Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೈರಿಗಳಂತೆ ಕಾಡುವ ಬ್ಯಾಕ್ಟೀರಿಯಗಳ ಇತಿಹಾಸ ಕೆಣಕಿದಾಗ...
ಕೀಟಗಳ ಬಗ್ಗೆ ನಮ್ಮೆಲ್ಲರಲ್ಲಿ ಒಂದು ರೀತಿಯ ಅಸಡ್ಡೆಯಿದೆ. ಯಾವುದೇ ಕೀಟ ಬಂದರೂ ನಾವೆಲ್ಲರೂ ಕೈಗೆ ಸಿಕ್ಕಿದ ಏನಾದರೊಂದನ್ನು ತೆಗೆದುಕೊಂಡು ಕೊಲ್ಲುವುದೇ ಹೆಚ್ಚು. ಆದರೆ ಕೀಟಗಳಿಲ್ಲದಿದ್ದರೆ ಜಗತ್ತು ಉಳಿಯಲು ಸಾಧ್ಯವೇ ಇಲ್ಲವೆಂಬ ಸತ್ಯ ಹೆಚ್ಚಿನವರಿಗೆ ಗೊತ್ತೇ ಇಲ್ಲ. ಏಕೆಂದರೆ ಕೀಟಗಳಿಲ್ಲದೇ ಪರಾಗಸ್ಪರ್ಶ ಸಾಧ್ಯವಿಲ್ಲ, ಆಗ ಆಹಾರ ಉತ್ಪಾದನೆಯೂ ಸಾಧ್ಯವಿಲ್ಲ. ಆದ್ದರಿಂದ ಕೀಟಗಳನ್ನು ಉಚ್ಛಾಟಿಸುವ ಮೊದಲು ಅದರ ಪರಿಣಾಮಗಳನ್ನು ಅರಿಯುವುದು ಮುಖ್ಯ.
ಕೀಟಗಳ ಕಥೆ ಹೀಗಾದರೆ ಮನುಷ್ಯರ ಆರೋಗ್ಯದ ಮೇಲೆ ಧಾಳಿ ಮಾಡಿ ಕಂಗೆಡಿಸುವ ಬ್ಯಾಕ್ಟೀರಿಯಾಗಳನ್ನೂ ನಾವು ವೈರಿಗಳಂತೆಯೇ ಕಾಣುತ್ತೇವೆ. ಆದರೆ ಎಲ್ಲಾ ಬ್ಯಾಕ್ಟೀರಿಯಾಗಳು ಹಾನಿಕಾರಕವಲ್ಲ. ನಮ್ಮ ಮೊಸರನ್ನು ಹೆಚ್ಚು ಕಡಿಮೆ ಜೀರ್ಣಿಸಿದ ಸ್ಥಿತಿಯಲ್ಲಿ ಲಭ್ಯವಾಗುವಂತೆ ಮಾಡುವುದು ಬ್ಯಾಕ್ಟೀರಿಯಾಗಳೇ. ಇವು ಕೆಲವು ಏಕಜೀವಕೋಶದ ಜೀವಿಗಳಾಗಿದ್ದರೆ ಉಳಿದವು ಸುಮಾರು ನೂರಕ್ಕಿಂತಲೂ ಕಡಿಮೆ ಜೀವಕೋಶಗಳನ್ನು ಹೊಂದಿರುವಂತಹವು.
ಬ್ಯಾಕ್ಟೀರಿಯಾಗಳು ಇಲ್ಲದ ಸ್ಥಳವೇ ಇಲ್ಲ. ಗಾಳಿ, ನೀರು, ಭೂಮಿ, ಸಸ್ಯಗಳು, ಅಷ್ಟೇ ಏಕೆ, ನಮ್ಮ ಶರೀರಗಳಲ್ಲಿಯೂ ಲಕ್ಷಾಂತರ ಬ್ಯಾಕ್ಟೀರಿಯಾಗಳಿವೆ. ಇವುಗಳಲ್ಲಿ ಕೆಲವೇ ಬ್ಯಾಕ್ಟೀರಿಯಾಗಳು ಅಪರಿಮಿತವಾಗಿ ವೃದ್ಧಿಸಿ ಆರೋಗ್ಯವನ್ನು ಹಾಳುಗೆಡವುತ್ತವೆ. ನೆಗಡಿಯನ್ನು ಹೊಡೆದೋಡಿಸುವ ಶಕ್ತಿಶಾಲಿ ಆಹಾರಗಳು ಕೀಟಗಳಲ್ಲಿ ಎಲ್ಲಾ ಕೀಟಗಳು ಹಾನಿಕಾರಕವಲ್ಲ.
ಉದಾಹರಣೆಗೆ ಜೇನು. ಜೇನುನೊಣವಿಲ್ಲದೇ ಜೇನಿನ ಉತ್ಪಾದನೆ ಸಾಧ್ಯವಿಲ್ಲ. ಅಂತೆಯೇ ನಮ್ಮ ಶರೀರದಲ್ಲಿರುವ ಹಲವು ಬ್ಯಾಕ್ಟೀರಿಯಾಗಳು ನಮಗೆ ಉಪಕಾರವನ್ನೇ ಮಾಡುತ್ತವೆ. ಬ್ಯಾಕ್ಟೀರಿಯಾಗಳ ಬಗ್ಗೆ ನಮಗೆ ತಿಳಿದಿರದಿದ್ದ ಹನ್ನೆರಡು ರೋಚಕ ಮಾಹಿತಿಗಳು ನಿಮ್ಮನ್ನು ಅಚ್ಚರಿಗೊಳಿಸುತ್ತವೆ. ಅಚ್ಚರಿ ಪಡೆಯಲು ಕೆಳಗಿನ ಸ್ಲೈಡ್ ಶೋ ನೋಡುತ್ತಾ ಹೋಗಿ..

ಬ್ಯಾಕ್ಟೀರಿಯಾಗಳು ಮಾನವನಿಗಿಂತಲೂ ಹೆಚ್ಚಿನ ಇತಿಹಾಸ ಹೊಂದಿವೆ
ಈ ಭೂಮಿಯ ಮೇಲೆ ಜೀವ ಅಂಕುರಿಸಿದಾಗ ಮೊದಲನೆಯದಾಗಿ ಬ್ಯಾಕ್ಟೀರಿಯಾಗಳೇ ಜೀವ ತಳೆದವು ಎಂದು ಇತಿಹಾಸತಜ್ಞರು ಅಭಿಪ್ರಾಯಪಡುತ್ತಾರೆ.

ನಿಮ್ಮ ಮೇಜಿನ ಮೇಲೆ ಶೌಚಾಲಯಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾಗಳಿವೆ
ನಿಮ್ಮ ಶೌಚಾಲಯದ ಕಮೋಡ್ ಮೇಲೆ ಕುಳಿತಿರುವುದಕ್ಕಿಂತಲೂ ಸುಮಾರು 399 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳು ನಿಮ್ಮ ಕೆಲಸದ ಮೇಜಿನ ಮೇಲಿದೆ.

ಚುಂಬನದಿಂದ ಬ್ಯಾಕ್ಟೀರಿಯಾಗಳು ವರ್ಗಾವಣೆಯಾಗುತ್ತವೆ
ಪ್ರತಿ ಚುಂಬನದಲ್ಲಿ ಸುಮಾರು ಒಂದು ಬಿಲಿಯನ್ ನಷ್ಟು ಬ್ಯಾಕ್ಟೀರಿಯಾಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ.

ನಿಮ್ಮ ದೇಹದಲ್ಲಿ ಸುಮಾರು ಎರಡು ಕೇಜಿ ಬ್ಯಾಕ್ಟೀರಿಯಾಗಳಿವೆ
ನಿಮ್ಮ ದೇಹದಲ್ಲಿರುವ ಅಷ್ಟೂ ಬ್ಯಾಕ್ಟೀರಿಯಾಗಳನ್ನು ಪ್ರತ್ಯೇಕಿಸಿ ತೂಕ ಹಾಕಿದರೆ ಸುಮಾರು ಎರಡು ಕೇಜಿ ತೂಗುತ್ತದೆ.

ಹೊಕ್ಕುಳಲ್ಲಿ 1400 ಬಗೆಯ ಬ್ಯಾಕ್ಟೀರಿಯಾಗಳಿವೆ
ನಿಮ್ಮ ಹೊಕ್ಕುಳಲ್ಲಿರುವ ಬ್ಯಾಕ್ಟೀರಿಯಾಗಳನ್ನು ಪ್ರತ್ಯೇಕಿಸಿ ವಿಭಾಗಿಸಿದರೆ ಸುಮಾರು 1400 ಪ್ರಬೇಧದ ಬ್ಯಾಕ್ಟೀರಿಯಾಗಳು ಕಾಣಸಿಗುತ್ತವೆ.

ಶೌಚಾಲಯಕ್ಕಿಂತಲೂ ಮೊಬೈಲಿನಲ್ಲಿಯೇ ಇವು ಹೆಚ್ಚು
ನಿಮ್ಮ ಮೊಬೈಲನ್ನು ಎಷ್ಟು ಸ್ವಚ್ಛಗೊಳಿಸಿದರೂ ಬದಿಯ ಅಂಚುಗಳ ನಡುವಣ ಬಿರುಕಿನಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾಗಳಿವೆ. ಇದು ಶೌಚಾಲಯದಲ್ಲಿ ಕಾಣಬರುವ ಪ್ರಮಾಣಕ್ಕಿಂತ ಹೆಚ್ಚು.

ಸೂಕ್ಷ್ಮದರ್ಶಕದ ಆವಿಷ್ಕಾರದವರೆಗೂ ನೋಡದೇ ಇದ್ದ ಬ್ಯಾಕ್ಟೀರಿಯಾ
ಬ್ಯಾಕ್ಟೀರಿಯಾಗಳ ಇರುವಿಕೆ ಬಗ್ಗೆ ಗೊತ್ತಾಗಿದ್ದರೂ ನೋಡಲು ಸಾಧ್ಯವಾಗಿದ್ದು ಸೂಕ್ಷದರ್ಶಕಗಳ ಬಳಕೆಯ ಬಳಿಕವೇ.

ಒಂದು ನೋಟಿನ ಮೇಲೆ 2500 ವಿಧದ ಬ್ಯಾಕ್ಟೀರಿಯಾಗಳಿವೆ
ನಾಲ್ಕಾರು ಕೈ ದಾಟಿದ ಪ್ರತಿ ನೋಟಿನ ಮೇಲೆ ಕನಿಷ್ಟ 2500 ವಿಧದ ಬ್ಯಾಕ್ಟೀರಿಯಾಗಳಿರುತ್ತವೆ.

ಬೆವರಿನ ದುರ್ವಾಸನೆಗೆ ಬ್ಯಾಕ್ಟೀರಿಯಾ ಕಾರಣ
ಬೆವರಿದಾದ ಬರುವ ದುರ್ಗಂಧಕ್ಕೆ ನಿಮ್ಮ ಮೈಯಲ್ಲಿರುವ ಬ್ಯಾಕ್ಟೀರಿಯಾ ಕಾರಣವೇ ಹೊರತು ಬೆವರಲ್ಲ.

ಭೂಮಿಯ ಯಾವುದೇ ವಾತಾವರಣದಲ್ಲಿ ಬದುಕಿರಬಲ್ಲವು
ಭೂಮಿಯ ಮೇಲಿನ ಯಾವುದೇ ವಾತಾವರಣದಲ್ಲಿ ಬದುಕಬಲ್ಲ ಈ ಬ್ಯಾಕ್ಟೀರಿಯಾಗಳು ಯಾವುದೇ ಪ್ರಹಾರದಿಂದ ಬೇಗನೇ ಚೇತರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.

ಮಣ್ಣಿನ ವಾಸನೆಗೆ ಆಕ್ಟಿನೊಮೈಸಿಟೆಸ್ ಬ್ಯಾಕ್ಟೀರಿಯಾ ಕಾರಣ
ಮೊದಲ ಮಳೆ ಇಳೆಗೆ ಬೀಳುತ್ತಿದ್ದಂತೆಯೇ ಹಸಿಮಣ್ಣಿನ ಪರಿಮಳ ವಾತಾವರಣವನ್ನು ವ್ಯಾಪಿಸುತ್ತದೆ ಇದಕ್ಕೆ ವಾಸ್ತವವಾಗಿ ಮಣ್ಣು ಕಾರಣವಲ್ಲ, ಬದಲಿಗೆ ಆಕ್ಟಿನೊಮೈಸಿಟೆಸ್ (actinomycetes) ಎಂಬ ಬ್ಯಾಕ್ಟೀರಿಯಾ ಕಾರಣ.

ಬ್ಯಾಕ್ಟೀರಿಯಾ ನಿಗ್ರಹದ ಔಷಧಿ ತಯಾರಿಸಲು ಬ್ಯಾಕ್ಟೀರಿಯಾ ಬೇಕು
ಬ್ಯಾಕ್ಟೀರಿಯಾಗಳನ್ನು ಬಗ್ಗು ಬಡಿಯುವ ಔಷಧಿಗಳನ್ನು (anti-bacterial drugs) ತಯಾರಿಸಲು ಸಹಾ ಬ್ಯಾಕ್ಟೀರಿಯಾಗಳು ಬೇಕು.



Click it and Unblock the Notifications