Latest Updates
-
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ!
ಕಂಪ್ಯೂಟರ್‌ನಲ್ಲಿ ಕೆಲಸಮಾಡುವಾಗ ಹೇಗೆ ಆಸೀನರಾಗಬೇಕು?
ಇಂದಿನ ಆಧುನಿಕ ಯುಗದಲ್ಲಿ ಎಲ್ಲರೂ ಕಂಪ್ಯೂಟರಿನ ಗುಲಾಮರಾಗಿರುವುದು ಗೊತ್ತಿರುವ ವಿಚಾರವೇ. ಸದಾ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದು ಸ್ವಲ್ಪ ಆಯಾಸದ ಕೆಲಸವೇ. ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವಾಗ ನೀವು ಸರಿಯಾದ ಭಂಗಿಯಲ್ಲಿ ಕೂರಲಾರದೆ ಹೋದರೆ ಮುಂದೆ ಬೆನ್ನು ನೋವು, ಮೊಣಕಾಲು ನೋವು ಮತ್ತು ಕುತ್ತಿಗೆ ನೋವಿನಿಂದ ನರಳುವುದು ನಿಶ್ಚಿತ.
ಇದರ ಜೊತೆಗೆ ಕೈ,ಬೆರಳು ಮತ್ತು ಮೊಣಕೈಗಳಲ್ಲಿ ಜುಮ್ಮೆನ್ನುವಂತಹ, ಕಿರಿಕಿರಿಯನ್ನುಂಟು ಮಾಡುವ ನೋವು ಸಹ ಜೊತೆಗೂಡಬಹುದು.ಆದ್ದರಿಂದ ನೀವು ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳುವಾಗ ಒಂದು ಒಳ್ಳೆಯ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡುವುದು ಒಳ್ಳೆಯದು.

ಒಳ್ಳೆಯ ಭಂಗಿಯು ದೇಹದ ಅವಯವಗಳನ್ನು ಸುಗಮವಾಗಿ ಕಾರ್ಯಚರಿಸುವಂತೆ ಮಾಡುತ್ತದೆ. ಆದ್ದರಿಂದ ನಿಲ್ಲುವಾಗ, ಕುಳಿತುಕೊಳ್ಳುವಾಗ, ನಡೆಯುವಾಗ ಮತ್ತು ಮಲಗುವಾಗ ಒಳ್ಳೆಯ ಭಂಗಿಗಳನ್ನು ಬಳಸಿಕೊಳ್ಳುವುದನ್ನು ರೂಢಿಸಿಕೊಳ್ಳಿ. ನೀವು ನಿಮ್ಮ ಕೆಲಸ ಮಾಡುವಾಗ ಸ್ನಾಯುಗಳಿಗೆ ಮತ್ತು ಮಣಿಕಟ್ಟುಗಳಿಗೆ ಆಯಾಸವಾಗದಂತಹ ಭಂಗಿಯನ್ನು ಬಳಸಿಕೊಳ್ಳಿ.
ಮೂಳೆಗಳು ಮತ್ತು ಮಣಿಕಟ್ಟುಗಳು ನೇರವಾಗಿರಬೇಕು: ನಿಮ್ಮ ಮೂಳೆ ಮತ್ತು ಮಣಿಕಟ್ಟುಗಳು ನೇರವಾಗಿದ್ದರೆ, ಅದರಿಂದ ಗರಿಷ್ಟ ಮಟ್ಟದ ಉಪಯೋಗವನ್ನು ಮತ್ತು ಕಾರ್ಯಕ್ಷಮತೆಯನ್ನು ಹೊರತರಬಹುದು. ಇದರಿಂದ ಇವುಗಳು ಸವೆಯುವುದು ಮತ್ತು ನೋವು ಬರುವುದು ತಪ್ಪುತ್ತದೆ.
ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವಾಗ ಸರಿಯಾದ ಭಂಗಿಯಲ್ಲಿ ಕೂರುವುದರಿಂದ ಬೆನ್ನು ಮೂಳೆಯು ಒತ್ತಡ ರಹಿತವಾಗಿರಲು ಸಹಕಾರಿಯಾಗುತ್ತದೆ ಮತ್ತು ಸ್ನಾಯು ನೋವು, ಬೆನ್ನು ನೋವು ಬರುವುದಿಲ್ಲ. ಒಳ್ಳೆಯ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ನಮ್ಮ ನಿಲುವು ನೋಡಲು ಸೊಗಸಾಗಿರುವುದರ ಜೊತೆಗೆ ಸ್ನಾಯುಗಳು ಸವೆದು ದುರ್ಬಲಗೊಳ್ಳುವುದನ್ನು ತಡೆಯುತ್ತವೆ. ಜೊತೆಗೆ ಈ ಭಂಗಿಯು ಶಕ್ತಿಯನ್ನು ಸಹ ಮಿತವಾಗಿ ಬಳಸುತ್ತವೆ.
ನಿರಂತರ ಕಂಪ್ಯೂಟರ್ ಬಳಸುವುವಾಗ ಕಣ್ಣುಗಳ ರಕ್ಷಣೆಗೆ 10 ಸಲಹೆಗಳು
ಆರಂಭಿಸುವ ಬಗೆ: ಒಳ್ಳೆಯ ಭಂಗಿಯಲ್ಲಿ ಕೂರುವುದನ್ನು ಆರಂಭಿಸುವವರು ಮೊದಲು ನೇರವಾಗಿ ಕುಳಿತುಕೊಳ್ಳಿ. ನಿಮ್ಮ ಭುಜಗಳು ಸ್ಥಿರವಾಗಿರಲಿ. ನಿಮ್ಮ ಸೊಂಟವು ಕುರ್ಚಿಯ ಹಿಂಬದಿಯನ್ನು ಸ್ಪರ್ಶಿಸುವಂತಿರಲಿ.
ಕುಷನ್ ಬಳಿಸಿ: ಒಂದು ಸಣ್ಣ ಕುಷನ್ ಅಥವಾ ಸುರುಳಿ, ಸುತ್ತಿದ ಟವೆಲ್ ನಿಮ್ಮ ಬೆನ್ನಿನ ಆಯಕಟ್ಟಿನ ಸ್ಥಳಗಳನ್ನು ಕಾಪಾಡಲು ನೆರವಾಗಬಲ್ಲವು. ಮೊದಲಿಗೆ ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳಿ. ನಂತರ ನಿಮ್ಮ ಬೆನ್ನನ್ನು ಆದಷ್ಟು ನೇರ ಮಾಡಿ. ಇದೇ ಸ್ಥಿತಿಯಲ್ಲಿ ಕೆಲವು ಸೆಕೆಂಡ್‍ಗಳ ಕಾಲ ಇರಿ. ಆನಂತರ ಈ ಸ್ಥಿತಿಯಿಂದ 10 ಡಿಗ್ರಿಗಳಷ್ಟು ಬಾಗಿ, ಹಾಗೆ ಬಾಗುವಾಗ ನಿಮ್ಮ ದೇಹದ ತೂಕವನ್ನು ನಿಮ್ಮ ಪೃಷ್ಠಗಳ ಮೇಲೆ ಸಮಾನವಾಗಿ ಬಿಡಿ.
ನಿಮ್ಮ ಕಂಪ್ಯೂಟರ್ ಪರದೆಯಿಂದ ಒಂದು ಕೈ ಬಾರಿನಷ್ಟು ದೂರದಲ್ಲಿ ಕುಳಿತುಕೊಳ್ಳಿ. ಇದರಿಂದ ನಿಮ್ಮ ದೃಷ್ಟಿಯ ಪರಿಧಿಗೆ ನಿಮ್ಮ ಪರದೆಯು ಸ್ಪಷ್ಟವಾಗಿ ನಿಲುಕುತ್ತದೆ. ಹೀಗೆ ಕೂರುವಾಗ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುಬೇಡಿ. ಕಾಲುಗಳು ನೆಲವನ್ನು ತಾಕಿರಲಿ ಮತ್ತು ಕಣ್ಣುಗಳು ಕಂಪ್ಯೂಟರ್ ಪರದೆಗೆ ನೇರವಾಗಿರಲಿ. ನಿಮ್ಮ ಕೈಗಳು ಮತ್ತು ಮೊಣಕೈಗಳು ಕುರ್ಚಿಯ ಅಥವಾ ಮೇಜಿನ ಮೇಲೆ ಆರಾಮವಾಗಿರಲಿ.
ಕಂಪ್ಯೂಟರ್ ನಿಂದ 5 ಪ್ರಮುಖ ಆರೋಗ್ಯ ಸಮಸ್ಯೆ
ವಿರಾಮ: ವಿರಾಮವು ತುಂಬಾ ಮುಖ್ಯ. ಒಂದೇ ಭಂಗಿಯಲ್ಲಿ 30 ನಿಮಿಷ ಕೂರಬೇಡಿ. ಆಗಾಗ ಸುಲಭವಾದ ಕತ್ತಿನ ವ್ಯಾಯಾಮವನ್ನು ಮಾಡಿ. ತುಂಬಾ ಹೊತ್ತು ಒಂದೇ ಭಂಗಿಯಲ್ಲಿ ಕೂತಾಗ ಒಂದು ಲಘು ವ್ಯಾಯಾಮ ಮಾಡಿ. ಕತ್ತನ್ನು ವೃತ್ತಾಕಾರವಾಗಿ ಗಡಿಯಾರದ ದಿಕ್ಕಿಗೆ ಅನುಸಾರ ಮತ್ತು ವಿರುದ್ಧವಾಗಿ ತಿರುಗಿಸಿ. ಮುಂದೆ ಬಾಗಿ ಹಾಗು ಹಿಂದೆ ಬಾಗಿ. ಹೀಗೆ ನಿಮ್ಮ ದೇಹದ ರಕ್ತ ಪರಿಚಲನೆಯನ್ನು ಸರಾಗ ಮಾಡಿ. ನಿಮ್ಮ ಬೆನ್ನಿನ ಮೇಲೆ ಕೈ ಇಟ್ಟು ಸಹ ಮುಂದೆ- ಹಿಂದೆ ಬಾಗುವುದನ್ನು ಮಾಡಿ. ಇದೇ ಭಂಗಿಯಲ್ಲಿ ಒಂದೆರಡು ನಿಮಿಷ ಇರಿ.
ಒಂದು ವಿಚಾರ ನೆನಪಿಡಿ ಪ್ರತಿ 30 ನಿಮಿಷಕ್ಕೆ ಒಮ್ಮೆ ಎದ್ದು ನೀರು ಕುಡಿಯಲು ಹೊರಡಿ, ಇಲ್ಲವೇ ಶೌಚಾಲಯಕ್ಕೆ ಹೋಗಿಬನ್ನಿ, ಅಕ್ಕ-ಪಕ್ಕದ ಸಹೋದ್ಯೋಗಿಗಳ ವರ್ಕ್ ಸ್ಟೇಷನ್‍ಗೆ ಹೋಗಿ, ಇಲ್ಲವೇ ಆಫೀಸ್ ಲಾಂಜ್‍ನಲ್ಲಿ ಹಾಗೆ ಸುತ್ತಾಡಿ ಬನ್ನಿ. ನೀವು ಹೀಗೆ ಮಾಡುವುದರಿಂದ ನಿಮ್ಮಲ್ಲಿ ಉಂಟಾಗುವ ಬದಲಾವಣೆಗಳನ್ನು ನೀವೇ ಗಮನಿಸುವಿರಿ. ನೀವು ನೇರವಾಗಿ ನಿಲ್ಲುವಿರಿ, ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಆಯಾಸವಿಲ್ಲದೆ ತೊಡಗಿಸಿಕೊಳ್ಳುವಿರಿ. ಇಲ್ಲವಾದಲ್ಲಿ ಇವುಗಳನ್ನು ಮಾಡಲು ನಿಮಗೆ ಆಯಾಸವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications