Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಜೀವರಕ್ಷಕ ವಿಟಮಿನ್‌ಗಳು ಜೀವಕ್ಕೆ ಅಪಾಯಕಾರಿ ಹೇಗೆ?
ವಿಟಮಿನ್‌ಗಳು ನಮ್ಮ ದೇಹಕ್ಕೆ ಅತಿ ಅವಶ್ಯವಾದ ಪೋಷಕಾಂಶಗಳು. ಆದರೆ ಪ್ರತಿದಿನ ನಮಗೆ ಬೇಕಾದ ಪ್ರಮಾಣ ಮಾತ್ರ ಪ್ರತಿ ವಿಟಮಿನ್‌ಗೂ ಪ್ರತ್ಯೇಕವಾಗಿರುತ್ತದೆ. ಸಾಧಾರಣವಾಗಿ ತುಂಬಾ ಕಡಿಮೆ ಪ್ರಮಾಣದ ಪೋಷಕಾಂಶಗಳು ನಮಗೆ ಬೇಕು. ನಿಸರ್ಗ ನೀಡುವ ಆಹಾರದಲ್ಲಿ ಈ ಪೋಷಕಾಂಶಗಳು ನಮಗೆ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಮಾತ್ರ ಇರುತ್ತವೆ. ಆದರೆ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿದ್ಧ ಆಹಾರಗಳಲ್ಲಿ ಈ ಪ್ರಮಾಣ ಅತಿಹೆಚ್ಚಾಗಿರುತ್ತದೆ. ಅತಿಹೆಚ್ಚಾದರೆ ಅಮೃತವೂ ವಿಷವಂತೆ. ಅಂತೆಯೇ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಆಗಮಿಸುವ ವಿಟಮಿನ್‌ಗಳಿಂದ ದೇಹಕ್ಕೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು.
ಈ ವಿಟಮಿನ್‌ಗಳು ನೀರಿನಲ್ಲಿ ಕರಗುವ ಮತ್ತು ಕೊಬ್ಬಿನಲ್ಲಿ ಕರಗುವ ಎಂಬ ಎರಡು ವಿಧಗಳಿವೆ. ಕೊಬ್ಬಿನಲ್ಲಿ ಕರಗಿದ ವಿಟಮಿನ್‌ಗಳು ದೇಹದ ಅಂಗಾಂಶಗಳಲ್ಲಿ ಶೇಖರವಾಗಿ ದೇಹದ ತೂಕವನ್ನು ಹಾಗೂ ತನ್ಮೂಲಕ ಇತರ ತೊಂದರೆಗಳನ್ನು ಹುಟ್ಟುಹಾಕುತ್ತದೆ. ನೀರಿನಲ್ಲಿ ಕರಗುವ ವಿಟಮಿನ್‌ಗಳು ದೇಹದಲ್ಲಿ ಶೇಖರವಾಗುವುದಿಲ್ಲ, ಆದರೆ ಮೂತ್ರದ ಮೂಲಕ ದೇಹದಿಂದ ಹೊರಹಾಕಲ್ಪಡುತ್ತವೆ.
ಅಂದರೆ ಈ ಹೆಚ್ಚುವರಿ ವಿಟಮಿನ್ನುಗಳನ್ನು ಹೊರಹಾಕಲು ನಮ್ಮ ಕಿಡ್ನಿ (ಮೂತ್ರಪಿಂಡ) ಗಳು ಹೆಚ್ಚುವರಿ ಕೆಲಸ ಮಾಡಬೇಕಾಯ್ತು. ಹಾಗಾದರೆ ಎಷ್ಟು ವಿಟಮಿನ್‌ಗಳು ನಮಗೆ ಅಗತ್ಯ? ಎಷ್ಟು ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕರ? ಈ ಮಿತಿ ದಾಟಿದರೆ ಅಪಾಯಗಳೇನು ಎಂಬುದನ್ನು ಚುಟುಕಾಗಿ ಇಲ್ಲಿ ವಿವರಿಸಲಾಗಿದೆ. ಸಸ್ಯಾಹಾರಿಗಳಲ್ಲಿ 9 ವಿಟಮಿನ್ಸ್ ಕೊರತೆ ಕಂಡುಬರುವುದು

ವಿಟಮಿನ್ ಸಿ (ascorbic acid)
