Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಋತುಚಕ್ರದ ವೇಳೆ ಮಾಡಬಹುದಾದ 7 ವ್ಯಾಯಾಮಗಳು
ವ್ಯಾಯಾಮದ ಮೇಲೆ ಮುಟ್ಟಿನ ಪರಿಣಾಮಗಳ ಬಗ್ಗೆ ನಡೆದಿರುವ ಹಲವಾರು ಅಧ್ಯಯನಗಳು ವ್ಯಾಪಕವಾಗಿ ಬದಲಾಗಿರಬಹುದು. ಕೆಲವರು ಇದು ನೆರವಾಗುತ್ತದೆ ಎಂದರೆ, ಮತ್ತೆ ಕೆಲವರು ಇದರಿಂದ ಹಾನಿಯಾಗುತ್ತದೆ ಎನ್ನುತ್ತಾರೆ.
ಇದರಿಂದ ಬೇಗನೆ ಗಾಯಾಳುವಾಗುತ್ತಾರೆಂದು ಇನ್ನು ಕೆಲವರು ಹೇಳುತ್ತಾರೆ. ನಿಜಾಂಶವೆಂದರೆ ಋತುಚಕ್ರದ ವೇಳೆ ವ್ಯಾಯಾಮದ ಬಗ್ಗೆ ಇರುವ ಒಂದೇ ಒಂದು ನಿಯಮವೆಂದರೆ ನಿಮ್ಮ ಮನಸ್ಸಿನ ಮಾತು ಕೇಳುವುದು.

ವಾಕಿಂಗ್
ಋತುಚಕ್ರದ ವೇಳೆ ಕಠಿಣ ವ್ಯಾಯಾಮ ಮಾಡುವುದರ ವಿರುದ್ಧವಾಗಿರುವ ತಜ್ಞರು, ವಾಕಿಂಗ್ ನಿಂದ ಗಾಯಾಳು ಅಥವಾ ಅಪಾಯದ ಸಾಧ್ಯತೆ ಕಡಿಮೆ ಇದೆ ಎನ್ನುತ್ತಾರೆ. ಸ್ನೀಕರ್ ಮತ್ತು ಸನ್ ಬ್ಲಾಕ್ ನ್ನು ಹಾಕಿಕೊಂಡು ರಸ್ತೆಗೆ ಬನ್ನಿ. ವಾಕಿಂಗ್ ನಿಂದ ನಿಮ್ಮ ಕ್ಯಾಲರಿ ನಷ್ಟವಾಗುವುದು ಮಾತ್ರವಲ್ಲದೆ ವ್ಯಾಯಾಮ ಮಾಡಿದ್ದೀರೆಂಬ ಭಾವನೆ ನಿಮ್ಮಲ್ಲಿ ಮೂಡುತ್ತದೆ. ನಿಖರ ಕ್ಯಾಲರಿ ಎಣಿಕೆಗೆ ಒತ್ತಡ ಬೇಡ.
ಓಡುವುದು
ನಿಮಗೆ ಜಾಗಿಂಗ್ ಮಾಡಬೇಕೆಂಬ ಭಾವನೆಯಾಗುತ್ತಿದ್ದರೆ ಆಗ ಅದನ್ನು ಮಾಡಿ. ನೀವು ತೀವ್ರವಾಗಿ ಮಾಡುವ ಹೃದಯ ವ್ಯಾಯಾಮದಿಂದಾಗಿ ಬಿಡುಗಡೆಯಾಗುವ ಎಂಡೋರ್ಫಿನ್ ಋತುಚಕ್ರದ ವೇಳೆ ಉಂಟಾಗುವ ಕಿರಿಕಿರಿ ನಿವಾರಿಸಬಹುದು. ಓಡುವ ಮೊದಲು ಅಥವಾ ಬಳಿಕ ಸರಿಯಾಗಿ ನೀರು ಕುಡಿಯಿರಿ. ಋತುಚಕ್ರದ ವೇಳೆ ನೀವು ಬೇಗನೆ ತೇವಾಂಶ ಕಳಕೊಳ್ಳುತ್ತೀರಿ. ಇದು ಸತ್ಯವೋ ಅಥವಾ ಅಲ್ಲವೋ ಎಂದು ತಿಳಿದಿಲ್ಲ. ಸುರಕ್ಷತೆ ದೃಷ್ಟಿಯಿಂದ ನೀವು ನೀರು ಕುಡಿಯುತ್ತಾ ಇರಿ.
ಯೋಗ
ಯೋಗ ನಿಮ್ಮನ್ನು ಸಿದ್ಧಗೊಳಿಸುತ್ತದೆ. ಕೆಲವೊಂದು ಆಸನಗಳು ನಿಮ್ಮ ಸಾಮರ್ಥ್ಯದ ಮಟ್ಟಕ್ಕೆ ಹೊಂದಿಕೊಳ್ಳಬಹುದು. ಋತುಚಕ್ರದ ವೇಳೆ ತಿರುವು ಮುರುವನ್ನು ಶಿಫಾರಸ್ಸು ಮಾಡಲಾಗುವುದಿಲ್ಲ. ಆದರೆ ಇದಕ್ಕೆ ಯಾವುದೇ ವೈದ್ಯಕೀಯ ಕಾರಣಗಳಿಲ್ಲ. ತಲೆಯಲ್ಲಿ ನಿಲ್ಲುವ ಬದಲು ನೀವು ದೇವತೆ ನಿಲ್ಲುವ ಭಂಗಿಯನ್ನು ಆಯ್ಕೆ ಮಾಡಿ ಆರಾಮ ಮಾಡಬಹುದು.
