Latest Updates
-
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ
ರಕ್ತದೊತ್ತಡವನ್ನು ಹದ್ದುಬಸ್ತಿನಲ್ಲಿಡಲು ಸಲಹೆ
ಪ್ರತಿ ಹತ್ತು ಮಂದಿ ವಯಸ್ಕರಲ್ಲಿ ಏಳು ಮಂದಿಗೆ ಅಧಿಕ ರಕ್ತದೊತ್ತಡದಿಂದ ಸ್ಟ್ರೋಕ್ ಅಥವಾ ಹೃದಯಾಘಾತಗಳು ಸಂಭವಿಸುತ್ತವೆ. ಯುವಕರಲ್ಲಿ ಸಹ ಅಧಿಕ ಉಪ್ಪಿನಂಶವಿರುವ ಆಹಾರಗಳನ್ನು ಸೇವಿಸುವ ಅಭ್ಯಾಸ, ವ್ಯಾಯಾಮ ಮಾಡದಿರುವಿಕೆ ಮತ್ತು ಡೆಸ್ಕ್‌ನಲ್ಲಿಯೇ ಕೆಲಸ ಮಾಡುವ ಪ್ರಕ್ರಿಯೆಗಳ ಕಾರಣದಿಂದ ಅಧಿಕ ರಕ್ತದೊತ್ತಡ ಕಂಡು ಬರುತ್ತಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೇಯಿಸಿದ ಮೊಟ್ಟೆಯಿಂದ ಆರೋಗ್ಯ ಪ್ರಯೋಜನಗಳು
ಒಂದು ವೇಳೆ ನಿಮ್ಮ ರಕ್ತದೊತ್ತಡವು ನಿರಂತರವಾಗಿ ಅಥವಾ 140mmHg/ 90mmHg ಬಂದರೆ ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ಇಲ್ಲಿ 140 ಎಂಬುದು ಸಂಕೋಚನದ ಒತ್ತಡವಾದರೆ, 90 ಎಂಬುದು ವಿಕೋಚನದ ಒತ್ತಡವಾಗಿರುತ್ತದೆ. ಈ ಒತ್ತಡವು ಹೃದಯದಿಂದ ರಕ್ತವು ದೇಹದ ಇತರ ಭಾಗಕ್ಕೆ ಪಂಪ್ ಆದಾಗ ಕಂಡು ಬರುತ್ತದೆ.
ಭಾರತದಲ್ಲಿನ ತಙ್ಞರ ಪ್ರಕಾರ ಅಧಿಕ ರಕ್ತದೊತ್ತಡದ ಪ್ರಮಾಣವು ನಗರಗಳಲ್ಲಿರುವ ವಯಸ್ಕರಲ್ಲಿ ಶೇ.20-40ರಷ್ಟು ಕಂಡು ಬಂದರೆ, ಗ್ರಾಮೀಣ ಭಾಗಗಳಲ್ಲಿರುವವರಲ್ಲಿ ಶೇ. 12-17ರಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆಯಂತೆ. ಹಾಗೆಂದು ಇದರ ಕುರಿತು ಭಯಪಡುವ ಅಗತ್ಯವಿಲ್ಲ. ಸುಲಭವಾದ ಪರಿಹಾರೋಪಾಯಗಳನ್ನು ತೆಗೆದುಕೊಂಡು ಇವುಗಳನ್ನು ನಿವಾರಿಸಿಕೊಳ್ಳಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಯೋಗಾಭ್ಯಾಸದ ಏಳು ಮಹತ್ವ ಪ್ರಯೋಜನಗಳು

ವಾರಕ್ಕೊಮ್ಮೆಯಾದರು ಜಾಗಿಂಗ್ ಮಾಡಿ:
ಕೊಪೆನ್ ಹೆಗನ್‍ನಲ್ಲಿ ನಡೆದ ಹಾರ್ಟ್ ಕಾರ್ಡಿಯೋವ್ಯಾಸ್ಕುಲರ್ ಅಧ್ಯಯನದ ಪ್ರಕಾರ ವಾರಕ್ಕೆ ಒಂದು ಗಂಟೆಯ ಮಟ್ಟಿಗಾದರು ಜಾಗಿಂಗ್ ಮಾಡುವುದರಿಂದ ನಿಮ್ಮ ಆಯಸ್ಸನ್ನು ಆರು ವರ್ಷಗಳ ಮಟ್ಟಿಗೆ ಹೆಚ್ಚಿಸಿಕೊಳ್ಳಬಹುದಂತೆ. ಈ ಅಧ್ಯಯನವು 20 ರಿಂದ 93 ವರ್ಷದೊಳಗಿನ ಸುಮಾರು 20,000 ಗಂಡಸರು ಮತ್ತು ಹೆಂಗಸರನ್ನು ಒಳಗೊಂಡಿತ್ತು.
ಸಂಶೋಧಕರ ಪ್ರಕಾರ ಜಾಗಿಂಗ್ ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ನೀಡುತ್ತದೆ. ಇದು ದೇಹಕ್ಕೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚು ಮಾಡಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೀಗೆ ಹಲವಾರು ಪ್ರಯೋಜನಗಳು ಇದರಿಂದ ದೊರೆಯುತ್ತವೆ. ಇದಲ್ಲದೆ ದೈಹಿಕ ಚಟುವಟಿಕೆಯು ಕಡಿಮೆ ರಕ್ತದೊತ್ತಡ ಇರುವವರ ಹೃದಯವನ್ನು ಸಹ ಸದೃಢಗೊಳಿಸಿ, ಕಡಿಮೆ ಶ್ರಮದಲ್ಲಿ ರಕ್ತವನ್ನು ಇಡೀ ದೇಹಕ್ಕೆ ಪಂಪ್ ಮಾಡುತ್ತದೆ. ಹೀಗೆ ಇದು ರಕ್ತನಾಳಗಳ ಮೇಲೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಜಾಗಿಂಗ್ ಮಾಡಲಾಗದಿದ್ದರೆ ವೇಗವಾಗಿ ನಡೆಯುವ ಮೂಲಕವು ಸಹ ಈ ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳಬಹುದು.

ಯೋಗರ್ಟನ್ನು ಸೇವಿಸಿ:
ಅಮೆರಿಕಾದಲ್ಲಿರುವ ಮಿನ್ನೆಸೊಟ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ ಪ್ರತಿದಿನವು ಒಂದು ಬಟ್ಟಲಿನಷ್ಟು ಯೋಗರ್ಟ್ ತಿನ್ನುವುದರಿಂದ ಅಧಿಕ ರಕ್ತದೊತ್ತಡ ಬರುವ ಸಾಧ್ಯತೆಯನ್ನು ಮೂರನೆ ಒಂದು ಭಾಗದಷ್ಟು ಕಡಿಮೆ ಮಾಡಿಕೊಳ್ಳಬಹುದು. ವಿಙ್ಞಾನಿಗಳ ಪ್ರಕಾರ ಯೋಗರ್ಟ್‍ನಲ್ಲಿರುವ ನೈಸರ್ಗಿಕ ಕ್ಯಾಲ್ಸಿಯಂಗಳು ರಕ್ತ ನಾಳಗಳು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡುತ್ತವೆ.
ಪ್ರತಿದಿನ 120ಗ್ರಾಂ ಯೋಗರ್ಟ್ ಸೇವಿಸುವವರಲ್ಲಿ ಅಧಿಕ ರಕ್ತದೊತ್ತಡವು ಇತರರಿಗಿಂತ ಶೇ.31ರಷ್ಟು ಕಡಿಮೆ ಪ್ರಮಾಣದಲ್ಲಿರುತ್ತದಂತೆ. ಇದು ಮುಂದೆ 15 ವರ್ಷದಲ್ಲಿ ಹೆಚ್ಚಾಗುವ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಬಾಳೆಹಣ್ಣನ್ನು ಸೇವಿಸಿ:
ಬಾಳೆ ಹಣ್ಣಿನಂತಹ ಪೊಟಾಶಿಯಂ ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ಮತ್ತು ಉಪ್ಪಿನ ಅಂಶವನ್ನು ಕಡಿಮೆ ಸೇವಿಸುವುದರಿಂದ ಜನರ ಆರೋಗ್ಯವನ್ನು ಮತ್ತು ಜೀವಗಳನ್ನು ಕಾಪಾಡಬಹುದು ಎಂದು ಬ್ರಿಟೀಷ್ ಮೆಡಿಕಲ್ ಜರ್ನಲ್ ಆನ್‍ಲೈನ್ ಅಭಿಪ್ರಾಯಪಟ್ಟಿದೆ.ಪೊಟಾಶಿಯಂ ದೇಹದಲ್ಲಿರುವ ದ್ರವಗಳನ್ನು ನಿಯಂತ್ರಣದಲ್ಲಿರುವ ಖನಿಜಾಂಶವಾಗಿ ಮಹತ್ವದ ಸ್ಥಾನವನ್ನು ಪಡೆದಿವೆ. ಇದರಿಂದ ಕಡಿಮೆ ರಕ್ತದೊತ್ತಡ ಇರುವವರಿಗೆ ಉತ್ತಮ ಪ್ರಯೋಜನಗಳಾಗುತ್ತದೆ. ಅದಕ್ಕಾಗಿ ಕನಿಷ್ಟ ಐದು ಬಾಳೆಹಣ್ಣನ್ನು ಸೇವಿಸಿ.

