Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ತೊಡೆಗಳ ಕೊಬ್ಬನ್ನು ಕರಗಿಸುವ ಸುಲಭ ಸಲಹೆಗಳು
ಸುಂದರ ಹಾಗೂ ಹೊಳಪಿನ ತೊಡೆಗಳು ಪ್ರತಿಯೊಬ್ಬರ ಕನಸಾಗಿರುತ್ತದೆ. ಅದರಲ್ಲೂ ಮಹಿಳೆಯರು ತುಂಡುಡುಗೆ ಧರಿಸಿದಾಗ ತೊಡೆಗಳು ಆಕರ್ಷಕವಾಗಿರಬೇಕೆಂದು ಬಯಸುತ್ತಾರೆ. ಅದಾಗ್ಯೂ ಬೊಜ್ಜಿನ ದೇಹವಿದ್ದರೆ ತೊಡೆಯ ಬೊಜ್ಜನ್ನು ಕರಗಿಸುವುದು ತುಂಬಾ ಕಠಿಣ ಕೆಲಸ.
ತೊಡೆಗಳ ಕೊಬ್ಬನ್ನು ಕರಗಿಸಬೇಕೆಂದಿದ್ದರೆ ಆಗ ಆಹಾರ ಕ್ರಮ ಮತ್ತು ವ್ಯಾಯಾಮ ಸರಿಯಾದ ರೀತಿಯಲ್ಲಿ ಪಾಲಿಸಿಕೊಂಡು ಹೋಗಬೇಕು. ಕೇವಲ ಆಹಾರ ಕ್ರಮ ಅನುಸರಿಸುವುದರಿಂದ ತೊಡೆಗಳ ಕೊಬ್ಬನ್ನು ಕರಗಿಸಲು ಸಾಧ್ಯವಾಗಲ್ಲ. ನೀವು ಉಪವಾಸ ಮಾಡಿದರೂ ತೊಡೆಗಳಲ್ಲಿರುವ ಕೊಬ್ಬು ಮಾತ್ರ ಹಾಗೆ ಇರುತ್ತದೆ. ನಿಮ್ಮ ಸ್ನಾಯುಗಳನ್ನು ಬಲಿಷ್ಠವಾಗಿ ಮಾಡಬಲ್ಲ ತೊಡೆಗಳ ವ್ಯಾಯಾಮವು ತುಂಬಾ ಅಗತ್ಯವಾಗಿದೆ. ಅದಾಗ್ಯೂ ನಾವು ತುಂಬಾ ಉದಾಸೀನ ಸ್ವಭಾವದವರಾಗಿರುವ ಕಾರಣ ದೀರ್ಘಾವಧಿಗೆ ಯಾವುದೇ ರೀತಿಯ ವ್ಯಾಯಾಮವನ್ನು ಪಾಲಿಸಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ.
ಇದಕ್ಕಾಗಿ ಜೀವಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಆಗ ತೊಡೆಗಳ ಕೊಬ್ಬನ್ನು ವೇಗವಾಗಿ ಕರಗಿಸಬಹುದು. ನಿಮ್ಮ ಆಹಾರ ಕ್ರಮವು ತೊಡೆಗಳ ಕೊಬ್ಬನ್ನು ಕರಗಿಸಲು ತುಂಬಾ ಪ್ರಾಯೋಗಿಕ ಮತ್ತು ಫಲಿತಾಂಶವನ್ನು ನೀಡಬಲ್ಲದು. ತೊಡೆಗಳ ಕೊಬ್ಬನ್ನು ಕರಗಿಸಲು ಸ್ಕಿಪ್ಪಿಂಗ್ ಮತ್ತು ಡ್ಯಾನ್ಸ್ ನಂತಹ ವ್ಯಾಯಾಮಗಳು ಜಿಮ್ ಗೆ ಹೋಗಿ ಮಾಡುವ ವ್ಯಾಯಾಮಕ್ಕಿಂತ ತುಂಬಾ ಯಶಸ್ವಿಯಾಗುವಂತಹದ್ದು. ಇಲ್ಲಿರುವ ಕೆಲವೊಂದು ಕ್ರಮಗಳು ಜೀವನಶೈಲಿ ಬದಲಾವಣೆಯೊಂದಿಗೆ ನಿಮ್ಮ ತೊಡೆಗಳ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ.
ತೊಡೆಯ ಬೊಜ್ಜು ಕರಗಿಸುವ ಯೋಗಾಸನಗಳು

