For Quick Alerts
ALLOW NOTIFICATIONS  
For Daily Alerts

ಲವಲವಿಕೆಯ ಜೀವನಶೈಲಿಗೆ 10 ಸರಳ ಸೂತ್ರ

By Super
|

ಸಾಮಾನ್ಯವಾಗಿ ಶತಾಯುಶಿಗಳಲ್ಲಿ ಜನರು ಕೇಳುವ ಪ್ರಶ್ನೆಯೆಂದರೆ ನಿಮ್ಮ ಆರೋಗ್ಯದ ಗುಟ್ಟೇನು? ಇದಕ್ಕೆ ಉತ್ತರಗಳು ದೇಶ, ಪ್ರದೇಶ, ಆಹಾರಗಳಿಗೆ ಅನುಗುಣವಾಗಿ ಬೇರೆ ಬೇರೆಯಾಗಿದ್ದರೂ ಅವರು ಪಟ್ಟ ದೈಹಿಕ ಶ್ರಮ ಮತ್ತು ಆರೋಗ್ಯಕರ ಆಹಾರವಿಧಾನಗಳ ಮಾಹಿತಿ ಸಮಾನವಾಗಿರುತ್ತವೆ. ವ್ಯಾಯಾಮವಿಲ್ಲದೇ ನೂರು ವರ್ಷ ದಾಟಿದವರ ಸಂಖ್ಯೆ ಬಹಳ ಕಡಿಮೆ.

ಆದರೆ ಜೀವಂತವಿದ್ದಷ್ಟೂ ದಿನ ಆರೋಗ್ಯಕರವಾಗಿದ್ದು ಯಾರಿಗೂ ಹೊರೆಯಾಗದೇ ಇರುವುದೇ ನಿಜವಾದ ಆರೋಗ್ಯ ಮತ್ತು ನಿಜವಾದ ಜೀವನ. ಆದ್ದರಿಂದಲೇ ನಮ್ಮ ದೇಹ ನಮ್ಮ ಆಹಾರ, ಶಾರೀರಿಕ ಚಟುವಟಿಕೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಕಾಲ ಬಾಳುವ ಕ್ಷಮತೆಯನ್ನು ಪಡೆಯುತ್ತದೆ. ಪುರುಷರೇ ಎಚ್ಚರ, ನಿಮಗೂ ಇಂತಹ ಸಮಸ್ಯೆ ಇರಬಹುದು!

ಕೆಲವೊಂದು ಕ್ಷಣಿಕ ಲಾಭಕ್ಕಾಗಿ ಸೇವಿಸುವ ಔಷಧಿ ಅಥವಾ ಆಹಾರಗಳು ವ್ಯಸನಕ್ಕೂ ಕಾರಣವಾಗಬಹುದು. ಉದಾಹರಣೆಗೆ ರಾತ್ರಿ ನಿದ್ದೆಬರದಂತೆ ಎಚ್ಚರವಿರಲು ಕುಡಿಯುತ್ತಿದ್ದ ಕಾಫಿಯ ಕಾರಣ ಕೆಫೇನ್ ಗೆ ವ್ಯಸನಿಯಾವುದ ಸಂಭವ ಹೆಚ್ಚುತ್ತದೆ. ಇದರ ಬದಲಾಗಿ ರಾತ್ರಿ ಒಂದು ಸೇಬು ಹಣ್ಣು ತಿಂದರೂ ನಿದ್ದೆ ಬರದಂತೆ ತಡೆಯಬಹುದು. ಇದರಿಂದ ಅನಗತ್ಯವಾಗಿ ವ್ಯಸನಕ್ಕೆ ಒಳಗಾಗುವುದರಿಂದ ತಪ್ಪಿಸಿದಂತಾಗುತ್ತದೆ. ಜೀವನ ಶೈಲಿ ನಿಮ್ಮ ಬದುಕನ್ನು ಹೇಗೆ ಬದಲಾಯಿಸಬಹುದು?

