Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ಬೆಳಗ್ಗಿನ ನಿದ್ದೆಯನ್ನು ನಿವಾರಿಸಲು 9 ವಿಧಾನಗಳು
ನೀವು ಕಚೇರಿಯಲ್ಲಿರಿ ಅಥವಾ ಮನೆಯಲ್ಲಿ ಬೆಳಗ್ಗಿನ ಜಾವ ತೂಕಡಿಸುವುದು ಅಥವಾ ನಿದ್ದೆ ಮಾಡುವುದು ಒಂದು ಕೆಟ್ಟ ಅಭ್ಯಾಸವಾಗಿದೆ. ಕೆಲವರಿಗೆ ಸಣ್ಣ ಆಕಳಿಕೆ ಅಥವಾ ನಿದ್ದೆ ಬಂದಂತಾಗುವುದು ಸಾಮಾನ್ಯ ವಿಷಯ. ಆದರೆ ಕೆಲವರಿಗೆ ಬೆಳಗ್ಗಿನ ಜಾವದ ನಿದ್ದೆಯನ್ನು ನಿಯಂತ್ರಿಸಲು ತುಂಬಾ ಕಷ್ಟವಾಗುತ್ತದೆ.
ಕಣ್ತುಂಬ ನಿದ್ದೆಗಾಗಿ ಇಲ್ಲಿದೆ 10 ಸೂಕ್ತ ಸಲಹೆಗಳು!
ಈ ವಿಧಧ ಹೈಪರ್ ಸೋಮ್ನಿಯಾ ನಿಮ್ಮನ್ನು ಸೋಮಾರಿಯನ್ನಾಗಿಸಿ ನಿಮ್ಮ ಮೂಡ್ ಅನ್ನು ಕಂಗೆಡಿಸುತ್ತದೆ. ಬೆಳಗ್ಗಿನ ಸಮಯದಲ್ಲಿ ನಿದ್ದೆ ಬರಲು ಮುಖ್ಯ ಕಾರಣ ಶಕ್ತಿಯ ಕೊರತೆ, ರಾತ್ರಿ ಚೆನ್ನಾಗಿ ನಿದ್ದೆ ಮಾಡದಿರುವುದು ಇವೇ ಮುಂತಾದುವು. ಇದು ನಿಮ್ಮ ಚಟುವಟಿಕೆಗೆ ಹಾನಿ ಉಂಟುಮಾಡುವುದು ಖಂಡಿತ. ವ್ಯಾಯಾಮದ ಕೊರತೆ ಕೂಡ ಬೆಳಗ್ಗಿನ ನಿದ್ದೆಯನ್ನು ನಿಮಗೆ ಬರುವಂತೆ ಮಾಡುತ್ತದೆ. ಆದ್ದರಿಂದಲೇ ವಯಸ್ಕರಿಗೆ ಎಂಟು ಗಂಟೆಯ ನಿದ್ದೆ ಅತ್ಯವಶ್ಯಕ.
ಆದ್ದರಿಂದ ನಿಮ್ಮ ಈ ಬೆಳಗ್ಗಿನ ಜಾವದ ನಿದ್ದೆಯನ್ನು ನಿವಾರಿಸಲು ನಾವು ಕೆಲವೊಂದು ಸಲಹೆಗಳನ್ನು ನಾವಿಲ್ಲಿ ನೀಡುತ್ತಿದ್ದು ಅದರ ಸರಿಯಾದ ಪಾಲನೆಯನ್ನು ನೀವು ಮಾಡಬೇಕಿರುವುದು ಅತ್ಯವಶ್ಯಕವಾಗಿದೆ. ಬನ್ನಿ ಹಾಗಿದ್ದರೆ ಆ ಸಲಹೆಗಳು ಯಾವುವು ಎಂದು ನೋಡೋಣ
ಗ್ಯಾಸ್ಟ್ರಿಕ್ ಸಮಸ್ಯೆ ಇದೆಯಾ? ನೈಸರ್ಗಿಕ ಪರಿಹಾರ ಇಲ್ಲಿದೆ

ಶಕ್ತಿಯನ್ನು ಪಡೆಯಲು ವ್ಯಾಯಾಮ:
ದೇಹದಲ್ಲಿ ಶಕ್ತಿ ಇಲ್ಲದಿರುವುದೂ ಕೂಡ ಬೆಳಗ್ಗಿನ ನಿದ್ದೆಗೆ ಕಾರಣವಾಗಿದೆ. ಆದ್ದರಿಂದ ದಿನದಲ್ಲಿ ಕೆಲವು ಗಂಟೆಗಳಷ್ಟು ಸಮಯ ವ್ಯಾಯಾಮ ಮಾಡಿ. ಇದರಿಂದ ದೇಹದಲ್ಲಿ ಹೆಚ್ಚು ಶಕ್ತಿ ಉಂಟಾಗಿ ಬೆಳಗ್ಗಿನ ನಿದ್ದೆಯೆಂಬ ಸೋಮಾರಿತನ ನಿಮ್ಮಿಂದ ಮಾಯವಾಗುತ್ತದೆ.

ವಿರಾಮ ತೆಗೆದುಕೊಳ್ಳಿ:
ದೇಹಕ್ಕೆ ಸಾಕಷ್ಟು ಸುಸ್ತು ಆಗುತ್ತಿದೆ ಎಂದು ನಿಮಗೆ ಅನಿಸಿದರೆ ಅರ್ಧ ಗಂಟೆಯ ವಿರಾಮವನ್ನು ನಿಮ್ಮ ದಿನದ ಮನಸ್ಸಿನಲ್ಲೇ ತೆಗೆದುಕೊಳ್ಳಿ. ಆದರೆ ಅದಕ್ಕೆ ಸೂಕ್ತವಾದ ಸಮಯವನ್ನು ತೆಗೆದುಕೊಳ್ಳಿ. ಮಧ್ಯಾಹ್ನ ತಡವಾಗಿ ಮಲಗುವುದು ಇಲ್ಲವೇ ನಿಧಾನವಾಗಿ ಏಳುವುದು ಇವೇ ಮೊದಲಾದ ದುರಾಭ್ಯಾಸಗಳು ನಿಮ್ಮ ದೇಹ ಮತ್ತು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವುದು ಖಂಡಿತ.

ನಿಧಾನ ಮತ್ತು ವೇಗ:
ನಿಮ್ಮ ಕೆಲಸದಲ್ಲಿ ಆರಂಭದಿಂದಲೂ ನಿಧಾನಗತಿಯನ್ನು ನೀವು ಪಾಲಿಸುವುದರಿಂದ ನೀವು ನಿರ್ದಿಷ್ಟ ಅವಧಿಯೊಳಗೆ ಮಾಡಬೇಕೆಂಬ ಒತ್ತಡಕ್ಕೆ ಬೀಳುತ್ತೀರಿ ಮತ್ತು ನಿದ್ದೆ ಉಂಟಾಗುವಂತೆ ನಡೆದುಕೊಳ್ಳುತ್ತೀರಿ. ಹೀಗೆ ಮಾಡದೇ ನಿರ್ದಿಷ್ಟ ಸಮಯದಲ್ಲಿ ಪೂರ್ತಿ ಕೆಲಸವನ್ನು ಮಾಡುವ ಛಲವನ್ನು ನೀವು ತೆಗೆದುಕೊಂಡರೆ ಯಶಸ್ಸು ಖಂಡಿತ ನಿಮ್ಮದಾಗುತ್ತದೆ.

ರಾತ್ರಿ ನಿದ್ದೆ:
ರಾತ್ರಿ ಸಮಯದಲ್ಲಿ ನೀವು ಚೆನ್ನಾಗಿ ನಿದ್ದೆ ಮಾಡದಿರುವುದೂ ಕೂಡ ಬೆಳಗ್ಗಿನ ಜಾವದ ತೂಕಡಿಕೆಗೆ ಕಾರಣವಾಗುತ್ತದೆ. ಆದ್ದರಿಂದ ರಾತ್ರಿ ತಡವಾಗಿ ನಿದ್ರಿಸುವುದು ಇಲ್ಲವೇ ಟಿವಿ ನೋಡಿ ಸಮಯ ಹರಣ ಮಾಡದಿರಿ.

ನಿಯಂತ್ರಿತ ಡಯೆಟ್:
ನಿಮ್ಮ ಆಹಾರ ಪದ್ಧತಿ ಹೇಗಿದೆ ಎಂಬುದನ್ನು ಗಮನಿಸುವುದು ಅತಿ ಮುಖ್ಯವಾಗಿರುತ್ತದೆ. ನೀವು ತೆಗೆದುಕೊಳ್ಳುವ ಆಹಾರ ಹೆಚ್ಚು ಆರೋಗ್ಯವಂತವಾಗಿರಬೇಕು ಮತ್ತು ಪೋಷಕಾಂಶ ಭರಿತವಾಗಿರಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ರಾತ್ರಿಯ ಆಹಾರ ಸಮತೋಲನದಲ್ಲಿರಲಿ:
ಒಂದು ಮಾತಿದೆ ಬೆಳಗ್ಗಿನ ತಿಂಡಿ ಸೀಮಿತವಾಗಿರಬೇಕು ಮಧ್ಯಾಹ್ನದೂಟ ಪುಷ್ಕಳವಾಗಿರಬೇಕು ಮತ್ತು ರಾತ್ರಿಯೂಟ ಹಗುರವಾಗಿರಬೇಕೆಂದು. ನೀವು ರಾತ್ರಿ ನಿದ್ದೆ ಮಾಡುವ ಸ್ವಲ್ಪ 2 ಗಂಟೆ ಮುಂಚಿತವಾಗಿ ಆಹಾರವನ್ನು ತೆಗೆದುಕೊಳ್ಳಬೇಕು.

ಒತ್ತಡ ನಿರ್ವಹಣೆ:
ಹೆಚ್ಚಿನ ಒತ್ತಡವನ್ನು ಮನಸ್ಸಿಗೆ ತಂದುಕೊಳ್ಳದೆ ಆರಾಮವಾಗಿರುವುದನ್ನು ಕಲಿಯಬೇಕು. ಹೌದು ಮಾನಸಿಕವಾಗಿ ಕುಗ್ಗಿ ಹೋಗುವುದು ಯಾವಾಗಲೂ ಸಮಸ್ಯೆಗಳಿಂದ ಸಿಲುಕೊ ಹಾಕಿಕೊಂಡಿರುವುದು, ಕಚೇರಿಯ ಒತ್ತಡವನ್ನು ತಲೆಯಲ್ಲಿರಿಸಿಕೊಳ್ಳುವುದು ಇವೇ ಮುಂತಾದ ಸಮಸ್ಯೆಗಳು ನಿಮ್ಮ ರಾತ್ರಿಯ ನಿದ್ದೆಯನ್ನು ನಿಮ್ಮಿಂದ ದೂರ ಮಾಡಬಹುದು.

ಮಲಗುವ ಮೊದಲು ಮನಸ್ಸು ಶಾಂತವಾಗಿ ಇರಲಿ:
ನಿಮ್ಮ ತಲೆಯಲ್ಲಿರುವ ಮಾನಸಿಕ ತುಮುಲವನ್ನು ಹೆಚ್ಚಿಸುವ ಅಂಶಗಳನ್ನು ತಲೆಯಿಂದ ದೂರ ಮಾಡಿ ನಂತರ ಹಾಸಿಗೆಗೆ ಹೋಗಿ. ಮನಸ್ಸನ್ನು ಶಾಂತವಾಗಿಸುವ ಕೆಲವು ವ್ಯಾಯಾಮ ಇಲ್ಲವೇ ಯೋಗವನ್ನು ಮಾಡಿ ನಂತರ ನಿದ್ದೆ ಮಾಡಿ.

ಕೌನ್ಸಲಿಂಗ್:
ಈ ಎಲ್ಲಾ ವಿಧಾನಗಳನ್ನು ಅನುಸರಿಸಿ ಕೂಡ ನಿಮ್ಮ ಬೆಳಗ್ಗಿನ ತೂಕಡಿಕೆ ಚಟ ಇಲ್ಲವೇ ನಿದ್ದೆ ಮಾಡುವುದು ನಿಮ್ಮಿಂದ ನಿವಾರಣೆ ಆಗಿಲ್ಲದಿದ್ದರೆ ಕೌನ್ಸಲಿಂಗ್ ಮಾಡಿಸಿಕೊಳ್ಳುವುದು ಒಂದು ಉತ್ತಮ ಪರಿಹಾರವಾಗಿದೆ.



Click it and Unblock the Notifications