ನಡೆಯಿರಿ
ಇದು ತುಂಬಾ ಬೋರ್ ಅನಿಸುತ್ತದೆ. ಆದರೆ ತೊಡೆಗಳ ಕೊಬ್ಬು ಕರಗಿಸಲು ನಡೆಯುವುದು ಒಳ್ಳೆಯ ವ್ಯಾಯಾಮ. ನಿಮ್ಮ ಮನೆಗೆ ಕಚೇರಿ ಹತ್ತಿರವಿದ್ದರೆ ನಡೆದುಕೊಂಡು ಹೋಗಿ.

ಮೆಟ್ಟಿಲುಗಳನ್ನು ಹತ್ತಿ
ಯಾವಾಗಲು ಲಿಫ್ಟ್ ಹತ್ತುವ ಬದಲು ನೀವು ಮೆಟ್ಟಿಲುಗಳನ್ನು ಹತ್ತಿ. ಮೆಟ್ಟಿಲುಗಳನ್ನು ಹತ್ತುವುದು ತೊಡೆಗಳಿಗೆ ಅತ್ಯುತ್ತಮ ನೈಸರ್ಗಿಕ ವ್ಯಾಯಾಮ.

ಸೈಕ್ಲಿಂಗ್
ತೊಡೆಗಳ ಕೊಬ್ಬು ಕರಗಿಸಲು ಸೈಕ್ಲಿಂಗ್ ಅತ್ಯುತ್ತಮ ವ್ಯಾಯಾಮ. ನೀವು ಸೈಕ್ಲಿಂಗ್ ಮಾಡುತ್ತಿರುವಾಗ ನಿಮ್ಮ ತೊಡೆಗಳ ಸ್ನಾಯುಗಳು ಸತತವಾಗಿ ಕೆಲಸ ಮಾಡುತ್ತಿರುತ್ತದೆ. ಸೈಕ್ಲಿಂಗ್ ಮಾಡುವವರು ಸುಂದರ ತೊಡೆಗಳನ್ನು ಹೊಂದಿರುತ್ತಾರೆ.

ಮಾಂಸಾಹಾರ ತ್ಯಜಿಸಿ
ತೊಡೆಗಳ ಹೆಚ್ಚಿನ ಕೊಬ್ಬು ಸೆಲ್ಯುಲೈಟ್ ಆಗಿಸುತ್ತದೆ. ಸೆಲ್ಯುಲೈಟ್ ಗೆ ಪ್ರಮುಖ ಕಾರಣವೆಂದರೆ ಪ್ರಾಣಿಗಳ ಕೊಬ್ಬು. ತೊಡೆಗಳ ಕೊಬ್ಬನ್ನು ಕರಗಿಸಬೇಕೆಂದರೆ ಆಗ ನೀವು ಕೆಂಪು ಮಾಂಸವನ್ನು ತ್ಯಜಿಸುವುದು ತುಂಬಾ ಮುಖ್ಯ.

ಓಡಿ
ನಿಮ್ಮ ತೊಡೆಗಳ ಕೊಬ್ಬನ್ನು ಕರಗಿಸಲು ಮತ್ತೊಂದು ಒಳ್ಳೆಯ ವಿಧಾನವೆಂದರೆ ರನ್ನಿಂಗ್. ಟ್ರೆಡ್ ಮಿಲ್ ನಲ್ಲಿ ಓಡಿ ಬೋರ್ ಆಗಿದ್ದರೆ ನೀವು ಹೊರಗಡೆ ಓಡಲು ಶುರು ಮಾಡಿ. ವ್ಯಾಯಾಮದೊಂದಿಗೆ ಪ್ರಕೃತಿಯ ಸವಿಯುನ್ನಬಹುದು.