ಇಂತಹ ಎಲ್ಲರಿಗೂ ಉಪಯುಕ್ತವಾಗಿರುವ ಹತ್ತು ಹಲವು ಮಾಹಿತಿಗಳು ಈಗ ಲಭ್ಯವಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಮುಖವಾದ ಕೆಲವನ್ನು ನೀಡಲಾಗಿದೆ. ನಿಮ್ಮ ದೇಹದ ಬಗ್ಗೆ ಹೆಚ್ಚು ಅರಿಯುತ್ತಾ ಹೋದಂತೆ ನೀವು ಅನಗತ್ಯವಾಗಿ ಇದುವರೆಗೆ ಅನುಸರಿಸಿಕೊಂಡು ಬರುತ್ತಿದ್ದ ವಿಧಾನಗಳನ್ನು ನಿಲ್ಲಿಸಬಹುದು. ತನ್ಮೂಲಕ ಉತ್ತಮ ಆರೋಗ್ಯ ಮತ್ತು ಆಯಸ್ಸನ್ನು ಪಡೆಯಬಹುದು. ನಿಮ್ಮ ಕಾರ್ಯವಿಧಾನವೂ ಇನ್ನಷ್ಟು ಜಾಣತನದಿಂದ ಕೂಡಿದ್ದು ಹೆಚ್ಚಿನ ಸಮಯ ಮತ್ತು ಮೆಚ್ಚುಗೆಯನ್ನೂ ಪಡೆಯಬಹುದು.

ವಾಸ್ತವಾಂಶ #1

ವಾಸ್ತವಾಂಶ #1

ಸತತವಾಗಿ ಮೂರು ಗಂಟೆಗಳ ಕಾಲ ಓಡುವ ಮೂಲಕ ಓರ್ವ ವ್ಯಕ್ತಿ ಅರ್ಧ ಕೇಜಿ ಕೊಬ್ಬನ್ನು ಕರಗಿಸಿಕೊಳ್ಳಬಲ್ಲ! ಅಂದರೆ ಪ್ರತಿದಿನ ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷಗಳ ಕಾಲ ಓಡಿದರೆ ತಿಂಗಳಿಗೆ ಒಂದು ಕೇಜಿ ತೂಕ ಇಳಿಸಬಹುದು.

ವಾಸ್ತವಾಂಶ #2

ವಾಸ್ತವಾಂಶ #2

ತಮ್ಮ ದಿನವನ್ನು ವ್ಯಾಯಾಮದ ಮೂಲಕ ಪ್ರಾರಂಭಿಸುವ ಜನರು ಇತರರಿಗಿಂತ ಶೇಕಡ ಹತ್ತರಷ್ಟು ಹೆಚ್ಚು ಸಕ್ಷಮವಾಗಿ ಕೆಲಸ ಮಾಡಬಲ್ಲವರಾಗಿರುತ್ತಾರೆ.

ವಾಸ್ತವಾಂಶ #3

ವಾಸ್ತವಾಂಶ #3

ಒಂದು ವೇಳೆ ನೀವು ಧೂಮಪಾನಿಯಾಗಿದ್ದರೆ ನಿಮ್ಮ ಶ್ವಾಸಕೋಶಕ್ಕೆ ಆಗುವ ಹಾನಿಯನ್ನು ಕಪ್ಪು ಚಹಾ ಸೇವಿಸುವ ಮೂಲಕ ಕಡಿಮೆಗೊಳಿಸಬಹುದು. ಇದರರ್ಥ ಶ್ವಾಸಕೋಶ ಹಾನಿಯಾಗದೇ ಇರುತ್ತದೆ ಎಂದಲ್ಲ, ಹಾನಿಯಾಗುವ ಪ್ರಮಾಣ ಕೊಂಚ ಕಡಿಮೆಯಾಗುತ್ತದೆ ಅಷ್ಟೆ. ಆದ್ದರಿಂದ ಕಪ್ಪು ಚಹಾ ಸೇವಿಸಿ ಧೂಮವನ್ನೂ ಹೆಚ್ಚಿಸುವ ಬದಲು ಪೂರ್ಣವಾಗಿ ತ್ಯಜಿಸಲು ಮನಸ್ಸು ಗಟ್ಟಿಮಾಡಿಕೊಳ್ಳುವುದು ಉತ್ತಮ.

ವಾಸ್ತವಾಂಶ #4

ವಾಸ್ತವಾಂಶ #4

ನಿಮ್ಮ ಮೊಬೈಲ್ ಫೋನುಗಳ ಬ್ಯಾಟರಿ ಕಳೆಗುಂದುತ್ತಿದ್ದಂತೆಯೇ ಇದರಿಂದ ಹೊರಡುವ ವಿಕಿರಣದ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಆಗಾಗ ನಿಮ್ಮ ಮೊಬೈಲು ಫೋನುಗಳನ್ನು ಮತ್ತಿತರ ಉಪಕರಣಗಳನ್ನು ಸದಾ ಪೂರ್ಣ ಚಾರ್ಜ್ ಆಗಿರುವಂತೆ ನೋಡಿಕೊಳ್ಳಿ.

