Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ನಿಜವಾಗಿಯೂ ಶುಂಠಿ ಚಹಾ ದೇಹಕ್ಕೆ ಮಾರಕವೇ?
ಶುಂಠಿ ಚಹಾ ಎಂಬುದು ಮಸಾಲೆಗಳಿಂದ ಕೂಡಿದ ಒಂದು ಸಾಂಪ್ರದಾಯಿಕ ಪಾನೀಯವಾಗಿದೆ. ಇದು ಏಶಿಯಾ ಮತ್ತು ಯೂರೋಪ್ ಖಂಡಗಳ ಜೊತೆಗೆ ಇಡೀ ಜಗತ್ತಿನಲ್ಲೆ ಜನಪ್ರಿಯವಾಗಿದೆ. ಶುಂಠಿಯನ್ನು ಪ್ರಾಚೀನ ಆಯುರ್ವೇದದಲ್ಲಿ ಮತ್ತು 3000 ವರ್ಷಗಳ ಹಿಂದೆಯೇ ಚೀನಿಯರ ಔಷಧಗಳಲ್ಲಿ ಬಳಸಲಾಗುತ್ತಿತ್ತು. ಅಜೀರ್ಣ, ಬಾವು, ಮೈಗ್ರೇನ್, ನಾಸಿಯಾ (ವಾಂತಿ), ಡಯೆರ್ರಿಯಾ ಮತ್ತು ಇನ್ನಿತರ ಕಾಯಿಲೆಗಳಿಗೆ ಶುಂಠಿಯನ್ನು ಮನೆಮದ್ದಾಗಿ ಬಳಸಲಾಗುತ್ತದೆ. ಶುಂಠಿ ಚಹಾವನ್ನು ಚಹಾ ಎಲೆಗಳ ಜೊತೆಗೆ ಅಥವಾ ಇಲ್ಲದೆ ತಯಾರಿಸಬಹುದು.
ಚೀನಿಯರ ಇದಕ್ಕೆ ಬ್ರೌನ್ ಶುಗರ್ ಹಾಕಿಕೊಂಡು ಕುಡಿದರೆ, ಕೊರಿಯನ್ನರು ಇದಕ್ಕೆ ಜೇನು ತುಪ್ಪವನ್ನು ಹಾಕಿಕೊಂಡು ಕುಡಿಯುತ್ತಾರೆ. ಜೇನು ತುಪ್ಪದ ಜೊತೆಗೆ ನಿಂಬೆ ಅಥವಾ ಪುದಿನಾವನ್ನು ಬೆರೆಸಿ ಈ ಟೀಯನ್ನು ಮಾಡಿದರೆ, ಇದರ ರುಚಿ ತುಂಬಾ ಮಧುರವಾಗಿರುತ್ತದೆ. ಶುಂಠಿಯಲ್ಲಿ ಪೊಟಾಶಿಯಂ, ಮ್ಯೆಗ್ನೀಶಿಯಂ, ವಿಟಮಿನ್ ಬಿ6 ಮತ್ತು ಸಿ ಹಾಗು ಜಿಂಜೆರೊಲ್, ಝಿಂಜೆರೋನ್, ಶೋಗವ್ಲ್, ಫರ್ನೆಸೀನ್ ಮತ್ತು ಬೀಟಾ-ಫೆಲ್ಲಾಡ್ರೀನ್, ಸಿನಿಯೊಲ್ ಹಾಗು ಸಿಟ್ರಾಲ್‍ನಂತಹ ಉಪಯುಕ್ತವಾದ ಎಣ್ಣೆಗಳು ಇದರಲ್ಲಿ ಲಭ್ಯವಿರುತ್ತವೆ. ಶುಂಠಿ ಚಹಾದ ರುಚಿ ಸವಿದಿದ್ದೀರಾ...?