ಏರೋಬಿಕ್ಸ್
ಋತುಚಕ್ರದ ಅವಧಿಯಲ್ಲಿ ನೀವು ತುಂಬಾ ಸ್ವಲ್ಪ ಅಸಾಮಾನ್ಯರಾಗುತ್ತೀರಿ. ಏರೋಬಿಕ್ಸ್ ವ್ಯಾಯಾಮವು ಇದಕ್ಕೆ ಒಳ್ಳೆಯದು. ಏರೋಬಿಕ್ಸ್ ತರಗತಿಗಳು ಒತ್ತಡವಿಲ್ಲದ ವಾತಾವರಣದಲ್ಲಿ ನಡೆಸಲಾಗುತ್ತದೆ. ಇದರ ಮುಖ್ಯ ಉದ್ದೇಶವೇ ಮನೋರಂಜನೆ.
ನೃತ್ಯ
ನೃತ್ಯ ವೇದಿಕೆಯಲ್ಲಿ ಕೈ ಕಾಲುಗಳನ್ನು ಅಲ್ಲಾಡಿಸುವುದು ಸಾಂಪ್ರದಾಯಿಕವಾಗಿ ಮಾಡುವಂತಹ ವ್ಯಾಯಾಮವಲ್ಲವೇ? ಇದು ನಿಮ್ಮ ಹೃದಯ ಬಡಿತ ಹೆಚ್ಚಿಸಿ, ಕ್ಯಾಲರಿ ದಹಿಸುತ್ತದೆ. ಇದು ಅತ್ಯುತ್ತಮ ಆಯ್ಕೆ. ಯಾಕೆಂದರೆ ಇದು ನಿಮಗೆ ವ್ಯಾಯಾಮದಂತಹ ಭಾವನೆ ಮೂಡಿಸದು. ಋತುಚಕ್ರದ ವೇಳೆ ನಿಮ್ಮ ಬಗ್ಗೆ ಶ್ರೇಷ್ಠ ಭಾವನೆ ಮೂಡಲು ಪ್ರೇರಣೆ ಬೇಕಾಗುತ್ತದೆ. ನೃತ್ಯ ಕ್ಲಾಸ್ ಗೆ ಸಂಜೆ ವೇಳೆ ಹೋಗುವುದು ನಿಮಗೆ ಹೆಚ್ಚಿನ ಪ್ರೇರಣೆ ಮತ್ತು ಅದ್ಭುತವನ್ನುಂಟು ಮಾಡುತ್ತದೆ.
ಸಿನೆಮಾ ಮಧ್ಯೆ ವ್ಯಾಯಾಮ
ಋತುಚಕ್ರದ ಅವಧಿಯಲ್ಲಿ ನೀವು ಮನೆಯಲ್ಲೇ ಉಳಿದುಕೊಂಡು ಜೀವಮಾನದ ಸಿನೆಮಾಗಳನ್ನು ನೋಡಬಹುದು. ಜಾಹೀರಾತು ಬರುತ್ತಿರುವ ವೇಳೆ ನೀವು ಮರದ ಹಲಗೆಯ ಭಂಗಿಯಲ್ಲಿ ನಿಲ್ಲಬಹುದು. ನೆಲದ ಮೇಲೆ ಮಲಗಿ. ನಿಮ್ಮ ಕೈಗಳು ಮತ್ತು ಮೊಣಕೈಯನ್ನು ಹೃದಯದ ಕೆಳಗಡೆ ತನ್ನಿ. ಮುಂದೋಳುಗಳು ಮತ್ತು ಕಾಲ್ಬೆರಳುಗಳನ್ನು ಬಳಸಿ ದೇಹವನ್ನು ಎತ್ತಿ ಮತ್ತು ಹಾಗೆ ಇಡಿ. ಇದು ಒಂದು ರೀತಿಯ ಆಳವಾದ ವ್ಯಾಯಾಮ. ಪ್ರತೀ ಸಲ ಜಾಹೀರಾತು ಬರುವಾಗ ಹೀಗೆ ಮಾಡಿ.
ಮನೆಯಲ್ಲೇ ವ್ಯಾಯಾಮ
ಋತುಚಕ್ರದ ವೇಳೆ ನಿಮ್ಮ ಫಿಟ್ ನೆಸ್ ನ್ನು ಸ್ವಲ್ಪವೂ ಕಡೆಗಣನೆ ಮಾಡಬೇಡಿ. ಆದರೆ ಆರಾಮ ಬೇಕಾಗಿದ್ದರೆ ಆಗ ದೇಹದ ಮಾತು ಕೇಳಿ. ಮೇಲಿನ ವ್ಯಾಯಾಮಗಳನ್ನು ಋತುಚಕ್ರದ ವೇಳೆ ಪ್ರಯತ್ನಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications