ಮಧುಮೇಹವನ್ನು ನಿಯಂತ್ರಣದಲ್ಲಿರಿಸುವ ಚಮತ್ಕಾರ ಆಹಾರಗಳು

ಪ್ರಕೃತಿಯ ಶಕ್ತಿಗೆ ಪ್ರಕೃತಿಯೇ ಸರಿಸಾಟಿಯೇ ಹೊರತು ಅದಕ್ಕೆ ಬೇರೇನನ್ನೂ ಹೋಲಿಸಲಾಗದು. ಮಾನವ ಸಮುದಾಯದಲ್ಲಿ ಕ೦ಡುಬರುವ ಅತ್ಯ೦ತ ಸಾಮಾನ್ಯವಾದ ರೋಗಗಳಲ್ಲಿ ಮಧುಮೇಹವೂ ಕೂಡ ಒ೦ದಾಗಿದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಾಪಾಡಿಕೊಳ್ಳಲು ಅನೇಕ ನೈಸರ್ಗಿಕ ಪರಿಹಾರಗಳಿವೆ.

ಒ೦ದು ವೇಳೆ ನೀವೇನಾದರೂ ಮಧುಮೇಹಿಯಾಗಿದ್ದರೆ, ನೀವು ಜಾಗರೂಕರಾಗಿರಬೇಕಾದುದು ಅಗತ್ಯ. ಏಕೆ೦ದರೆ, ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯ೦ತ್ರಣದಲ್ಲಿಲ್ಲದಿದ್ದರೆ, ಅದು ಅನೇಕ ಇತರ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ. ಆಹಾರಕ್ರಮ ಹಾಗೂ ನಿಯಮಿತವಾದ ವ್ಯಾಯಾಮ, ಇವೆರಡೂ ಕೂಡ ಮಧುಮೇಹಿಯ ವಿಚಾರದಲ್ಲಿ ಜೊತೆಜೊತೆಯಾಗಿ ಆತನ ಹಿತಕ್ಕಾಗಿ ಕಾರ್ಯವೆಸಗುವ ಎರಡು ಪ್ರಮುಖವಾದ ಅ೦ಶಗಳಾಗಿವೆ. ಸ೦ಸ್ಕರಿತ ಆಹಾರವಸ್ತುಗಳನ್ನು ಸ೦ಪೂರ್ಣವಾಗಿ ತ್ಯಜಿಸಿಬಿಡುವುದು ಒಳಿತು. ಸಾಧ್ಯವಾದಷ್ಟು ನೈಸರ್ಗಿಕವಾದ ಆಹಾರವಸ್ತುಗಳನ್ನೇ ಸೇವಿಸಲು ಪ್ರಯತ್ನಿಸಿರಿ

ಸೀತಾಫಲ


ಸೀತಾಫಲವು ಮಧುಮೇಹಿ ಪ್ರತಿರೋಧಕ ಗುಣಲಕ್ಷಣಗಳನ್ನು ಹೊ೦ದಿದೆ ಸೀತಾಫಲಗಳಲ್ಲಿ ಅನೇಕ ಮಧುಮೇಹಿ ಪ್ರತಿಬ೦ಧಕ ಗುಣಲಕ್ಷಣಗಳಿವೆ. ಸೀತಾಫಲದ ಈ ವಿಶಿಷ್ಟವಾದ ಗುಣವಿಶೇಷವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯ೦ತ್ರಿಸಲು ಸಹಕರಿಸುತ್ತದೆ ಹಾಗೂ ಶರೀರದ ಮಾ೦ಸಖ೦ಡಗಳು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳುವ೦ತೆ ಮಾಡುವುದರ ಮೂಲಕ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗೂ ತನ್ಮೂಲಕ ಶರೀರದ ಸಕ್ಕರೆಯ ಪ್ರಮಾಣದ ಬಳಕೆಯನ್ನು ನಿಯಮಿತಗೊಳಿಸಿ ನಿಯ೦ತ್ರಿಸಲು ಸಹಕರಿಸುತ್ತದೆ. ಆದ್ದರಿ೦ದ, ಸೀತಾಫಲಗಳನ್ನು ದಿನನಿತ್ಯವೂ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿ೦ದ ಅವುಗಳಲ್ಲಿರುವ ಮಧುಮೇಹ ಸ೦ಬ೦ಧಿ ಪ್ರಯೋಜನಗಳು, ಮಧುಮೇಹಿಗಳಿಗೆ ಮಧುಮೇಹದ ನಿಯ೦ತ್ರಣದಲ್ಲಿ ಸಹಕಾರಿಯಾಗುತ್ತವೆ.

ಹಸಿರು ತರಕಾರಿ


ಹಸಿರು ತರಕಾರಿ ತಿನ್ನಿ ಡಯಾಬಿಟಿಸ್ ತಡೆಯಲು ಒಳ್ಳೆಯ ದಾರಿಯೆಂದರೆ ಹಸಿರಾಗಿರುವ ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರದಲ್ಲಿಡಲು ಇದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮಧುಮೇಹನಿಂದ ಕಣ್ಣಿಗೆ ದೃಷ್ಟಿ ದೋಷ ಉಂಟಾಗುತ್ತದೆ. ಇದರಿಂದ ವಿಟಾಮಿನ್ ಬಿ ಮತ್ತು ವಿಟಾಮಿನ್ ಸಿ ಅಧಿಕವಾಗಿರುವ ತರಕಾರಿಗಳನ್ನು ಹೆಚ್ಚಾಗಿ ಬಳಸಿ.