ಇದರ ಜೊತೆಗೆ ಶುಂಠಿ ಚಹಾವನ್ನು ಕುಡಿಯುವುದರಿಂದ ಹಲವಾರು ಉಪಯೋಗಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ. ಆದರೆ ಯಾವುದೇ ಇರಲಿ "ಅತಿಯಾದರೆ ಅಮೃತವು ಸಹ ವಿಷವಾಗುತ್ತದೆ" ಎಂಬ ಮಾತಿನಂತೆ, ಶುಂಠಿ ಚಹಾ ಸಹ ಇದಕ್ಕೆ ಹೊರತಲ್ಲ! ಇತರ ಗಿಡ ಮೂಲಿಕೆಗಳಂತೆ ಶುಂಠಿ ಚಹಾ ಸಹ ತನ್ನದೇ ಆದ ಅಡ್ಡ ಪರಿಣಾಮಗಳನ್ನು ಹೊಂದಿದೆ. ಶುಂಠಿ ಚಹಾವನ್ನು ಹೆಚ್ಚಾಗಿ ಸೇವಿಸುವುದರಿಂದ ಕೆಲವರಲ್ಲಿ ಜಠರದಲ್ಲಿ ಸಮಸ್ಯೆ, ಎದೆ ಉರಿ, ಬಾಯಿ ತುರಿಕೆ, ಇತ್ಯಾದಿ ಸಮಸ್ಯೆಗಳು ಕಂಡು ಬರುತ್ತವೆ. ಆದರೆ ಶುಂಠಿಯನ್ನು ಮಾತ್ರೆಯ ರೂಪದಲ್ಲಿ ತೆಗೆದುಕೊಳ್ಳುವುದರಿಂದ ಈ ಅಡ್ಡ ಪರಿಣಾಮಗಳಿಂದ ನೀವು ತಪ್ಪಿಸಿಕೊಳ್ಳಬಹುದು. ಬನ್ನಿ ಹಾಗಾದರೆ ಈ ಶುಂಠಿ ಟೀಯಿಂದ ನಿಮ್ಮ ಮೇಲೆ ಆಗುವ ಅಡ್ಡ ಪರಿಣಾಮಗಳಿಂದ ನೀವು ತಪ್ಪಿಸಿಕೊಳ್ಳಬಹುದು. ಹೊಟ್ಟೆ ಉಬ್ಬರಕ್ಕೆ ತಕ್ಷಣದ ಪರಿಹಾರ
ಮನೆಯಲ್ಲಿ ಶುಂಠಿ ಟೀಯನ್ನು ತಯಾರಿಸಿಕೊಳ್ಳುವುದು ಸುಲಭ. ಶುಂಠಿಯ ಬೇರನ್ನು ಚೆನ್ನಾಗಿ ತೊಳೆಯಿರಿ ಮತ್ತು ಒಣಗಿಸಿ. ಇದನ್ನು ಬೇಕಾದರೆ ಸಿಪ್ಪೆ ಸುಲಿಯಬಹುದು ಅಥವಾ ತುಂಡುಗಳಾಗಿ ಕತ್ತರಿಸಿ ಬಳಸಬಹುದು. 1 1/2 ಕಪ್ ನೀರನ್ನು ಕಾಯಿಸಿ, ಅದಕ್ಕೆ ಈ ಶುಂಠಿಯ ತುಂಡುಗಳನ್ನು ಹಾಕಿ. ಹೀಗೆ ಮಾಡುವಾಗ ಒಲೆಯ ಉರಿಯನ್ನು ಸಿಮ್‍ನಲ್ಲಿಡಿ. ಪಾತ್ರೆಯನ್ನು ಮುಚ್ಚಿ 5-15 ನಿಮಿಷಗಳ ಕಾಲ ಬಿಡಿ. ಟೀಯ ರುಚಿಯನ್ನು ಹೆಚ್ಚಿಸಲು ಸಕ್ಕರೆ, ನಿಂಬೆ, ಹಾಲು, ಟೀ ಸೊಪ್ಪು, ಜೇನು ತುಪ್ಪ, ಕ್ರೀಮ್ ಅಥವಾ ನಿಮಗೆ ಇಷ್ಟವಾಗುವಂತಹ ಯಾವುದನ್ನು ಬೇಕಾದರು ಇದಕ್ಕೆ ಹಾಕಿ. ಚಹಾವನ್ನು ಶೋಧಿಸಿ ಗ್ಲಾಸಿಗೆ ಹಾಕಿಕೊಂಡು ಬಿಸಿಯಿರುವಾಗಲೇ ಸೇವಿಸಿ!.

