Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ಲೋ ಪಾಯಿಸನ್ ರಕ್ತಬೀಜಾಸುರ 'ಫಾಸ್ಟ್ ಫುಡ್'
ಇಂದಿನ ತಲೆಮಾರು ಫಾಸ್ಟ್ ಫುಡ್ಗೆ ಒಗ್ಗಿಸಿಕೊಂಡಿದ್ದಾರೆ. ವಾರಾಂತ್ಯವನ್ನು ಮಜವಾಗಿ ಕಳೆಯುವುದು ಎಂದರೆ ಹೋಟೆಲ್ ಇಲ್ಲವೇ ರೆಸ್ಟೋರೆಂಟ್ಗಳಿಗೆ ಹೋಗಿ ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್, ಚೈನೀಸ್ ಆಹಾರಗಳು ಇವೇ ಮೊದಲಾದ ಫಾಸ್ಟ್ ಫುಡ್ಗಳನ್ನು ಕಬಳಿಸುವುದು ಎಂದಾಗಿದೆ. ಬಾಯಿಗೆ ರುಚಿಯನ್ನು ಉಣಬಡಿಸುವ ಈ ಸಿದ್ಧ ಆಹಾರಗಳು ನಿಮ್ಮ ಜೀವವನ್ನು ತಿನ್ನುವ ಸ್ಲೋ ಪಾಯಿಸನ್ ಎಂಬ ಅಂಶ ನಿಮಗೆ ಗೊತ್ತೇ? ಜಂಕ್ ಫುಡ್ ಪ್ರಿಯರಾ ನೀವು? ಹಾಗಾದರೆ ಆರೋಗ್ಯ?
ತ್ವರಿತವಾಗಿ ಸಿದ್ಧ ಪಡಿಸುವ ಆಹಾರಗಳೆಂದೇ ಜನಜನಿತವಾಗಿರುವ ಈ ಆಹಾರಗಳು ನಿಮ್ಮ ಹೊಟ್ಟೆತಣಿಸುವ ಗುರಿಯನ್ನಿಟ್ಟುಕೊಂಡಿರದೇ ನಿಮ್ಮನ್ನು ನಿಧಾನವಾಗಿ ನುಂಗುವ ರಾಕ್ಷಸೀ ಪದಾರ್ಥಗಳಾಗಿವೆ ಎಂಬುದನ್ನು ನೀವು ಮನಗಾಣಲೇಬೇಕು. ಒಮ್ಮೆ ತಿಂದರೆ ಇನ್ನಷ್ಟು ತಿನ್ನಬೇಕೆನ್ನುವ ಬಯಕೆಯನ್ನು ಈ ಆಹಾರ ಪದಾರ್ಥಗಳು ನಿಮ್ಮಲ್ಲಿ ಉಂಟಾಗುವಂತೆ ಮಾಡುವುದೇ ಇವುಗಳು ಭದ್ರವಾಗಿ ತಳವೂರಲು ಸಹಕಾರಿಯಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರೂ ಕೂಡ ಫಾಸ್ಟ್ ಫುಡ್ ಚಟಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಆದರೆ ಆರೋಗ್ಯದ ವಿಷಯದಲ್ಲಿ ಫಾಸ್ಟ್ ಫುಡ್ನಷ್ಟು ಅಪಾಯಕಾರಿ ಅಂಶಗಳು ಬೇರೊಂದಿಲ್ಲ ಎಂಬುದು ವೈದ್ಯಲೋಕದ ಅಭಿಪ್ರಾಯವಾಗಿದೆ. ಹಾಗಿದ್ದರೆ ಇವುಗಳ ಸೇವನೆಯಿಂದ ಉಂಟಾಗುವ ದೈಹಿಕ ಸಮಸ್ಯೆಗಳೇನು ಎಂಬುದನ್ನು ಅರಿತುಕೊಳ್ಳೋಣ ಮತ್ತು ಫಾಸ್ಟ್ ಫುಡ್ ಬಾಯಿ ಚಪಲಕ್ಕೆ ಬೀಗ ಹಾಕೋಣ.

