Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಚಹಾ ಸೇವಿಸಿ ಜಡತ್ವ ಹೋಗಲಾಡಿಸಿ!
ಜಡತ್ವವು ನಿಮ್ಮನ್ನು ರೋಗಿಯನ್ನಾಗಿಸುತ್ತದೆ ವಾಕರಿಕೆ ಮತ್ತು ಆತಂಕ ಮುಜುಗರವನ್ನು ಅನುಭವಿಸುವಂತೆ ಮಾಡುತ್ತದೆ. ಕೆಟ್ಟ ತೆಲೆನೋವು ಶುರುವಾಗಿ ಸ್ನಾಯುಗಳು ನೋಯಲು ಪ್ರಾರಂಭಗೊಳ್ಳುತ್ತದೆ. ಭಯಾನಕ ಜಡತ್ವವು ಮೆದುಳಿನ ಸರಿಯಾದ ಕಾರ್ಯವನ್ನೇ ಸ್ಥಗಿತಗೊಳಿಸಬಹುದು. ನಿಮಗೆ ಎಲ್ಲದರಲ್ಲಿಯೂ ನಿರಾಸಕ್ತಿ ಉಂಟಾಗಿ ಮಲಗಬೇಕೆಂಬ ಭಾವನೆ ಅಧಿಕಗೊಳ್ಳುತ್ತದೆ. ಇಂತಹ ಜಡತ್ವದಿಂದ ಹೊರಬರಲು ಕೆಲವು ವಿಧಾನಗಳನ್ನು ಅನುಸರಿಸಬಹುದು. ತಲೆನೋವಿನ ಸಂಕಟದಿಂದ ಪಾರಾಗಲು ಕೆಲವೊಂದು ನೈಸರ್ಗಿಕ ಮದ್ದುಗಳಿವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಳಿಯಲ್ಲಿ ಬಿಸಿ ಬಿಸಿ ಕಾಶ್ಮೀರಿ ಚಹಾ ರುಚಿ ನೋಡಿ
ಸರಿಯಾಗಿ ಆಹಾರ ತೆಗೆದುಕೊಳ್ಳುವುದು ಮತ್ತು ಪ್ರಮಾಣಬದ್ಧ ನಿದ್ದೆ ಜಡತ್ವದಿಂದ ಹೊರಬರಲು ಸಹಾಯಕ. ಆರೋಗ್ಯಕರ ಮತ್ತು ನೈಸರ್ಗಿಕ ಪಾನೀಯಗಳೂ ಕೂಡ ಈ ದಿಶೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಬ್ಲಾಕ್ ಕಾಫಿ, ಲಿಂಬೆ ಜ್ಯೂಸ್ ಮತ್ತು ಚಹಾಗಳು ಜಡತ್ವವನ್ನು ನಿಮ್ಮಿಂದ ಹೊರಹಾಕುತ್ತದೆ. ಇಂದಿನ ಲೇಖನದಲ್ಲಿ ನಾವು ಕೆಲವೊಂದು ಆರೋಗ್ಯಕರ ನೈಸರ್ಗಿಕ ಚಹಾಗಳ ಬಗ್ಗೆ ಮಾತನಾಡಲಿದ್ದು ಇವುಗಳು ಜಡತ್ವವನ್ನು ಬುಡದಿಂದ ಕಿತ್ತೊಗೆಯುತ್ತವೆ.
ಚಹಾದಲ್ಲಿರುವ ನೈಸರ್ಗಿಕ ಉತ್ಕರ್ಷಣ ನಿರೋಧಿ ಮತ್ತು ಶಕ್ತಿಗಳು ಜಡತ್ವವನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೆಲವೊಂದು ಜಡತ್ವವನ್ನು ಹೋಗಲಾಡಿಸುವ ವಿವಿಧ ಪ್ರಕಾರದ ಚಹಾಗಳನ್ನು ಇಲ್ಲಿ ನೀಡಲಾಗಿದೆ ಅವುಗಳತ್ತ ನೋಟ ಹರಿಸಿ:
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಾಯ್, ಚಾಯ್ ? ಯಾರಿಗ್ರಿ ಚಾಯ್!

ಗ್ರೀನ್ ಚಹಾ (ಗ್ರೀನ್ ಟೀ)
ಗ್ರೀನ್ ಟೀ ಒಂದು ಆರೋಗ್ಯಕರ ಚಹಾವಾಗಿದ್ದು, ಇದರಲ್ಲಿರುವ ನ್ಯೂಟ್ರಿಶಿಯನ್ ಮತ್ತು ಹೈಡ್ರೇಶನ್ ದೇಹಕ್ಕೆ ಶಕ್ತಿಯನ್ನು ಒದಗಿಸಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಗ್ರೀನ್ ಟೀನಲ್ಲಿರುವ ಉತ್ಕರ್ಷಣ ನಿರೋಧಿ ಅಂಶ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹವನ್ನು ಸ್ವಾಸ್ಥ್ಯವಾಗಿರಿಸುತ್ತದೆ. ಹೊಟ್ಟೆ ಶುದ್ಧತೆಗೂ ಈ ಚಹಾ ಸಹಕಾರಿ.