ಹೆಚ್ಚಾಗಿ ಸೇವಿಸುವುದು
ಅಮೃತವನ್ನೇ ಆಗಲಿ ಅತಿಯಾಗಿ ಸೇವಿಸಿದರೆ ಅದು ವಿಷವಾಗುತ್ತದೆ. ಅದಕ್ಕೆ ಶುಂಠಿಯು ಹೊರತಲ್ಲ. ಆದ್ದರಿಂದ ಶುಂಠಿ ಚಹಾವನ್ನು ಹಿತ ಮಿತವಾಗಿ ಸೇವಿಸಿ, ಇದು ನಿಮ್ಮ ಅಗತ್ಯಕ್ಕೆ ತಕ್ಕಷ್ಟಿರಬೇಕೆ ಹೊರತು ಅದನ್ನು ಮೀರಬಾರದು. ಶುಂಠಿ ಟೀಯನ್ನು ಅಧಿಕವಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯೂಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಜಠರದಲ್ಲಿ ಸಮಸ್ಯೆ, ಎದೆ ಉರಿ, ಬಾಯಿ ತುರಿಕೆ ಕಂಡುಬರುತ್ತವೆ. ಇದನ್ನು ಅಧಿಕವಾಗಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ಆಸಿಡ್ ಹೆಚ್ಚಾಗುತ್ತವೆ. ಇದರಿಂದ ಆಸಿಡಿಟಿ ನಮ್ಮನ್ನು ಕಾಡುತ್ತದೆ. ಇದರ ಜೊತೆಗೆ ಮಧುಮೇಹದಿಂದ ಬಳಲುತ್ತಿರುವವರು ಅಧಿಕ ಪ್ರಮಾಣದ ಶುಂಠಿಯನ್ನು ಯಾವುದೇ ರೂಪದಲ್ಲಿ ಸೇವಿಸಲು ಹೋಗಬಾರದು. ಇದು ನಮ್ಮ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಹೈಪೊಗ್ಲಿಸೆಮಿಯಾವನ್ನುಂಟು ಮಾಡುತ್ತದೆ.

ಬ್ಲಡ್ ಥಿನ್ನರ್‌ಗಳು ಮತ್ತು ಡಿಸಾರ್ಡರ್‌ಗಳು
ಶುಂಠಿ ಚಹಾ ಜೊತೆಗೆ ಯಾವುದೇ ರೀತಿಯ ಬ್ಲಡ್ ಥಿನ್ನರ್ ಅಂದರೆ ರಕ್ತವನ್ನು ತೆಳ್ಳಗೆ ಮಾಡುವ ಔಷಧಿಗಳನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಅಸ್ಪಿರಿನ್ ಅಥವಾ ಇಬುರುಫೆನ್‍ನಂತಹ ಅನಲ್ಜೆಸಿಕ್‍ಗಳು ಈ ಬಗೆಯ ಔಷಧಿಗಳ ಪಟ್ಟಿಗೆ ಸೇರುತ್ತವೆ. ಅಧಿಕ ರಕ್ತದೊತ್ತಡದಿಂದ ಬಳಲುವ ರೋಗಿಗಳು ಶುಂಠಿಯನ್ನು ಯಾವುದೇ ರೂಪದಲ್ಲಿ ಸೇವಿಸುವುದು ಒಳ್ಳೆಯದಲ್ಲ. ಶುಂಠಿಯು ರಕ್ತವನ್ನು ಗಡ್ಡೆ ಕಟ್ಟುವಂತೆ ಮಾಡುವ ಪ್ಲೇಟ್‍ಲೆಟ್ ಅಂದರೆ ಕಿರುತಟ್ಟೆಗಳ ಕಾರ್ಯವನ್ನು ಅಡಚಣೆ ಮಾಡುತ್ತದೆ. ಹಿಮೊಫಿಲ್ಲಾ ಮುಂತಾದ ರಕ್ತ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಈ ಶುಂಠಿಯನ್ನು ಸೇವಿಸುವುದರಿಂದ ಅವರ ಆರೋಗ್ಯ ಬಿಗಡಾಯಿಸುತ್ತದೆ. ಆದ್ದರಿಂದ ಶುಂಠಿ ಚಹಾವನ್ನು ಸೇವಿಸುವ ಮೊದಲು ವೈದ್ಯರ ಬಳಿ ಸಲಹೆ ತೆಗೆದುಕೊಳ್ಳುವುದು ಉತ್ತಮ.

ನಿದ್ದೆಯ ಸಮಸ್ಯೆಗಳು
ಶುಂಠಿ ಚಹಾವನ್ನು ಸೇವಿಸುವುದರಿಂದ ವಿಶ್ರಾಂತಿ ಹೀನತೆ ಮತ್ತು ನಿದ್ರಾಹೀನತೆ ಸಮಸ್ಯೆ ಕಂಡು ಬರುತ್ತದೆ. ನಿದ್ದೆಗೆ ಮೊದಲು ಶುಂಠಿ ಚಹಾ ಸೇವಿಸಲೇ ಬೇಡಿ, ಏಕೆಂದರೆ ಇದು ನಿಮ್ಮ ನಿದ್ದೆಯನ್ನು "ಕೊಂದು" ಹಾಕುತ್ತದೆ. ಇದನ್ನು ಸೇವಿಸಿ ನಿದ್ರಿಸಲು ಹೋದರೆ ಬಹಳ ಹೊತ್ತು ನಿದ್ದೆ ಬರದೆ ಹೊರಳಾಡಬೇಕಾಗುತ್ತದೆ. ಅದರ ಜೊತೆಗೆ ನಿಮಗೆ ಎದೆಯುರಿ ಸಹ ಬರಬಹುದು. ಇದರಿಂದ ಜೀವಕ್ಕೆ ಆಪತ್ತು.

