Latest Updates
-
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ! -
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಸುಡುವ ಬಿಸಿಲಿಗೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ನಕಲಿ ಜಿಮ್ ಸಪ್ಲಿಮೆಂಟ್ ಬಳಸುತ್ತಿದ್ದೀರಾ? ದೆಹಲಿಯ ಈ ದಾಳಿ ನಿಮ್ಮ ಕಣ್ಣು ತೆರೆಸುತ್ತದೆ! -
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ! -
ಹೀಟ್ವೇವ್ ಅಲರ್ಟ್: ಬಿಸಿಲ ಬೇಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ
ಆರೋಗ್ಯಕಾರಿ ಬೆಳವಣಿಗೆಗೆ ನೀರಿನ ಅವಶ್ಯಕತೆಗಳೇನು?
ಮನುಷ್ಯನ ದೇಹದ ಆರೋಗ್ಯಕಾರಿ ಬೆಳವಣಿಗೆಗೆ ನೀರು ಅತ್ಯವಶ್ಯಕ. ಪ್ರತಿ ನಿತ್ಯ ನಾವು ಹಲವು ರೀತಿಯ ನೀರಿನ ಅಂಶವಿರುವ ಹಣ್ಣು ಹಂಪಲು, ಜ್ಯೂಸ್, ಸೇವಿಸಿದರೂ ಕೂಡ, ದೇಹದ ಆರೋಗ್ಯಕಾರಿ ಬೆಳವಣಿಗೆಗೆ ನೀರು ಮಾತ್ರ ಪ್ರಮುಖ ಪಾತ್ರವಹಿಸುತ್ತದೆ.
ಪ್ರತಿ ನಿತ್ಯ ಸಾಕಾಷ್ಟು ಪ್ರಮಾಣದಲ್ಲಿ ಅಂದರೆ ಬೆಳಗಿನ ಜಾವ ನಿಮ್ಮ ದಿನ ನಿತ್ಯದ ಕಾರ್ಯಗಳನ್ನು ಪ್ರಾರಂಭಿಸುವ ಮೊದಲು, ಕನಿಷ್ಟ 2 ಗ್ಲಾಸ್ ನೀರನ್ನು ಕುಡಿಯುವುದಕ್ಕೆ ಮರೆಯಬೇಡಿ. ಇದು ನಿಮ್ಮ ಚಯಪಚಯ ಕ್ರಿಯೆಯನ್ನು ಉತ್ತಮಗೊಳಿಸುವುದರ ಜೊತೆಗೆ, ದೇಹದ ಎಲ್ಲಾ ಅಂಗಾಂಗಳ ಬೆಳವಣಿಗೆಗೆ ಸಹಾಯವಾಗಲಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೆಂಗಿನ ನೀರಿನ ಹತ್ತು ಹಲವು ಉಪಯೋಗಗಳು
ನೀವು ಪ್ರತಿ ನಿತ್ಯ 3 ಲೀಟರ್‌ಕ್ಕಿಂತಲೂ ಹೆಚ್ಚು ನೀರು ಕುಡಿಯುವುದರಿಂದ, ನಿಮ್ಮಲ್ಲಿ ಆಗಾಗ ಕಂಡುಬರುವ ಅಸ್ವಸ್ಥತೆಗೆ ಕಾರಣವಾಗಿರುವ ಜೀವಾಣುಗಳನ್ನು ದೇಹದಿಂದ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಜೊತೆಗೆ ನಿಮ್ಮನ್ನು ದಿನ ಪೂರ್ತಿ ಶಕ್ತಿಯುತ ಮತ್ತು ಆರೋಗ್ಯಕರವಾಗಿ ಇರಿಸಿಕೊಳ್ಳುತ್ತದೆ.
ನೀವು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ, ನಿಮ್ಮಲ್ಲಿ ಕಂಡು ಬರುವ ಚರ್ಮದ ಸಮಸ್ಯೆಗೆ, ಅಂದರೆ ಚಳಿಗಾಲದಲ್ಲಿ ತುಟಿ ಒಡೆಯುವುದು, ಅಥವಾ ಕಾಲಿನ ಪಾದ ಬಿರುಕು ಬಿಡುವುದನ್ನು ತಪ್ಪಿಸಬಹುದು, ಹಾಗಾಗಿ ಬೋಲ್ಡ್ ಸ್ಕೈ ಇಂದು ನಿಮಗಾಗಿ ಪ್ರತಿ ನಿತ್ಯ ಸರಿಯಾಗಿ ನೀರು ಕುಡಿಯುವುದರಿಂದ ದೇಹದಲ್ಲಿ ಉಂಟಾಗುವ ಆರೋಗ್ಯಕಾರಿ ಬೆಳವಣಿಗೆಯ ಕುರಿತ ಕೆಲವೊಂದು ಸಲಹೆಗಳನ್ನು ಹಂಚಿಕೊಂಡಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೂತ್ರದಲ್ಲಿ ಕಂಡುಬರುವ ಉರಿಯನ್ನು ನಿವಾರಿಸುವುದು ಹೇಗೆ?

