ಮೇಣದ ಬತ್ತಿಗಳು ಸಿಗರೇಟ್‌ಗಿಂತಲೂ ಅಪಾಯಕಾರಿ!

By Super

ಪೂಜೆ, ಹುಟ್ಟುಹಬ್ಬ ಮೊದಲಾದ ಸಂದರ್ಭಗಳಲ್ಲಿ ವಾತಾವರಣವನ್ನು ಆಹ್ಲಾದಕರವನ್ನಾಗಿರಿಸಲು ಕೊಂಚ ಸುವಾಸನೆ ಸೂಸುವ ಪರಿಕರಗಳನ್ನು ಬಳಸುವುದು ಬಹಳ ಹಿಂದಿನ ಕಾಲದಿಂದಲೇ ನಡೆದುಬಂದಿದೆ. ಅಗರಬತ್ತಿಗಳು, ಧೂಪ ಮೊದಲಾದವು ವಾತಾವರಣದಲ್ಲಿ ನಸುವಾದ ಸುವಾಸನೆಯನ್ನು ಬೆರೆಸಿ ಮನಕ್ಕೆ ಮುದ ನೀಡುತ್ತವೆ. ಆಧುನಿಕತೆಯೊಂದಿಗೇ ಬಂದ ಹಲವಾರು ಬದಲಾವಣೆಗಳ ಪರಿಣಾಮವಾಗಿ ನಮ್ಮ ನಿತ್ಯ ಬಳಕೆಯ ಮೇಣದ ಬತ್ತಿಯಲ್ಲಿಯೂ ಸುವಾಸನೆಯನ್ನು ಸೇರಿಸಿಕೊಂಡಿದೆ. ಸಾಮಾನ್ಯವಾಗಿ ಮೇಣದ ಬತ್ತಿಯನ್ನು ಬೆಳಗಿಸುವ ಕೂಟಗಳಾದ ಹುಟ್ಟುಹಬ್ಬ, ಕ್ರಿಸ್ಮಸ್ ಮೊದಲಾದ ಸಂದರ್ಭಗಳಲ್ಲಿ ಈ ಆಕರ್ಷಕ ಮೇಣದ ಬತ್ತಿಗಳು ಮಂದ ಬೆಳಕಿನ ಜೊತೆಗೇ ವಿವಿಧ ಬಗೆಯ ಸುವಾಸನೆಯನ್ನೂ ಕೋಣೆಯಲ್ಲಿ ಬೆರೆಸಿ ಹಬ್ಬದ ಹರ್ಷವನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಆದರೆ ಸುವಾಸನೆ ನೀಡಲು ಉಪಯೋಗಿಸಲಾಗುವ ಕೆಲವು ರಾಸಾಯನಿಕಗಳು ಈ ಸುವಾಸನೆಯೊಂದಿಗೇ ಸದ್ದಿಲ್ಲದೇ ಕೋಣೆಯ ಗಾಳಿಯನ್ನೆಲ್ಲಾ ವಿಷಭರಿತವಾಗಿಸುತ್ತಿದೆ ಎಂಬುದು ನಿಮಗೆ ಗೊತ್ತಿತ್ತೇ? ಇತ್ತೀಚೆಗೆ ತಿಳಿದುಬಂದಿರುವ ಮಾಹಿತಿಗಳ ಪ್ರಕಾರ ಈ ವಿಷಕಾರಿ ಸುವಾಸನೆ ಸೂಸುವ ರಾಸಾಯನಿಕಗಳು ಸಿಗರೇಟಿನಲ್ಲಿರುವ ವಿಷಕ್ಕಿಂತ ಘೋರವಾಗಿದೆ! ಏಕೆಂದರೆ ಇದನ್ನು ಶ್ವಾಸದ ಮೂಲಕ ಸೇವಿಸುವ ಮೂಲಕ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ. ಅದರಲ್ಲೂ ಮೇಣದ ಬತ್ತಿಗೆ ದೃಢತೆಯನ್ನು ಒದಗಿಸುವ ಪ್ಯಾರಾಫಿನ್ ಮೇಣದಲ್ಲಿಯೇ ಕನಿಷ್ಟ ಇಪ್ಪತ್ತು ಬಗೆಯ ಇಂತಹ ರಾಸಾಯನಿಕಗಳಿವೆ. ಅದರಲ್ಲಿ trichloroethane, acetone, xylene, phenol, cresol, chlorobenzene ಮೊದಲಾದ ರಾಸಾಯನಿಕಗಳು ಅತಿಘೋರ ಕ್ಯಾನ್ಸರ್ ಕಾರಕ ವಿಷಕಣಗಳಾಗಿವೆ.