ಅನೆಸ್ತೇಷಿಯಾ
ಸುಮಾರು ದಿನಗಳಿಂದ ಶುಂಠಿ ಚಹಾವನ್ನು ಸೇವಿಸುತ್ತಿರುವವರು ಯಾವುದಾದರು ಒಂದು ಶಸ್ತ್ರ ಚಿಕಿತ್ಸೆಗೆ ಒಳಗಾದರೆ ಇದರ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಶುಂಠಿ ಚಹಾವನ್ನು ಸೇವಿಸುವರ ದೇಹವು ಅನೆಸ್ತೇಷಿಯಾದ ಜೊತೆಗೆ ವಿಚಿತ್ರವಾಗಿ ಪ್ರತಿಕ್ರಿಯಿಸುತ್ತದೆ. ಇದರಿಂದಾಗಿ ರೋಗಿಯು ಶಸ್ತ್ರ ಚಿಕಿತ್ಸೆಯಲ್ಲಿ ವಿಪರೀತ ನೋವನ್ನು ಅನುಭವಿಸುತ್ತಾನೆ. ಜೊತೆಗೆ ಗಾಯಗಳು, ಫೋಟೊಸೆನ್ಸಿಟಿವ್ ಪ್ರತಿಕ್ರಿಯೆಗಳು, ರಕ್ತಸ್ರಾವ ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ. ಇದಕ್ಕೆ ಕಾರಣ, ಆಂಟಿಕೊವಾಗುಲೆಂಟ್‍ಗಳ ನಡುವಿನ ಮುಖಾಮುಖಿಯೇ ಕಾರಣವಾಗುತ್ತದೆ. ಆದ್ದರಿಂದ ಬಹುತೇಕ ವೈದ್ಯರು ಶಸ್ತ್ರಚಿಕಿತ್ಸೆಗಿಂತ ಒಂದು ವಾರ ಮೊದಲು ಶುಂಠಿ ಟೀಯನ್ನು ಸೇವಿಸದಿರುವಂತೆ ಸಲಹೆ ಮಾಡುತ್ತಾರೆ.

ಪಿತ್ತಕೋಶದ ಕಲ್ಲುಗಳು
ಪಿತ್ತಕೋಶದಲ್ಲಿ ಕಲ್ಲು ಇರುವ ರೋಗಿಗಳು ವೈದ್ಯರನ್ನು ಸಂಪರ್ಕಿಸಿದ ನಂತರ ಮಾತ್ರ ಶುಂಠಿ ಟೀಯನ್ನು ಕುಡಿಯಬೇಕಾಗುತ್ತದೆ. ಅದರಲ್ಲೂ ಪೋಷಕಾಂಶ ಮತ್ತು ಆಹಾರಕ್ಕೆ ಸಂಬಂಧಿಸಿದ ವೈದ್ಯರಾದರೆ ಇನ್ನೂ ಉತ್ತಮ. ಏಕೆಂದರೆ ಇದರಿಂದ ನಿಶ್ಚಿತವಾಗಿ ಯಾವುದಾದರು ಅಡ್ಡ ಪರಿಣಾಮ ಉಂಟಾಗುವುದು ನಿಶ್ಚಿತ. ಏಕೆಂದರೆ ಪಿತ್ತಕೋಶದಲ್ಲಿ ಕಲ್ಲು ಇರುವವರಲ್ಲಿ ಪಿತ್ತ ರಸ ಉತ್ಪತ್ತಿಯಾದಾಗ ವಿಪರೀತವಾದ ನೋವು ಕಂಡು ಬರುತ್ತದೆ. ಶುಂಠಿಯು ಪಿತ್ತರಸ ಉತ್ಪಾದನೆಯನ್ನು ಹೆಚ್ಚು ಮಾಡುತ್ತದೆ, ಹೀಗಾಗಿ ಅವರ ಸ್ಥಿತಿ ಮತ್ತಷ್ಟು ಶೋಚನೀಯವಾಗುತ್ತದೆ.

