Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನೀರಿನ ಕುರಿತು ಕಟ್ಟುಕಥೆ: ನಂಬಿದರೆ ನಂಬಿ, ಬಿಟ್ಟರೆ ಬಿಡಿ!
ನೀರೆಂದರೆ ಜೀವ, ನೀರೆಂದರೆ ಜೀವಜಾಲ ಎಂದು ನಾನಾ ಬಗೆಯಲ್ಲಿ ನಾವು ನೀರನ್ನು ಹೊಗಳುತ್ತೇವೆ. ನಮ್ಮ ದೇಹ ಮತ್ತು ಪ್ರಕೃತಿ ಎರಡೂ ನೀರನ್ನು ಬಯಸುತ್ತವೆ. ಇದು ನಮ್ಮ ದೇಹದ ಸುಗಮ ಕಾರ್ಯ ವೈಖರಿಗೆ ಅತ್ಯಾವಶ್ಯಕವು ಹೌದು.
ನಮ್ಮ ಜೀವನದಲ್ಲಿ ನೀರಿಗೆ ತನ್ನದೆ ಆದ ಬೆಲೆಯಿದೆ. ಇಂದು ನಾವು ನೀರಿನ ಕುರಿತಾದ ಕೆಲವೊಂದು ಸಂಗತಿಗಳನ್ನು ತಿಳಿದುಕೊಳ್ಳೋಣ ಬನ್ನಿ. ನಮ್ಮ ದೇಹಕ್ಕೆ ಎಷ್ಟು ಪ್ರಮಾಣದ ನೀರು ಬೇಕು? ಮತ್ತು ನಾವು ಎಷ್ಟು ಪ್ರಮಾಣದ ನೀರನ್ನು ಸೇವಿಸುತ್ತೇವೆ ಎಂಬುದನ್ನು ಸಹ ತಿಳಿದುಕೊಳ್ಳೋಣ. ಉಗುರು ಬೆಚ್ಚನೆಯ ನೀರು, ಆಯಸ್ಸು ನೂರು!

ಮಿಥ್ಯೆ: ಪ್ರತಿದಿನ ಎಂಟು ಲೋಟ ನೀರು ಕುಡಿಯಿರಿ
ನಾವು ಪ್ರತಿ ಸಲವು ಕೇಳುತ್ತಿರುತ್ತೇವೆ ದಿನಾ ಎಂಟು ಲೋಟ ನೀರನ್ನು ಸೇವಿಸಿ ಎಂದು. ಅದರರ್ಥ ನಿಮ್ಮ ದೇಹವನ್ನು ನೀರಿನಿಂದಲೇ ತುಂಬಿಸಿ ಎಂದಲ್ಲ, ಅದಕ್ಕೆ ಬದಲಾಗಿ ನೀರಿನ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸಿ ಎಂದಾಗುತ್ತದೆ. ಅದು ಹಣ್ಣು, ಪಾನೀಯ, ಇತ್ಯಾದಿಗಳಾಗಿರಬಹುದು.

ಸತ್ಯಾಂಶ: ನೀರು ನಮ್ಮ ದೇಹದಲ್ಲಿರುವ ಟಾಕ್ಸಿನ್‍ಗಳನ್ನು ಹೊರಹಾಕುತ್ತದೆ
ಒಂದು ವೇಳೆ ನಾವು ಅಗತ್ಯ ಪ್ರಮಾಣದ ನೀರನ್ನು ಸೇವಿಸದೆ ಇದ್ದಲ್ಲಿ, ನಮ್ಮ ಮೂತ್ರಪಿಂಡಗಳು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ವಿಫಲವಾಗುತ್ತವೆ. ಆದ್ದರಿಂದ ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯಿರಿ. ಇದರಿಂದ ಮೂತ್ರದ ಮೂಲಕ ದೇಹದ ಕಲ್ಮಶಗಳು ಹೊರಬರುತ್ತವೆ.

