Latest Updates
-
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ!
ಜೀರ್ಣಕ್ರಿಯೆಯನ್ನೇ ಪ್ರಭಾವಗೊಳಿಸುವ ಕೆಟ್ಟ ಅಭ್ಯಾಸಗಳು
ಆರೋಗ್ಯವೇ ಭಾಗ್ಯ ಎಂಬುದು ಚಿಕ್ಕದಾದರೂ ಸತ್ಯವಾದ ಗಾದೆ. ಉತ್ತಮ ಆರೋಗ್ಯ ಹೊಂದಲು ಉತ್ತಮ ಆಹಾರ, ನಿಯಮಿತ ನಿದ್ದೆ, ವ್ಯಾಯಮ, ಗಾಳಿ ಎಲ್ಲವೂ ಮುಖ್ಯ. ಅದರಲ್ಲೂ ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ ಆಹಾರದ ಪೋಷಕಾಂಶಗಳು ರಕ್ತಕ್ಕೆ ಸಿಗಬೇಕು. ಆದರೆ ಸವಲತ್ತುಗಳು ಹೆಚ್ಚಿದಂತೆ ಸೋಮಾರಿಗಳಾಗುತ್ತಾ ಹೋಗಿರುವ ನಮ್ಮ ಬದಲಾದ ದಿನಚರಿಯ ಕೆಲವಾರು ಅಭ್ಯಾಸಗಳು ಜೀರ್ಣಕ್ರಿಯೆಯನ್ನೇ ಅಪಾರವಾಗಿ ಪ್ರಭಾವಗೊಳಿಸುತ್ತವೆ.
ಪರಿಣಮವಾಗಿ ಸ್ಥೂಲಕಾಯದ ಸಹಿತ ವಿವಿಧ ದೈಹಿಕ ತೊಂದರೆಗಳು ಎದುರಾಗುತ್ತವೆ. ಒಂದು ವೇಳೆ ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದರಂತೂ ಈ ಅಭ್ಯಾಸಗಳು ತೂಕ ಇಳಿಯುವ ವೇಗಕ್ಕೆ ಕಡಿವಾಣ ಹಾಕುತ್ತದೆ, ಕೆಲವೊಮ್ಮೆ ಇದು ವಿರುದ್ಧವಾಗಿಯೂ ಕೆಲಸ ಮಾಡಬಹುದು. ಅಜೀರ್ಣ ಸಮಸ್ಯೆ ಉಂಟಾಗದಿರಲು ಟಿಪ್ಸ್
ಆದ್ದರಿಂದ ತೂಕ ಇಳಿಸಿಕೊಳ್ಳುವ ಇರಾದೆಯವರು ಮೊದಲು ತಮ್ಮ ಮನಸ್ಸನ್ನು ಗಟ್ಟಿಮಾಡಿಕೊಳ್ಳಬೇಕು. ಜೀರ್ಣಕ್ರಿಯೆಯನ್ನು ಪ್ರಭಾವಗೊಳಿಸುವ ಅಭ್ಯಾಸಗಳನ್ನು ಕಷ್ಟವಾದರೂ ಸರಿ, ಬಿಡಬೇಕು. ಈ ಅಭ್ಯಾಸಗಳು ಯಾವುವು ಎಂಬ ಕುತೂಹಲ ಮೂಡಿತೇ, ಕೆಳಗಿನ ಸ್ಲೈಡ್ ಶೋ ನಿಮ್ಮ ಕುತೂಹಲವನ್ನು ತಣಿಸಲಿದೆ. ಇವನ್ನು ಅನುಸರಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಂಡು ಆರೋಗ್ಯ ವೃದ್ಧಿಸುವ ಜೊತೆಗೇ ತೂಕವೂ ಕಡಿಮೆಯಾಗುತ್ತದೆ.

