Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ಸೌಂದರ್ಯವರ್ಧಕ ಆಹಾರಗಳು
ಆದರೆ ಇದನ್ನೇ ಮನಸ್ಸಿಗೆ ತಗೊಳ್ಳುವ ಕೆಲವು ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ ಅಲ್ಲದೆ ಇದರಿಂದ ಮುಕ್ತಿ ಹೊಂದಲು ಮಾರುಕಟ್ಟೆಯಲ್ಲಿ ದೊರೆಯುವ ನಾನಾ ಬಗೆಯ ಸೌಂದರ್ಯವರ್ಧಕಗಳನ್ನು ಖರೀದಿಸಿ ತಮ್ಮ ಕೈಲಾದ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಎಷ್ಟೇ ಬೆಲೆಯ ಸೌಂದರ್ಯವರ್ಧಕಗಳೂ ಕೂಡ ಪರಿಣಾಮಕಾರಿಯಾಗಿ ಸೌಂದರ್ಯ ಹೆಚ್ಚಿಸುವುದಿಲ್ಲ ಎಂಬುದಂತೂ ಸತ್ಯ.
ಹಾಗಾದರೆ ನೈಸರ್ಗಿಕವಾಗಿ ಸೌಂದರ್ಯವನ್ನು ಹೆಚ್ಚಿಸುವ ಬಗೆ ಹೇಗೆ? ಚಿಂತಿಸದಿರಿ, ಬೋಲ್ಡ್ ಸ್ಕೈ ಇಂದು ಕೆಲವೊಂದು ಆಹಾರ ಪದಾರ್ಥಗಳನ್ನು ಪರಿಚಯಿಸುತ್ತಿದ್ದು, ಇವು ಖಂಡಿತವಾಗಿಯೂ ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ನೆರವಾಗಲಿವೆ.....

ನಿಂಬೆ
ನಿಂಬೆಯು ಕರುಳಿನಲ್ಲಿರುವ ಬೈಲ್ ಸೆಕ್ರೆಶನ್ ಪ್ರಕ್ರಿಯೆಯನ್ನು ಹೆಚ್ಚಿಸಿ ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ. ಬೈಲ್ ಕರುಳನ್ನು ಸದೃಢವಾಗಿಡುವ ಅಂಶವಾಗಿದೆ. ಇದು ದೇಹದಲ್ಲಿರುವ ವಿಷಕಾರಿ ರಾಸಾಯನಿಕಗಳನ್ನು ಹೊರಗೆ ಹಾಕಲು ಸಹಕರಿಸುತ್ತದೆ. ಪ್ರತಿನಿತ್ಯ ನಿಂಬೆಯನ್ನು ಸೇವಿಸುವುದರ ಮೂಲಕ ನಿಮ್ಮ ತ್ವಚೆಯನ್ನು ಮೃದುವಾಗಿಟ್ಟುಕೊಳ್ಳಬಹುದು. ಇದು ಸುಕ್ಕುಗಳು ಮತ್ತು ಮೊಡವೆಗಳು ಬರದಂತೆ ರಕ್ಷಣೆಯನ್ನು ಒದಗಿಸುತ್ತದೆ.

ನೀರು
ಬಹಳಷ್ಟು ಸೆಲೆಬ್ರಿಟಿಗಳು ತಮ್ಮ ಸೌಂದರ್ಯದ ಗುಟ್ಟು ನೀರು ಎಂದು ಜಗಜ್ಜಾಹೀರು ಮಾಡಿದ್ದಾರೆ. ಆದರೆ ನಾವು ಬಹಳಷ್ಟು ಜನ ಈ ಅಂಶವನ್ನು ಒಪ್ಪಲು ತಯಾರಿಲ್ಲ. ಇರಲಿ ಆ ಸೆಲೆಬ್ರಿಟಿಗಳು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಹಲವಾರು ಚಿಕಿತ್ಸೆಗಳು ಮತ್ತು ಸರ್ಜರಿಗಳಿಗೆ ಒಳಗಾಗಿರುತ್ತಾರೆ ಎಂಬುದು ತಿಳಿದಿರುವ ವಿಚಾರವೇ!. ಆದರೂ ಹೆಚ್ಚಿನ ಪ್ರಮಾಣದ ನೀರಿನ ಸೇವನೆಯಿಂದ, ನಿಮ್ಮ ದೇಹದಲ್ಲಿ ನೀರಿನ ಪ್ರಮಾಣವು ಹೆಚ್ಚಾಗುತ್ತದೆ. ಅದರಿಂದ ನಿಮ್ಮ ದೇಹದ ಚೈತನ್ಯವು ಹೆಚ್ಚಾಗುತ್ತದೆ. ಜೊತೆಗೆ ನಿಮ್ಮ ತ್ವಚೆಯ ಬಣ್ಣ ಹೊಳಪನ್ನು ಹೊಂದುತ್ತದೆ ಮತ್ತು ನಿಮ್ಮ ದೇಹದ ದಪ್ಪ ಸಮಪ್ರಮಾಣದಲ್ಲಿರುತ್ತದೆ.