ತೂಕ ಕಡಿಮೆಗೊಳಿಸಲು:
ಹೌದು, ಪ್ರತಿ ನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ನಿಮ್ಮ ದೇಹದ ತೂಕ ಹೆಚ್ಚಿಸಲು ಸಹಾಯಕವಾಗುವ ಕೊಬ್ಬಿನ ಅಂಶದಿಂದ ಮುಕ್ತಿ ಪಡೆಯಬಹುದು, ಜೊತೆಗೆ ದೇಹದ ಬೊಜ್ಜನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಲಿದೆ.

ತ್ವಚೆ ತೇವಾಂಶಭರಿತದಿಂದ ಕೂಡಿರುತ್ತದೆ:
ನಿಮ್ಮ ತ್ವಚೆ ತೇವಾಂಶದಿಂದ ಕೂಡಿರಬೇಕಾದರೆ, ಅಥವಾ ಒಣ ತ್ವಚೆಯಿಂದ ನೀವು ದೂರವಿರಬೇಕಾದರೆ, ಪ್ರತಿ ನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀವು ನೀರು ಕುಡಿಯುವುದು ಅತ್ಯವಶ್ಯಕ.

ಉತ್ತಮ ಮೈಕಟ್ಟುಗಳಿಗಾಗಿ:
ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ, ನಿಮ್ಮ ದೇಹದ ಮೈಕಟ್ಟುಗಳನ್ನು ಸದೃಢವಾಗಿರಿಸಲು ಸಹಕಾರಿಯಾಗಲಿದೆ. ಜೊತೆಗೆ ಸ್ನಾಯು ದೌರ್ಬಲ್ಯವನ್ನು ನಿವಾರಿಸಲು, ಹಾಗೂ ದೇಹದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುಲು ಕೂಡ ನೀರು ಪ್ರಮುಖ ಪಾತ್ರವಹಿಸುತ್ತದೆ.

ತಲೆನೋವು:
ಕೆಲಸದ ಒತ್ತಡ, ಅಥವಾ ಪದೇ ಪದೇ ಕಂಡು ಬರುವ ತಲೆನೋವನ್ನು ನಿವಾರಣೆಗಾಗಿ ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಅತ್ಯವಶ್ಯಕ. ಸರಿಯಾಗಿ ನೀರು ಕುಡಿಯುವುದರಿಂದ ಇದು ನಿಮ್ಮ ದೇಹವನ್ನು ತಂಪಾಗಿಸುತ್ತದೆ, ಅದರಲ್ಲೂ, ತಲೆ ನೋವು ಸಮಸ್ಯೆಗೆ ಇದು ರಾಮಬಾಣವಾಗಿದೆ.

ಮೂತ್ರದ ಸಮಸ್ಯೆಗಳು:
ಹಲವಾರು ಮಹಿಳೆಯರು ಇತ್ತೀಚೆಗೆ ಮೂತ್ರದ ಸಮಸ್ಯೆ ಹಾಗೂ ಇದರಿಂದ ಉಂಟಾಗುವ ಸೊಂಕುಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ಪ್ರತಿ ನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಮೂತ್ರಕೋಶದಲ್ಲಿ ಕಂಡುಬರುವ ಸೊಂಕುಗಳನ್ನು ನಿವಾರಿಸುವಲ್ಲಿ ಇದು ಸಹಕಾರಿಯಾಗಲಿದೆ.

ಕಿಡ್ನಿಗಳ ಸುರಕ್ಷತೆಗೆ:
ಹೌದು, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ನಿಮ್ಮ ಕಿಡ್ನಿಗಳಲ್ಲಿ ಕಂಡುಬರುವ ಕೆಲವೊಂದು ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರಹಾಕುವಲ್ಲಿ ಸಹಕಾರಿಯಾಗಲಿದೆ.

ಜೀರ್ಣಕ್ರಿಯೆಗೆ ಸಹಕಾರಿಯಾಗಲಿದೆ:
ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಸಹಕಾರಿಯಾಗಲಿದೆ, ಅಲ್ಲದೆ ನೀವು ಪ್ರತಿ ನಿತ್ಯ 1 ಲೀಟರ್‌ಕ್ಕಿಂತ ಕಡಿಮೆ ನೀರನ್ನು ಕುಡಿಯುವುದಾದರೆ ಖಂಡಿತವಾಗಿಯೂ ನೀವು ಜೀರ್ಣಕ್ರಿಯೆ ಸಮಸ್ಯೆಯನ್ನು ಎದುರಿಸುವಿರಿ ಎಂಬುದನ್ನು ಮರೆಯದಿರಿ.

ಉತ್ತಮ ಆರೋಗ್ಯಕ್ಕಾಗಿ:
ಪ್ರತಿ ನಿತ್ಯ ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದರೆ, ನಿಮ್ಮನ್ನು ಕಾಡುವ ಮೈಗ್ರೇನ್, ಖಿನ್ನತೆ, ಚರ್ಮದ ಸಮಸ್ಯೆ, ಹಸಿವು, ಕಿಡ್ನಿ ಸಮಸ್ಯೆ, ಸ್ನಾಯು ಸೆಳೆತ, ಹೀಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೆಲವೊಂದು ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ.



Click it and Unblock the Notifications