ಧೂಮಪಾನ
ಧೂಮಪಾನದ ವ್ಯಸನಿಗಳಿಗೆ ಈ ಚಟ ಬಿಡಿ ಎಂದರೆ ಬಿಟ್ಟೇ ಬಿಡುತ್ತಾರೆ, ಸಿಗರೇಟು ಸೇದುವುದನ್ನಲ್ಲ, ಈ ಮಾತನ್ನು ಹೇಳಿದವರ ಹತ್ತಿರ ಬರುವುದನ್ನೇ ಬಿಟ್ಟು ಬಿಡುತ್ತಾರೆ. ಆದರೆ ಧೂಮಪಾನದ ಮೂಲಕ ಶ್ವಾಸಕೋಶ, ಶ್ವಾಸನಾಳ, ಗಂಟಲು, ಗಂಟಲ ಮೇಲ್ಭಾಗದ ತೇವವಾಗಿರುವ ಸ್ಥಳಗಳನ್ನು ಅಪಾರವಾಗಿ ಸೋಂಕಿಗೆ ಒಳಗಾಗಿಸುವ ಜೊತೆಗೇ ಹೊಟ್ಟೆಯ ಒಳಪದರವನ್ನೂ ಬಾಧೆಗೊಳಪಡಿಸುತ್ತದೆ. ಇದು ಹೊಟ್ಟೆಯಲ್ಲಿ ಹೆಚ್ಚು ಆಮ್ಲೀಯತೆ ಮತ್ತು ಅನಿಲ ತುಂಬಿಕೊಳ್ಳಲು (gastritis) ಪ್ರಚೋದನೆ ನೀಡುತ್ತದೆ.

ಧೂಮಪಾನ
ಅಲ್ಲದೇ ಹೊಟ್ಟೆ ಮತ್ತು ಕರುಳುಗಳ ಒಳಭಾಗದಲ್ಲಿ ಹುಣ್ಣು (ಅಲ್ಸರ್) ಮತ್ತು ಇತರ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳಿಗೆ ಆಹ್ವಾನ ನೀಡುತ್ತದೆ. ಧೂಮಪಾನ ಚಟವಾಗಿದ್ದವರಿಗೆ ಕರುಳು ಮತ್ತು ಹೊಟ್ಟೆಯ ಕ್ಯಾನ್ಸರ್ ಬರುವ ಸಾಧ್ಯತೆಯೂ ಹೆಚ್ಚು. ಇದು ಪ್ರಾರಂಭಿಕ ಹಂತದಲ್ಲಿ ಯಾವುದೇ ಸೂಚನೆ ನೀಡದೇ ಉಲ್ಬಣಗೊಂಡ ಬಳಿಕ ಧಿಡೀರನೇ ಒಮ್ಮೆಲೇ ಅಪಾರವಾದ ನೋವಿನೊಂದಿಗೆ ಪ್ರಕಟವಾಗುತ್ತದೆ. ಇದು ಆಗುವುದು ಬೇಡ ಎಂದಿದ್ದರೆ ಧೂಮಪಾನವನ್ನು ತ್ಯಜಿಸಿ.

