Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಹಾರದ ಅಲರ್ಜಿಯ ಕೆಲವೊಂದು ಲಕ್ಷಣಗಳು
ಆಹಾರದ ಅಲರ್ಜಿಯನ್ನು ಆಹಾರ ವಿಷವಾಗುವುದು ಎಂದು ತಪ್ಪಾಗಿ ತಿಳಿದುಕೊಳ್ಳುವ ಕಾರಣ ಅದನ್ನು ಪತ್ತೆಹಚ್ಚುವುದು ಕಠಿಣ. ಆಹಾರ ವಿಷವಾಗುವುದು ಮತ್ತು ಆಹಾರದ ಅಲರ್ಜಿಗೆ ತುಂಬಾ ವ್ಯತ್ಯಾಸವಿದೆ. ಬಾಹ್ಯವಾಗಿ ಕಲುಷಿತಗೊಂಡಿರುವ ಯಾವುದೇ ರೀತಿಯ ಆಹಾರದಿಂದ ಆಹಾರ ವಿಷವಾಗಬಹುದು. ಆದರೆ ಆಹಾರದ ಅಲರ್ಜಿ ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಆಹಾರವೆನ್ನಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮನೆಮದ್ದುಗಳು ಮಾಡಬಹುದಾದ ಜಾದೂ
ನಿಮ್ಮಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯು ಆಹಾರವನ್ನು ಪತ್ತೆ ಹಚ್ಚಲು ವಿಫಲವಾಗಿ ಅದನ್ನು ಅಪಾಯದ ಪಟ್ಟಿಗೆ ಸೇರಿಸಿದಾಗ ಅಲರ್ಜಿಯಾಗಬಹುದು. ಇದರ ಪರಿಣಾಮವಾಗಿ ಆ ಆಹಾರ ಮತ್ತೆ ದೇಹ ಸೇರುವಾಗ ಪ್ರತಿರಕ್ಷಣಾ ವ್ಯವಸ್ಥೆಯು ಎಚ್ಚರಗೊಂಡು ಹೋರಾಡುತ್ತದೆ. ಹಸುವಿನ ಹಾಲು, ಮೊಟ್ಟೆ, ಮೀನು, ನೆಲಗಡಲೆ, ಮರದ ಬೀಜಗಳು, ಚಿಪ್ಪು, ಸೋಯಾ ಮತ್ತು ಗೋಧಿ ಸಾಮಾನ್ಯವಾಗಿ ಅಲರ್ಜಿ ಉಂಟುಮಾಡುವಂತಹ ಕೆಲವೊಂದು ಆಹಾರಗಳು. ಒಬ್ಬ ವ್ಯಕ್ತಿಗೆ ಒಂದು ಅಥವಾ ಅದಕ್ಕಿಂತ ಹೆಚ್ಚು ಆಹಾರಗಳು ಅಲರ್ಜಿ ಉಂಟುಮಾಡಬಹುದು. ಕೆಲವೊಂದು ಸಂದರ್ಭದಲ್ಲಿ ಇದು ಮಾರಣಾಂತಿಕವಾಗುವ ಕಾರಣ ಇದರ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುವುದು ಅತ್ಯಗತ್ಯ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಊಟದ ನಂತರದ ಮಾಡಬಾರದ ಅಪಾಯಕಾರಿ ಕ್ರಿಯೆಗಳು!
ಆಹಾರದ ಅಲರ್ಜಿಯ ಕೆಲವೊಂದು ಚಿಹ್ನೆಗಳೆಂದರೆ ತುರಿಕೆ, ಬಾಯಿ, ನಾಲಗೆ ಅಥವಾ ತುಟಿಗಳು ಊದಿಕೊಳ್ಳುವುದು. ಕೆಲವೊಂದು ಸಂದರ್ಭಗಳಲ್ಲಿ ಆಹಾರದ ಅಲರ್ಜಿ ಚರ್ಮದ ಸಮಸ್ಯೆಗಳಾದ ಇಸಬು, ಬಾವು ಮತ್ತು ಕೆಂಪಾಗುವಿಕೆಗೆ ಕಾರಣವಾಗಬಹುದು. ಜೀರ್ಣಾಂಗವ್ಯೂಹದಲ್ಲಿ ಲಕ್ಷಣಗಳಾದ ಹೊಟ್ಟೆ ನೋವು, ವಾಕರಿಕೆ, ವಾಂತಿ, ಭೇದಿಯ ಸಮಸ್ಯೆಗಳು ಆಹಾರದ ಅಲರ್ಜಿಯಿಂದ ಉಂಟಾಗಬಹುದು. ಕೆಲವೊಂದು ಆಹಾರದ ಅಲರ್ಜಿಗಳು ಶ್ವಾಸಕೋಶದ ಲಕ್ಷಣಗಳಾದ ಮೂಗುಕಟ್ಟುವುದು, ಕೆಮ್ಮು, ಸೀನು, ಬಿಕ್ಕಳಿಕೆ ಮತ್ತು ಉಸಿರಾಟದ ಸಮಸ್ಯೆಯಾಗಬಹುದು.
ಕೆಲವು ಮಂದಿಗೆ ಹೃದಯರಕ್ತನಾಳದ ಲಕ್ಷಣಗಳು ಆಹಾರದ ಅಲರ್ಜಿಯಿಂದ ಕಾಣಿಸಬಹುದು. ಅವುಗಳೆಂದರೆ ರಕ್ತದೊತ್ತಡದ ಕುಸಿತ, ಲಘುವಾದ ತಲೆನೋವು, ಮೂರ್ಛೆ ಬೀಳುವುದು ಇತ್ಯಾದಿ. ನೀವು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕೆಲವೊಂದು ಸಂದರ್ಭಗಳಲ್ಲಿ ವೈದ್ಯಕೀಯ ಸಲಹೆ ಪಡೆಯುವುದು ತುಂಬಾ ಮುಖ್ಯ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಕಾರಿ ಬೆಳವಣಿಗೆಗೆ ನೀರಿನ ಅವಶ್ಯಕತೆಗಳೇನು?

