Latest Updates
-
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ!
ಕೂದಲುದುರುವುದನ್ನು ತಡೆಯಲು ಯೋಗಾಸನ
ಯೋಗ ಮತ್ತು ಧ್ಯಾನ ಮಾಡುವುದರಿಂದ ಆರೋಗ್ಯಕರ ಕೂದಲು ಮಾತ್ರವಲ್ಲ,ಮಾನಸಿಕ ಮತ್ತು ದೈಹಿಕವಾಗಿ ಕೂಡ ಆರೋಗ್ಯವಾಗಿರಬಹುದು.ಯೋಗ ಮಾಡುವುದರಿಂದ ನೆತ್ತಿಯಲ್ಲಿ ರಕ್ತಸಂಚಲನ ಸುಗಮವಾಗುತ್ತದೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ,ಒತ್ತಡವನ್ನು ಕಡಿಮೆ ಮಾಡುತ್ತದೆ,ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಮುಂದೆ ಬಾಗಿ ಮಾಡುವ ಎಲ್ಲಾ ಆಸನಗಳು ನೆತ್ತಿಯ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ.ಇದು ಕೂದಲಿಗೆ ಪೌಷ್ಟಿಕತೆಯನ್ನು ನೀಡುತ್ತದೆ,ಜೊತೆಗೆ ಯೋಗ ಮಾಡುವುದರಿಂದ ನಿಧಾನವಾಗಿ ಕೂದಲು ಸದೃಢವಾಗುವುದನ್ನು ನೀವು ಗಮನಿಸಬಹುದು.ಈ ಕೆಳಗೆ ಕೆಲವು ಆಸನಗಳನ್ನು ನೀಡಲಾಗಿದೆ.ಓದಿ ನೋಡಿ.

ಅಧೋಮುಖ ಶವಾಸನ
ನಾಯಿಯ ಭಂಗಿಯಲ್ಲಿ ಕೆಳಮುಖವಾಗಿ ಮಾಡುವ ಈ ಆಸನ ತಲೆಗೆ ಹೆಚ್ಚಿನ ರಕ್ತಸಂಚಾರ ನೀಡುತ್ತದೆ,ಇದು ಸೈನಸ್ ಮತ್ತು ಸಾಮಾನ್ಯ ನೆಗಡಿ ಹೋಗಲಾಡಿಸಲು ಸಹಾಯಕ.ಮಾನಸಿಕವಾಗಿ ಬಳಲಿದವರಿಗೆ,ನಿದ್ರಾಹೀನತೆ,ಖಿನ್ನತೆ ಹೋಗಲಾಡಿಸಲು ಕೂಡ ಸಹಾಯಕವಾಗುತ್ತದೆ.

ಉತ್ತಾನಾಸನ
ಕೂದಲು ಉದುರುವುದನ್ನು ತಡೆಯುವುದರ ಜೊತೆಗೆ ಈ ಮುಂದೆ ಬಾಗುವ ಭಂಗಿಯಿಂದಾಗಿ ಆಯಾಸ ಮತ್ತು ಸುಸ್ತು ಕೂಡ ಕಡಿಮೆಯಾಗುತ್ತದೆ.ಈ ಆಸನ ಮೆನೋಪಾಸ್ ಸಮಸ್ಯೆ ಹೋಗಲಾಡಿಸಲು ಮತ್ತು ಜೀರ್ಣ ಕ್ರಿಯೆ ಸುಗಮವಾಗಿ ಆಗಲು ಕೂಡ ಸಹಾಯಕ.

ವಜ್ರಾಸನ
ಇದನ್ನು ಡೈಮಂಡ್ ಆಸನ ಎಂದು ಕರೆಯಲಾಗುತ್ತದೆ.ಈ ಆಸನವನ್ನು ಊಟ ಆದ ತಕ್ಷಣ ಮಾಡಬಹುದು.ಮುಂದೆ ಬಾಗಿ ಮಾಡುವ ಈ ಆಸನ ನೆತ್ತಿಯಲ್ಲಿ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ.ಇದು ಮೂತ್ರಕೋಶದ ತೊಂದರೆ,ಚಯಾಪಚಯ ಕ್ರಿಯೆ,ತೂಕ ಕಡಿಮೆ ಮಾಡಿಕೊಳ್ಳಲು,ಹೊಟ್ಟೆಯಲ್ಲಿ ಗ್ಯಾಸ್ ತುಂಬಿದ್ದರೆ ಹೊರಹಾಕಲು ಕೂಡ ಸಹಾಯಕವಾಗುತ್ತದೆ.ಸರಿಯಾದ ಜೀರ್ಣಕ್ರಿಯೆ,ದೇಹದ ಅರೋಗ್ಯ ಕಾಪಾಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಕೂಡ ಸಹಾಯಕ.

ಕಪಲ್ಭತಿ ಪ್ರಾಣಾಯಾಮ
ಈ ಪ್ರಾಣಾಯಾಮ ಮೆದುಳಿನ ಜೀವಕೋಶಗಳಿಗೆ ಆಮ್ಲಜನಕವನ್ನು ಒದಗಿಸಿ,ನರಮಂಡಲವನ್ನು ಸರಿಯಾಗಿರಿಸುತ್ತದೆ.ಇದು ದೇಹದಿಂದ ಟಾಕ್ಸಿನ್ ಅನ್ನು ತೆಗೆದು ಹಾಕಿ ಮಧುಮೇಹ ಮತ್ತು ಒಬೆಸಿಟಿ ವಿರುದ್ಧ ಹೋರಾಡುತ್ತದೆ.ದೇಹದ ಸಮತೋಲನ ಹೆಚ್ಚಿಸಿ ಕೂದಲು ಉದುರುವುದನ್ನು ತಡೆಯುತ್ತದೆ.

ಪಾವನ್ಮುಖ್ತಾಸನ
ಇದು ದೇಹದಲ್ಲಿ ಗ್ಯಾಸ್ ಕಡಿಮೆ ಮಾಡಿ ಜೀರ್ಣಕ್ರಿಯೆ ಹೆಚ್ಚಿಸುತ್ತದೆ.ಬೆನ್ನಿನ ಸ್ನಾಯುಗಳಿಗೆ ಬಲ ನೀಡುತ್ತದೆ.ಇದು ಸೊಂಟ ಮತ್ತು ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ.ಜೀರ್ಣಕ್ರಿಯೆ ಸಮತೋಲನ ಹೆಚ್ಚಿಸಿ ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಸರ್ವಾಂಗಾಸನ
ಈ ಆಸನ ಥೈರಾಯಿಡ್ ಗ್ರಂಥಿ ಪೋಷಿಸಲು ಸಹಾಯಕ,ಅಂದರೆ ಆರೋಗ್ಯಕರ ಉಸಿರಾಟ,ನರಮಂಡಲ ಮತ್ತು ಜನನಾಂಗಗಳ ಪೋಷಕಾಂಶ ಹೆಚ್ಚಿಸುತ್ತದೆ.ತಲೆಕೆಳಗಾಗಿ ಮಾಡುವ ಈ ಆಸನ ನೆತ್ತಿಯಲ್ಲಿ ರಕ್ತ ಸಂಚಲನವನ್ನು ಹೆಚ್ಚಿಸಿ ಕೂದಲು ಉದುರುವುದನ್ನು ತಡೆಯುತ್ತದೆ.



Click it and Unblock the Notifications
