Latest Updates
-
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್
ಆಲೂಗಡ್ಡೆಯಲ್ಲಿದೆ ಟಾಪ್ 5 ಆರೋಗ್ಯಕರ ಗುಣಗಳು
ಆಲೂಗಡ್ಡೆ ಹಾಕಿದರೆ ಅಡುಗೆಯ ರುಚಿ ಹೆಚ್ಚುವುದು, ಆದರೆ ಆಲೂಗಡ್ಡೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಕಟುವಾದ ಅಪವಾದವನ್ನು ಆಲೂಗಡ್ಡೆ ಮೇಲೆ ಹೊರೆಸಲಾಗಿದೆ..ಯಾವುದೇ ನಿರ್ದಿಷ್ಟವಾದ ಆಕಾರವಿಲ್ಲದ ಈ ತರಕಾರಿಗೆ ಸೊಲಾನಮ್ ಟ್ಯೂಬರೋಸಂ ಎಂಬ ವೈಜ್ಞಾನಿಕ ಹೆಸರಿದೆ.
ಆಲೂಗಡ್ಡೆ ಪ್ರಿಯರು ಮಾತ್ರವಲ್ಲ, ಆಲೂಗಡ್ಡೆ ಬರೀ ಅನಾರೋಗ್ಯ ಮಾತ್ರ ಉಂಟು ಮಾಡುತ್ತದೆ, ಇದರಲ್ಲಿ ಕಾರ್ಬೋಹೈಡ್ರೇಡ್ ಹಾಗೂ ಕ್ಯಾಲೋರಿ ಬಿಟ್ಟರೆ ಬೇರೇನು ಇಲ್ಲ ಎಂದು ಆಲೂಗಡ್ಡೆಯನ್ನು ದ್ವೇಷಿಸುವವರು ಕೂಡ ಇದರಲ್ಲಿರುವ ಅನೇಕ ವಿಶೇಷ ಗುಣಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.

ತೂಕ ಹೆಚ್ಚಿಸಿಕೊಳ್ಳಬಹುದು:
ತೂಕ ಹೆಚ್ಚಿಸಿಕೊಳ್ಳಬಹುದು ಆಲೂಗಡ್ಡೆಯಲ್ಲಿ ಹೆಚ್ಚಾಗಿ ಕಾರ್ಬೋಹೈಡ್ರೇಡ್ ಹಾಗೂ ಪ್ರೋಟೀನ್ ಅಂಶ ಹೆಚ್ಚಾಗಿ ಇರುತ್ತದೆ. ಸಣ್ಣಗಿರುವವರು ದಪ್ಪ ಆಗಬೇಕೆಂದು ಯೋಚಿಸುತ್ತಿದ್ದರೆ ಆಲೂಗಡ್ಡೆಯನ್ನು ಹೆಚ್ಚಾಗಿ ಸೇವಿಸಿ ದೇಹದ ತೂಕ ಹೆಚ್ಚಿಸಿಕೊಳ್ಳಿ.
ಗಾಯ ಹಾಗೂ ಸುಟ್ಟ ಗಾಯಗಳಿಗೆ ಉತ್ತಮ:
ಜೌಷಧ ಸುಟ್ಟ ಗಾಯಗಳಿಗೆ ಆಲೂಗಡ್ಡೆಯ ರಸ ಒಳ್ಳೆ ಜೌಷಧಿ. ಚರ್ಮದ ಸಮಸ್ಯೆ, ತುರಿಕೆ, ಕಜ್ಜಿ ಮುಂತಾದ ಚರ್ಮ ರೋಗಕ್ಕೆ ಹೆಚ್ಚು ಸಹಾಯವಾಗಿದೆ. ಅಲ್ಸರ್,ಪ್ರೋಸ್ಟ್ರೇಟ್ ಕ್ಯಾನರ್, ಗರ್ಭಕೋಶ ಹಾಗೂ ಹೊಟ್ಟೆಯಲ್ಲಿನ ಗಡ್ಡೆಗಳಿಗೆ ಇದು ಉತ್ತಮ ಜೌಷಧಿಯಾಗಿದೆ.
ಹಲಸು ಆರೋಗ್ಯಕ್ಕೆ ಹೇಗೆ ಫಲಪ್ರದ
ಅತಿಸಾರ:
ಅತಿಸಾರ ಸಮಸ್ಯೆಯಿಂದ ಬಳಲುವವರಿಗೆ ಆಲೂಗಡ್ಡೆ ಅತ್ಯಂತ ಉತ್ತಮ ಆಹಾರ.ಇದು ತೆಳುವಾದ ಆಹಾರವಾಗಿದ್ದು ಜೀರ್ಣ ಮಾಡಿಕೊಳ್ಳಲು ಸುಲಭವಾದ್ದರಿಂದ ಅತಿಸಾರಕ್ಕೆ ಇದು ರಾಮಬಾಣ.ಆದರೆ ತಿಳಿಯದೆ ಇದನ್ನೇ ಹೆಚ್ಚಾಗಿ ಸೇವಿಸಿದರೆ ತೊಂದರೆಯೂ ಆಗಬಹುದು.
ಹೃದಯದ ಸಮಸ್ಯೆ:
ವಿಟಮಿನ್ಸ್, ಮಿನರಲ್ಸ್, ಕ್ಯಾಲ್ಸಿಯಂ ಅಲ್ಲದೆ ಆಲೂಗಡ್ಡೆಯಲ್ಲಿ ಕ್ಯಾರೋಟಿನಾಯಿಡ್ ಎಂಬ ಗುಣವನ್ನೂ ಹೊಂದಿದೆ. ಶರೀರದ ಒಳಭಾಗದಲ್ಲಿರುವ ಹೃದಯ ಹಾಗೂ ಇತರ ಅಂಗಗಳಿಗೆ ಇದು ಉಪಯೋಗಿಯಾಗಿದೆ.ಆದರೆ ಮತ್ತೆ ಆಲೂಗಡ್ಡೆ ಸೇವನೆಯಿಂದ ರಕ್ಯದಲ್ಲಿ ಗ್ಲೂಕೋಸ್ ಅಂಶ ಹೆಚ್ಚಳವಾಗುವುದರಿಂದ ಶರೀರದ ತೂಕ ಹೆಚ್ಚಾಗ ಬಹುದು ಹಾಗೂ ಸಕ್ಕರೆ ಕಾಯಿಲೆ ಹಾಗೂ ದಡೂತಿ ಶರೀರ ಇರುವವರಿಗೆ ಆಲೂಗಡ್ಡೆ ಸೇವನೆ ಒಳ್ಳೆಯದಲ್ಲ.
ಮೆದುಳಿನ ಕ್ರಿಯೆಯಲ್ಲಿ:
ಮೆದುಳು ಸರಿಯಾಗಿ ಕೆಲಸ ಮಾಡಲು ಅದು ಹೆಚ್ಚಾಗಿ ಗ್ಲೂಕೋಸ್ ಪ್ರಮಾಣ, ಆಮ್ಲಜನಕದ ಸರಬರಾಜು, ವಿಟಮಿನ್ ಬಿ ಕಾಂಪ್ಲೆಕ್ಸ್ ಹಾಗೂ ಹಾರ್ಮೋನ್ಸ್, ಅಮಿನೋ ಆಸಿಡ್, ಒಮೇಗಾ 3 ಪ್ಯಾಟಿ ಆಸಿಡ್ ಮುಂತಾದುವನ್ನು ಅವಲಂಬಿಸಿರುತ್ತದೆ. ಈ ಎಲ್ಲಾ ಅಂಶಗಳನ್ನು ಆಲೂಗಡ್ಡೆ ಹೊಂದಿದ್ದು ಅದನ್ನು ಮೆದುಳಿಗೆ ಅಗತ್ಯವಿದ್ದರೆ ಸರಬರಾಜು ಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications