲಿ ಸಹ ನಡೆಯುತ್ತದೆ.
ಜೀರ್ಣವಾಗಲು ಮೂರು ಗಂಟೆಗಳ ಬಿಡುವನ್ನು ತಗೊಳ್ಳಿ
ಊಟ ಜೀರ್ಣವಾಗಲು ಊಟಗಳ ನಡುವೆ ಮೂರು ಗಂಟೆಗಳ ಬಿಡುವನ್ನು ನೀಡಿ. ಇದು ಕೆಲವರಿಗೆ ಒಂದು ದಿನಕ್ಕೆ ಮೂರರಿಂದ ಐದು ಆಹಾರಗಳನ್ನು ಸೇವಿಸಲು ಅವಕಾಶ ಮಾಡಿಕೊಡುತ್ತದೆ. ಅಸಮತೋಲನದ ಸ್ಥಿತಿಯನ್ನು ಹೊಂದಿರುವವರು ಪ್ರತಿ ದಿನ ನಾಲ್ಕರಿಂದ ಐದು ಬಾರಿ ಆಹಾರ ಸೇವನೆ ಮಾಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