ಉಪ್ಪನ್ನು ಕಡಿಮೆ ಸೇವಿಸಿ:
ಉಪ್ಪು ನಿಮ್ಮ ದೇಹದಲ್ಲಿರುವ ದ್ರವಗಳ ಪ್ರಮಾಣವನ್ನು ಕಡಿಮೆ ಮಾಡಿ ರಕ್ತ ನಾಳಗಳಲ್ಲಿ ಒತ್ತಡ ಹೆಚ್ಚಾಗುವಂತೆ ಮಾಡುತ್ತವೆ. ಇದಕ್ಕಾಗಿ ನೀವು ಕೇವಲ ಉಪ್ಪನ್ನು ಕಡಿಮೆ ಮಾಡಿದರೆ ಸಾಲದು. ಜೊತೆಗೆ ಬಿಸ್ಕತ್, ಬ್ರೇಕ್ ಫಾಸ್ಟ್ ಸಿರಿಯಲ್, ರೆಡಿ ಮೇಡ್ ಆಹಾರಗಳನ್ನು ಸಹ ಕಡಿಮೆ ಸೇವಿಸಬೇಕು ಎಂದು ಬ್ಲಡ್ ಪ್ರೆಶ್ಶರ್ ಅಸೋಸಿಯೇಷನ್ ಅಭಿಪ್ರಾಯಪಡುತ್ತದೆ. ಏಕೆಂದರೆ ಇವುಗಳಲ್ಲಿ ಶೇ. 80ರಷ್ಟು ಉಪ್ಪಿನಂಶವಿರುತ್ತದೆ. ಯಾವುದಾದರು ಸಂಸ್ಕರಿಸಿದ ಆಹಾರ ಪದಾರ್ಥವನ್ನು ಸೇವಿಸುವ ಮೊದಲು ಅದರ ಪೊಟ್ಟಣದ ಮೇಲೆ ಗಮನಿಸಿ. 100ಗ್ರಾಂಗೆ 1.5ಗ್ರಾಂ ಉಪ್ಪು ಇದ್ದರೆ ಅದು ಅಧಿಕವಾಗಿರುತ್ತದೆ. ಆದರೆ 100ಗ್ರಾಂಗೆ 0.3 ಮಿ.ಗ್ರಾಂ ತೀರ ಕಡಿಮೆಯಾಗುತ್ತದೆ ಎಂಬುದು ತಿಳಿದಿರಲಿ.

ತೂಕ ಕಡಿಮೆ ಮಾಡಿಕೊಳ್ಳಿ:
ಅಧ್ಯಯನಗಳ ಪ್ರಕಾರ ನಿಮ್ಮ ದೇಹದ ತೂಕದಲ್ಲಿ ಕೆಲವು ಕಿ.ಗ್ರಾಂಗಳನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ರಕ್ತದೊತ್ತಡದ ಸಾಧ್ಯತೆಗಳನ್ನು ಕಡಿಮೆ ಮಾಡಿಕೊಳ್ಳಬಹುದಂತೆ. ಏಕೆಂದರೆ ಅಧಿಕ ತೂಕವು ನಿಮ್ಮ ಹೃದಯದ ಮೇಲೆ ಅಧಿಕ ಒತ್ತಡವನ್ನುಂಟು ಮಾಡಿ, ಅದರ ಕಾರ್ಯವನ್ನು ಕಠಿಣ ಮಾಡುತ್ತದೆ ಮತ್ತು ಈ ಪ್ರಕ್ರಿಯೆಯು ಅಧಿಕ ರಕ್ತದೊತ್ತಡವನ್ನು ಉಂಟು ಮಾಡುತ್ತದೆ.

ಧೂಮಪಾನವನ್ನು ಮಾಡಬೇಡಿ:
ಸಿಗರೇಟಿನಲ್ಲಿರುವ ನಿಕೋಟಿನ್ ನಿಮ್ಮ ದೇಹದಲ್ಲಿ ಅಡ್ರೆನಲೈನ್ ಉತ್ಪಾದನೆಯಾಗುವಂತೆ ಮಾಡುತ್ತದೆ. ಇದು ನಿಮ್ಮ ಹೃದಯದ ಬಡಿತವನ್ನು ಹೆಚ್ಚು ಮಾಡಿ, ರಕ್ತದೊತ್ತಡವನ್ನು ಏರಿಸುತ್ತದೆ. ಹೀಗೆ ಹೃದಯದ ಕಾರ್ಯವನ್ನು ಕಠಿಣ ಮಾಡುತ್ತದೆ.