ಕ್ಯಾನ್ಸರ್‌ನ ಹೊರತಾಗಿ ಇವು ಶ್ವಾಸಕೋಶ, ಶ್ವಾಸನಾಳಗಳಲ್ಲಿ ತುರಿಕೆ, ಉರಿ ಮೂಡಿಸಬಲ್ಲವು. ಅಷ್ಟೇ ಏಕೆ, ಇವುಗಳ ಪರಿಣಾಮ ನೇರವಾಗಿ ಮೆದುಳಿನ ಮೇಲೂ ಆಗಬಹುದು. ಅಲ್ಲದೇ ವಿಶಿಷ್ಟ ಸುವಾಸನೆಯನ್ನು ಪಡೆಯಲು ಸೇರಿಸಲಾಗುವ ಪ್ರತ್ಯೇಕ ರಾಸಾಯನಿಕಗಳು ಇನ್ನಷ್ಟು ಹೆಚ್ಚಿನ ಅಪಾಯವನ್ನು ಉಂಟು ಮಾಡಬಹುದು. ವಾಸ್ತವವೆಂದರೆ ಮೇಣದ ಬತ್ತಿಯನ್ನು ಉರಿಸಿದ ಬಳಿಕ ಗಾಳಿಯಲ್ಲಿ ಸೇರುವ ಈ ಕಣಗಳು ಸುಮಾರು ನೆಲಮಟ್ಟದಲ್ಲಿಯೇ ಇರುವುದರಿಂದ ಸುವಾಸನೆ ಇಲ್ಲದಿದ್ದಾಗಲೂ ಸೇವಿಸುತ್ತಿದ್ದಷ್ಟೂ ಹೊತ್ತೂ ಅಪಾಯವನ್ನು ಉಂಟುಮಾಡುತ್ತಲೇ ಇರುತ್ತವೆ. ಆದ್ದರಿಂದ ಸುವಾಸನೆಗೆ ಮರುಳಾಗದೇ ಈ ಸುವಾಸಿತ ಮೇಣದ ಬತ್ತಿಗಳ ಗೊಡವೆಗೆ ಹೋಗದೇ ಇರುವುದೇ ಲೇಸು. ಬದಲಿಗೆ ಸಾದಾ ಮೇಣದ ಬತ್ತಿಗಳೇ ಉತ್ತಮ. ಬನ್ನಿ, ಕೆಳಗಿನ ಸ್ಲೈಡ್ ಶೋ ಮೂಲಕ ಈ ಮೇಣದ ಬತ್ತಿಗಳ ಘೋರ ಪರಿಣಾಮಗಳನ್ನು ಅರಿಯೋಣ..

ಶ್ವಾಸಸಂಬಂಧಿ ತೊಂದರೆಗಳು ಮತ್ತು ಅಸ್ತಮಾ

ಶ್ವಾಸಸಂಬಂಧಿ ತೊಂದರೆಗಳು ಮತ್ತು ಅಸ್ತಮಾ

ಈ ಮೇಣದ ಬತ್ತಿಯಲ್ಲಿರುವ ಪ್ಯಾರಾಫಿನ್ ಮೇಣ ಉರಿದಾಗ ಗಾಳಿಗೆ ಸೇರುವ ಕಣಗಳು ಅಸ್ತಮಾ ರೋಗಿಗಳಿಗೆ ಅತಿ ಹೆಚ್ಚಿನ ತೊಂದರೆಯುಂಟುಮಾಡುತ್ತವೆ. ಇದು ಅಸ್ತಮಾ ಪ್ರಭಾವವನ್ನು ಹೆಚ್ಚಿಸುವ ಮೂಲಕ ಈಗಾಗಲೇ ಕೊಂಚ ಗುಣವಾಗಿದ್ದ ಅಸ್ತಮಾ ಪುನಃ ಹಿಂದಿನ ಮಟ್ಟಕ್ಕೆ ಹೋಗುವ ಅಪಾಯವಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶ್ವಾಸಸಂಬಂಧಿ ತೊಂದರೆಗಳು ಮತ್ತು ಅಸ್ತಮಾ

ಶ್ವಾಸಸಂಬಂಧಿ ತೊಂದರೆಗಳು ಮತ್ತು ಅಸ್ತಮಾ

ಇನ್ನುಳಿದವರಲ್ಲಿಯೂ ಈ ಕಣಗಳು ಶ್ವಾಸಕೋಶ ಮತ್ತು ಶ್ವಾಸನಾಳಗಳಲ್ಲಿ ಉರಿ ತರಿಸುತ್ತವೆ ಹಾಗೂ ಹಲವು ತೊಂದರೆಗಳಿಗೆ ನಾಂದಿ ಹಾಡುತ್ತವೆ.