ಸ್ಥೂಲಕಾಯ
ಹೆಚ್ಚುವರಿ ಪ್ರಮಾಣದಲ್ಲಿ ದೇಹವು ಕೊಬ್ಬನ್ನು ಹೊಂದಿರುವುದನ್ನು ಸ್ಥೂಲಕಾಯತೆ ಎಂದು ಕರೆಯುತ್ತೇವೆ. ಹೆಚ್ಚುವರಿ ತೂಕ ಎಂಬ ಅರ್ಥವೂ ಇದಕ್ಕಿದೆ. ಫಾಸ್ಟ್ ಫುಡ್ ಹೆಚ್ಚುವರಿ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಮತ್ತು ಸಕ್ಕರೆ ಪ್ರಮಾಣವನ್ನು ಒಳಗೊಂಡಿರುತ್ತವೆ. ಇದು ಹೆಚ್ಚುವರಿ ತೂಕಕ್ಕೆ ಕಾರಣವಾಗಿದೆ. ಸಣ್ಣ ಪ್ರಮಾಣದ ಫಾಸ್ಟ್ ಫುಡ್ ಕೂಡ ನಿಮ್ಮ ಕ್ಯಾಲೋರಿ ಸೇವನೆಯನ್ನು ಹೆಚ್ಚಿಸುತ್ತವೆ. ಆರೋಗ್ಯಕರ ಸೇವನೆ ವಿಧಾನವನ್ನು ಫಾಸ್ಟ್ ಫುಡ್ ಬದಲಾಯಿಸಿಬಿಡುತ್ತದೆ. ಇದರಿಂದಾಗಿ ಹಣ್ಣುಗಳು, ತರಕಾರಿಗಳು, ಹಾಲಿನ ಸೇವನೆಯನ್ನು ಮಾಡಲಾಗುವುದಿಲ್ಲ. ಆಹಾರದಲ್ಲಿನ ಈ ಬದಲಾವಣೆಯು ನಿಮ್ಮನ್ನು ಸ್ಥೂಲಕಾಯರನ್ನಾಗಿಸಿಬಿಡುತ್ತದೆ.

ಹೃದಯ ರೋಗ
ವಾರದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಬಾರಿ ಫಾಸ್ಟ್ ಫುಡ್ ಸೇವನೆ ಮಾಡುವವರು, ಹೃದಯ ಬೇನೆಯಿಂದ ಸಾಯುವುದು 80% ದಷ್ಟು ನಿಚ್ಚಳವಾಗಿದೆ. ಈ ಆಹಾರಗಳಲ್ಲಿ ಹೆಚ್ಚು ಪ್ರಮಾಣದ ಸ್ಯಾಚುರೇಟ್ ಮತ್ತು ಅಪಾಯಕಾರಿ ಕೊಬ್ಬುಗಳು ಇರುವುದರಿಂದ ಹೃದಯ ಸಂಬಂಧಿ ರೋಗಗಳು ಬಹುಬೇಗನೇ ನಿಮ್ಮನ್ನು ಸಮೀಪಿಸುತ್ತವೆ.

ಎರಡನೇ ವಿಧದ ಮಧುಮೇಹ
ಹೆಚ್ಚಿನ ಕೆಲಸದ ಒತ್ತಡ ಮತ್ತು ಮನೆಯಲ್ಲಿ ಅಡುಗೆ ಮಾಡಿ ಸೇವಿಸಲು ಸಮಯ ಇಲ್ಲದವರು ಫಾಸ್ಟ್ ಫುಡ್ಗೆ ತಮ್ಮನ್ನು ಬದಲಾಯಿಸಿಕೊಂಡು ಬಿಟ್ಟಿದ್ದಾರೆ. ಆದರೆ ಇದು ಟೈಪ್ 2 ಡಯಾಬಿಟೀಸ್ ಅನ್ನು ಉಂಟುಮಾಡುತ್ತದೆ. ಕಳಪೆ ಮಟ್ಟದ ಜೀವನ ಶೈಲಿ, ಅಂದರೆ ಅಧಿಕ ತೂಕವನ್ನು ಹೊಂದಿರುವುದು ಮತ್ತು ದೈಹಿಕವಾಗಿ ಸಕ್ರಿಯರಾಗಿ ಇಲ್ಲದೇ ಇರುವುದರಿಂದ ಉಂಟಾಗುತ್ತದೆ.