ಯೋಗಾಸನ
ಕೆಲವೊಂದು ನಿರ್ದಿಷ್ಟ ಯೋಗಾಸನಗಳು ನಿಮ್ಮ ತೊಡೆಗಳನ್ನು ಸುಂದರವಾಗಿಸಲು ನೆರವಾಗಲಿದೆ. ಉದಾಹರಣೆಗೆ ಸೂರ್ಯನಮಸ್ಕಾರ ಮತ್ತು ನಾಯಿ ಭಂಗಿಯನ್ನು ಕಳಗಡೆ ಮುಖಮಾಡಿ ಮಾಡುವುದು ತೊಡೆಗಳ ಕೊಬ್ಬನ್ನು ಕರಗಿಸಲು ಪರಿಣಾಮಕಾರಿ ವ್ಯಾಯಾಮ.

ಜಂಕ್ ಫುಡ್ ತ್ಯಜಿಸಿ
ನಾವು ಈಗಾಗಲೇ ಹೇಳಿರುವಂತೆ ತೊಡೆಯ ಕೊಬ್ಬು ಸೆಲ್ಯುಲೈಟ್. ಇದು ಕೆಲವೊಂದು ಟ್ರಾನ್ಸ್ ಫ್ಯಾಟ್ ನಿಂದ ಬರುತ್ತದೆ. ನಿಮ್ಮ ಆಹಾರಕ್ರಮವು ಟ್ರಾನ್ಸ್ ಫ್ಯಾಟ್ ಮುಕ್ತವಾಗಿರಬೇಕು. ಇದನ್ನು ಮಾಡಲು ಅತ್ಯುತ್ತಮ ವಿಧಾನವೆಂದರೆ ಜಂಕ್ ಫುಡ್ ತ್ಯಜಿಸುವುದು.

ಸ್ಕಿಪ್ಪಿಂಗ್
ತೊಡೆಗಳನ್ನು ಆಕರ್ಷಕವಾಗಿ ಕಾಣಿಸುವಂತೆ ಮಾಡಲು ಸ್ಕಿಪ್ಪಿಂಗ್ ಅತ್ಯುತ್ತಮ ವಿಧಾನ. ಸ್ಕಿಪ್ಪಿಂಗ್ ಮಾಡುವಾಗ ನಿಮಗೆ ಬಾಲ್ಯದ ನೆನಪುಗಳು ಬರಬಹುದು. ಇದರಿಂದ ತೊಡೆಯನ್ನು ಸುಂದರವಾಗಿಸುವ ಜತೆಗೆ ನೀವು ಇದನ್ನು ಆನಂದಿಸಬಹುದು.

ಕಚೇರಿಯಲ್ಲಿ ಸುತ್ತಾಡಿ
ದಿನವಿಡೀ ಕಚೇರಿಯಲ್ಲಿ ಒಂದೇ ಕಡೆ ಕುಳಿತಿರುವುದರಿಂದ ನಿಮ್ಮ ತೊಡೆಗಳು ತುಂಬಾ ಆಲಸಿಯಾಗುತ್ತದೆ. ಇದಕ್ಕಾಗಿ ಕೆಲವು ಗಂಟೆಗಳಿಗೊಮ್ಮೆ ಕುರ್ಚಿಯಿಂದ ಎದ್ದು ಸ್ವಲ್ಪ ಸುತ್ತಾಡಿ ಮತ್ತು ಕಾಲುಗಳಿಗೆ ಚಾಲನೆ ನೀಡಿ.

