Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಸಿಹಿರಹಿತ ಪಾನೀಯಗಳೂ ಹಲ್ಲುಗಳಿಗೆ ಮಾರಕ...!
ಈಗಿನ ದಿನಮಾನಸದಲ್ಲಿ ಮಧುಮೇಹದಿಂದ ಬಳಲುತ್ತಿರುವವರು ಹಾಗೂ ಆರೋಗ್ಯವಾಗಿರುವವರೂ ಸಹ ಸಿಹಿಯಿಂದ ತುಸು ದೂರ ಉಳಿಯುತ್ತಿದ್ದಾರೆ. ಸಿಹಿ ಹೆಚ್ಚು ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕವೆಂದು ಭಾವಿಸಿ ಸಕ್ಕರೆ ರಹಿತ ಆಹಾರ ಪದ್ಧತಿಗಳ ಕಡೆಗೆ ಹೆಚ್ಚು ಒಲವನ್ನು ತೋರುತ್ತಿದ್ದಾರೆ. ಆದರೆ ಸಕ್ಕರೆ ರಹಿತ ಆಹಾರ ಪದ್ಧತಿಗಳಲ್ಲಿಯೂ ಸಹ ನಮ್ಮ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುತ್ತವೆ ಎಂಬುದು ಸಾಕಷ್ಟು ಜನರಿಗೆ ಅರಿವಿಲ್ಲ.
ಹೌದು ಇತ್ತೀಚಿನ ಅಧ್ಯಯನದ ಪ್ರಕಾರ ಸಿಹಿ ರಹಿತ ಆಹಾರ ಪದ್ಧತಿಯಲ್ಲೂ ಸಹ ಆರೋಗ್ಯಕ್ಕೆ ತಡೆಯೊಡ್ಡಬಹುದಾದ ಸಂಗತಿಗಳು ತಿಳಿದುಬಂದಿರುತ್ತದೆ. ಇವುಗಳಲ್ಲಿ ಸಕ್ಕರೆ ರಹಿತ ಪಾನೀಯಗಳೂ ಒಂದು. ಹಾದಾದರೆ, ಸಕ್ಕರೆ ರಹಿತ ಪಾನೀಯಗಳು ನಿಮ್ಮ ದಂತಕ್ಕೆ ಹಾನಿಕರವೇ?

ಹೌದು, ಇತ್ತೀಚಿನ ದಂತವೈದ್ಯರ ಅಧ್ಯಯನವೊಂದು ಸಕ್ಕರೆ ರಹಿತ ಪಾನೀಯವು ದಂತಕ್ಕೆ ಹಾನಿಯುಂಟುಮಾಡುತ್ತದೆ ಎಂಬ ಸತ್ಯವನ್ನು ಹೊರಹಾಕಿದೆ. ಸಿಹಿಯನ್ನು ಹೆಚ್ಚು ಸೇವಿಸಿದರೆ ಹಲ್ಲುಗಳು ಹುಳುಕಾಗುತ್ತವೆ ಎಂಬ ಹಳೆಯ ನಂಬಿಕೆಗಳು ಈ ಫಲಿತಾಂಶದಿಂದ ದೂರ ಉಳಿಯುತ್ತದೆ. ಏಕೆಂದರೆ ಸಿಹಿ ರಹಿತ ಪಾನೀಯಗಳ ಸೇವನೆಯಿಂದ ದಂತದ ಆರೋಗ್ಯಕ್ಕೆ ತೊಂದರೆಯಾಗುತ್ತದೆ.
ದಂತವೈದ್ಯರ ಪ್ರಕಾರ ಸಿಹಿರಹಿತ ಪಾನೀಯಗಳು ಹಲ್ಲುಗಳನ್ನು ಹುಳುಕಾಗಿಸುತ್ತವೆ. ಕ್ರೀಡಾ ಪಾನೀಯ ಸೇರಿದಂತೆ 20ಕ್ಕೂ ಹೆಚ್ಚು ಪಾನೀಯ ವಿಧಗಳನ್ನು ಈ ಸಂಶೋಧನೆಗೆ ಬಳಸಲಾಗಿದೆ. ಈ ರೀತಿಯ ಹೆಚ್ಚಿನ ಪಾನೀಯಗಳು ಆಮ್ಲದ ಅಂಶಗಳನ್ನು ಒಳಗೊಂಡಿದ್ದು, ಇದರಿಂದ ದಂತದ ಕವಚವು ಸುಲಭವಾಗಿ ಹಾಳಾಗಲು ಕಾರಣವಾಗುತ್ತದೆ. ಇದು ಸಿಹಿರಹಿತ ಪಾನೀಯಗಳಿಗೂ ಹೊರತಾಗಿಲ್ಲ.