ತಲೆನೋವು

ತಲೆನೋವು

ಈ ಸುವಾಸನೆಯ ಇನ್ನೊಂದು ಘೋರ ಪರಿಣಾಮವೆಂದರೆ ತಲೆನೋವು. ಹೆಚ್ಚಿನ ಜನರಿಗೆ ಈ ಸುವಾಸನೆ ಸೇವಿಸಿದ ಕೊಂಚ ಹೊತ್ತಿನಲ್ಲಿಯೇ ತಲೆನೋವು ಪ್ರಾರಂಭವಾಗುತ್ತದೆ. ಇದಕ್ಕೆ ಗಾಳಿಯಲ್ಲಿ ಸುವಾಸನೆಯೊಂದಿಗೆ ಸೇರುವ benzene ಮತ್ತು toluene ಎಂಬ ದೊಡ್ಡ ಕಣಗಳೇ ಕಾರಣ. ಈಗಾಗಲೇ ತಲೆನೋವಿನಿಂದ ಬಳಲುತ್ತಿರುವವರಿಗೆ ಅವರ ತಲೆಶೂಲೆಯನ್ನು ಇನ್ನಷ್ಟು ಹೆಚ್ಚುತ್ತದೆ.

ಮೂತ್ರಪಿಂಡಗಳ ಒಳಗೆ ಗಡ್ಡೆಗಳಾಗುವುದು

ಮೂತ್ರಪಿಂಡಗಳ ಒಳಗೆ ಗಡ್ಡೆಗಳಾಗುವುದು

ಸುವಾಸನೆಯೊಂದಿಗೆ ಸದ್ದಿಲ್ಲದೇ ದೇಹ ಸೇರುವ ಪ್ಯಾರಾಫಿನ್ ನ ಹೊಗೆಯ ಸೇವನೆ ಮೂತ್ರಪಿಂಡಗಳಲ್ಲಿ ಚಿಕ್ಕ ಚಿಕ್ಕ ಗಡ್ಡೆಗಳನ್ನುಂಟುಮಾಡಬಹುದು. ಆದ್ದರಿಂದ ತಜ್ಞರು ಈ ಸುವಾಸಿತ ಮೇಣದ ಬತ್ತಿಗಳ ಬಳಕೆಯನ್ನು ಪೂರ್ಣವಾಗಿ ಕೈಬಿಡುವುದೇ ಉತ್ತಮ, ಅದು ಸಾಧ್ಯವಾಗದಿದ್ದರೆ ಅಗತ್ಯ ಸಂದರ್ಭಕ್ಕೆ ಮಾತ ಬಳಸಿ ಬಳಿಕ ಕೂಡಲೇ ನಂದಿಸಿ ಬಿಡಲು ಸಲಹೆ ನೀಡುತ್ತಾರೆ.