ಹೊಟ್ಟೆ ನೋವು
ಹೊಟ್ಟೆ ನೋವು ಅಥವಾ ಹೊಟ್ಟೆ ತೊಳೆಸಿದಂತಾಗುವುದು ಶುಂಠಿ ಟೀಯ ಮತ್ತೊಂದು ಅಡ್ಡ ಪರಿಣಾಮವಾಗಿರುತ್ತದೆ. ನಾಸಿಯಾ ಇರುವವರು ಅದನ್ನು ಹೋಗಲಾಡಿಸಿಕೊಳ್ಳಲು ಶುಂಠಿ ಟೀಯ ಮೊರೆ ಹೋಗುತ್ತಾರೆ. ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಗ್ಯಾಸ್ಟ್ರೊಇಂಟೆಸ್ಟಿನಲ್ ಅಪ್‍ಸೆಟ್ ಉಂಟಾಗುತ್ತದೆ ಎಂದು ಮೇರಿಲ್ಯಾಂಡ್ ಸೆಂಟರ್ ವಿಶ್ವವಿದ್ಯಾನಿಲಯದವರು ಹೇಳಿದ್ದಾರೆ. ಶುಂಠಿ ಟೀಯ ಡೋಸ್ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಹಾಗಾಗಿ ಎಷ್ಟು ಸೇವಿಸಬೇಕೆಂಬ ಮಾನದಂಡದ ಕೊರತೆಯು ನಮ್ಮನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತದೆ. ಗ್ಯಾಸ್ಟ್ರೊಇಂಟೆಸ್ಟಿನಲ್ ಅಪ್‍ಸೆಟ್ ಅಂದರೆ ಹೊಟ್ಟೆ ತೊಳೆಸುವ ಸಮಸ್ಯೆ ಹೀಗೆ ಶುರುವಾಗುತ್ತದೆ.

ಗರ್ಭಿಣಿಯರು
ಗರ್ಭಿಣಿಯರು ಶುಂಠಿಯನ್ನು ಬಳಸುವುದು ಒಂದು ವಿವಾದಾತ್ಮಕ ವಿಷಯವಾಗಿದೆ. ಶುಂಠಿ ಟೀಯನ್ನು ಗರ್ಭಿಣಿಯರಿಗೆ ನೀಡುವಂತೆ ಯಾರು ಸಲಹೆ ಮಾಡುವುದಿಲ್ಲ. ಕಾರಣ, ಇದು ಗರ್ಭದಲ್ಲಿರುವ ಮಗುವಿಗೆ ವಿಷವಾಗಿ ಪರಿಣಮಿಸುತ್ತದೆಯಂತೆ. ಆದರೆ ಕೆಲವು ವೈದ್ಯರು ಮಾರ್ನಿಂಗ್ ಸಿಕ್‍ನೆಸ್‍ಗೆ ಶುಂಠಿ ರಾಮ ಬಾಣ ಎಂದು ಹೇಳುತ್ತಾರೆ. ಆದರೆ ಸಾಂಪ್ರದಾಯಿಕ ಚೀನಿ ಆಯುರ್ವೇದ ಪಂಡಿತರ ಪ್ರಕಾರ ಶುಂಠಿ ಗರ್ಭಿಣಿಯರಿಗೆ ಮತ್ತು ಅವರ ಗರ್ಭದಲ್ಲಿರುವ ಮಗುವಿಗೆ ಮಾರಕವಂತೆ. ಇದು ಗರ್ಭಪಾತಕ್ಕು ಸಹ ಎಡೆ ಮಾಡಿಕೊಡುತ್ತದೆ ಎಂಬ ಮಾತು ಅವರಲ್ಲಿ ಚಾಲ್ತಿಯಲ್ಲಿದೆ. ಆದ್ದರಿಂದ ನಿಮ್ಮ ಒಳ್ಳೆಯದಕ್ಕಾಗಿ ಗರ್ಭಿಣಿಯರಿಗೆ ಶುಂಠಿ ಟೀಯನ್ನು ನೀಡಬೇಡಿ. ನೀವು ಗರ್ಭಿಣಿಯಾಗಿದ್ದಲ್ಲಿ ಶುಂಠಿ ಟೀಯನ್ನು ವೈದ್ಯರ ಅನುಮತಿಯಿಲ್ಲದೆ ಸೇವಿಸಬೇಡಿ.



Click it and Unblock the Notifications