ಶುಂಠಿ ಚಹಾ
ಶುಂಠಿಯು ಒಂದು ಉತ್ತಮ ಉತ್ಕರ್ಷಣ ವಿರೋಧಿಯಾಗಿದ್ದು ಮದ್ಯಪಾನದಿಂದ ದೇಹವನ್ನು ನಿರ್ವಿಷೀಕರಿಸಲು ಯೋಗ್ಯವಾಗಿದೆ.ಇದು ಜಡತ್ವ ಮಂಕುತನವನ್ನು ನಿವಾರಿಸಿ ಉತ್ಸಾಹವನ್ನು ತುಂಬುತ್ತದೆ. ಜಡತ್ವದಿಂದ ಉಂಟಾಗುವ ತಲೆನೋವು ಮತ್ತು ದೇಹದ ನೋವನ್ನು ನಿವಾರಿಸಲು ಶುಂಠಿ ಚಹಾ ಒಂದು ಉತ್ತಮ ಪರಿಹಾರ.

ಬ್ಲಾಕ್ ಚಹಾ (ಬ್ಲಾಕ್ ಟೀ)
ದೇಹಕ್ಕೆ ಶಕ್ತಿಯನ್ನು ನೀಡುವ ಇನ್ನೊಂದು ಪ್ರಬಲವಾದ ಪೇಯವಾಗಿದೆ ಬ್ಲಾಕ್ ಟೀ. ಇದನ್ನು ಸ್ಟ್ರಾಂಗ್ ಮಾಡಿದಷ್ಟು ಫಲ ನಮ್ಮ ಅನುಭವಕ್ಕೆ ಬರುತ್ತದೆ. ಬ್ಲಾಕ್ ಟೀ ಉತ್ಕರ್ಷಣ ವಿರೋಧಿ ಅಂಶವನ್ನು ಒಳಗೊಂಡಿದ್ದು ಉತ್ತಮ ನ್ಯೂಟ್ರಿಶಿಯನ್ ಆಗಿದೆ. ಈ ನ್ಯೂಟ್ರಿಶಿಯನ್ ಗಳು ದೇಹಕ್ಕೆ ಶಕ್ತಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇತರ ಟೀಗಳಿಗೆ ಹೋಲಿಸಿದಾಗ ಜಡತ್ವದಿಂದ ತಕ್ಷಣ ಹೊರಬರಲು ಬ್ಲಾಕ್ ಟೀ ಸಹಕಾರಿಯಾಗಿದೆ.

ಲಿಂಬೆ ಚಹಾ
ಬೇಡದ ಅಂಶಗಳನ್ನು ನಿವಾರಿಸಿ ದೇಹದ ವ್ಯವಸ್ಥೆಯನ್ನು ನಿರ್ವಷೀಕರಿಸಲು ಲಿಂಬೆ ಸಹಕಾರಿ. ಜಡತ್ವವನ್ನು ಹೋಗಲಾಡಿಸಲು ಲಿಂಬೆ ಚಹಾ ಉತ್ತಮವಾಗಿದೆ. ಗ್ರೀನ್ ಟೀ ಅಥವಾ ಬ್ಲಾಕ್ ಟೀಗೆ ಹನಿ ಲಿಂಬೆಯನ್ನು ಸೇರಿಸಿದರೆ ಪರಿಣಾಮ ಅದ್ಭುತವಾಗಿರುತ್ತದೆ. ನಿಮ್ಮನ್ನು ತಾಜಾ ಮತ್ತು ಸ್ವಾಸ್ಥ್ಯದಿಂದಿರಿಸಲು ಈ ಚಹಾ ಸಹಕಾರಿ. ಇದು ಶಕ್ತಿಯನ್ನು ನೀಡಿ ಜಡತ್ವವನ್ನು ಹೋಗಲಾಡಿಸುತ್ತದೆ.

ತುಳಸಿ ಚಹಾ
ನೈಸರ್ಗಿಕ ತುಳಸಿ ಚಹಾ ಜಡತ್ವದಿಂದ ನಿತ್ರಾಣಗೊಂಡ ಸ್ನಾಯುಗಳನ್ನು ಉಪಚರಿಸಿ ತಲೆನೋವನ್ನು ನಿವಾರಿಸುತ್ತದೆ. ಇದರ ರುಚಿಯನ್ನು ಹೊರತುಪಡಿಸಿದರೆ, ತುಳಸಿ ಚಹಾ ನಿಮ್ಮ ಮೂಡ್ ಅನ್ನು ತಾಜಾಗೊಳಿಸಿ ಕೊಬ್ಬಿನಿಂದ ದೇಹವನ್ನು ಮುಕ್ತಗೊಳಿಸುತ್ತದೆ. ಕೆಟ್ಟ ಜಡತ್ವದಿಂದ ನೀವು ಬಳಲುತ್ತಿದ್ದರೆ ತುಳಸಿ ಚಹಾ ತುಂಬಾ ಒಳ್ಳೆಯದು.



Click it and Unblock the Notifications