ಹೆಚ್ಚು ನೀರು ಕುಡಿಯಿರಿ
ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ಹೊಟ್ಟೆ ತುಂಬಬಹುದು. ಇದರಿಂದ ನೀವು ಕಡಿಮೆ ತಿನ್ನಬಹುದು ಮತ್ತು ಇದು ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ಕಾಬ್ರೋಹೈಡ್ರೇಟ್ಸ್ ಕಡಿಮೆ ಮಾಡಿ
ವೇಗವಾಗಿ ತೂಕ ಕಳಕೊಳ್ಳಲು ಬಯಸಿದ್ದರೆ ಆಗ ನೀವು ಸೇವಿಸುವ ಕಾಬ್ರೋಹೈಡ್ರೇಟ್ಸ್ ಗಳ ಬಗ್ಗೆ ಗಮನಹರಿಸಬೇಕು. ನಾರಿನಾಂಶವನ್ನು ಹೊಂದಿರುವ ಸಿರಲ್ಸ್ ಮತ್ತು ಕಂದು ಅಕ್ಕಿ ಸೇವಿಸಿ.

ಸಾಲ್ಸಾ ಕಲಿಯಿರಿ
ಕಾಲಿಗೆ ಹೆಚ್ಚು ವ್ಯಾಯಾಮವನ್ನು ನೀಡುವಂತಹ ಡ್ಯಾನ್ಸ್ ಕಲಿಯುವುದು ತುಂಬಾ ಮುಖ್ಯ. ಉದಾಹರಣೆಗೆ ಸಾಲ್ಸಾ ಗೆ ಕಾಲುಗಳ ಚಲನೆ ಹೆಚ್ಚು ಬೇಕಾಗುತ್ತದೆ ಮತ್ತು ಇದರಿಂದ ನೀವು ಸುಂದರ ತೊಡೆಗಳನ್ನು ಪಡೆಯಬಹುದು.

ಬಿಗಿಯಾದ ಸ್ಲಾಕ್ ಧರಿಸಿ
ತೊಡೆಗಳ ಕೊಬ್ಬನ್ನು ತುಂಬಾ ವೇಗವಾಗಿ ಕಡಿಮೆ ಮಾಡಬೇಕೆಂದು ಬಯಸಿದ್ದರೆ ಬಿಗಿಯಾದ ಸ್ಲಾಕ್ ಗಳನ್ನು ಬಳಸಿ, ಇದು ನಿಮ್ಮ ತೊಡೆಗಳನ್ನು ಬಿಗಿಯಾಗಿಟ್ಟುಕೊಳ್ಳುತ್ತದೆ. ನಿಮ್ಮ ತೊಡೆಗಳು ಜೋತು ಬಿದ್ದಂತೆ ಇರುವುದನ್ನು ನೀವು ಬಯಸುತ್ತೀರಾ? ಇಲ್ಲ ತಾನೇ?

ವ್ಯಾಯಾಮಕ್ಕೆ ಸರಿಯಾದ ಶೂಗಳನ್ನು ಬಳಸಿ
ತೊಡೆಗಳ ಕೊಬ್ಬನ್ನು ತುಂಬಾ ವೇಗವಾಗಿ ಕರಗಿಸಬೇಕೆಂದಿದ್ದರೆ ನೀವು ಸ್ನೀಕರ್ ಅಥವಾ ಇತರ ಸ್ಪೋರ್ಟ್ಸ್ ಶೂ ಬಳಸಿ. ಸಾಧ್ಯವಾದರೆ ಕೆಲವು ಸಮಯ ಹೈಹೀಲ್ಡ್ ಬಳಸಬೇಡಿ. ಯಾಕೆಂದರೆ ಹೈ ಹೀಲ್ ಶೂ ಬಳಸುವುದರಿಂದ ನಿಮ್ಮ ತೊಡೆಗಳು ಭಾರವಾಗಿ ಕಾಣುತ್ತದೆ.



Click it and Unblock the Notifications