1. ಲ್ಯಾಕ್ಟೋಸ್ ಅಸಹಿಷ್ಣುತೆ
ಲ್ಯಾಕ್ಟೋಸ್ ಅಸಹಿಷ್ಣುತೆ ಎನ್ನುವುದು ಅತ್ಯಂತ ಸಾಮಾನ್ಯ ಅಲರ್ಜಿ ಸಮಸ್ಯೆಯಾಗಿದ್ದು, ಇದನ್ನು ಡೈರಿ ಅಸಹಿಷ್ಣುತೆ ಎಂದೂ ಕರೆಯಲಾಗುತ್ತದೆ. ಲ್ಯಾಕ್ಟೋಸ್ ಅಂಶವನ್ನು ದೇಹವು ಜೀರ್ಣಿಸಲು ವಿಫಲವಾದಾಗ ಈ ಸಮಸ್ಯೆ ಕಾಣಿಸುತ್ತದೆ. ಲ್ಯಾಕ್ಟೋಸ್ ಅಂಶವು ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು ಹಾಗೂ ಬೆಣ್ಣೆಯಲ್ಲಿರುತ್ತದೆ. ಇದರ ಅಲರ್ಜಿಯ ಮುಖ್ಯ ಲಕ್ಷಣವೆಂದರೆ ಭೇದಿ ಮತ್ತು ಹೊಟ್ಟೆನೋವು. ಹೆಚ್ಚಿನ ಸಂದರ್ಭದಲ್ಲಿ ನಿಮ್ಮ ದೇಹದಲ್ಲಿನ ಚಿಹ್ನೆಗಳು ಮತ್ತು ವೈದ್ಯಕೀಯ ಇತಿಹಾಸವನ್ನು ಪರಿಗಣಿಸಿ ಲ್ಯಾಕ್ಟೋಸ್ ಅಸಹಿಷ್ಣುತೆಯನ್ನು ವೈದ್ಯರು ಗುರುತಿಸಬಹುದು.

2. ಗ್ಯಾಸ್, ಸೆಳೆತ ಅಥವಾ ಉಬ್ಬರ
ಅಲರ್ಜಿ ಇರುವ ಆಹಾರವು ಜೀರ್ಣಾಂಗ ವ್ಯವಸ್ಥೆಗೆ ತಲುಪಿದಾಗ ನಿಮಗೆ ಗ್ಯಾಸ್, ಸೆಳೆತ ಅಥವಾ ಉಬ್ಬರದ ಅನುಭವವಾಗುತ್ತದೆ. ನೆಲಗಡಲೆಯಂತಹ ಆಹಾರಗಳಿಗೆ ಪ್ರತಿಕ್ರಿಯೆಯ ಪರಿಣಾಮ ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗಬಹುದು. ಗ್ಯಾಸ್ ತುಂಬುವುದು ಸಾಮಾನ್ಯವಾದರೂ ಹಠಾತ್ ಆಗಿ ಗ್ಯಾಸ್ ತುಂಬಿಕೊಳ್ಳುವುದು ಮತ್ತು ಹೊಟ್ಟೆ ಉಬ್ಬರದಿಂದ ಅತಿಯಾದ ಗ್ಯಾಸ್ ಬಿಡುಗಡೆ ಇದರ ಲಕ್ಷಣಗಳು.