ಪೆಪ್ಟಿಕ್ ಅಲ್ಸರ್
ಪೆಪ್ಟಿಕ್ ಅಲ್ಸರ್ ಅಥವಾ ಪಿಯುಡಿ ಎಂಬ ಹೆಸರಿನಿಂದ ಕರೆಯಲ್ಪಡುವ ಸಾಮಾನ್ಯ ಕರುಳು ಹುಣ್ಣು ಆಗಿದೆ. ಇದು ಹೆಚ್ಚು ನೋವನ್ನುಂಟು ಮಾಡುವ ಕಾಯಿಲೆಯಾಗಿದ್ದು ಪಿಜ್ಜಾ, ಚಿಪ್ಸ್ ಮತ್ತು ಉಪ್ಪಿನ ಸ್ನ್ಯಾಕ್ಸ್‌ನಿಂದ ಹೆಚ್ಚು ಉಂಟಾಗುತ್ತದೆ.

ಕುಟುಂಬ ಹಾಜರಾತಿಯ ಕೊರತೆ
ಒಂದೇ ಸ್ಥಳದಲ್ಲಿ ಕುಳಿತು ಮನೆಯವರೆಲ್ಲರೂ ಆಹಾರ ಸೇವಿಸುವ ವಾತಾವರಣವನ್ನು ಫಾಸ್ಟ್ ಫುಡ್ ಒದಗಿಸುವುದಿಲ್ಲ. ನಡೆಯುವಾಗ, ವಾಹನ ಚಲಾಯಿಸುವಾಗ ಮತ್ತು ಮನೆಯಲ್ಲಿ ಇಲ್ಲವೇ ಕಚೇರಿಯಲ್ಲಿ ಕೆಲಸ ಮಾಡುವಾಗ ಇದನ್ನು ಸೇವಿಸಬಹುದಾಗಿರುವುದರಿಂದ ಕುಟುಂಬದ ಪ್ರೀತಿ ಇಲ್ಲಿರುವುದಿಲ್ಲ.

ಆಹಾರ ಸೇವನೆ ಅನಿರ್ದಿಷ್ಟ ಸಮಯ
ಆರೋಗ್ಯಯುತ ವ್ಯಕ್ತಿ ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ. ಫಾಸ್ಟ್ ಫುಡ್ ಅನ್ನು ಯಾವಾಗ ಬೇಕಾದರೂ ಸೇವಿಸಬಹುದಾಗಿದ್ದರಿಂದ ಮತ್ತು ಇದನ್ನು ಆಗಾಗ್ಗೆ ಸೇವಿಸುವ ಚಟವುಂಟಾಗುವುದರಿಂದಾಗಿ ಇದು ಅನಾರೋಗ್ಯಕ್ಕೆ ನಿಮ್ಮನ್ನು ದೂಡುತ್ತದೆ.

ಹಣದ ಪೋಲು
ಮನೆಯಲ್ಲಿ ತಯಾರಿಸಿದ ಆಹಾರಕ್ಕಿಂತಲೂ ಫಾಸ್ಟ್ ಫುಡ್ ದುಡ್ಡನ್ನು ವೃಥಾ ಹಾಳುಮಾಡುತ್ತದೆ. ಕಡಿಮೆ ಸಂಬಳವಿರುವವರು ಫಾಸ್ಟ್ ಫುಡ್ ಅನ್ನು ಆಗಾಗ್ಗೆ ಸೇವಿಸುವುದು ಕಷ್ಟಾಸಾಧ್ಯ. ಇದಕ್ಕೆ ಹೆಚ್ಚು ಬಜೆಟ್ ಬೇಕು ಅಂತೆಯೇ ಆರೋಗ್ಯಕರ ದೇಹವನ್ನು ಇದು ಹಾಳುಗೆಡವುತ್ತದೆ.