ವಾಸ್ತವಾಂಶ #5

ವಾಸ್ತವಾಂಶ #5

ಓರ್ವ ವ್ಯಕ್ತಿ ದಿನಕ್ಕೆ ಆರು ಸಾವಿರ ಚಿಕ್ಕ ಜಿಗಿತ (ಹಗ್ಗ ಜಿಗಿತ)ಗಳನ್ನು ನೆಗೆಯುತ್ತಾರೋ ಅವರ ಶರೀರದಿಂದ ಅರ್ಧ ಕೇಜಿ ಕಡಿಮೆಯಾಗುತ್ತದೆ. ಆದ್ದರಿಂದ ಪ್ರತಿದಿನ ನಾನೂರು ಹಗ್ಗಜಿಗಿತ ನೆಗೆದರೆ ಒಂದು ತಿಂಗಳಲ್ಲಿ ಒಂದು ಕೇಜಿಯಷ್ಟು ತೂಕ ಖಂಡಿತಾ ಕಡಿಮೆಯಾಗುತ್ತದೆ.

ವಾಸ್ತವಾಂಶ #6

ವಾಸ್ತವಾಂಶ #6

ರಾತ್ರಿ ಮಲಗುವ ಮುನ್ನ ನಡೆಸುವ ಯಾವುದೇ ದೈಹಿಕ ಶ್ರಮದ ಚಟುವಟಿಕೆ ರಾತ್ರಿಯ ಸಮಯದಲ್ಲಿ ಹೆಚ್ಚಿನ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

ವಾಸ್ತವಾಂಶ #7

ವಾಸ್ತವಾಂಶ #7

ಹೊರಗಿನ ಆಹಾರ ಸೇವಿಸಿದವರಿಗಿಂತ ಮನೆಯ ಊಟ ಮಾಡಿದವರು ಹೆಚ್ಚು ಬದುಕುತ್ತಾರೆ ಮತ್ತು ಹೆಚ್ಚು ಆರೋಗ್ಯಪೂರ್ಣರಾಗಿರುತ್ತಾರೆ ಎಂದು ಒಂದು ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ.

ವಾಸ್ತವಾಂಶ #8

ವಾಸ್ತವಾಂಶ #8

ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ತಣ್ಣೀರನ್ನು ಕುಡಿಯುವುದರಿಂದ ಇಡಿಯ ದಿನ ಉಲ್ಲಾಸ ತುಂಬಿರುತ್ತದೆ. ಇದು ಕಾಫಿ ಅಥವಾ ಟೀ ನೀಡುವ ಉಲ್ಲಾಸಕ್ಕಿಂತಲೂ ಮಿಗಿಲಾಗಿರುತ್ತದೆ.

ವಾಸ್ತವಾಂಶ #9

ವಾಸ್ತವಾಂಶ #9

ದಿನಕ್ಕೆ ಒಂಬತ್ತು ಗಂಟೆಗಳಿಗಿಂತ ಹೆಚ್ಚು ನಿದ್ರಿಸುವವರ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ.

 ವಾಸ್ತವಾಂಶ#10

ವಾಸ್ತವಾಂಶ#10

ಪ್ರತಿ ವಾರದ ಮೊದಲ ದಿನ ಅಂದರೆ ಸೋಮವಾರದ ದಿನವನ್ನು ಉತ್ತಮ ವ್ಯಾಯಾಮದೊಂದಿಗೆ ಪ್ರಾರಂಭಿಸಿದರೆ ಇಡಿಯ ವಾರದಲ್ಲಿ ಎದುರಾಗುವ ಸವಾಲುಗಳನ್ನು ಹೆಚ್ಚು ಸಮರ್ಥವಾಗಿ ಎದುರಿಸಲು ಮನಸ್ಸು ಸಿದ್ಧವಾಗಿರುತ್ತದೆ.

English summary

10 Facts Nobody Told You About Health

There are some surprising facts about health which can make your life easier the moment you discover them. For example, if you are struggling to keep yourself awake, you may try a few cups of coffee which might make you a caffeine addict. So, in this post, let us discuss some surprising facts about human body so that things will become simpler for us.
Story first published: Wednesday, September 30, 2015, 11:52 [IST]
X
Desktop Bottom Promotion