ಮೀನು


ಮಧುಮೇಹ ಆಹಾರ ಕ್ರಮದಲ್ಲಿ ಒಮೆಗಾ 3 ಪ್ಯಾಟಿ ಆ್ಯಸಿಡ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದನ್ನು ಎಲ್ಲಿ ಪಡೆಯಬಹುದು? ಸಾಲ್ಮನ್, ಸಾರ್ಡೈನ್, ಮಾರ್ಕೆಲ್ ಇತ್ಯಾದಿ ಮೀನುಗಳಿಂದ ಇದನ್ನು ಪಡೆಯಬಹುದು. ಇವುಗಳು ತುಂಬಾ ರುಚಿಯಾಗಿರುತ್ತದೆ ಮತ್ತು ಇದು ನಿಮ್ಮ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕೂಡ ಕಡಿಮೆ ಮಾಡುತ್ತದೆ. ಮಧುಮೇಹಿಗಳು ತಿನ್ನಬಾರದ 10 ಹಣ್ಣುಗಳು

ಸೇಬು ಹಣ್ಣು


ದಿನಕ್ಕೊಂದು ಸೇಬು ನಿಮ್ಮನ್ನು ವೈದ್ಯರಿಂದ ದೂರವಿಡುತ್ತದೆ ಇದು ತುಂಬಾ ಜನಪ್ರಿಯ ನುಡಿ ಮತ್ತು ನಿಜವೂ ಹೌದು. ಸೇಬು ಸೇವನೆಯಿಂದ ಮಧುಮೇಹವನ್ನು ತಡೆಯಬಹುದು. ಕಡಿಮೆ ಕ್ಯಾಲರಿ ಮತ್ತು ಗರಿಷ್ಠ ಮಟ್ಟದಲ್ಲಿ ನಾರಿನಾಂಶ ಹೊಂದಿರುವ ಸೇಬು ಮಧುಮೇಹ ಆಹಾರ ಕ್ರಮದಲ್ಲಿ ಅದ್ಭುತ ಆಹಾರ. ಸೇಬಿನ ಸಿಪ್ಪೆ ತೆಗೆಯದೆ ತಿಂದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಹಾಗಲಕಾಯಿ


ಕಹಿ ಪದಾರ್ಥಗಳಲ್ಲಿ ಅದರಲ್ಲೂ ಸಕ್ಕರೆಯ ಅಂಶವನ್ನು ತಗ್ಗಿಸುವಲ್ಲಿ ಹಾಗಲಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಇದನ್ನು ನೀವು ಬಳಸಬೇಕು. ಇದು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.

ಹಣ್ಣಿನ ಆಹಾರ ಕ್ರಮ


ಮಧುಮೇಹವನ್ನು ದೂರ ಮಾಡಬೇಕಾದರೆ ನೀವು ಹಣ್ಣುಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ತುಂಬಾ ಮುಖ್ಯ. ವಿಟಾಮಿನ್ ಸಿ ಹೆಚ್ಚಾಗಿರುವಂತಹ ಸಿಟ್ರಸ್ ಹಣ್ಣುಗಳನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿ. ವಿಟಾಮಿನ್ ಸಿ ಇರುವ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕ ಸಮೃದ್ಧವಾಗಿರುತ್ತದೆ ಮತ್ತು ಇದು ಮುಕ್ತ ಮೂಲ ಸ್ವರೂಪ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಲು ನೆರವಾಗುತ್ತದೆ. ಡಯಾಬಿಟಿಸ್ ಉಂಟುಮಾಡುವ ತಿನ್ನುವ ಅಭ್ಯಾಸಗಳು

ಕ್ಯಾರೆಟ್


ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಕ್ಯಾರೆಟ್ ಪ್ರಕೃತಿಯ ಒಂದು ಕೊಡುಗೆ. ಇದು ಡಯಾಬಿಟಿಸ್ ಅನ್ನು ತಡೆಯಲು ನೆರವಾಗುತ್ತದೆ. ಇದು ಮಧುಮೇಹ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೆಳಗಿನ ಜಾವ ವಾಕಿಂಗ್ ಗೆ ಹೋಗುವಾಗ ಕ್ಯಾರೆಟ್ ತಿನ್ನಿ.

ಆಲಿವ್ ಎಣ್ಣೆ


ಆಲಿವ್ ಎಣ್ಣೆ ಪ್ರಯತ್ನಿಸಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಆಲಿವ್ ತೈಲ ಮಧುಮೇಹವನ್ನು ತಡೆಯಲು ಉತ್ತಮ ರೀತಿಯಲ್ಲಿ ನೆರವಾಗುತ್ತದೆ. ಆಲಿವ್ ಎಣ್ಣೆಯಲ್ಲಿರುವ ಉತ್ತಮ ಕೊಬ್ಬು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಆಹಾರ ಹೆಚ್ಚು ರುಚಿ ನೀಡಲು ಆಲಿವ್ ತೈಲವನ್ನು ಬಳಸಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Wednesday, November 26, 2014, 22:36 [IST]
X
Desktop Bottom Promotion