ನಮ್ಮ ದೇಹದ ಎಲ್ಲಾ ಚಟುವಟಿಕೆಗಳಿಗೆ ವಿಟಮಿನ್ ಸಿ ಅಗತ್ಯ. ಆದರೆ ಹೆಚ್ಚುವರಿ ಪ್ರಮಾಣದಲ್ಲಿ ಸೇವಿಸುವುದರಿಂದ ಮೂತ್ರಪಿಂಡಗಳ ಮೇಲೆ ಭಾರೀ ಒತ್ತಡ ಬೀಳುತ್ತದೆ. ಮುಖ್ಯವಾಗಿ ಮೂತ್ರಪಿಂಡಗಳಲ್ಲಿ ಕಲ್ಲು ಉಂಟಾಗುವುದು ಹೆಚ್ಚುವರಿ ಸೇವನೆಯ ಪ್ರತ್ಯಕ್ಷ ಹಾನಿ. ಇನ್ನುಳಿದಂತೆ ವಾಕರಿಕೆ, ಅತಿಸಾರ, ಮೊದಲಾದ ತೊಂದರೆಗಳು ಬಾಧಿಸುತ್ತವೆ. ವಿಟಮಿನ್ ಸಿ. ನೊಂದಿಗೆ ಸತುವಿನ ಸೇವನೆಯೂ ಇದೇ ತೊಂದರೆಗಳನ್ನು ಉಂಟುಮಾಡುತ್ತದೆ. ಸಾಧಾರಣ ವಯಸ್ಕ ಪುರುಷರಿಗೆ 90ಮಿಲಿಗ್ರಾಂ ಹಾಗೂ ಮಹಿಳೆಯರಿಗೆ 75ಮಿಲಿಗ್ರಾಂ ವಿಟಮಿನ್ ಸಿ ಅಗತ್ಯವಿದೆ. ಹಾಲೂಣಿಸುವ ತಾಯಂದಿರಿಗೆ ಮಾತ್ರ 120 ಮಿಲಿಗ್ರಾಂ ಬೇಕು. ಉದಾಹರಣೆಗೆ ಒಂದು ಸಾಧಾರಣ ಗಾತ್ರದ ಲಿಂಬೆಹಣ್ಣಿನ ನೂರು ಗ್ರಾಂ ರಸದಲ್ಲಿ ಮೂವತ್ತು ಮಿಲಿಗ್ರಾಂ ವಿಟಮಿನ್ ಸಿ. ಇದೆ. ಹಸಿಮೆಣಸಿನಲ್ಲಿ 120ಮಿಲಿಗ್ರಾಂ, ಪಪ್ಪಾಯಿಯಲ್ಲಿ 88ಮಿಲಿಗ್ರಾಂ, ಹೂಕೋಸಿನಲ್ಲಿ 127ಮಿಲಿಗ್ರಾಂ, ಅನಾನಾಸಿನಲ್ಲಿ 79ಮಿಲಿಗ್ರಾಂ ಇದೆ. ಸಂತುಲಿತವಾದ ಹಣ್ಣು ಮತ್ತು ತರಕಾರಿಗಳಿಂದ ನಮ್ಮ ದೇಹಕ್ಕೆ ಅಗತ್ಯವಿದ್ದಷ್ಟು ವಿಟಮಿನ್ ಸಿ ದೊರಕುತ್ತದೆ.
ವಿಟಮಿನ್ ಎ ಮತ್ತು ಡಿ
ಕೊಬ್ಬಿನಲ್ಲಿ ಕರಗಿ ಶೇಖರಗೊಳ್ಳುವ ವಿಟಮಿನ್‌ನಲ್ಲಿ ಈ ಎರಡು ಪೋಷಕಾಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೆಚ್ಚು ವಿಟಮಿನ್ ಎ ಶೇಖರಗೊಂಡರೆ ಹುಟ್ಟುವ ಮಗು ವಿಕಲಾಂಗವಾಗಿ ಹುಟ್ಟುವ ಸಂಭವವಿರುತ್ತದೆ. ಹೆಚ್ಚಿನ ವಿಟಮಿನ್ ಡಿ ಶೇಖರಣೆಯಿಂದ ಯಕೃತ್ತು (liver) 25(OH)D ಎಂಬ ಹೆಸರಿನ ಒಂದು ರಾಸಾಯನಿಕವನ್ನು ಉತ್ಪಾದಿಸುತ್ತದೆ. ಇದರಿಂದ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚುತ್ತದೆ. ಇದಕ್ಕೆ hypercalcemia ಎಂದು ಕರೆಯುತ್ತಾರೆ. ಪರಿಣಾಮವಾಗಿ ಸುಸ್ತು, ಸುಸ್ತಿಲ್ಲದಿದ್ದರೂ ಸುಸ್ತಾಗಿರುವ ಭಾವನೆ, ಹಸಿವಿಲ್ಲದಿರುವುದು, ಹೆಚ್ಚಿನ ಬಾಯಾರಿಕೆ, ಹೆಚ್ಚು ಮೂತ್ರ ಹೋಗುವುದು, ಮಲಬದ್ದತೆ, ಕೆಳಹೊಟ್ಟೆಯಲ್ಲಿ ನೋವು, ಸ್ನಾಯುಗಳಲ್ಲಿ ನೋವು ಮತ್ತು ಶಕ್ತಿಯಿಲ್ಲದಿರುವುದು, ಗ್ರಹಿಕೆಯಲ್ಲಿ ಗೊಂದಲ ಮೊದಲಾದ ತೊಂದರೆಗಳು ಎದುರಾಗುತ್ತವೆ. ಮಿದುಳಿಗೆ ಅತ್ಯಾವಶ್ಯಕ ಈ 4 ವಿಟಮಿನ್ಸ್