ಮೇಣದ ಬತ್ತಿಯ ದಾರದಲ್ಲಿರುವ ಸೀಸ

ಮೇಣದ ಬತ್ತಿಯ ದಾರದಲ್ಲಿರುವ ಸೀಸ

ಸೀಸ ಎಂಬ ಲೋಹ ನಿತ್ಯಬಳಕೆಯ ಹತ್ತು ಹಲವು ವಸ್ತುಗಳಲ್ಲಿ ಬಳಕೆಯಾಗುತ್ತದೆ. ಆದರೆ ಇದು ರಕ್ತಕ್ಕೆ ಸೇರಿದರೆ ಮೆದುಳು, ಶ್ವಾಸಕೋಶ, ಯಕೃತ್ ಮೊದಲಾದ ಅಂಗಗಳಿಗೆ ಹಾನಿ ಮಾಡುವುದು ಮಾತ್ರವಲ್ಲ, ಹಾರ್ಮೋನುಗಳ ಸ್ರಾವವನ್ನೂ ಏರುಪೇರುಗೊಳಿಸಿ ಆರೋಗ್ಯವನ್ನು ಅಪಾರವಾಗಿ ಬಾಧಿಸುತ್ತದೆ. ಹಿಂದೆ ಪೆಟ್ರೋಲ್ ವಾಹನಗಳ ಹೊಗೆಯಲ್ಲಿ ಅತಿಯಾಗಿದ್ದ ಸೀಸದ ಕಾರಣಕ್ಕೇ ಈಗ ಸೀಸರಹಿತ (unleaded) ಇಂಧನಕ್ಕೆ ಆದ್ಯತೆ ನೀಡಲಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೇಣದ ಬತ್ತಿಯ ದಾರದಲ್ಲಿರುವ ಸೀಸ

ಮೇಣದ ಬತ್ತಿಯ ದಾರದಲ್ಲಿರುವ ಸೀಸ

ಸೀಸದ ಅಂಶ ಹೆಚ್ಚಿದ್ದುದಕ್ಕೇ ಮ್ಯಾಗಿಯೂ ನಿಷೇಧಕ್ಕೆ ಒಳಗಾಗಬೇಕಾಯಿತು. ಇದೇ ಸೀಸ ಮೇಣದ ಬತ್ತಿಯ ದಾರದಲ್ಲಿಯೂ ಇದೆ. ಮೇಣದ ಬತ್ತಿ ಉರಿಯುವಾಗ ಈ ದಾರ ಆಕ್ಕ ಪಕ್ಕ ಬಾಗದೇ ನೆಟ್ಟಗೆ ನಿಲ್ಲಲು ಈ ಸೀಸ ನೆರವಾಗುತ್ತದೆ. ಆದರೆ ಉರಿಯುವಾಗ ಸೀಸವೂ ಉರಿದು ಗಾಳಿಯಲ್ಲಿ ಸೇರುವ ಕಾರಣ ಸುತ್ತಲಿನವರ ಶ್ವಾಸಕೋಶಗಳಿಗೆ ಅಪಾಯವಿದೆ.

ಅಲರ್ಜಿಕಾರಕ ಪರಿವರ್ತನೆ

ಅಲರ್ಜಿಕಾರಕ ಪರಿವರ್ತನೆ

ಕೆಲವೊಮ್ಮೆ ವಿಶಿಷ್ಟವಾದ ಸುವಾಸನೆಯನ್ನು ಪಡೆಯಲು ಸಂಯೋಜಿತ ರಾಸಾಯನಿಕಗಳನ್ನು ಸೇರಿಸಬೇಕಾಗುತ್ತದೆ. ಇವುಗಳನ್ನು ಉರಿಸಿದಾಗ ಇತರ ಅಪಾಯಗಳ ಜೊತೆಗೇ ಕೆಲವರಿಗೆ ಅಲರ್ಜಿಯನ್ನೂ ಉಂಟುಮಾಡಬಹುದು. ಚರ್ಮದಲ್ಲಿ ಚುಕ್ಕೆಗಳು ಏಳುವುದು, ಸತತವಾದ ಕೆಮ್ಮು, ಉರಿ, ತುರಿಕೆ, ತಲೆಯಲ್ಲಿ ತುರಿಕೆ, ಬೊಕ್ಕೆಗಳು ಏಳುವುದು, ತುರಿಸಿದಲ್ಲಿ ಚರ್ಮ ಕೆಂಪಗಾಗುವುದು ಮೊದಲಾದ ಪರಿಣಾಮಗಳು ಕಂಡುಬರುತ್ತವೆ.

ಕ್ಯಾನ್ಸರ್

ಕ್ಯಾನ್ಸರ್

ಮೇಣದ ಬತ್ತಿಯಲ್ಲಿನ ಪ್ಯಾರಾಫಿನ್ ಕರಗುತ್ತಿದ್ದಂತೆಯೇ ನಿಧಾನವಾಗಿ ಗಾಳಿಯಲ್ಲಿ ಲೀನವಾಗುವ benzene ಮತ್ತು toluene ಎಂಬ ಭಾರವಾದ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶಕ್ಕೆ ಪ್ರವೇಶ ಪಡೆಯುತ್ತವೆ. ಡೀಸೆಲ್ ಹೊಗೆಯಲ್ಲಿಯೂ ಈ ಕಣಗಳಿವೆ. ಇವು ಸುಮಾರಾಗಿ ನೆಲಮಟ್ಟದಲ್ಲಿಯೇ ಇರುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕ್ಯಾನ್ಸರ್

ಕ್ಯಾನ್ಸರ್

ಡೀಸೆಲ್ ವಾಹನದ ಹೊಗೆ ಗಾಳಿಯಲ್ಲಿ ಲೀನವಾಗುವಾಗ ನೆಲಮಟ್ಟದಲ್ಲಿಯೇ ಇರುವುದನ್ನು ಗಮನಿಸಿ. ಈ ಕಣಗಳು ಕ್ಯಾನ್ಸರ್ ಕಾರಕವಾಗಿದ್ದು ಹಲವು ರೀತಿಯ ಕ್ಯಾನ್ಸರ್ ಗಳಿಗೆ ಕಾರಣವಾಗಬಹುದು. ಮೇಣದ ಬತ್ತಿಯ ಸುವಾಸನೆಯ ಪರಿಣಾಮಗಳಲ್ಲಿಯೇ ಇದು ಅತ್ಯಂತ ಕೆಟ್ಟ ಪರಿಣಾಮವಾಗಿದೆ.

ಮೇಣದ ಬತ್ತಿಗಳಿಂದ ದೂರವಿರಲು ಕೆಲವು ಸಲಹೆಗಳು

ಮೇಣದ ಬತ್ತಿಗಳಿಂದ ದೂರವಿರಲು ಕೆಲವು ಸಲಹೆಗಳು

* ಸಾಧ್ಯವಿದ್ದಷ್ಟು ಮಟ್ಟಿಗೆ ಸುವಾಸನೆಯ ಅಗತ್ಯವನ್ನು ತಪ್ಪಿಸಿ. ಅದರಲ್ಲೂ ಸುವಾಸನೆಯನ್ನು ಚಿಕಿತ್ಸೆಯಾಗಿ ಬಳಸುವ ಅರೋಮಾಥೆರಪಿಯಲ್ಲಿ ಈ ಸುವಾಸಿತ ಮೇಣದ ಬತ್ತಿಗಳನ್ನು ಬಳಸದಿರಿ.

* ಪ್ಯಾರಾಫಿನ್ ಆಧಾರಿತ ಮೇಣದ ಬತ್ತಿಗಳ ಬದಲಿಗೆ ಜೇನು ಮೇಣ ಅಥವಾ ಸೋಯಾ ಮೇಣ ಆಧಾರಿತ ಉತ್ಪನ್ನಗಳನ್ನು ಬಳಸಿ

* ಮೇಣದ ಬತ್ತಿಗಳನ್ನು ಉರಿಸಿದ್ದಷ್ಟೂ ಹೊತ್ತು ಎಲ್ಲಾ ಕಿಟಕಿಗಳನ್ನು ತೆರೆದು ಗಾಳಿಯಾಡುವಂತೆ ಮಾಡಿ.

ಮೇಣದ ಬತ್ತಿಗಳಿಂದ ದೂರವಿರಲು ಕೆಲವು ಸಲಹೆಗಳು

ಮೇಣದ ಬತ್ತಿಗಳಿಂದ ದೂರವಿರಲು ಕೆಲವು ಸಲಹೆಗಳು

* ಈ ಸುವಾಸನೆ ಅಗತ್ಯ ಎನಿಸಿದರೆ ಅಗತ್ಯವಿದ್ದಷ್ಟು ಹೊತ್ತು ಮಾತ್ರವೇ ಉರಿಸಿ ಬಳಿಕ ನಂದಿಸಿಬಿಡಿ.

* ಎಲ್ಲಕ್ಕೂ ಉತ್ತಮವೆಂದರೆ ಸುವಾಸನೆಗಾಗಿ ನೈಸರ್ಗಿಕ ಹೂವುಗಳನ್ನು ಬಳಸಿ ಈ ಮೇಣದ ಬತ್ತಿಗಳ ಬಳಕೆಯನ್ನೇ ಕಡಿಮೆ ಮಾಡಿ. ಸಾಂಪ್ರಾದಾಯಿಕ ಎಣ್ಣೆಯ ಹಣತೆಗಳನ್ನು ಉಪಯೋಗಿಸಿ.

X
Desktop Bottom Promotion