ಅತಿ ಹೆಚ್ಚಿನ ಕಾಫಿ ಸೇವನೆ
ಕಾಫಿ, ನಮ್ಮ ಮಲೆನಾಡಿನ ಅಮೂಲ್ಯ ಬಳುವಳಿಯಾಗಿದ್ದು ಮಿತ ಸೇವನೆ ಆರೋಗ್ಯಕ್ಕೆ ಪೂರಕವಾಗಿದೆ. ದಿನಕ್ಕೆ ಮೂರು ಕಪ್ ಗಳಿಗೆ ಮೀರದಂತೆ ಅತಿ ಗಾಢವಲ್ಲದ ಕಾಫಿ ಜೀರ್ಣಕ್ರಿಯೆಗೆ ಸಹಕರಿಸಿ ಆರೋಗ್ಯಕ್ಕೆ ನೆರವಾಗುತ್ತದೆ. ಆದರೆ ಗಾಢವಾದ ಕಾಫಿ ದಿನಕ್ಕೆ ಮೂರು ಕಪ್ ಅಥವಾ ಅದಕ್ಕೂ ಹೆಚ್ಚಿದ್ದರೆ ಇದು ಹೊಟ್ಟೆಗೆ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಉಪಯೋಗಗೊಳ್ಳದೇ ಬ್ಯಾಕ್ಟೀರಿಯಾಗಳಿಗೆ ಮೃಷ್ಠಾನ್ನ ಭೋಜನದ ರೂಪದಲ್ಲಿ ಲಭ್ಯವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅತಿ ಹೆಚ್ಚಿನ ಕಾಫಿ ಸೇವನೆ
ಇದು ಜೀರ್ಣಕ್ರಿಯೆಯಲ್ಲಿ ಬಾಧೆಯನ್ನು ನೀಡಿ ಹೊಟ್ಟೆ ಮತ್ತು ಕರುಳಿನ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಹೆಚ್ಚಿನ ಕಾಫಿ ಸೇವನೆಯ ಸಂದರ್ಭ ಬಂದಾಗ ಕಾಫಿಯ ಬದಲು ಹರ್ಬಲ್ ಟೀ, ಕ್ಯಾಮೋಮೈಲ್ ಟೀ, ಪುದಿನಾ ಸೊಪ್ಪಿನ ಅಥವಾ ದಾಲ್ಚಿನ್ನಿ ಪುಡಿ ಸೇರಿಸಿದ ಹಾಲಿಲ್ಲದ ಚಹಾ ಸೇವಿಸಿ. ಇವನ್ನು ಊಟದ ಬಳಿದ ಸೇವಿಸಿದರೆ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ಲಘು ಪಾನೀಯಗಳು
ನೊರೆಬರಲು ಕಾರ್ಬನ್ ಡೈ ಆಕ್ಸೈಡ್ ಸೇರಿಸಿದ ಸೋಡಾ ಅಥವಾ ಲಘುಪಾನೀಯಗಳು ಹೊಟ್ಟೆ ಸೇರಿದ ಬಳಿಕ ಜಠರದ ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತವೆ. ಇದು ಜೀರ್ಣಕ್ರಿಯೆಯ ಪ್ರಭಾವವನ್ನು ಕಡಿಮೆಗೊಳಿಸುತ್ತದೆ. ಪರಿಣಾಮವಾಗಿ ಆಹಾರ ಪೂರ್ಣವಾಗಿ ಜೀರ್ಣಗೊಳ್ಳದೇ ಕರುಳುಗಳತ್ತ ಸಾಗುತ್ತದೆ. ಒಂದು ವೇಳೆ ಹೊಟ್ಟೆಯಲ್ಲಿ ಈಗಾಗಲೇ ಕೆಲವು ಸೋಂಕುಗಳಿದ್ದರೆ ಲಘು ಪಾನೀಯಗಳು ಇವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಅಲ್ಲದೇ ಲಘು ಪಾನೀಯಗಳಲ್ಲಿ ಅತಿ ಹೆಚ್ಚಿರುವ ಸಕ್ಕರೆಯ ಪ್ರಮಾಣ ತೂಕ ಕಡಿಮೆ ಮಾಡುವುದಿರಲಿ, ಇನ್ನಷ್ಟು ಹೆಚ್ಚಿಸುತ್ತದೆ.