ಮಿಥ್ಯೆ: ಬಾಟಲಿಯಲ್ಲಿರುವ ನೀರು ದಂತಕುಳಿ ತರುತ್ತದೆ
ಬಾಟಲಿಯಲ್ಲಿರುವ ನೀರನ್ನು ಸೇವಿಸುವುದರಿಂದ ದಂತ ಕುಳಿ, ಅಥವಾ ದಂತ ಸಮಸ್ಯೆ ಬರುತ್ತದೆ. ಆದರೆ ನಿಜವಾಗಿ ಹೇಳಬೇಕೆಂದರೆ, ಇದರಲ್ಲಿ ಫ್ಲೋರೈಡ್ ಅಂಶವಿರುವುದಿಲ್ಲ. ನಲ್ಲಿಯಲ್ಲಿರುವ ಬರುವ ನೀರು ಫ್ಲೋರೈಡ್ ಅಂಶಗಳನ್ನು ಹೊಂದಿರುತ್ತದೆ. ಆದ್ದರಿಂದ ಬಾಟಲಿಯಲ್ಲಿರುವ ನೀರು ದಂತಕುಳಿ ತರುತ್ತದೆ ಎಂಬ ಮಾತಿಗೆ ಅರ್ಥವಿಲ್ಲ.

ಮಿಥ್ಯೆ: ಕುಡಿಯುವ ನೀರು ತ್ವಚೆಯನ್ನು ಮೊಯಿಶ್ಚರ್ ಮಾಡುತ್ತದೆ
ಇದೊಂದು ದೊಡ್ಡ ಕಟ್ಟುಕತೆ, ಕುಡಿಯುವ ನೀರು ನಮ್ಮ ತ್ವಚೆಯನ್ನು ಯೌವನದಿಂದ ಮತ್ತು ಹೊಳಪಿನಿಂದ ಇಡುತ್ತದೆ ಎಂಬುದು ಸತ್ಯವಾದರು, ಅದು ಮೊಯಿಶ್ಚರ್ ಮಾಡುತ್ತದೆ ಎಂಬುದರಲ್ಲಿ ಸತ್ಯವಿಲ್ಲ. ನಾವು ಕುಡಿಯುವ ನೀರು ಆ ಪ್ರಕ್ರಿಯೆಗೆ ಸಾಕಾಗುವುದಿಲ್ಲ.

ಸತ್ಯ: ಕುಡಿಯುವ ನೀರು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ
ನಿಜವಾಗಿ ಕುಡಿಯುವ ನೀರು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆಯೇ? ಪರೋಕ್ಷವಾಗಿ ನೀರು ನಿಮ್ಮ ತೂಕವನ್ನು ಕಡಿಮೆ ಮಾಡುವುದು ಸತ್ಯ. ನೀರು ಕುಡಿದ ನಂತರ ನಾವು ಅಧಿಕ ಕ್ಯಾಲೋರಿಗಳಿರುವ ಆಹಾರವನ್ನು ಸೇವಿಸಲು ಹೋಗುವುದಿಲ್ಲ. ಹೀಗೆ ನೀರು ನಮ್ಮ ತೂಕವನ್ನು ಕಡಿಮೆ ಮಾಡುತ್ತದೆ.

ಮಿಥ್ಯೆ: ನಿರ್ಜಲೀಕರಣದ ಸಮಸ್ಯೆ
ಬಾಯಾರಿಕೆಯಾಗಿದ್ದಲ್ಲಿ, ಅದು ನಿರ್ಜಲೀಕರಣದ ಸೂಚನೆಯಲ್ಲ. ಇದು ನಿಮ್ಮ ರಕ್ತದ ಸಾಂದ್ರತೆಯು ಶೇಕಡಾ 2 ರಷ್ಟು ಹೆಚ್ಚಾಗುವುದರಿಂದ ಹೀಗಾಗುತ್ತದೆ. ನಾವು ಬಾಯಾರುವುದು ಸಹಜ.