ರಾಸಾಯನಿಕ ಮತ್ತು ಆಮ್ಲದ ಅಂಶಗಳನ್ನು ಒಳಗೊಂಡಿರುವ ಈ ರೀತಿಯ ಸಿಹಿರಹಿತ ಪಾನೀಯಗಳ ಸೇವಿಸುವಿಕೆಯಿಂದ ಸುಲಭವಾಗಿ ಹಲ್ಲುಗಳು ಹಾಳಾಗುತ್ತವೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ನೀವು ಈ ಸಕ್ಕರೆರಹಿತ ಪಾನೀಯಗಳಿಗೇ ದಾಸರಾದರೆ ಸ್ವಲ್ಪ ಸಕ್ಕರೆಯನ್ನು ಸೇವಿಸುವುದನ್ನು ತಡೆಯಬಹುದೇ ವಿನಹ ನಿಮ್ಮ ದಂತಕ್ಕೆ ಇದರಿಂದ ಹಾನಿಯೇ ಹೆಚ್ಚು ಎಂಬುದನ್ನು ನೀವು ಖಂಡಿತವಾಗಿ ಅರಿಯಲೇಬೇಕು. ಸಕ್ಕರೆರಹಿತ ಎಂದು ಪ್ರಕಟಿಸಿಕೊಂಡಿರುವ ಅನೇಕ ಆಹಾರ ಪದಾರ್ಥಗಳು ಮತ್ತು ಪಾನೀಯಗಳು ಹೆಚ್ಚಾಗಿ ರಾಸಾಯನಿಕ ಸತ್ವಗಳನ್ನು ಒಳಗೊಂಡಿದ್ದು, ಇವುಗಳಿಂದ ದಂತಗಳು ಸುಲಭವಾಗಿ ಹಾಳಾಗಲು ಕಾರಣವಾಗುತ್ತಿವೆ.
ದಂತದಲ್ಲಿನ ಅಂಗಾಂಶಗಳು ಈ ಆಮ್ಲ ಪ್ರಕ್ರಿಯೆಯಲ್ಲಿ ಕರಗಿಹೋಗಿ ಹಲ್ಲುಗಳ ಹುಳುಕಾಗುವಿಕೆಗೆ ಕಾರಣವಾಗುತ್ತಿವೆ. ಕಾಲಾಂತರದಲ್ಲಿ ದಂತದ ಕವಚದ ಪದರವೂ ಸಹ ನಶಿಸಿಹೋಗುವ ಅಪಾಯವಿದೆ. ತಂಪು ಪಾನೀಯ ಹಾಗೂ ಕ್ರೀಡಾ ಪಾನೀಯಗಳನ್ನು ಸೇವಿಸುವ ಅನೇಕ ಜನರ ದಂತಗಳ ಮಾದರಿಗಳನ್ನು ಸಂಶೋಧಕರು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಪಾನೀಯಗಳ ನಿರಂತರ ಸೇವನೆಯಿಂದ ಶೇಖಡಾ 50 ರಷ್ಟು ದಂತದ ಪದರವು ಮೃದುವಾಗಿರುವುದನ್ನು ಗಮನಿಸಲಾಗಿದೆ. ಸಕ್ಕರೆರಹಿತ ಪಾನೀಯಗಳ ಸೇವನೆಯೂ ಸಹ ದಂತಗಳಿಗೆ ಹಾನಿಕಾರಕವೆಂದು ಈ ಅಧ್ಯಯನದಿಂದ ಅಂತಿಮವಾಗಿ ತಿಳಿದುಬಂದಿದೆ. ಆದ್ದರಿಂದ ಎರಡೂ ರೀತಿಯ ಸಿಹಿಯುಕ್ತ ಹಾಗೂ ಸಿಹಿರಹಿತ ಪಾನೀಯಗಳು ಹಲ್ಲುಗಳ ಆರೋಗ್ಯಕ್ಕೆ ಮಾರಕ.
ಹೀಗಾಗಿ, ನೀವೇನಾದರೂ ತೂಕ ಕಡಿಮೆ ಮಾಡುವ ಆಹಾರ ಪದ್ಧತಿಯಲ್ಲಿ ಈ ರೀತಿಯ ಸಿಹಿರಹಿತ ಪಾನೀಯಗಳನ್ನು ಸುರಕ್ಷಿತವೆಂದು ತಿಳಿದು ಸೇವನೆ ಮಾಡುತ್ತಿದ್ದರೆ, ನೆನಪಿಡಿ ಇದರಿಂದ ನಿಮ್ಮ ಹಲ್ಲುಗಳ ಆರೋಗ್ಯವೂ ಸಹ ಮುಖ್ಯವಾದುದು ಎಂದು. ಆದ್ದರಿಂದ ಈ ರೀತಿಯ ಆಮ್ಲ ಸಹಿತ ಆಹಾರ ಪದಾರ್ಥಗಳು ಮತ್ತು ಪಾನೀಯಗಳಿಂದ ದೂರವಿರಿ. ಇದರಿಂದ ನಿಮ್ಮ ದಂತದ ಆರೋಗ್ಯಕ್ಕೂ ಹಾಗೂ ಒಟ್ಟಾರೆ ನಿಮ್ಮ ದೇಹದ ಆರೋಗ್ಯಕ್ಕೂ ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