ಮಾದಕ ಪಾನೀಯಗಳು
ಆಲ್ಕೋಹಾಲ್ ಇರುವ ಮಾದಕ ಪಾನೀಯಗಳನ್ನು ಸೇವಿಸುವವರು ಈಗಗಲೇ ಯಕೃತ್ ಮತ್ತು ಇತರ ಅಂಗಗಳ ತೊಂದರೆಗಳಿಗೆ ಖಂಡಿತಾ ತುತ್ತಾಗಿರುತ್ತಾರೆ. ಇದರೊಂದಿಗೆ ಮೇದೋಜೀರಕ ಗ್ರಂಥಿ ಮತ್ತು ಜೀರ್ಣಾಂಗಗಳೂ ಪ್ರಭಾವಕ್ಕೆ ಒಳಗಾಗುತ್ತವೆ. ನಮ್ಮ ಹೊಟ್ಟೆಯಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳಿಗೂ ಸರಿಯಾಗಿ ಕೆಲಸ ಮಾಡಲು ಬಿಡದೇ ಕರುಳಿನಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಾದಕ ಪಾನೀಯಗಳು
ಸಾಮಾನ್ಯವಾಗಿ ಆಲ್ಕೋಹಾಲ್ ಹೊಟ್ಟೆಯಿಂದ ನೇರವಾಗಿ ರಕ್ತಕ್ಕೇ ಸೇರುವ ಕಾರಣ ಜೀವ ರಾಸಾಯನಿಕ ಕ್ರಿಯೆಯನ್ನು ಬಾಧಿಸುತ್ತದೆ. ಆದ್ದರಿಂದ ತೂಕ ಕಳೆದುಕೊಳ್ಳುವವರು ಆಲ್ಕೋಹಾಲ್ ಸೇವನೆಯಿಂದ ದೂರವಿರುವುದೇ ಮೇಲು.

ಕೊಬ್ಬಿನ ಮತ್ತು ಅತಿ ಖಾರದ ಆಹಾರಗಳನ್ನು ಸೇವಿಸುವುದು
ಒಣಮೆಣಸು, ಕಾಳುಮೆಣಸು (cayenne peppers) ಶುಂಠಿ ಮೊದಲಾದವು ಜೀರ್ಣಕ್ರಿಯೆಯಲ್ಲಿ ಪ್ರಚೋದನಾಕಾರಕವಾಗಿವೆ. ಈ ಅಂಶಗಳು ಹೆಚ್ಚಿರುವ ಆಹಾರಗಳ ಸೇವನೆಯಿಂದ ಗಂಟಲಲ್ಲಿ ಕಫ ಹೆಚ್ಚುವುದು, ಜೀರ್ಣಕ್ರಿಯೆ ಪ್ರಭಾವಗೊಳ್ಳುವುದು, ಹೊಟ್ಟೆಯಲ್ಲಿ ಉರಿ ಮತ್ತು ಕರುಳುಗಳಲ್ಲಿ ಹುಣ್ಣು ಆಗುವ ಸಾಧ್ಯತೆ ಇದೆ. ಆದ್ದರಿಂದ ಇವುಗಳ ಸೇವನೆ ಅತಿ ಹೆಚ್ಚಿಲ್ಲದಂತೆ ನೋಡಿಕೊಳ್ಳುವುದು ಮತ್ತು ಇವುಗಳ ಪ್ರಭಾವವನ್ನು ಕಡಿಮೆಗೊಳಿಸಲು ಊಟದ ಬಳಿಕ ಮೊಸರು ಅಥವಾ ಮಜ್ಜಿಗೆಯನ್ನು ಸೇವಿಸಬೇಕು.

ಕೊಬ್ಬಿನ ಮತ್ತು ಅತಿ ಖಾರದ ಆಹಾರಗಳನ್ನು ಸೇವಿಸುವುದು
ಆದರೆ ಈ ಸೇವನೆ ತೂಕ ಕಡಿಮೆ ಮಾಡಿಕೊಳ್ಳಲು ಸಹಕರಿಸದಿರುವ ಕಾರಣ ಖಾರದ ವಸ್ತುಗಳನ್ನು ಕಡಿಮೆ ಮಾಡುವುದೇ ಉತ್ತಮ. ಜೊತೆಗೇ ನಿಮ್ಮ ಆಹಾರದಲ್ಲಿ ಕೊಬ್ಬು ಇರುವ ಆಹಾರಗಳಿರದಂತೆ ನೋಡಿಕೊಳ್ಳಿ. ಖಾರದ ಮಸಾಲೆಗಳ ಬದಲಿಗೆ ಸಬ್ಬಸಿಗೆ ಸೊಪ್ಪು ಅಥವಾ ದೊಡ್ಡ ಜೀರಿಗೆ (ಸೌಂಫ್) ಬಳಸುವುದು ಉತ್ತಮ, ಇವು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತವೆ.



Click it and Unblock the Notifications