3. ವಾಕರಿಕೆ, ವಾಂತಿ, ಭೇದಿ
ಕೆಲವೊಂದು ಸಲ ನಿಮ್ಮ ಹೊಟ್ಟೆಯಲ್ಲಿ ಅಲರ್ಜಿ ಮೂಡಿಸುವ ಆಹಾರಗಳು ವಾಕರಿಕೆ, ವಾಂತಿ, ಭೇದಿ ಇತ್ಯಾದಿ ಲಕ್ಷಣಗಳನ್ನು ತೋರಿಸಬಹುದು. ಇದರಿಂದಾಗಿ ಮಧ್ಯಮದಿಂದ ಹೆಚ್ಚಿನ ಮಟ್ಟದ ಶಕ್ತಿ ಮತ್ತು ನೀರಿನಾಂಶ ಕಳಕೊಳ್ಳಬಹುದು. ಇದು ಅಜೀರ್ಣ ಅಥವಾ ನೀವು ಸೇವಿಸಿದ ಆಹಾರದ ಸಂಕೀರ್ಣ ಪ್ರೋಟಿನ್ ಬಿಡುಗಡೆಗೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಅಸಮರ್ಥವಾಗಿರುವ ಕಾರಣ ಹೀಗೆ ಆಗುತ್ತದೆ.

4. ಚರ್ಮದ ಅಲರ್ಜಿ
ಆಹಾರದ ಅಲರ್ಜಿಯ ಎಲ್ಲಾ ಲಕ್ಷಣಗಳು ಕೆಲವೇ ನಿಮಿಷದಿಂದ ಒಂದು ಗಂಟೆಯೊಳಗೆ ತಿಳಿದುಬರುತ್ತದೆ. ಇದರಿಂದಾಗಿ ನೀವು ಆಹಾರ ತಿಂದ ಸಮಯವನ್ನು ಲೆಕ್ಕಹಾಕಿ ಚರ್ಮದಲ್ಲಿ ಉಂಟಾಗುವ ವ್ಯತ್ಯಾಸವನ್ನು ಗಮನಿಸಿ ಇದು ಅಲರ್ಜಿಯಾ ಎಂದು ತಿಳಿಯಬಹುದು. ಜೀರ್ಣಾಂಗ ವ್ಯವಸ್ಥೆಯಲ್ಲಿ ಅಲರ್ಜಿಕಾರಕ ಆಹಾರಗಳು ನಿಲ್ಲಲು ವಿಫಲವಾದಾಗ ಅಲರ್ಜಿಕಾರಕಗಳು ಹೀರಿಕೊಳ್ಳುತ್ತದೆ ಮತ್ತು ರಕ್ತನಾಳಗಳನ್ನು ಪ್ರವೇಶಿಸುತ್ತದೆ. ಇದು ಚರ್ಮವನ್ನು ತಲುಪಿದಾದ ಇಸುಬಿನಿಂದಾಗ ತುರಿಕೆ ಉಂಟಾಗಬಹುದು.

5. ರಕ್ತ ಕಶ್ಮಲೀಕರಣ
ಒಂದು ಸಲ ಅಲರ್ಜಿಕಾರಕಗಳು ಹೀರಿಕೊಂಡು ರಕ್ತನಾಳಗಳನ್ನು ತಲುಪಿದ ಬಳಿಕ ಅದು ಯಾವ ರೀತಿ ಮತ್ತು ಎಷ್ಟು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುತ್ತದೆ ಎಂದು ಹೇಳುವುದು ಕಷ್ಟ. ಅಲರ್ಜಿಕಾರಕಗಳು ರಕ್ತನಾಳಗಳಲ್ಲಿ ಸಂಚಾರ ಮಾಡಿದಾಗ ತಲೆಸುತ್ತು, ನಿಶ್ಯಕ್ತಿ, ಹೃದಯ ಬಡಿತ ಹೆಚ್ಚಾಗುವುದು ಮತ್ತು ತೀವ್ರ ಸಂವೇದನೆ ಉಂಟಾಗಬಹುದು. ತೀವ್ರ ಸಂವೇದನೆಯಿಂದ ರಕ್ತದೊತ್ತಡ ಕಡಿಮೆಯಾಗಬಹುದು. ತೀವ್ರ ಸಂವೇದನೆಯ ಪ್ರತಿಕ್ರಿಯೆ ನಿಧಾನವಾಗಿ ಬಾಯಿ ಮತ್ತು ಗಂಟಲಿನಲ್ಲಿ ಜುಮ್ಮೆನ್ನುವುದು ಅಥವಾ ಹೊಟ್ಟೆಯಲ್ಲಿ ಅಸಹಜ ಕ್ರಿಯೆ ಉಂಟಾಗುವುದರೊಂದಿಗೆ ತೀವ್ರ ಸ್ವರೂಪಕ್ಕೆ ತಲುಪಬಹುದು.



Click it and Unblock the Notifications