ಮಿಥ್ಯೆ: ನೀರಿನ ಬದಲಿಗೆ ಸ್ಪೋರ್ಟ್ಸ್ ಡ್ರಿಂಕ್ ಬೇಕಾಗುತ್ತದೆ
ನೀರು ನಿಮ್ಮ ಶಕ್ತಿ, ಪೋಷಕಾಂಶಗಳ ವಾಹಕ. ಜೊತೆಗೆ ಇದು ನಿಮ್ಮ ದೇಹದ ಉಷ್ಣಾಂಶವನ್ನು ಬೆವರಿನ ರೂಪದಲ್ಲಿ ತೆಗೆದು ಹಾಕುತ್ತದೆ.ಆಗ ಸ್ಪೋರ್ಟ್ಸ್ ಡ್ರಿಂಕ್ ಸೇವಿಸುವುದು ಒಳ್ಳೆಯದು. ಆದರೆ ಅದರಲ್ಲಿ ಉಪ್ಪಿನಂಶ ಇರುತ್ತದೆ. ಮ್ಯಾರಾಥಾನ್‍ನಂತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರಿಗೆ ದೇಹದಲ್ಲಿ ಉಪ್ಪಿನಂಶ ಕೊರತೆಯಾಗುತ್ತದೆ. ಹಾಗಾಗಿ ಇದು ಅವರಿಗೆ ಅತ್ಯಾವಶ್ಯಕ.

ಮಿಥ್ಯೆ: ನೀರು ಹಲವಾರು ರೋಗಗಳನ್ನು ನಿವಾರಿಸುತ್ತದೆ
ಹೃದ್ರೋಗ, ಅಧಿಕ ರಕ್ತದೊತ್ತಡ, ಕಾಲಿನ ಊತ ಮುಂತಾದ ಸಮಸ್ಯೆಗಳಲ್ಲಿ ನೀರನ್ನು ಸೇವಿಸುವುದರಿಂದ ಪರಿಸ್ಥಿತಿ ಬಿಗಡಾಯಿಸುತ್ತದೆ. ಇಂತಹ ಸಮಸ್ಯೆ ನಿಮಗೆ ಇದ್ದಲ್ಲಿ, ಮೊದಲು ನೀವು ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಿರಿ.

ನೀರಿನ ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆ
ಬಳಸಿದ ನೀರಿನ ಬಾಟಲಿಗಳನ್ನು ಮತ್ತೆ ಮತ್ತೆ ನೀರು ತುಂಬಲು ಬಳಸುವುದರಿಂದ ಮತ್ತು ಅದರಲ್ಲಿ ನೀರನ್ನು ಸೇವಿಸುವುದರಿಂದ ನಿಮಗೆ ಕೆಲವೊಂದು ಅನಾರೋಗ್ಯದ ಸಮಸ್ಯೆಗಳು ಕಾಡಬಹುದು. ಪ್ಲಾಸ್ಟಿಕ್ ಬಾಟಲಿಗಳಲ್ಲಿ ಕೆಲವೊಂದು ರಾಸಾಯನಿಕಗಳು ಇರುತ್ತವೆ. ಇವುಗಳನ್ನು ಪದೇ ಪದೇ ಬಳಸುವುದರಿಂದ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಮಿಥ್ಯೆ: ಹಳದಿ ಮೂತ್ರವು ನಿರ್ಜಲೀಕರಣದ ಸಮಸ್ಯೆ
ಹಳದಿ ಮೂತ್ರವು ನಿರ್ಜಲೀಕರಣದ ಸಮಸ್ಯೆಯೇ? ಹಳದಿ ಮೂತ್ರವು ನಿರ್ಜಲೀಕರಣದ ಸಮಸ್ಯೆಯಲ್ಲ್. ನಮ್ಮ ಮೂತ್ರಪಿಂಡಗಳು ದೇಹದಲ್ಲಿರುವ ನೀರಿನ ಮಟ್ಟವನ್ನು ಸಮತೋಲನದಲ್ಲಿಡುತ್ತವೆ. ಒಂದು ವೇಳೆ ನಿಮ್ಮ ಮೂತ್ರವು ಹಳದಿಯಿದ್ದಲ್ಲಿ, ನೀವು ನೀರನ್ನು ಕಡಿಮೆ ಸೇವಿಸಿದ್ದೀರಿ ಎಂದರ್ಥ. ಕೆಲವೊಂದು ಔಷಧಿಗಳು ಸಹ ನಿಮ್ಮ ಮೂತ್ರದ ಬಣ್ಣವನ್ನು ಬದಲಿಸಬಹುದು. ನಿರ್ಜಲೀಕರಣದ ಸಮಸ್ಯೆಯಲ್ಲಿ, ನಿಮ್ಮ ಮೂತ್ರದ ಪ್ರಮಾಣವು ಸಹ ಕಡಿಮೆಯಾಗಿರುತ್ತದೆ.



Click it and Unblock the Notifications