ಹಸಿವಿನ ಕೊರತೆ
ಸಾಮಾನ್ಯ ಆಹಾರಗಳಲ್ಲಿ ಕಂಡುಬರುವ ಹಸಿವಿನ ದಾಹ ಫಾಸ್ಟ್ ಫುಡ್ಗಳಲ್ಲಿ ಇರುವುದಿಲ್ಲ. ಫಾಸ್ಟ್ ಫುಡ್ಗಳ ನಿರಂತರ ಸೇವನೆ ಹಸಿವನ್ನು ಇಂಗಿಸುತ್ತದೆ. ಅಂತೆಯೇ ಇದರಿಂದಾಗಿ ಅಸಹಜ ಜೀರ್ಣಕ್ರಿಯೆ ಮತ್ತು ಫುಡ್ ಪಾಯಿಸನ್ ಉಂಟಾಗುವ ಸಾಧ್ಯತೆ ಇರುತ್ತದೆ. ಹೊಟ್ಟೆಯ ಎಲ್ಲಾ ಬಯಕೆಗಳನ್ನು ಫಾಸ್ಟ್ ಫುಡ್ ತೀರಿಸುವುದಿಲ್ಲ.

ಸಾಕಷ್ಟು ನ್ಯೂಟ್ರೀನ್ಗಳ ಕೊರತೆ
ಉತ್ತಮ ನಿಯಂತ್ರಿತ ಆಹಾರವು ಮಾನವನ ಬೆಳವಣಿಗೆಗೆ ಸಹಕಾರಿಯಾಗಿದೆ. ಫಾಸ್ಟ್ ಫುಡ್ ಈ ಅಂಶಗಳನ್ನು ತನ್ನಲ್ಲಿ ಹೊಂದಿರುವುದಿಲ್ಲ. ಕೆಲವು ಆಹಾರ ಪದಾರ್ಥಗಳಲ್ಲಿರುವ ಹೆಚ್ಚುವರಿ ನ್ಯೂಟ್ರೀನ್ಗಳನ್ನು ಫಾಸ್ಟ್ ಫುಡ್ಗಳಲ್ಲಿ ಕಾಣುವುದು ಅಸಾಧ್ಯವಾಗಿದೆ.

ಒತ್ತಡ
ಕೊಬ್ಬಿನ ಅಂಶಗಳನ್ನು ಹೇರಳವಾಗಿ ಹೊಂದಿರುವ ಆಹಾರಗಳು ಹೃದಯ ಸಮಸ್ಯೆ, ರಕ್ತನಾಳಗಳಲ್ಲಿ ತೊಂದರೆ ಮತ್ತು ಇನ್ನಷ್ಟು ಅಪಾಯಗಳನ್ನು ತಂದೊಡ್ಡುತ್ತವೆ. ಅಂತೆಯೇ ಒತ್ತಡದ ಮಟ್ಟವನ್ನು ಇವು ಹೆಚ್ಚಿಸುತ್ತವೆ. ಕ್ಯಾಫೇನ್ ಅಧಿಕವಾಗಿರುವ ಪೇಯಗಳಲ್ಲಿ ಕೂಡ ಒತ್ತಡವನ್ನು ಹೆಚ್ಚಿಸುವ ಅಂಶಗಳು ಧಾರಾಳವಾಗಿರುತ್ತವೆ. ಜಂಕ್ ಆಹಾರಗಳಲ್ಲಿ ಕೃತಕ ಸೇರ್ಪಡೆಗಳಾದಸಂರಕ್ಷಕಗಳು, ಎಮಲ್ಸಿಫೈಯರ್ಸ್, ಗಟ್ಟಿಯಾಗಿರಲು ಮತ್ತು ಪರಿಮಳ ವರ್ಧಕಗಳನ್ನು ಬಳಸಿರುತ್ತಾರೆ.



Click it and Unblock the Notifications