ಕೆಲಸ ಕಡಿಮೆ ಮಾಡಿ:
ವಾರದಲ್ಲಿ 40 ಗಂಟೆ ಕೆಲಸದಲ್ಲೇ ಕಳೆಯುವುದರಿಂದ ಅಧಿಕ ರಕ್ತದೊತ್ತಡವು ಶೇ.14ರಷ್ಟು ಹೆಚ್ಚಾಗುತ್ತದೆ ಎಂದು ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ತಙ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಅಪಾಯವು ಓವರ್ ಟೈಮ್ ಮಾಡುವ ಕಾರ್ಮಿಕರಲ್ಲಿ ಮತ್ತಷ್ಟು ಹೆಚ್ಚಂತೆ. ಈ ಪ್ರಮಾಣವು ವಾರಕ್ಕೆ 40 ಗಂಟೆಗಳಿಗಿಂತ ಕಡಿಮೆ ಕೆಲಸ ಮಾಡುವ ಜನರಲ್ಲಿ ಕಡಿಮೆಯಿರುತ್ತದಂತೆ. ವಾರಕ್ಕೆ 51ಗಂಟೆಗಳಿಗಿಂತ ಹೆಚ್ಚಿಗೆ ಕೆಲಸ ಮಾಡುವವರಲ್ಲಿ ಒತ್ತಡವು ಶೇ.29ರಷ್ಟು ಇರುತ್ತದಂತೆ. ಅದಕ್ಕಾಗಿ ಕೆಲಸದ ನಡುವೆ ವಿಶ್ರಾಂತಿಗೆ ಅವಕಾಶ ಮಾಡಿಕೊಳ್ಳಿ. ರಾತ್ರಿ ಮತ್ತು ಸಂಜೆಗಳಲ್ಲಿ ಆರೋಗ್ಯಕಾರಿ ಆಹಾರವನ್ನು ಸೇವಿಸಿ. ಇನ್ನು ಮುಂದೆ ಕಚೇರಿಯಲ್ಲಿ ಕೆಲಸ ಮಾಡುವಾಗ ಮನೆಗೆ ಹೋಗುವ ಸಮಯವಾಗಿದೆ ಎಂದು ನೆನಪಿಸಲು ಕಂಪ್ಯೂಟರಿನಲ್ಲಿ ರಿಮೈಂಡರನ್ನು ಸೆಟ್ ಮಾಡಿಕೊಳ್ಳಿ.

ಗೊರಕೆಗೆ ಪರಿಹಾರ ಹುಡುಕಿ:
ಕಿವಿ ಗಡಚಿಕ್ಕುವ ಗೊರಕೆಯು ಅಬ್ಸ್‌ಟ್ರಕ್ಟಿವ್ ಸ್ಲೀಪ್ ಅಪ್ನಿಯಾದ ಸೂಚನೆಗಳು ಇರಬಹುದು. ಇದಕ್ಕಿಂತ ಹೆಚ್ಚಾಗಿ ಗೊರಕೆಯು ಅತಿಯಾದ ರಕ್ತದೊತ್ತಡದ ಸೂಚನೆಗಳು ಸಹ ಆಗಿರಬಹುದು. ಇದು ಆ ವಯಸ್ಸಿಗೆ ಇರಬೇಕಾದ ರಕ್ತದೊತ್ತಡಕ್ಕಿಂತ ಹೆಚ್ಚಾಗಿರಬಹುದು. ಸಿಗರೇಟ್ ಮತ್ತು ಮದ್ಯಪಾನವನ್ನು ಬಿಡುವುದರ ಮೂಲಕ ಮತ್ತು ತೂಕವನ್ನು ಇಳಿಸಿಕೊಳ್ಳುವ ಮೂಲಕ ರಕ್ತದೊತ್ತಡವನ್ನು ಹದ್ದು ಬಸ್ತಿನಲ್ಲಿಡಬಹುದು.

ಕೆಫೀನ್ ಸೇವನೆಯನ್ನು ಕಡಿಮೆ ಮಾಡಿ:
ಅಮೆರಿಕಾದ ನಾರ್ಥ್ ಕೆರೊಲಿನಾದಲ್ಲಿರುವ ಡ್ಯೂಕ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ಪ್ರಕಾರ ಮೂರು ಕಪ್ ಕಾಫಿಯಲ್ಲಿ 500 ಮಿ.ಗ್ರಾಂ ನಷ್ಟು ಕೆಫಿನ್ ಇರುತ್ತದೆಯಂತೆ. ಇದು ರಕ್ತದೊತ್ತಡವನ್ನು ಮೂರು ಪಾಯಿಂಟ್‍ಗಳಷ್ಟು ಹೆಚ್ಚಿಸುತ್ತದಂತೆ. ಈ ಕೆಫಿನ್‍ನ ಪರಿಣಾಮವು ರಾತ್ರಿ ನಿದ್ದೆ ಮಾಡುವವರೆಗು ಇರುತ್ತದೆಯಂತೆ.



Click it and Unblock the Notifications