ವಿಟಮಿನ್ ಇ ಮತ್ತು ಕೆ
ಈ ವಿಟಮಿನ್‌ಗಳು ಸಹಾ ಕೊಬ್ಬಿನಲ್ಲಿ ಕರಗುತ್ತವೆ. ಒಂದು ವೇಳೆ ವಿಟಮಿನ್ ಇ ಪ್ರಮಾಣ ಹೆಚ್ಚಾದರೆ ಇದು ನರಗಳ ಕ್ಷಮತೆಯನ್ನು ಕ್ಷೀಣಿಸಿ ಕೊಂಚ ಒತ್ತಡಕ್ಕೂ ಸೀಳಿ ಆಂತರಿಕ ರಕ್ತಸ್ರಾವಾಗುವಂತೆ ಮಾಡುತ್ತದೆ. ರಕ್ತ ಹೆಪ್ಪುಗಟ್ಟಲು ಅವಶ್ಯವಿರುವ ವಿಟಮಿನ್ ಕೆ ಪ್ರಮಾಣ ಹೆಚ್ಚಾದರೆ ಇದರ ಪ್ರಮುಖ ಕೆಲಸಕ್ಕೇ ಸಂಚಕಾರ ಬರಬಹುದು. ಬದಲಿಗೆ ಜೀವಕೋಶಗಳಿಗೇ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಈ ಸ್ಥಿತಿಯನ್ನು Cytotoxicity ಎಂದು ಕರೆಯುತ್ತಾರೆ. ರಕ್ಷಕನಾಗಬೇಕಿದ್ದುದು ಭಕ್ಷಕನಾಗುತ್ತದೆ.
ವರ್ಧಿಸಿದ ಆಹಾರಗಳು ಮತ್ತು ಪೂರಕ ಆಹಾರಗಳು (Fortified Food and Supplements)
ಮಾರುಕಟ್ಟೆಯಲ್ಲಿ ಉಬ್ಬಿದ ದೇಹದ ಸ್ನಾಯುಗಳ ಭಾರೀ ಶರೀರವನ್ನು ಪ್ರದರ್ಶಿಸಿ ಇಂತಹ ಶರೀರ ಪಡೆಯಲು ಪೂರಕ ಆಹಾರಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ಈ ಆಹಾರಗಳು ಶರೀರಕ್ಕೆ ಭಾರೀ ಪ್ರಮಾಣದ ಹಾನಿ ಎಸಗಬಲ್ಲವು. ಅನೈಸರ್ಗಿಕ ವಿಧಾನದಿಂದ ಸ್ನಾಯುಗಳು ಬೆಳೆಯುವಂತೆ ಮಾಡುವಾಗ ಉತ್ಪತ್ತಿಯಾಗುವ ವಿಷಕಾರಿ ವಸ್ತುಗಳು ವಿವಿಧ ತೊಂದರೆಗಳನ್ನು ತರುತ್ತವೆ. ದೇಹಕ್ಕೆ ಹೆಚ್ಚುವರಿ ವಿಟಮಿನ್ನುಗಳ ಅತ್ಯುತ್ತಮ ಪೂರೈಕೆ ಎಂದರೆ ನೈಸರ್ಗಿಕ ಆಹಾರಗಳನ್ನು ಸೇವಿಸುವುದು. ಪೂರಕ ಆಹಾರಗಳನ್ನು ಸೇವಿಸುವ ಮುನ್ನ ಈ ಕ್ಷೇತ್ರದಲ್ಲಿ ಅನುಭವ ಇರುವ ನುರಿತರನ್ನು ಅಥವಾ ನಿಮ್ಮ ಕುಟುಂಬ ವೈದ್ಯರನ್ನು ಭೇಟಿಯಾಗಿ ಅವರ ಸಲಹೆ ಮೇರೆಗೆ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಹಿತಕರ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