ರೆಡ್ ಬೆಲ್ ಪೆಪ್ಪರ್
ರೆಡ್ ಬೆಲ್ ಪೆಪ್ಪರ್‌ಗಳು ಒಂದು ಸಮುದ್ರ ಜನ್ಯ ಆಹಾರವಾಗಿವೆ. ಇದು ತನ್ನಲ್ಲಿರುವ ಸಮೃದ್ಧ ಅಂಟಿ ಆಕ್ಸಿಡೆಂಟ್‍ಗಳ ಕಾರಣದಿಂದಾಗಿ ತ್ವಚೆಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಬೆಲ್ ಪೆಪ್ಪರ್‌ಗಳಲ್ಲಿ ವಿಟಮಿನ್ ಸಿ ಸಹ ಹೆಚ್ಚಾಗಿರುತ್ತದೆ. ಈ ಮೆಣಸುಗಳ ಒಟ್ಟಾರೆ ಕ್ಯಾಲೋರಿ ಪ್ರಮಾಣ ಕೇವಲ 27 ಎಂದರೆ ನಂಬಲೇ ಬೇಕು. ಈ ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ಗುಣವು ಸಹ ಸೌಂದರ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದೆ.

ತಾಹಿನಿ
ನಿಮ್ಮ ಆಹಾರಕ್ಕೆ ಸ್ವಲ್ಪ ವಿದೇಶಿ ಟಚ್ ನೀಡಬೇಕೆಂದಿದ್ದೀರಾ? ಹಾಗಾದರೆ ತಾಹಿನಿಯನ್ನು ಒಮ್ಮೆ ಪ್ರಯತ್ನಿಸಿ. ಇದನ್ನು ಎಳ್ಳಿನಿಂದ ತಯಾರಿಸಿರುತ್ತಾರೆ. ಈ ಆಹಾರದಲ್ಲಿ ಪ್ರೊಟೀನ್, ಸತು ಮತ್ತು ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಈ ಪೋಷಕಾಂಶಗಳು ನಿಮ್ಮ ದೇಹದಲ್ಲಿ ಸುಲಭವಾಗಿ ಕರಗಿ ಹೋಗುತ್ತವೆ. ಇದು ನಿಮ್ಮ ಕೂದಲಿಗೆ ಉತ್ತಮ ರೀತಿಯಾದ ಆಹಾರವಾಗಿದ್ದು, ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.

ಚಾಕೊಲೇಟ್
ಚಾಕೊಲೇಟ್‍ಗಳು ಮತ್ತು ಕ್ಯಾಂಡಿ ಬಾರ್‌ಗಳು ಮೊಡವೆಗಳ ಒಡೆಯುವಿಕೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಅದರಲ್ಲು ಯುವಕರಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚು ಎಂದು ಹೇಳಲಾಗುತ್ತದೆ. ಆದಾಗಿಯೂ ಚಾಕೊಲೇಟ್‍ಗಳು ಈ ಕಲೆಗಳನ್ನು ಉಂಟು ಮಾಡುತ್ತವೆ ಎಂಬುದನ್ನು ಇನ್ನೂ ಸಾಭೀತು ಮಾಡಲಾಗಿಲ್ಲ. ಆದರು ಸಹ ಇದರಲ್ಲಿರುವ ಸಮೃದ್ಧ ಫ್ಲಾವೊನೊಯ್ಡ್‌ಗಳು, ಅಂಟಿ ಆಕ್ಸಿಡೆಂಟ್‍ಗಳು ತ್ವಚೆಗೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆ. ಹಾಗು ತ್ವಚೆಯನ್ನು ಹೊಳಪಿನಿಂದ ಮತ್ತು ಚೈತನ್ಯಯುತವಾಗಿ ಕಾಪಾಡುತ್ತವೆ.



Click it and Unblock the Notifications