Latest Updates
-
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು?
ಇವು ಸಾಮಾನ್ಯ ತರಕಾರಿಗಳಲ್ಲ- ಔಷಧೀಯ ಆಗರ!
ನಿತ್ಯ ಆಹಾರದ ಪದ್ಧತಿಯಲ್ಲಿ ಆಲೂಗಡ್ಡೆ ಮತ್ತು ಬೀಟ್ ರೂಟ್ ಹೆಚ್ಚು ರುಚಿಯುಳ್ಳ ಬೇರಿನ ತರಕಾರಿಗಳೆಂದು ತಿಳಿಯಲಾಗಿದೆ. ಆದರೆ ಬೇರಿನ ಮೂಲದ ಆಹಾರ ಪದ್ಧತಿಯಲ್ಲಿ ಇನ್ನೂ ಹೆಚ್ಚಿನ ಆಯ್ಕೆಗಳಿರುವುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಈ ಬೇರಿನ ತರಕಾರಿಗಳು ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಲಿದ್ದು, ಇವುಗಳಲ್ಲಿರುವ ಪೌಷ್ಠಿಕಾಂಶ ಗುಣಗಳು ಅನೇಕ ವಿಧದಲ್ಲಿ ಉಪಯೋಗವಾಗಲಿದೆ. ಈ ಬೇರುಗಳನ್ನು ಅನೇಕ ರೀತಿಯ ವಿಧಾನಗಳಲ್ಲಿ ಅಡುಗೆ ಮಾಡಬಹುದು. ಆದರೆ ಆಹಾರ ತಜ್ಞರು ಈ ಬೇರುಗಳನ್ನು ಬೇಯಿಸಿ ಮಾಡುವ ಅಡುಗೆಯಿಂದ ಸೇವಿಸುವುದು ಉತ್ತಮವೆಂದು ಸಲಹೆ ನೀಡುತ್ತಾರೆ.
ಚಿಟಿಕೆ ಉಪ್ಪು ಮತ್ತು ಮೆಣಸಿನ ಪುಡಿ ಬೆರೆಸಿ ಮಾಡಿದ ಈ ಬೇರಿನ ತರಕಾರಿಯ ಅಡುಗೆ ಸೇವಿಸಲು ಬಲುರುಚಿ. ಈ ಬೇರುಗಳು ಅತ್ಯಂತ ಆರೋಗ್ಯಕರ. ಬೀಟ್ ರೂಟ್‌ಗಳು ರಕ್ತಹೀನತೆಗೆ ರಾಮಬಾಣವಿದ್ದಂತೆ. ಬೀಟ್ ರೂಟ್ ನಲ್ಲಿ ರಕ್ತಕೋಶಗಳನ್ನು ವೃದ್ಧಿಸಲು ಸಹಕಾರಿಯಾಗುವ ಕಬ್ಬಿಣ ಅಂಶವು ಯಥೇಚ್ಛವಾಗಿದೆ. ಅದೇರೀತಿ, ಮೂಲಂಗಿ ಮತ್ತು ನೌಕೋಲು ಬೇರುಗಳು, ನೀವು ಮಧುಮೇಹದಿಂದ ಬಳಲುತ್ತಿದ್ದರೆ, ನಿಮಗೆ ಹೆಚ್ಚು ಸಹಕಾರಿಯಾಗಲಿದೆ. ಅರಿಶಿನ ಮತ್ತು ಶುಂಠಿ ಬೇರುಗಳು ಹೆಚ್ಚು ಶಕ್ತಿಯುತ ಮತ್ತು ಆರೋಗ್ಯಕರ.
ಇವು ಎಲ್ಲ ರೀತಿಯ ಅಡುಗೆಯಲ್ಲಿಯೂ ಸಹ ರುಚಿಯನ್ನು ಹೆಚ್ಚಿಸುತ್ತವೆ. ಈ 8 ಬೇರಿನ ತರಕಾರಿಗಳನ್ನು ವಾರಕ್ಕೆ ಎರಡು ಬಾರಿ ಸೇವಿಸಿದಲ್ಲಿ, ದೇಹದೊಳಗಿನ ಕೀಟಾಣುಗಳನ್ನು ಹಾಗೂ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುತ್ತವೆ. ರಕ್ತ ಸಂಚಾರವನ್ನು ಸುಗಮಗೊಳಿಸುವುದಲ್ಲದೆ, ಮಧುಮೇಹ ಮತ್ತು ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳು ಬರದಂತೆ ತಡೆಯುತ್ತವೆ. ಬನ್ನಿ ಕೆಳಗಿನ ಸ್ಲೈಡ್ ಶೋ ಮೂಲಕ ಕೆಲವು ಬೇರಿನ ತರಕಾರಿಗಳ ಬಗ್ಗೆ ತಿಳಿದುಕೊಳ್ಳಿ...

ಬೀಟ್ ರೂಟ್
ಬೀಟ್ ರೂಟ್ ಗಳು ಅತ್ಯಂತ ಪೌಷ್ಠಿಕಾಂಶವುಳ್ಳ ಬೇರಿನ ತರಕಾರಿ. ಇದರಲ್ಲಿ ರಕ್ತಕೋಶಗಳನ್ನು ವೃದ್ಧಿಸುವ ಕಬ್ಬಿಣ ಅಂಶವು ಯಥೇಚ್ಛವಾಗಿದ್ದು, ದೇಹದ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುವ ಬೆಟಾಲಿಯನ್ ಎಂಬ ಪೌಷ್ಠಿಕಾಂಶವು ಇದರಲ್ಲಿ ಅಧಿಕವಾಗಿದೆ. ಹಾಗಾಗಿ ಇದನ್ನು ಬೇಯಿಸಿ ಸೇವಿಸುವುದು ಸೂಕ್ತ.

ಮೂಲಂಗಿ
ಮೂಲಂಗಿ ಸ್ವಾಭಾವಿಕವಾಗಿ ಹೆಚ್ಚು ಆರೋಗ್ಯಕರ. ಇದನ್ನು ಹೆಚ್ಚಾಗಿ ಸೇವಿಸಿದಲ್ಲಿ ದೇಹ ಊದಿಕೊಳ್ಳುವ ಲಕ್ಷಣ ಹೊಂದಿದೆ. ಇದೊಂದು ಅಂಶ ಬಿಟ್ಟರೆ, ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು, ಮೂತ್ರರೋಗ ಸಮಸ್ಯೆ ಹಾಗೂ ಬೊಜ್ಜನ್ನು ನಿಯಂತ್ರಿಸುತ್ತದೆ.

ನೌಕೋಲು (Turnip)
ನೌಕೋಲನ್ನು ಕೆಲವರು ಇಷ್ಟಪಡದಿದ್ದರೂ, ಇದು ಆರೋಗ್ಯಕ್ಕೆ ಉತ್ತಮ. ಇದು ಮೂಳೆಗಳ ಸದೃಢತೆಗೆ, ಶ್ವಾಸಕೋಶಕ್ಕೆ, ಹೃದಯಕ್ಕೆ ಹಾಗೂ ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿಯಾಗಲಿದೆ. ಇದನ್ನು ಹಾಗೆಯೇ ಅಥವಾ ಬೇಯಿಸಿ ಸೇವಿಸಬಹುದಾಗಿದೆ.

ಸಿಹಿ ಗೆಣಸು
ಸಿಹಿ ಗೆಣಸು ಹೆಚ್ಚಾಗಿ ಸಿ, ಬಿ6 ಮತ್ತು ಇ ವಿಟಮಿನ್ ಗಳಿಂದ ಕೂಡಿದೆ. ಇದರ ಒಳಭಾಗ ನಾರಿನ ಅಂಶದಿಂದ ಕೂಡಿದ್ದು, ಇದರಿಂದ ಹೆಚ್ಚು ಲಾಭ ಹೊಂದಲು ಬೇಯಿಸಿ ಸೇವಿಸುವುದು ಸೂಕ್ತ.

ಶುಂಠಿ
ಇದು ಪ್ರತಿನಿತ್ಯದ ಆಹಾರದಲ್ಲಿ ಸೇವಿಸಲೇಬೇಕಾದಂತಹ ಶಕ್ತಿಯುತ ಬೇರಿನ ತರಕಾರಿ ಹಾಗೂ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಕ್ಯಾನ್ಸರ್, ಮಧುಮೇಹ, ಚರ್ಮರೋಗಗಳಿಗೆ, ರಕ್ತದೊತ್ತಡ ಸಮಸ್ಯೆಗಳಿಗೆ ರಾಮಬಾಣ ಮತ್ತು ಇದರಲ್ಲಿಯೂ ಸಹ ರಕ್ತಕೋಶಗಳನ್ನು ವೃದ್ಧಿಸುವ ಗುಣವಿದೆ.

ಅರಿಶಿನ
ಹಳದಿ ಅರಿಶಿನದ ಬೇರು ಶುದ್ಧ ಮತ್ತು ಆರೋಗ್ಯಕರ. ಇದನ್ನು ಸೇವಿಸುವುದು ಅವಶ್ಯಕವಾಗಿದ್ದು, ನಮ್ಮ ದೇಹವನ್ನು ಶಕ್ತಿಯುತವಾಗಿರಿಸುವ ಗುಣವನ್ನು ಹೊಂದಿದೆ ಹಾಗೂ ನಮ್ಮ ಮೆದುಳು ಮತ್ತು ಚರ್ಮಕಾಂತಿಗೆ ಇದು ಅತ್ಯವಶ್ಯಕ.

ಮುಳ್ಳು ಗೆಣಸು
ಈ ಗೆಣಸನ್ನು ಬೇಯಿಸಿ ತಿಂದರೆ ಹೆಚ್ಚು ಆರೋಗ್ಯಕರ. ಇದರಲ್ಲಿ ಬಿ6 ವಿಟಮಿನ್, ಪೊಟಾಷಿಯಂ ಮತ್ತು ನಾರಿನ ಅಂಶಗಳಿದ್ದು, ದೇಹದ ದೃಢತೆಗೆ ಮತ್ತು ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಲಿದೆ.

ಬೋಕ್ ಚಾಯ್
ಇದು ಚೀನಿಯರ ಪ್ರಿಯವಾದ ಆಹಾರ. ಒಮ್ಮೆಯಾದರೂ ಇದನ್ನು ಸೇವಿಸಲೇಬೇಕು. ಇದು ಜನನೇಂದ್ರೀಯ ಕ್ಯಾನ್ಸರ್ ತಡೆಯುವಲ್ಲಿ ಯಶಸ್ವಿಯಾಗಿದೆ. ಇದನ್ನು ಪ್ರತಿನಿತ್ಯ ಸೇವಿಸಿದಲ್ಲಿ ದೇಹವನ್ನು ಶಕ್ತಿಯುತವಾಗಿ ಹಾಗೂ ಆರೋಗ್ಯಕರವಾಗಿಡಲು ಸಹಕಾರಿಯಾಗಲಿದೆ.



Click it and Unblock the Notifications









